ವೃಶ್ಚಿಕ ರಾಶಿಗೆ ಇದೆಂಥ ಫೆಬ್ರವರಿ?

0

ನಾವು ಈ ಲೇಖನದಲ್ಲಿ ವೃಶ್ಚಿಕ ರಾಶಿಯ ಫೆಬ್ರವರಿ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ . ಈ ಫೆಬ್ರವರಿ ತಿಂಗಳಲ್ಲಿ ಸಮಯ ಕಡಿಮೆ ಇರುತ್ತದೆ . ಆದರೂ ಈ ತಿಂಗಳಲ್ಲಿ ಹೆಚ್ಚಿನ ಯಶಸ್ಸು ಸಿಗುವ ಸಾಧ್ಯತೆ ಇರುತ್ತದೆ . ಹೊಸ ಕನಸು ಕಾಣಬಹುದು .ನಿಮ್ಮ ಮನಸ್ಸಿನಲ್ಲಿ ಆಶಾವಾದ ಮೂಡುವ ಸಾಧ್ಯತೆ ಇದೆ.
ನಿಮ್ಮ ಬಹಳಷ್ಟು ಕನಸು ಮತ್ತು ಅಪೇಕ್ಷೆಗಳು ನಿಜವಾಗುವ ಸಾಧ್ಯತೆ ಇದೆ . ನೀವು ಸಾಧನೆ ಮಾಡಬೇಕು ಅಂದುಕೊಂಡಿರುವುದು ಕೂಡ ಸಾಧ್ಯವಾಗುತ್ತದೆ . ಕೆಲಸದಲ್ಲಿ ಹೆಚ್ಚಿನ ಯಶಸ್ಸು ದೊರೆಯುತ್ತದೆ ವ್ಯವಹಾರದಲ್ಲಿ ಹೆಚ್ಚಿನ ಲಾಭಗಳು ದೊರೆಯುತ್ತದೆ .

ವಿದ್ಯಾರ್ಥಿಗಳು ಕೂಡ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಪ್ರಗತಿಯನ್ನು ಸಾಧಿಸಬಹುದು . ಬಹಳಷ್ಟು ನಿರೀಕ್ಷೆಗಳು ನಿಮ್ಮ ಜೀವನದಲ್ಲಿ ಇರುತ್ತವೆ . ಇಂಥಹ ಒಂದು ನಿರೀಕ್ಷೆಗಳನ್ನು ಈಡೇರಿಸಿ ಕೊಳ್ಳುವುದಕ್ಕೆ ಈ ತಿಂಗಳಲ್ಲಿ ಪ್ರಚೋದನೆ ನೀಡುತ್ತದೆ . ಇಲ್ಲಿ ರಾಶಿಯಾಧಿಪತಿ ತುಂಬಾ ಪ್ರಮುಖವಾಗುತ್ತದೆ . ರಾಶಿಯಾಧಿಪತಿ ನೀವು ಗುರಿ ಮುಟ್ಟುವ ಜಾಗಕ್ಕೆ ಕರೆದುಕೊಂಡು ಹೋಗುತ್ತದೆ . ಏನೇ ಸವಾಲುಗಳು ಬಂದರೂ, ಆತ್ಮ ವಿಶ್ವಾಸ ಹೆಚ್ಚಾಗುತ್ತದೆ .ಎಷ್ಟೇ ಕಷ್ಟ ಇದ್ದರೂ,

