ಈ ಚಮತ್ಕಾರಿ ಹುಲ್ಲು ನಿಮ್ಮ ಬಳಿ ಇದ್ರೆ ಎಲ್ಲರೂ ನಿಮ್ಮ ಮಾತು ಕೇಳ್ತಾರೆ!

0

ನಾವು ಈ ಲೇಖನದಲ್ಲಿ ಯಾವ ಚಮತ್ಕಾರಿ ಹುಲ್ಲು ನಿಮ್ಮ ಬಳಿ ಇದ್ದರೆ ಜನ ನೀವು ಹೇಳಿದ ಹಾಗೆ ಕೇಳುತ್ತಾರೆ . ಅನ್ನುವ ರಹಸ್ಯ ಮಾಹಿತಿಯನ್ನ ತಿಳಿದುಕೊಳ್ಳೋಣ. ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೇಗೆ ಪವಿತ್ರ ಸ್ಥಾನವಿದೆಯೋ ,ಹಾಗೆಯೇ ಈ ಚಮತ್ಕಾರಿ ಹುಲ್ಲಿಗೂ ಉನ್ನತ ಸ್ಥಾನವಿದೆ. ಈ ಹುಲ್ಲು ಭಗವಂತನಿಗೆ ತುಂಬಾ ಪ್ರಿಯವಾಗಿದೆ .ಈ ಹುಲ್ಲು ಸಿಕ್ಕರೆ ನೀವು ಕೋಟ್ಯಾಧೀಶ್ವರರಾಗುವಿರಿ. ನಿಮ್ಮ ಜೀವನದಲ್ಲಿ ಬರುವಂತಹ ಕಷ್ಟಗಳನ್ನು ಕಳೆಯುವ ಶಕ್ತಿ ಈ ಪವಿತ್ರ ಹುಲ್ಲಿಗಿದೆ.

ಅನ್ನುವ ಪವಿತ್ರ ಪುರಾತನ ರಹಸ್ಯವನ್ನು ತಿಳಿದುಕೊಳ್ಳೋಣ. ದೇವರನ್ನು ಆಕರ್ಷಿಸುವಂತಹ ಶಕ್ತಿಯನ್ನು ಹೊಂದಿರುವ ಈ ಹುಲ್ಲನ್ನು ಈ ದೇವರಿಗೆ ಅರ್ಪಿಸಲಾಗುತ್ತದೆ. ಎಳಸು ಮತ್ತು ಚಿಗುರುಗಳನ್ನು ಹೊಂದಿರುವ ಈ ಹುಲ್ಲನ್ನು ದೇವತಾ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಈ ಚಿಗುರುಗಳು ತಮ್ಮ ಎಲೆಗಳ ಮೇಲೆ ಬಿದ್ದಂತಹ ಇಬ್ಬನಿಗಳಲ್ಲಿರುವ ಸಕಾರಾತ್ಮಕ ಅಂಶವನ್ನು ಎಳೆದುಕೊಳ್ಳುವಂತಹ ಗುಣವನ್ನು ಹೊಂದಿದೆ. ಇದನ್ನು ಪೂಜೆಯಲ್ಲಿ ಬಳಸುವುದರಿಂದ ನಿಮಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಇದು ಬೇರಾವ ಹುಲ್ಲು ಅಲ್ಲ ಗರಿಕೆ .

ಗರಿಕೆಗೆ ಎಷ್ಟು ಶಕ್ತಿ ಇದೆ ಎಂಬುದರ ಬಗ್ಗೆ ಅದರ ಹಿಂದೆ ಒಂದು ಕಥೆ ಇದೆ. ಆ ಕಥೆಯನ್ನು ನಾವು ತಿಳಿದುಕೊಳ್ಳೋಣ .ಒಮ್ಮೆ ಅನಲಾಸುರ ಎಂಬ ರಾಕ್ಷಸನು ಸ್ವರ್ಗದಲ್ಲಿ ಅಲ್ಲೋಲಕಲ್ಲೋಲವನ್ನು ಉಂಟು ಮಾಡುತ್ತಾನೆ. ತನ್ನ ದಾರಿಯಲ್ಲಿ ಬರುವಂತಹ ಎದುರಾಗುವಂತಹ ಎಲ್ಲರನ್ನೂ ಕೂಡ ತನ್ನ ಕಣ್ಣಿನಿಂದ ಬರುವ ಬೆಂಕಿಯಿಂದ ಸುಟ್ಟು ಹಾಕುತ್ತಿದ್ದ .ಆಗ ದೇವತೆಗಳು ಗಣೇಶನ ಮೊರೆ ಹೋಗುತ್ತಾರೆ. ಗಣೇಶ ಮತ್ತು ಅನಲಾಸುರನ ಮಧ್ಯೆ ಭೀಕರ ಯುದ್ಧ ನಡೆದಾಗ ಅನಲಾಸುರನು ಗಣೇಶನ ಮೇಲೆ ಬೆಂಕಿಯ ಉಂಡೆಗಳನ್ನು ಎಸೆಯುತ್ತಾನೆ.

