ಈ ಆಕಾರದ ಗಡಿಯಾರ ಮನೆಯಲ್ಲಿ ಇರಲೇಬಾರದು

0

ನಾವು ಈ ಲೇಖನದಲ್ಲಿ ಈ ಆಕಾರದ ಗಡಿಯಾರ ಮನೆಯಲ್ಲಿ ಏಕೆ ಇರಲೇ ಬಾರದು ಎಂದು ತಿಳಿದುಕೊಳ್ಳೋಣ. ಈ ಆಕಾರದ ಗಡಿಯಾರ ಮನೆಯಲ್ಲಿ ಇದ್ದರೆ ಉದ್ದಾರ ಆಗುವುದಿಲ್ಲ . ಇಂದೇ ಅದನ್ನು ತೆಗೆದುಬಿಡಿ ಅನ್ನೋ ಕುತೂಹಲಕಾರಿ ರಹಸ್ಯವಾದ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ . ಸಮಯ ಅನ್ನುವುದು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ . ಸಮಯ ಹಾಗೂ ಸಮುದ್ರದ ಅಲೆಗಳು ಯಾರನ್ನು ಕಾಯುವುದಿಲ್ಲ . ಅದರಂತೆ ಸಮಯದ ಹಿಂದೆ ನಾವು ಓಡಬೇಕೆ ಹೊರತು ,

ಸಮಯ ಎಂದಿಗೂ ನಮಗಾಗಿ ಕಾಯುವುದಿಲ್ಲ . ಸಮಯದ ಈ ಮಹತ್ವವನ್ನು ಅರಿತುಕೊಂಡಿರುವವರು ಜೀವನದಲ್ಲಿ ಗೆದ್ದೇ ಗೆಲ್ಲುತ್ತಾರೆ . ನಮ್ಮ ಜೀವನದಲ್ಲಿ ಅತಿ ಮಹತ್ವಪೂರ್ಣ ಪಡೆದಿರುವ ಸಮಯ ಮನೆಯ ಗೋಡೆಯ ಮೇಲೂ ಮಹತ್ವದ ಸ್ಥಾನ ಪಡೆದಿದೆ . ಆದರೆ ಗಡಿಯಾರದ ಆಕಾರ ಮಾತ್ರ ತುಂಬಾ ಪ್ರಮುಖವಾಗಿ ಇರುತ್ತದೆ. ತಪ್ಪಾದ ಆಕಾರದ ಗಡಿಯಾರ ಹಾಕಿದರೆ ,

ನಿಮ್ಮ ಜೀವನದಲ್ಲಿ ನಿಮ್ಮ ಸಮಯ ಕೆಟ್ಟು ಹೋಗುವುದು ಖಂಡಿತ . ಈ ವಿಷಯದ ಬಗ್ಗೆ ಇಲ್ಲಿ ಹೇಳಲಾಗಿದೆ . ಸಮಯ ಹಾಗೂ ವಾಸ್ತು ಶಾಸ್ತ್ರಕ್ಕೆ ನಿಕಟ ಸಂಬಂಧ ಇದೆ . ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದಕ್ಕೂ ವಾಸ್ತು ನಿಯಮಗಳು ಇವೆ . ಸರಿಯಾದ ದಿಕ್ಕು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಮತ್ತು ಬೆಳವಣಿಗೆಯನ್ನು ತರುತ್ತದೆ . ವಾಸ್ತು ನಿಯಮದ ಪ್ರಕಾರ ಗಡಿಯಾರವನ್ನು ಮನೆಯ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಇಡಬಾರದು.

