ಏಪ್ರಿಲ್‌ನಲ್ಲಿ ಮಾಡಬಾರದ ಇದೊಂದು ಕೆಲಸ! 

0

ನಾವು ಈ ಲೇಖನದಲ್ಲಿ ತುಲಾ ರಾಶಿಯವರ ಏಪ್ರಿಲ್ ಮಾಸ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ. ಜೀವನದಲ್ಲಿ ಒಂದಷ್ಟು ಕಷ್ಟ , ಒಂದಷ್ಟು ಸುಖ, ಮತ್ತು ಒಂದಿಷ್ಟು ಸಂದರ್ಭಗಳು ನಮಗೆ ಖುಷಿಯನ್ನು ಕೊಡಲು ಸಾಧ್ಯವೇ ಇಲ್ಲ .ಏಪ್ರಿಲ್ 14 ರ ನಂತರ ಸಾಕಷ್ಟು ಒಳ್ಳೆಯ ಪರಿವರ್ತನೆಗಳು ಇದೆ .ಆ ಪರಿವರ್ತನೆಗಳು ಏನು ಎಂಬುದನ್ನು ಯಾರ ಜೀವನದಲ್ಲಿ ಒಳ್ಳೆಯ. ಬೆಳವಣಿಗೆಗಳು ನಡೆಯಲಿದೆ .ಎಂಬುದನ್ನು ತಿಳಿದುಕೊಳ್ಳೋಣ. ನೀವು ಹೋಲಿಕೆ ಮಾಡುವುದರಲ್ಲಿ ಕಾಲ ಕಳೆಯುತ್ತೀರಾ .

ಯಾರೋ ಒಬ್ಬರು ಮನೆಯನ್ನು ಕಟ್ಟಿದ್ದರೆ ಅವರಿಗೆ ಪ್ರಶಂಸೆಯನ್ನು ನೀಡುವಲ್ಲಿ ನೀವು ಹಿಂದೆ ಮುಂದೆ ನೋಡುತ್ತೀರಾ ಅದನ್ನು ಒಪ್ಪಿಕೊಳ್ಳುವುದಕ್ಕೆ ನಿಮಗೆ ಆಗುವುದಿಲ್ಲ. ಮತ್ತು ನೀವು ನಿಮ್ಮನ್ನು ಬೇರೆಯವರ ಜೊತೆ ಹೋಲಿಕೆ ಮಾಡಿಕೊಳ್ಳುವುದರಲ್ಲಿ ನೋವನ್ನು ಮಾಡಿಕೊಳ್ಳುತ್ತೀರಾ. ತುಲಾ ರಾಶಿಯು ಹೋಲಿಕೆ ಮಾಡುವುದರಲ್ಲಿ ಅಂದರೆ ರಾಶಿಯ ಪ್ರಕಾರ ಇವರಿಗೆ ಸಮತೋಲನವಿರಬೇಕು. ಈ ರೀತಿಯ ಗೊಂದಲವೂ ನಿಮ್ಮ ಆತ್ಮವಿಶ್ವಾಸವನ್ನು ಹಾಳುಮಾಡುತ್ತದೆ.

ಪಂಚಮ ಶನಿ ಇರುವಾಗ ಏಪ್ರಿಲ್ ತಿಂಗಳಿನಲ್ಲಿ ಶನಿಯ ಜೊತೆಗೆ ರವಿಯೂ ಸಹ ಇರುತ್ತಾನೆ. ಏಳನೇ ತಾರೀಖಿನಿಂದ ಶುಕ್ರ ಗ್ರಹವು ಸಹ ಇರುತ್ತದೆ. ಈ ಎಲ್ಲಾ ಗ್ರಹಗಳು ಸೇರಿ ಒಂದು ಸಮತೋಲನ ಮತ್ತು ಅಸಮತೋಲನವನ್ನು ಕೊಡುತ್ತವೆ. ಮತ್ತು ನಿಮ್ಮ ಜೀವನದ ಬಗ್ಗೆ ಅಭದ್ರತೆ ಕಾಡುತ್ತದೆ. ಜನ ನಿಮ್ಮನ್ನು ಹೇಗೆ ಸ್ವೀಕರಿಸುವರು ಮತ್ತು ಗೌರವ ಕೊಡುವುದಿಲ್ಲವೋ ,ಎಂದು ನಿಮ್ಮವರು ನಿಮಗೆ ಏನನ್ನು ಹೇಳುತ್ತಾರೋ ಎಂದು ಗೊಂದಲ ಮತ್ತು ಚಿಂತೆಯಲ್ಲಿ ಮುಳುಗುತ್ತೀರಾ. ಮತ್ತು ಮಾನಸಿಕ ಒತ್ತಡದಿಂದ ಬಳಲುತ್ತೀರ.