ಆಗ ಕೋಪದಿಂದ ಗಣೇಶನು ಅಸುರನನ್ನು ಸಂಹಾರ ಮಾಡಲು ವಿರಾಟ ರೂಪವನ್ನು ತಾಳಿ ಅನಲಾಸುರನ್ನನ್ನು ನುಂಗಿಬಿಡುತ್ತಾನೆ. ಇದರಿಂದ ಗಣೇಶನ ದೇಹದಲ್ಲಿ ಉಷ್ಣಾಂಶ ಅದಿಕವಾಗಿ ಹೊಟ್ಟೆಯು ಊದಿಕೊಳ್ಳುತ್ತದೆ . ದೇಹದ ಉಷ್ಣಾಂಶದಿಂದ, ದೇಹಾಲಸ್ಯದಿಂದ, ಸುಧಾರಿಸಿಕೊಳ್ಳಲು ಗಣೇಶನ ಹರಸಾಹಸ ಪಡುತ್ತಾನೆ. ದೇವತೆಗಳಾದಂತಹ ಚಂದ್ರ ವಿಷ್ಣು ಶಿವ ಗಣೇಶನ ಹೊಟ್ಟೆಯ ನೋವನ್ನು ಕಡಿಮೆ ಮಾಡಲು ನಾನಾ ಪ್ರಯೋಗಗಳನ್ನು ಮಾಡಿದರು ಗಣೇಶನಿಗೆ ಹೊಟ್ಟೆ ನೋವು ಕಡಿಮೆಯಾಗುವುದಿಲ್ಲ.

ಕೊನೆಯದಾಗಿ ಋಷಿ ಮುನಿಗಳು 21 ಗರಿಕೆಯನ್ನು ಗಣೇಶನ ತಲೆಯ ಮೇಲೆ ಇಡುತ್ತಾರೆ. ಆಗ ಗಣೇಶನ ದೇಹದ ಉಷ್ಣಾಂಶವೆಲ್ಲವೂ ಆವಿಯಾಗಿ ನೋವು ಕಡಿಮೆಯಾಗುತ್ತದೆ. ಮತ್ತು ಗುಣಮುಖನಾಗುತ್ತಾನೆ. ಅಂದಿನಿಂದ ಯಾರು ನನಗೆ ಗರಿಕೆಯನ್ನು ಅರ್ಪಿಸುತ್ತಾರೆಯೋ ಅವರಿಗೆ ಸದಾ ನನ್ನ ಆಶೀರ್ವಾದವಿರುತ್ತದೆ. ಎಂದು ಭಗವಂತನಾದಂತಹ ಗಣೇಶನು ಹೇಳುತ್ತಾನೆ. ಹಾಗಾಗಿ ಭಗವಂತನಾದ ಗಣೇಶನಿಗೆ ಗರಿಕೆಯನ್ನು ಅರ್ಪಿಸಿದರೆ ಒಳ್ಳೆಯದು ಎನ್ನುವ ನಂಬಿಕೆ ಇದೆ. ಹೀಗಾಗಿ ಈ ಗರಿಕೆ ಹುಲ್ಲಿಗೆ ಅಮೃತದಂತಹ ಶಕ್ತಿ ಇದೆ.