ಇದನ್ನು ಬಹಳ ಅಶುಭ ಎಂದು ಪರಿಗಣಿಸಲಾಗುತ್ತದೆ . ಅಲ್ಲದೇ ಗಡಿಯಾರವನ್ನು ಬಾಗಿಲಿನ ಮೇಲು ಕೂಡ ಇಡಬಾರದು . ಇನ್ನು ಮುಖ್ಯವಾದ ಸಂಗತಿ ಎಂದರೆ , ಗಡಿಯಾರವು ನಿಲ್ಲದ ಹಾಗೆ ನೋಡಿಕೊಳ್ಳಬೇಕು . ಶೆಲ್ ಖಾಲಿ ಆಯ್ತು , ಕೆಟ್ಟು ಹೋಯಿತು ಅನ್ನುವ ಕಾರಣಕ್ಕೆ ಗಡಿಯಾರ ನಿಲ್ಲಬಾರದು . ಅದು ಸದಾ ಕಾರ್ಯ ನಿರತವಾಗಿ ಇರುವ ರೀತಿ ನೋಡಿಕೊಳ್ಳಬೇಕು . ಗಡಿಯಾರವನ್ನು ಉತ್ತರ ದಿಕ್ಕಿನಲ್ಲಿ ಹಾಕುವುದು ಶುಭ . ಇದು ಸಂಪತ್ತು ಮತ್ತು ಸಮೃದ್ಧಿಗೆ ಮುನ್ನುಡಿಯನ್ನು ಬರೆಯುತ್ತದೆ .

ಉತ್ತರ ದಿಕ್ಕನ್ನು ಕುಬೇರ ಮೂಲೆ ಅಥವಾ ಗಣೇಶ ಮೂಲೆ ಅಂತ ಕರೆಯುತ್ತಾರೆ . ಹಾಗಾಗಿ ಈ ಮೂಲೆಯಲ್ಲಿ ಇಡುವುದರಿಂದ , ವೃತ್ತಿ ಜೀವನ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು . ವಾಸ್ತು ಶಾಸ್ತ್ರದಲ್ಲಿ ಗೋಡೆಯ ಗಡಿಯಾರವನ್ನು ಉತ್ತರ ಪೂರ್ವ ಅಥವಾ ಪಶ್ಚಿಮ ದಿಕ್ಕಿನ ಗೋಡೆಯಲ್ಲಿ ಹಾಕುವುದು ಶುಭ ಎಂದು ಉಲ್ಲೇಖಿಸಲಾಗಿದೆ.

ಇದರಿಂದ ಕೆಲಸ ಮಾಡುವಾಗ ಗಡಿಯಾರ ನೋಡಲು ಸುಲಭವಾಗುತ್ತದೆ .ಇಷ್ಟೇ ಅಲ್ಲದೆ ಇದು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ . ಗಡಿಯಾರವನ್ನು ಪೂರ್ವ ದಿಕ್ಕಿನಲ್ಲಿ ಹಾಕುವುದರಿಂದ , ಕೆಲಸ ಮತ್ತು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಪೂರ್ವ ದಿಕ್ಕು ನಾವು ಮಾಡುವ ಕಾರ್ಯವನ್ನು ಉತ್ತಮ ಗೊಳಿಸುವುದರಿಂದ ಗಡಿಯಾರವನ್ನು ಇಡುವುದಕ್ಕೆ ಪೂರ್ವ ದಿಕ್ಕು ಸೂಕ್ತವಾಗಿದೆ . ಲೋಲಾಕವಿರುವ ಗಡಿಯಾರವನ್ನು ಮನೆಗೆ ಶುಭ ಎಂದು ಪರಿಗಣಿಸಲಾಗಿದೆ.