ಮಾನಸಿಕ ಗೊಂದಲಕ್ಕೆ ಒಳಗಾದ ತಕ್ಷಣ ನೀವು ಏನು ಮಾಡಿದರೆ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು ಎಂದು ತಕ್ಷಣವೇ ಯೋಚನೆ ಮಾಡಲು ಶುರು ಮಾಡುತ್ತೀರಾ. ಇದರಿಂದ ಗಲಿಬಿಲಿಗೊಂಡು ಆತುರದ ನಿರ್ಧಾರವನ್ನು ಕೈಗೊಳ್ಳಬೇಡಿ. ತುಂಬಾ ಸಮಯವನ್ನು ತೆಗೆದುಕೊಂಡು ಯೋಚನೆ ಮಾಡಿ ಮುಂದಕ್ಕೆ ಹೆಜ್ಜೆಯನ್ನು ಇಡಬೇಕು. ಈ ತಿಂಗಳಿನಲ್ಲಿ ಹೋಲಿಕೆಯ ಬುದ್ಧಿಯು ನಿಮ್ಮ ಮನಸ್ಸಿಗೆ ತುಂಬಾ ಬಂದು ಹೋಗುತ್ತಿರುತ್ತದೆ. ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು

ಆ ತೀರ್ಮಾನದ ಸಾಧಕ ಬಾದಕಗಳೇನು ಎಂಬುದನ್ನು ನಿರ್ಧರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಿ. ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಹಾಗೆಯೇ ನಿಮ್ಮ ಪಂಚಮ ಸ್ಥಾನ , ಪೂರ್ವ ಪುಣ್ಯಸ್ಥಾನ , ಧನ ಸ್ಥಾನಕ್ಕೆ, ತುಂಬಾ ಒತ್ತಡವಿದೆ. ಶನಿಯು ಪಂಚಮ ಸ್ಥಾನದಲ್ಲಿ ಇರುವುದರಿಂದ ಮಕ್ಕಳಿಂದ ಕಿರಿಕಿರಿ ಮತ್ತು ಮಕ್ಕಳನ್ನು ಅಗಲಿ ಇರುವ. ಪರಿಸ್ಥಿತಿಯು ಬರುತ್ತದೆ. ಇದರಿಂದ ನಿಮಗೆ ವ್ಯಥೆ ಉಂಟಾಗುತ್ತದೆ. ಗೊಂದಲ ಕಿರಿಕಿರಿ ಅನಾವಶ್ಯಕ ತಿರುಗಾಟಗಳು ಬರುತ್ತದೆ. ವ್ಯಯದಲ್ಲಿ ಕೇತು ಗ್ರಹ ಇರುವಾಗ ಷಷ್ಟದಲ್ಲಿ ರಾಹುಗ್ರಹ ಇರುವಾಗ ವಿದೇಶದ ಪ್ರವಾಸದ ಯೋಗವು ಕೂಡಿಬರುತ್ತದೆ.