ಮತ್ತು ಗರಿಕೆಯಿಂದ ಜೀವನದಲ್ಲಿ ಬಂದಂತಹ ಕಷ್ಟಗಳನ್ನು ಮಂಜಿನಂತೆ ಕರಗಿಸಬಹುದು ಎನ್ನುವ ರಹಸ್ಯವನ್ನು ತಿಳಿದುಕೊಳ್ಳೋಣ. ಹಾಗೆಯೇ ಗರಿಕೆ ಹುಲ್ಲಿನಿಂದ‌ ಕೆಲವು ಉಪಯೋಗಗಳನ್ನು ಮಾಡಿಕೊಳ್ಳುವುದರಿಂದ ,ನೀವು ಶ್ರೀಮಂತರಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಗರಿಕೆಯನ್ನು ಗಣೇಶನಿಗೆ ಅರ್ಪಿಸುವಾಗ ಮೂರು ಅಥವಾ ಐದು ಎಳೆಯನ್ನು ಹೊಂದಿರಬೇಕು. ಗರಿಕೆಯ ಮಧ್ಯದ ಎಸಳು ಗಣೇಶನನ್ನ ಆಕರ್ಷಿಸಿದರೆ, ಇತರೆ ಎರಡು ಎಸಳು ಶಿವ ಹಾಗೂ ಶಕ್ತಿಯನ್ನು ಆಕರ್ಷಿಸುತ್ತದೆ .ಗಣೇಶನಿಗೆ 21 ಗರಿಕೆಯನ್ನು ಅರ್ಪಿಸುವುದು ಕಡ್ಡಾಯವಾಗಿರುತ್ತದೆ .

ಈ 21 ಗರಿಕೆಯನ್ನು ಕಟ್ಟಿ ನೀರಿನಲ್ಲಿ ಅದ್ದಿದ ನಂತರ ಗಣೇಶನಿಗೆ ಅರ್ಪಿಸಬೇಕು. ಗಣೇಶನನ್ನು ಅಲಂಕರಿಸುವಾಗ ಮುಖವನ್ನು ಹೊರತುಪಡಿಸಿ ಇನ್ನುಳಿದ ಭಾಗವನ್ನು ಗರಿಕೆಯಲ್ಲಿ ಮುಚ್ಚಬೇಕು. ಮೊದಲು ಪಾದವನ್ನು ಮುಚ್ಚಿ ನಂತರ ಇನ್ನುಳಿದ ಭಾಗವನ್ನು ಗರಿಕೆಯಿಂದ ಅಲಂಕರಿಸಬೇಕು. ದೇವತಾ ವಿಗ್ರಹಗಳ ಪವಿತ್ರವಾದ ಪಾದವು ಹೆಚ್ಚಿನ ಪ್ರಮಾಣದ ದೇವತಾ ತತ್ವವನ್ನು ಹೊರ ಸೂಸುವದರಿಂದ ಆರಂಭದಲ್ಲೇ ಪಾದಗಳಿಗೆ ಗರಿಕೆಯನ್ನು ಅರ್ಪಿಸುವುದರಿಂದ ಹೆಚ್ಚಿನ ಗಣೇಶ ತತ್ವವನ್ನು ಆಕರ್ಷಿಸುತ್ತದೆ.

ಈ ತತ್ವವು ಗರಿಕೆಗೆ ವರ್ಗಾವಣೆಯಾಗುತ್ತದೆ. ಗರಿಕೆಯಲ್ಲಿ ಸೇರಿರುವ ಗಣೇಶನ ನಿರ್ಗುಣ ಆವರ್ತನಗಳು ವಿಗ್ರಹದಲ್ಲಿ ಆಕರ್ಷಿತವಾಗಿ ನಂತರ ವಿಗ್ರಹದಲ್ಲಿ ಸಗುಣ ಆವರ್ತನವಾಗಿ ಪರಿವರ್ತನೆಯಾಗುತ್ತದೆ. ಇತರ ವಿಗ್ರಹದ ಮೂಲಕ ಹೊರ ಸೂಸುತ್ತದೆ. ಮತ್ತು ಗಣೇಶನನ್ನು ಆರಾಧಿಸುವ ಆರಾಧಕನಿಗೆ ಹೆಚ್ಚಿನ ಲಾಭ ಉಂಟಾಗುತ್ತದೆ. ಗರಿಕೆಯಿಂದ ದೇವತಾ ತತ್ವಗಳು ಹೊರಸುವುದರಿಂದ ಸುತ್ತಮುತ್ತಲೂ ರಜೋ ಮತ್ತು ತಮೋ ಗುಣಗಳ ಪ್ರತಿಕೂಲ ಪ್ರಭಾವ ಕಡಿಮೆಯಾಗುತ್ತದೆ.