ಇದು ಧನಾತ್ಮಕತೆ ಹಾಗೂ ಧ್ವನಿಯ ಕಂಪನಗಳನ್ನು ಸೃಷ್ಟಿಸುತ್ತದೆ . ನೀವು ಇಂಥಹ ಗಡಿಯಾರವನ್ನು ಇಡಲು ಬಯಸಿದರೆ ಪೂರ್ವ ದಿಕ್ಕು ಅತ್ಯಂತ ಸೂಕ್ತ . ನೀವು ಗಡಿಯಾರವನ್ನು ಪಶ್ಚಿಮ ದಿಕ್ಕಿನ ಗೋಡೆಯಲ್ಲಿ ಇರಿಸಬಹುದು . ನಾವು ಆಗಲೇ ತಿಳಿಸಿದ ದಿಕ್ಕುಗಳು ಮೊದಲ ಆಯ್ಕೆ ಆಗಿರಬೇಕು . ಪಶ್ಚಿಮ ದಿಕ್ಕನ್ನ ಕೊನೆಯ ಆಯ್ಕೆಯಾಗಿ ಪರಿಗಣಿಸಿ . ಗಡಿಯಾರಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು . ಅದರ ಮೇಲೆ ಯಾವುದೇ ಕೊಳೆ ಅಥವಾ ಧೂಳು ಸಂಗ್ರಹವಾಗದಂತೆ , ನೋಡಿಕೊಳ್ಳಬೇಕು .

ಮನೆಯಲ್ಲಿ ಇರುವ ಗಡಿಯಾರವು ಎಷ್ಟು ಸ್ವಚ್ಛವಾಗಿ ಇರುತ್ತದೆಯೋ , ಅಷ್ಟು ಒಳ್ಳೆಯದು . ಗಡಿಯಾರದ ಮೇಲೆ ಧೂಳು ಕೂತರೆ , ನಿಮ್ಮ ಸಮಯದ ಮೇಲೆ ಧೂಳು ಕೂತಂತೆ . ಕೆಲಸಗಳು ಬೇಗ ಬೇಗ ಆಗುವುದಿಲ್ಲ . ಆದ್ದರಿಂದ ಗಡಿಯಾರವನ್ನು ವಾರಕ್ಕೆ ಒಮ್ಮೆಯಾದರೂ ಸ್ವಚ್ಛಗೊಳಿಸಬೇಕು . ಮನೆಯಲ್ಲಿ ಯಾವುದೇ ಕಾರಣಕ್ಕೂ ಗಡಿಯಾರವನ್ನು ಮೂರು ಜಾಗಗಳಲ್ಲಿ ಇಡಬಾರದು . ಅತಿ ಮುಖ್ಯವಾಗಿ ಅಡುಗೆ ಮನೆಯಲ್ಲಿ ಮತ್ತು ಮಲಗುವ ಕೋಣೆಯ ಬಾಗಿಲಿನಲ್ಲಿ ಹಾಕಬಾರದು .

ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಗಡಿಯಾರವನ್ನು ಇಡಬಾರದು . ಯಾಕೆಂದರೆ ಮಲಗುವ ಕೋಣೆಯಲ್ಲಿ ಗಡಿಯಾರವನ್ನು ಇಟ್ಟುಕೊಂಡರೆ , ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ . ಅದರಲ್ಲೂ ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಗಡಿಯಾರವನ್ನು ಇಟ್ಟುಕೊಳ್ಳಬಾರದು .ಇದರಿಂದ ಗಂಡ ಹೆಂಡತಿಯ ನಡುವೆ ಕಲಹಗಳು ಹೆಚ್ಚಾಗುತ್ತವೆ . ಹಾಗಾಗಿ ಮಲಗುವ ಕೋಣೆಯಲ್ಲಿ ಗಡಿಯಾರವನ್ನು ಹಾಕುವುದು ಒಳ್ಳೆಯದಲ್ಲ .