ಆದರೆ ನಿಮ್ಮಲ್ಲಿ ತಯಾರಿ ಇಲ್ಲದಿರುವುದರಿಂದ ನೀವು ತುಂಬಾ ಒದ್ದಾಟವನ್ನು ನಡೆಸುತ್ತೀರಾ. ಅಂದುಕೊಂಡಂತಹ ಕೆಲಸಗಳ ಕಾರ್ಯಗಳು ನಡೆಯುವುದಿಲ್ಲ. ಆದರೆ 14 ರ ನಂತರ ರವಿಗ್ರಹವು ನಿಮ್ಮ ಷಷ್ಟಕ್ಕೆ ಪರಿವರ್ತನೆಗೊಳ್ಳುತ್ತದೆ. ಅದಾಗಲೇ ರಾಹುಗ್ರವು ಅದೇ ಭಾಗದಲ್ಲಿ ಇರುವುದರಿಂದ , ಇವೆರಡು ಗ್ರಹಗಳು ಸಕಾರಾತ್ಮಕ ಬದಲಾವಣೆಯನ್ನು ತರುವಂತಹ. ಸಾಮರ್ಥ್ಯವನ್ನು ಹೊಂದಿದೆ. ರವಿಯಿಂದ ಪ್ರಕಾಶ ಸಿಗುತ್ತದೆ. ಮಾನಸಿಕ ಒದ್ದಾಟವು ಕಡಿಮೆಯಾಗುತ್ತದೆ.

ಒಳ್ಳೆಯ ಬೆಳವಣಿಗೆಗಳು ಬರುತ್ತದೆ. ಮತ್ತು ಶತ್ರುಗಳನ್ನು ಧಮನ ಮಾಡುವ ಶಕ್ತಿಯು ನಿಮಗೆ ಬರುತ್ತದೆ. ರೋಗಗಳಿಂದ ಅಂದರೆ. ಅಸಿಡಿಟಿ ತಲೆನೋವು ಇವುಗಳಿಂದ ಮುಕ್ತಿಯನ್ನು ಪಡೆಯಬಹುದು. 14. ರ ತನಕ ನಿಮ್ಮ ಆರೋಗ್ಯದಲ್ಲಿ ಬಹಳ ಡೋಲಾಯಮಾನ ಪರಿಸ್ಥಿತಿ ಇರುತ್ತದೆ .14ರ ನಂತರ ರವಿಯ ಪ್ರಭಾವದಿಂದ ಆರೋಗ್ಯವು ಸುಧಾರಿಸುತ್ತದೆ .ಮತ್ತು ಮಾನಸಿಕ ದೈಹಿಕ ಆರೋಗ್ಯವು ವೃದ್ಧಿಯಾಗುತ್ತದೆ. ಹಾಗೆಯೇ ರವಿಯು ಆತ್ಮವಿಶ್ವಾಸವನ್ನು ಸಹ ನೀಡುತ್ತಾನೆ. ಪ್ರಸಿದ್ಧಿ ಮತ್ತು ಪ್ರಖ್ಯಾತಿಯನ್ನು ತಂದು ಕೊಡುತ್ತಾನೆ .

ನೀವು ಮಾಡುವ ಕೆಲಸಕ್ಕೆ ಯಶಸ್ಸು ಸಿಕ್ಕಿ ರವಿಯಿಂದ ಒಳ್ಳೆಯ ಆದಾಯವು ಸಹ ಬರುತ್ತದೆ. ರಾಜಕೀಯ ಮತ್ತು ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಮಗೆ ಯಶಸ್ಸು ದೊರಕಲಿದೆ. ಚತುರ್ಥಭಾವದಲ್ಲಿ ಕುಜ ಗ್ರಹವು ಇರುವುದರಿಂದ ಸ್ವಲ್ಪ ಕಿರಿಕಿರಿ ಸ್ವಲ್ಪ ಒತ್ತಡವನ್ನು ಸಹ ಕೊಡುತ್ತದೆ . ನೀವು ಅಂದುಕೊಂಡಂತಹ ಕೆಲಸ ಸರಿಯಾಗಿ ನಡೆಯದೆ ಸ್ವಲ್ಪ ಕಿರಿಕಿರಿಗಳಾಗುವ ಸಾಧ್ಯತೆಗಳು ಉಂಟು. ಕುಜಗ್ರಹವು ಪಂಚಮ ಸ್ಥಾನಕ್ಕೆ ಹೋಗುವುದರಿಂದ ನಿಮಗೆ ಶುಭವಾಗುವ ಸಾಧ್ಯತೆ ಹೆಚ್ಚು.