ನಕಾರಾತ್ಮಕ ಶಕ್ತಿಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಈ ಗರಿಕೆಯೂ ಹೆಚ್ಚು ಧನಾತ್ಮಕ ಕಂಪನ ಉಂಟಾಗಿ ಅಡೆತಡೆಗಳು ನಿವಾರಣೆಯಾಗುತ್ತದೆ. ರಾಹುಗ್ರಹದಿಂದ ಉಂಟಾಗುವಂತಹ ಗ್ರಹ ದೋಷವನ್ನು ಪರಿಹಾರ ಮಾಡಿಕೊಳ್ಳಲು ಗರಿಕೆಯನ್ನು ಪೂಜಿಸಬೇಕು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಕಲ್ಪವೃಕ್ಷವನ್ನು ಪೂಜಿಸುವುದರಿಂದಲೂ ಸಹ ರಾಹುಗ್ರಹದಿಂದ ಉಂಟಾಗುವಂತಹ ಕೆಟ್ಟ ಪರಿಣಾಮಗಳು ಕುಗ್ಗುತ್ತವೆ. ಗರಿಕೆಯು ಗಣೇಶನಿಗೆ ತುಂಬಾ ಪ್ರಿಯವಾದದ್ದಾಗಿದೆ. ಮನೆಯಲ್ಲಿ ಇದನ್ನು ನೆಟ್ಟರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಪ್ರತಿ ದಿನ ಗರಿಕೆಗೆ ನೀರನ್ನು ಅರ್ಪಿಸಿ .

ಗಣೇಶನಿಗೆ ಇಡುವುದರಿಂದ ಅದೃಷ್ಟವೂ ಬದಲಾಗುತ್ತದೆ. ಗಣಪತಿಗೆ ಅರ್ಪಿಸುವ ಗರಿಕೆಯು ಕೋಮಲವಾಗಿರಬೇಕು ಎಂದರೆ ಎಳೆಯ ಹುಲ್ಲಾಗಿರಬೇಕು. ಬೆಸ ಸಂಖ್ಯೆಗಳು ಶಕ್ತಿ ತತ್ವದೊಂದಿಗೆ ಸಂಬಂಧ ಹೊಂದಿದೆ. ದೂರ್ವೆಯನ್ನು ಹೆಚ್ಚಾಗಿ ಬೆಸ ಸಂಖ್ಯೆಯಲ್ಲಿ ಅರ್ಪಿಸಲಾಗುತ್ತದೆ. ಕನಿಷ್ಠ ಮೂರು ಐದು ಏಳು 21 ಇತ್ಯಾದಿ .ಶ್ರೀ ಗಣಪತಿಗೆ 21 ದೂರ್ವೆಯನ್ನು ಅರ್ಪಿಸುವುದು ಉತ್ತಮ. ಸಂಖ್ಯಾಶಾಸ್ತ್ರದ ಪ್ರಕಾರ 21 ನೇ ಅಂಕಿಯು ಎರಡು ಮತ್ತು ಒಂದು ಸೇರಿಸಿದರೆ ಮೂರು ಆಗಿದೆ.

ಶ್ರೀ ಗಣಪತಿಯು ಸಂಖ್ಯೆ ಮೂರರೊಂದಿಗೆ ಸಂಬಂಧ ಹೊಂದಿರುತ್ತಾರೆ. ಗಣಪತಿಯನ್ನ ಮುಖವನ್ನು ಹೊರತುಪಡಿಸಿ ಇಡೀ ದೇಹವನ್ನು ದೂರ್ವೆಯಿಂದ ಮುಚ್ಚಬೇಕು. ಇದರಿಂದ ದೂರ್ವೆಯ ಸುಗಂಧವು ವಿಗ್ರಹದ ಸುತ್ತಲೂ ಹರಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೀವು ಪದೇ ಪದೇ ಸಂದರ್ಶನಗಳನ್ನು ನೀಡುತ್ತಿದ್ದರು ಉದ್ಯೋಗ ಸಿಗುತ್ತಿಲ್ಲ ಎಂದರೆ ವಿನಾಯಕನ ಆಶೀರ್ವಾದವನ್ನು ಪಡೆಯಬೇಕಾಗುತ್ತದೆ. ವಿಶೇಷವಾಗಿ ಬಲಸೋಂಡಿಲನ್ನು ಹೊಂದಿರುವ ಅಂದರೆ ಬಲಮುರಿ ಗಣೇಶನ ಮುಂದೆ ಏಳು ಅಥವಾ ಹನ್ನೊಂದು ಗರಿಕೆಯನ್ನು ಅರ್ಪಿಸಬೇಕು.