ಅದನ್ನು ಎದುರಿಸುವುದಕ್ಕೆ ಬೇಕಾಗುವ ಧೈರ್ಯ ಮತ್ತು ಏನೇ ಸಮಸ್ಯೆ ಬಂದರೂ ದೃತಿಗೆಡದೆ ಇರುವುದಕ್ಕೆ ಸಾಧ್ಯ ಇದೆ . ನಿಮ್ಮ ಕುಟುಂಬದವರು ಅಥವಾ ಸಹೋದ್ಯೋಗಿಗಳು ಇರಬಹುದು ಅವರಿಗೆ ನಿಮ್ಮನ್ನು ನೋಡಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ . ಇಂತಹ ಒಂದು ಆತ್ಮವಿಶ್ವಾಸವನ್ನು ಕುಜ ಗ್ರಹ ನಿಮಗೆ ಕೊಡುತ್ತಿದೆ. ಮಕರ ರಾಶಿಯಲ್ಲಿ ಇದ್ದು ಈ ರೀತಿಯ ಒಂದು ಧೈರ್ಯ ನಿಮಗೆ ನೀಡುತ್ತದೆ. ಇಡೀ ತಿಂಗಳು ಇದೇ ರೀತಿಯ ವಾತಾವರಣ ಮುಂದುವರಿಯುತ್ತದೆ .ಫೆಬ್ರವರಿ ತಿಂಗಳು ಬಹಳ ಅದ್ಭುತ ಅನ್ನಿಸುವುದು ಇದೇ ಕಾರಣಕ್ಕೆ .

ಈ ಫೆಬ್ರವರಿ 13ನೇ ತಾರೀಖಿನವರೆಗೂ ಬಲವಾದ ವೈಶಿಷ್ಟತೆಗಳು ಇವೆ .ಈ ಲಕ್ಷಣಗಳು ನಿಮಗೆ ಯಾವ ರೀತಿಯ ಬಲ ಕೊಡುತ್ತದೆ ಎಂದು ನೋಡೋಣ . ಕುಜ ಗ್ರಹದ ಬಲ ಮೊದಲೇ ಇದೆ . ತೃತೀಯ ಭಾವ ವಿಕ್ರಮ ಸ್ಥಾನದಲ್ಲಿ ಕುಜ ಗ್ರಹ ಇದೆ . ಮಾಡೋ ಕೆಲಸಗಳಲ್ಲಿ ಜಯ , ಪ್ರಯತ್ನಗಳಿಗೆ ಯಶಸ್ಸು , ವ್ಯಾಪಾರದಲ್ಲಿ ಲಾಭಗಳು , ನೀವು ಇಷ್ಟ ಪಡುವ ವಸ್ತುಗಳನ್ನು ಖರೀದಿ ಮಾಡುವಂತದ್ದು , ಒಟ್ಟಾರೆಯಾಗಿ ಖುಷಿ ದೊರೆಯುವಂತದ್ದು .ಇವೆಲ್ಲಾ ಫೆಬ್ರವರಿ ತಿಂಗಳಲ್ಲಿ ಕುಜ ಗ್ರಹದಿಂದ ಸಿಗುವಂತಹ ಒಳ್ಳೆಯ ಫಲಗಳು .

ಯಾವುದೂ ಕೂಡ ಅತೀ ಆಗಬಾರದು . ಆರೋಗ್ಯದ ಸಮಸ್ಯೆಗಳು ಉಂಟಾಗುತ್ತದೆ . ಖುಷಿ ಜಾಸ್ತಿಯಾದಾಗ ಆಚರಣೆ ಮಾಡಲು ಹೋದರೆ, ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ .ಮತ್ತು ಜೇಬಿಗೂ ಕತ್ತರಿ ಬೀಳುವ ಸಾಧ್ಯತೆ ಇದೆ . ಅರ್ಧಾಷ್ಟಮ ಶನಿ ಇರುವುದರಿಂದ ಸ್ವಲ್ಪ ನೋಡಿಕೊಂಡು ಖರ್ಚು ಮಾಡುವದು ಒಳ್ಳೆಯದು. ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು . ಇವೆರಡರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು . ವೃಶ್ಚಿಕ ರಾಶಿಯವರಿಗೆ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ .

ಆದ್ದರಿಂದ ಖರ್ಚುಗಳ ಬಗ್ಗೆ ಎಚ್ಚರ ವಹಿಸಬೇಕು . ಸ್ವಲ್ಪ ಕಂಜೂಸ್ ಮಾಡಬೇಕಾದ ವಾತಾವರಣ ನಿಮ್ಮ ಮಟ್ಟಿಗೆ ಇರುತ್ತದೆ . ಸ್ವಲ್ಪ ಹಣ ಬಿಗಿ ಹಿಡಿಯಬೇಕಾಗುತ್ತದೆ . ಈ ತರಹದ ಅವಶ್ಯಕತೆಗಳು ನಿಮ್ಮ ಮಟ್ಟಿಗೆ ಇರುತ್ತದೆ. ಹನ್ನೊಂದರಲ್ಲಿರುವ ಕೇತು ಗ್ರಹ ಮತ್ತು ದ್ವಿತೀಯ ಭಾವದಲ್ಲಿ ಇರುವ ಶುಕ್ರ ಗ್ರಹ ತೃತೀಯದಲ್ಲಿರುವ ರವಿ ಹಾಗೇ ಕುಜ ಇವೆಲ್ಲಾ ಗ್ರಹಗಳು ಒಂದೇ ನೇರ ದಿಕ್ಕಿನಲ್ಲಿ ಕೆಲಸ ಮಾಡುತ್ತಿರುತ್ತವೆ . ಆದ್ದರಿಂದ ಆದಾಯದಲ್ಲಿ ಹೆಚ್ಚಿನ ಲಾಭ ಆಗುವ ಸಾಧ್ಯತೆ ಇದೆ . ಇವೆಲ್ಲಾ ಗ್ರಹಗಳ ಗಮನ ದುಡ್ಡಿನ ಕಡೆಗೆ ಇರುತ್ತದೆ . ಆದಾಯವನ್ನು ಹೆಚ್ಚಿಸುವ ಕಡೆಗೆ ಇರುತ್ತದೆ .

ಜಾತಕದಲ್ಲಿ ಅಥವಾ ಜೀವನದಲ್ಲಿ ಮೂಲಭೂತ ಸಮಸ್ಯೆಗಳನ್ನು , ಹೆಚ್ಚಿನ ಸಾಲ ಮಾಡಿ ಕೊಂಡಿರುವವರು , ಹೂಡಿಕೆ ಮಾಡಿರುವವರು, ಇಂತಹವರನ್ನು ಬಿಟ್ಟು , ಯಾರು ಆದಾಯ ಗಳಿಸುತ್ತಾರೆ, ಅಂತಹವರು ಬಹಳ ಪ್ರಗತಿಯನ್ನು ಫೆಬ್ರವರಿ ತಿಂಗಳಲ್ಲಿ ಕಾಣಬಹುದು . ಈ ತಿಂಗಳಲ್ಲಿ ಧನಾತ್ಮಕ ಚಿಂತನೆಗಳು ಹೆಚ್ಚಾಗಿರುತ್ತದೆ .ಅಥವಾ ಒಳ್ಳೆಯ ದುಡ್ಡಿಗೆ ದಾರಿಯಾಗುತ್ತದೆ . ಸಾಲಾಗಿ ಈ ರೀತಿಯ ಘಟನೆಗಳು ನಡೆಯುತ್ತಾ ಹೋದಾಗ, ಖುಷಿ ಹೆಚ್ಚಾಗುತ್ತದೆ. ಒಂದು ಸಮಸ್ಯೆ ಎಂದರೆ , ಮಕ್ಕಳ ವಿಚಾರದಲ್ಲಿ ಚಿಂತೆ, ಮತ್ತೊಂದು ಭಂಡತನ . ಯಾರಾದರೂ ಹೇಳಿದ್ದನ್ನು ಕೇಳುವುದಕ್ಕೆ ನಿಮಗೆ ಮನಸ್ಸು ಇರುವುದಿಲ್ಲ.