ಮಕ್ಕಳನ್ನು ಹೆಚ್ಚು ಜಾಗೃತೆ ವಹಿಸಿ ನೋಡಿಕೊಳ್ಳಬೇಕಾಗುತ್ತದೆ. ಹಾಗೆ ತುಲಾ ರಾಶಿಯ ಪ್ರಕಾರ ನೋಡುವುದಾದರೆ ಸಪ್ತಮ ಭಾಗದಲ್ಲಿ ಗುರುಗ್ರಹವಿರುವುದರಿಂದ ಗುರುವಿನ ದೃಷ್ಟಿ ಇರುವುದರಿಂದ ಬಹಳ ಒಳ್ಳೆಯ ಲಾಭಗಳು ಸಿಗುತ್ತದೆ. ಇದು ಸಪ್ತಮ ಭಾಗಕ್ಕೆ ರಕ್ಷಣೆ ಕೊಡುತ್ತದೆ. ಆದರೆ ಏಪ್ರಿಲ್ ತಿಂಗಳಲ್ಲಿ ಬುಧ ಗ್ರಹವು ಹೋಗಿ ಸಪ್ತಮಕ್ಕೆ ಭಾಗಕ್ಕೆ ಕುಳಿತುಕೊಳ್ಳುವುದರಿಂದ ಅಂತಹ ಶುಭಫಲವೇನು ಇಲ್ಲ. ಇದರಿಂದ ಪತಿ ಮತ್ತು ಪತ್ನಿಯ ನಡುವೆ ಸ್ವಲ್ಪ ಭಿನ್ನಾಭಿಪ್ರಾಯಗಳು ಜಗಳ ಕಿರಿಕಿರಿ ಮಾತಿಗೆ ಮಾತು ಬೆಳೆಸುವುದು ವಾಗ್ವಾದಗಳು ಉಂಟಾಗುವುದು

ಈ ರೀತಿಯ ತಪ್ಪು ತಿಳುವಳಿಕೆಗಳು ಉಂಟಾಗುತ್ತದೆ . ಆದರೆ ವಿದ್ಯಾರ್ಥಿಗಳ ಮಟ್ಟಿಗೆ ಇದು ಒಳ್ಳೆಯ ತಿಂಗಳಾಗಿದೆ, ಪರೀಕ್ಷೆ ಬರೆಯುವವರಿಗೆ ಆತ್ಮವಿಶ್ವಾಸದಿಂದ ಎದುರಿಸಲು ಬೇಕಾಗುವಂತಹ ಗ್ರಹಗಳು ಪೂರಕವಾಗಿವೆ. ಹಣಕಾಸಿನ ತೊಂದರೆ ಇರುವುದಿಲ್ಲ . ಆದರೆ ಮಾನಸಿಕವಾಗಿ ನೆಮ್ಮದಿಯ ಕೊರತೆ ಇದೆ. ಅರ್ಧ ಭಾಗ ತೊಂದರೆ ಇದ್ದರೆ ,ಅರ್ಧ ಭಾಗ ಚೆನ್ನಾಗಿರುತ್ತದೆ. ಇದರಿಂದ ಹತಾಶೆ ನಿಮ್ಮನ್ನು ಕಾಡುತ್ತದೆ. ಆದರೆ ಯಾವುದೇ ಕಾರಣಕ್ಕೂ ಹೋಲಿಕೆ ಮಾಡಿಕೊಳ್ಳಲು ಹೋಗಬೇಡಿ. ಬೇರೆಯವರನ್ನು ತುಂಬು ಹೃದಯದಿಂದ ಪ್ರಶಂಸಿಸಿ. ನಿಮ್ಮನ್ನ ನೀವು ಕಾಪಾಡಿಕೊಳ್ಳಿ . ಮತ್ತು ಸಂಬಂಧಗಳನ್ನು‌ ಉಳಿಸಿಕೊಳ್ಳಿ.

Leave A Reply

Your email address will not be published.