ಮತ್ತು ಗಣೇಶನ ಮುಂದೆ ಲವಂಗ ಮತ್ತು ವಿಳ್ಳೆದೆಲೆಯನ್ನು ಇಟ್ಟು ಪೂಜಿಸಬೇಕು . ಹೊಸ ಕೆಲಸಕ್ಕೆ ಹೋಗುವಾಗ ಅಂದರೆ ಸಂದರ್ಶನಕ್ಕೆ ಹೋಗುವಾಗ ಈ ವೀಳ್ಯದೆಲೆ ,ಮತ್ತು ಲವಂಗವನ್ನು ನಿಮ್ಮ ಜೊತೆ ತೆಗೆದಿಟ್ಟುಕೊಂಡು ಹೋಗಬೇಕು. ಹೀಗೆ ಮಾಡುವುದರಿಂದ ಗಣಪತಿಯ ವಿಶೇಷ ಅನುಗ್ರಹ ಮತ್ತು ಯಶಸ್ಸು ಸಿಗುತ್ತದೆ. ಬುಧ ಗ್ರಹದ ದೋಷವನ್ನು ನಾಶಮಾಡಲು ಗಣೇಶನ ದೇವಸ್ಥಾನದಲ್ಲಿ 11 ಗರೆಕೆಯನ್ನು ಅರ್ಪಿಸಿ. ಇದನ್ನು ಮಾಡಿದರೆ ಗಣೇಶನ ಸಂತೋಷವಾಗುತ್ತಾನೆ . ಮತ್ತು ಪ್ರಸನ್ನನಾಗುತ್ತಾನೆ. ಹೀಗೆ ಮಾಡಿದರೆ ನೀವು ದೇವರ ಅನುಗ್ರಹವನ್ನು ಸಹ ಪಡೆಯಬಹುದು. ಗಣಪತಿ ಆರಾಧನೆಯಲ್ಲಿ ಗರಿಕೆಯನ್ನು ಅರ್ಪಿಸಬೇಕು.

ಗಣಪತಿಗೆ ಗರಿಕೆಯನ್ನು ‌ ಅರ್ಪಿಸಿದರೆ ಬೇಗ ಆಶೀರ್ವಾದವನ್ನು ಪಡೆದುಕೊಳ್ಳಬಹುದು . ಗಣೇಶನ ತಲೆಯ ಮೇಲೆ ಗರಿಕೆಯನ್ನು ಅರ್ಪಿಸಬೇಕು . ಎಂಬುದನ್ನು ಭಕ್ತರು ನೆನಪಿಟ್ಟುಕೊಳ್ಳಬೇಕು. ಬುದುವಾರ 21 ಗರಿಕೆಗಳನ್ನ ಗಣಪತಿ ದೇವಸ್ಥಾನದಲ್ಲಿ ಕೊಟ್ಟು ಅದನ್ನು ಸೊಂಡಿಲಲ್ಲಿ ಇಟ್ಟ ನಂತರ ಅದನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳುವುದರಿಂದ ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರು ಆ ಕೆಲಸಗಳಲ್ಲಿ ನಿಮಗೆ ಯಶಸ್ಸು ,ಮತ್ತು ಜಯ ಸಿಗುತ್ತದೆ. ಒಂದು ವಾರ ಮಾತ್ರ ಆ ಗರಿಕೆಯೂ ನಿಮ್ಮ ಹತ್ತಿರ ಇರಬೇಕು. ನಂತರ ಅದನ್ನು ಮರದ ಕೆಳಗಡೆ ಹಾಕಿ. ಪ್ರತಿ ಬುಧವಾರವೂ ಸಹ ಇದನ್ನೇ ಪುನರಾವರ್ತನೆ ಮಾಡಬಹುದು. ಈ ಚಮತ್ಕಾರಿ ಉಪಾಯವನ್ನು ಮಾಡಿ ತಿಳಿದುಕೊಳ್ಳಿ.

Leave A Reply

Your email address will not be published.