ಹಿಂದಿನ ಕಾಲದಲ್ಲಿ ಇದ್ದ ಗಡಿಯಾರಗಳು ಅಂದರೆ , ಸಮಯಕ್ಕೆ ಸರಿಯಾಗಿ ಶಬ್ದ ಮಾಡುವಂತಹ ಬೆಲ್ ಬಾರಿಸುವಂತಹ ಗಡಿಯಾರಗಳು ಮನೆಯಲ್ಲಿ ಇದ್ದರೆ , ಬಹಳ ಒಳ್ಳೆಯದು . ಇದರಿಂದ ಸಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಹೆಚ್ಚಾಗುತ್ತವೆ. ಇದರ ಜೊತೆಗೆ ಮನೆಯಲ್ಲಿ ವೃತ್ತಾಕಾರದ ಗಡಿಯಾರ ಹಾಗೂ ಅಂಡಾಕಾರದ ಗಡಿಯಾರ ಇದ್ದರೆ, ಬಹಳ ಒಳ್ಳೆಯದು . ನಿಮ್ಮ ಯೋಜನೆಗಳೆಲ್ಲವೂ ಕೈ ಗೂಡು ತ್ತವೆ .
ಹಾಗೂ ನಿಮ್ಮ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ . ನೆನಪಿನಲ್ಲಿ ಇಡಬೇಕಾದ ವಿಷಯ ಏನೆಂದರೆ , ಯಾವುದೇ ಕಾರಣಕ್ಕೂ ಗಡಿಯಾರವನ್ನು ಉಡುಗೊರೆಯಾಗಿ ಅಥವಾ ದಾನವಾಗಿ ಕೊಡಬಾರದು .

ಹೀಗೆ ಮಾಡುವುದರಿಂದ , ನಿಮ್ಮ ಒಳ್ಳೆಯ ಸಮಯಗಳು ಅವರಿಗೆ ಹೋಗುತ್ತವೆ . ಅವರ ಕೆಟ್ಟ ಸಮಯ ನಿಮಗೆ ಬರುವ ಸಾಧ್ಯತೆ ಇರುತ್ತದೆ . ಆದ್ದರಿಂದ ಗಡಿಯಾರವನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಕೊಡಬಾರದು . ಹೀಗೆ ಪ್ರತಿಯೊಬ್ಬರೂ ಸಹ ತಮ್ಮ ಮನೆ ಮತ್ತು ಜೀವನದಲ್ಲಿ ಗಡಿಯಾರದ ವಿಚಾರ ಬಂದಾಗ , ಇಂತಹ ತಪ್ಪುಗಳನ್ನು ಮಾಡದೆ , ಕೆಲವು ನಿಯಮಗಳನ್ನು ಪಾಲಿಸಿದರೆ , ಬಹಳ ಉತ್ತಮ . ಮನೆಯಲ್ಲಿ ಇಡುವ ಗಡಿಯಾರದ ಆಕಾರವೂ ಕೂಡ ನಿಮಗೆ ಅದೃಷ್ಟವನ್ನು ತಂದುಕೊಡುತ್ತದೆ .

ಹಾಗಾಗಿ ಯಾವ ಆಕಾರದ ಗಡಿಯಾರವನ್ನು ಮನೆಯಲ್ಲಿ ಇಟ್ಟರೆ , ಉತ್ತಮ ಅನ್ನೋದನ್ನ ತಿಳಿದುಕೊಳ್ಳೋಣ . ಅಷ್ಟ ಭುಜದ ಗಡಿಯಾರ ಇದು ಮನೆಯ ಸದಸ್ಯರ ನಡುವೆ ಸಾಮರಸ್ಯವನ್ನು ಹೆಚ್ಚಿಸುತ್ತದೆ . ಮನೆಯಲ್ಲಿ ಜಗಳ ಗಳಿಂದ ಮುಕ್ತಗೊಳಿಸುತ್ತದೆ . ಇದರಿಂದ ಮನೆಯಲ್ಲಿ ಸದಾ ಕಾಲ ಶಾಂತಿ ನೆಲೆಸಿರುತ್ತದೆ . ವೃತ್ತಾಕಾರದ ಗಡಿಯಾರ ಇದು ಕೂಡ ಮನೆಗೆ ಶುಭವನ್ನು ತರುತ್ತದೆ . ಇದು ಮನೆಯ ಸಂಪತ್ತನ್ನು ಹೆಚ್ಚಿಸುವುದಲ್ಲದೆ , ಜೀವನದಲ್ಲಿ ಏಳಿಗೆಯನ್ನು ಕಾಣಲು ಸಹಕಾರಿಯಾಗುತ್ತದೆ .