ಹಿರಿಯರು ಎಂದರೆ ನಿಮಗೆ ಅಲರ್ಜಿ . ಉಪದೇಶ ಎಂದರೆ , ನೀವು ನಕಾರಾತ್ಮಕವಾಗಿ ಹೋಗುತ್ತೀರಾ . ಆದರೆ ಹೋದರೆ ಅನ್ನೋ ವಿಚಾರದಲ್ಲಿ ಅವರನ್ನು ತೆಗೆದು ಹಾಕುವುದು . ಕಾರಣ ಗುರು ಷಷ್ಟದಲ್ಲಿ ಇರುವಂತದ್ದು . ಅಷ್ಟಾಗಿ ಬೇರೆಯವರ ಮಾತು ನಿಮಗೆ ರುಚಿಸುವುದಿಲ್ಲ . ಅವರು ಹೇಳುವ ಮಾತು ಸತ್ಯ ಅಂತ ನಿಮಗೆ ತಿಳಿದಿದ್ದರೂ, ಆ ವಿಚಾರ ಕೇಳಲು ನೀವು ತಯಾರು ಇರುವುದಿಲ್ಲ . ಈ ತರಹದ ವಿಚಾರ ಮುಂದುವರೆಯುತ್ತದೆ . ಇದರಿಂದ ಹೊರಗೆ ಬರುವುದು ಸ್ವಲ್ಪ ಕಷ್ಟ ಆಗುತ್ತದೆ.

ಗೃಹಿಣಿಯರಿಗೂ ಕೂಡ ನೆಮ್ಮದಿ ಖುಷಿ ಸಿಗುವ ತಿಂಗಳು ಇದಾಗಿದೆ . ಎಲ್ಲಾ ಕ್ಷೇತ್ರದಲ್ಲೂ ಕೆಲಸ ಮಾಡುವವರಿಗೆ ಒಳ್ಳೆಯ ವಾತಾವರಣವನ್ನೇ ಸೃಷ್ಟಿಸಿ ಕೊಡುತ್ತದೆ . ಭವಿಷ್ಯದಲ್ಲಿ ಮುಂದಿನ ತಯಾರಿ ನಡೆಸಬೇಕು ಎಂದರೆ , ಆದರೆ ಹೋದರೆ ಎನ್ನುವ ಮಾತನ್ನು ಕೈ ಬಿಡಬೇಕಾಗುತ್ತದೆ . ನೀವು ಬೇರೆಯವರು ಹೇಳುವ ನಿರ್ಧಾರವನ್ನು ಮನಸ್ಸಿನಿಂದ ಒಪ್ಪಿಕೊಳ್ಳುವ ಸ್ಥಿತಿಗೆ ಬರಬೇಕು. ಸಾಧ್ಯವಾದಷ್ಟು ಆಚರಣೆಗೆ ತರುವ ಪ್ರಯತ್ನ ಮಾಡಬೇಕು . ಕೆಟ್ಟದ್ದನ್ನು ಕೈಬಿಡಬೇಕು .

ಒಳ್ಳೆಯ ನಿರ್ಧಾರವನ್ನು ಹೇಳಿದಾಗ ಅದನ್ನು ಆಚರಣೆಗೆ ತೆಗೆದುಕೊಳ್ಳಬೇಕು . ಮುಂದೆ ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಇದು ಮಾತ್ರ ಈ ವಿಚಾರಗಳು ಪರಿಹಾರವಾಗಿ ಇರುತ್ತದೆ . ಪರಿಹಾರ ಇದರಲ್ಲೇ ಇರುತ್ತದೆ. ಅರ್ಧ ಅಷ್ಟಮ ಶನಿ ಎಂದರೆ, ಆರೋಗ್ಯದಲ್ಲಿ ಸಮಸ್ಯೆ ಇದೆ ಎಂದರ್ಥ . ಯೋಗ ಅಭ್ಯಾಸ ಮಾಡುವುದರಿಂದ , ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು . ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು .

ಮುಂಬರುವ ದಿನಗಳಲ್ಲಿ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಏರುಪೇರುಗಳು ಆಗುವ ಸಾಧ್ಯತೆ ಇರುತ್ತದೆ . ರಾಹು ಕೇತುವಿನ ಚಲನೆ ಏಕಾದಶದಲ್ಲಿ ಇರುವ ಕೇತು ಬಹಳಷ್ಟು ಹಣವನ್ನು ತಂದುಕೊಡಬಹುದು . ಆದರೆ ಇದು ಸ್ಥಿರವಾಗಿ ನಿಲ್ಲುವುದಿಲ್ಲ . ಬಹಳಷ್ಟು ಒಳ್ಳೆಯ ಕೆಲಸಗಳಿಗೆ ಸಹಾಯವಾಗುವುದು ಈ ರೀತಿಯ ಸಾಧ್ಯತೆ ಕಡಿಮೆ ಇರುತ್ತದೆ. ಮತ್ತೊಂದು ಕ್ಷಣಕ್ಕೆ ಅದನ್ನು ಖರ್ಚು ಮಾಡುವ ವಿಚಾರ ನಿಮ್ಮ ತಲೆಯಲ್ಲಿ ಬರಬಹುದು . ಕೆಲವರ ಕೆಟ್ಟ ಸಲಹೆಗಳಿಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ .

ಎಚ್ಚರಿಕೆಯಿಂದ ಇರಬೇಕು. ನಿಮಗೆ ಬುಧಾಧಿತ್ಯ ಯೋಗ ಇರುತ್ತದೆ . ನಿಮ್ಮ ರಾಶಿಯಿಂದ ತೃತೀಯ ಭಾವದಲ್ಲಿ ಬಹಳಷ್ಟು ಶಕ್ತಿಯನ್ನು ತಂದುಕೊಡುತ್ತದೆ . ರವಿ ಗ್ರಹದಿಂದ ಗೌರವ, ಬುಧನಿಂದ ಬುದ್ಧಿವಂತಿಕೆ , ಕೆಲಸ ಕಾರ್ಯಗಳಲ್ಲಿ ನಿಮಗೆ ಸಿದ್ಧಿ ಸಿಗುತ್ತದೆ . ಎರಡೂ ಗ್ರಹಗಳು ಜೊತೆಯಾಗಿ , ರಾಶಿಯಾಧಿಪತಿಯಾದ ಕುಜನ ಜೊತೆ ಸೇರಿ , ಈ ಮೂರು ಗ್ರಹಗಳು ಜೊತೆಯಾಗಿ ನಿಮ್ಮ ಯಶಸ್ಸಿಗೆ ಬಹಳಷ್ಟು ಕೊಡುಗೆಯನ್ನು ಕೊಡುತ್ತವೆ . ಕೆಲಸ ಹುಡುಕುವವರಿಗೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಇರುತ್ತದೆ .

ಪ್ರಯತ್ನ ಕೂಡ ಎತ್ತರದಲ್ಲಿ ಇರಬೇಕಾಗುತ್ತದೆ . ನೀವು ಚುರುಕಾಗಿ ಇರುತ್ತೀರಾ .ಮತ್ತು ಸಮಾಜದಲ್ಲಿ ಸ್ಥಾನಮಾನ , ಗೌರವ , ಮನ್ನಣೆ , ದೊರೆಯುತ್ತದೆ . ಮಾಡುವ ಕೆಲಸ ಕಾರ್ಯಗಳಲ್ಲಿ ಪ್ರಭುತ್ವ ಹೆಚ್ಚಾಗಿ ಇರುತ್ತದೆ . ನೀವು ತುಂಬಾ ಪ್ರಾಬಲ್ಯ ಮತ್ತು ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳನ್ನು ಮಾಡುತ್ತೀರಾ . ಧೈರ್ಯ ಆತ್ಮವಿಶ್ವಾಸ ಈ ತಿಂಗಳಲ್ಲಿ ನಿಮಗೆ ಹೆಚ್ಚಾಗಿರುತ್ತದೆ . ಚೆನ್ನಾಗಿದ್ದೇವೆ ಎಂದು ತುಂಬಾ ಹಿಗ್ಗುವುದು ಬೇಡ , ತೊಂದರೆಯಾದಾಗ ಕುಗ್ಗುವುದು ಬೇಡ . ಒಂದು ಸಮತೋಲನ ಇಟ್ಟುಕೊಳ್ಳುವುದಕ್ಕೆ ಪ್ರಯತ್ನ ಮಾಡಿ ಎಂದು ಹೇಳಲಾಗಿದೆ.

Leave A Reply

Your email address will not be published.