ಅಂಡಾಕಾರದ ಗಡಿಯಾರ ಇದು ಕೂಡ , ಮನೆಯಲ್ಲಿದ್ದರೆ ಶುಭ ಎಂದು ಹೇಳುತ್ತಾರೆ . ಇದು ಸ್ನೇಹಿತರು ಮತ್ತು ಸಂಬಂಧಗಳ ನಡುವಿನ ಸಾಮರಸ್ಯವನ್ನು ಹೆಚ್ಚಿಸುತ್ತದೆ . ಮನೆ ಮನಗಳಿಂದ ಭಿನ್ನಾಭಿಪ್ರಾಯಗಳನ್ನು ಮುಕ್ತಗೊಳಿಸುತ್ತದೆ . ಅದೇ ಹೃದಾಯಾಕಾರದ ಗಡಿಯಾರ ಇದು ದಂಪತಿಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸುತ್ತದೆ . ಗಂಡ ಹೆಂಡತಿಯ ನಡುವೆ ಪ್ರೀತಿ ಹೆಚ್ಚಾಗುತ್ತದೆ . ಹಾಗೂ ಅವರ ನಡುವಿನ ಜಗಳ ಮನಸ್ತಾಪ ದೂರವಾಗುತ್ತದೆ .

ತ್ರಿಕೋನಾಕಾರದ ಗಡಿಯಾರ ಮನೆಯಲ್ಲಿ ಇಡುವುದು ಸೂಕ್ತವಲ್ಲ . ಈ ಗಡಿಯಾರವನ್ನು ಮನೆಯಲ್ಲೇ ಇಟ್ಟರೆ , ಅಶುಭ ಎಂದು ಹೇಳಲಾಗುತ್ತದೆ . ಇದು ಮನೆಯಲ್ಲಿ ಅನಗತ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ . ವಾಸ್ತು ಶಾಸ್ತ್ರದಲ್ಲಿ ಗಡಿಯಾರದ ಬಣ್ಣವೂ ಕೂಡ ಬಹಳ ಮುಖ್ಯವಾಗಿರುತ್ತದೆ . ಮನೆಯಲ್ಲಿ ತಿಳಿ ಬಣ್ಣದ ಗಡಿಯಾರವನ್ನು ಇಟ್ಟುಕೊಳ್ಳುವುದು ತುಂಬಾ ಮಂಗಳಕರ .

ಇನ್ನೊಂದು ಅತ್ಯಂತ ಮುಖ್ಯವಾದ ವಿಷಯ ಏನೆಂದರೆ , ನಿಮ್ಮ ಮನೆಯಲ್ಲಿ ಗಾಢಬಣ್ಣದ ಗಡಿಯಾರವನ್ನು ಹಾಕುವುದರಿಂದ ನಕಾರಾತ್ಮಕ ಶಕ್ತಿಯು ನೆಲೆಸುತ್ತದೆ . ಅಲ್ಲದೆ ಈ ಬಣ್ಣವೂ ನಿಮ್ಮ ಮನಸ್ಥಿತಿಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ . ಮನೆಯಲ್ಲಿ ಕೆಂಪು , ಕಪ್ಪು , ನೀಲಿ ಬಣ್ಣದ ಗಡಿಯಾರ ಇಡಬಾರದು. ಇದರ ಬದಲಾಗಿ ಕಂದು , ಹಳದಿ ಬಣ್ಣದಂತಹ ತಿಳಿ ಬಣ್ಣದ ಗಡಿಯಾರಗಳನ್ನು ಇಡುವುದು ಸೂಕ್ತ ಎಂದು ಪರಿಗಣಿಸಲಾಗಿದೆ. ತಿಳಿ ಬಣ್ಣದ ಗಡಿಯಾರಗಳು ತುಂಬಾ ಮಂಗಳಕರವಾಗಿ ಇರುತ್ತದೆ .

Leave A Reply

Your email address will not be published.