ಕೊಬ್ಬರಿ ಎಣ್ಣೆಯ 30 ಪ್ರಯೋಜನಗಳು

0

ನಾವು ಈ ಲೇಖನದಲ್ಲಿ ಕೊಬ್ಬರಿ ಎಣ್ಣೆಯಿಂದ ಆಗುವ ಪ್ರಯೋಜನಗಳ ಬಗ್ಗೆ ನಾವು ತಿಳಿಯೋಣ . 1 . ಒಂದು ಚಮಚ ತೆಂಗಿನ ಎಣ್ಣೆಯನ್ನು ನಿಮ್ಮ ಅಂಗೈಗೆ ಹಾಕಿಕೊಂಡು ಅದನ್ನು ನಿಮ್ಮ ಮುಖ ಮತ್ತು ಕತ್ತಿನ ಭಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿ , ದೇಹದಲ್ಲಿನ ಸತ್ತ ಚರ್ಮವನ್ನು ತೆಗೆದುಹಾಕಿ ಚರ್ಮ ಹೊಳೆಯುವಂತೆ ಮಾಡುತ್ತದೆ .

2 . ತೆಂಗಿನಕಾಯಿ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವುದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ . ಜೊತೆಗೆ ಜೀರ್ಣ ಶಕ್ತಿಯನ್ನು ವೃದ್ಧಿಸುತ್ತದೆ . 3 . ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ . ಕೊಬ್ಬರಿ ಎಣ್ಣೆಯಲ್ಲಿ ಒಗ್ಗರಣೆ ಮಾಡಿದ ಆಹಾರವನ್ನು ಸೇವಿಸುವ ಮೂಲಕ ಮರೆತ ವಿಷಯಗಳನ್ನು ನೆನಪಿಸಿಕೊಳ್ಳುವ ಕ್ಷಮತೆ ಹೆಚ್ಚುತ್ತದೆ .

4 . ಇವು ಮೆದುಳಿಗೂ ಸುಲಭವಾಗಿ ತಲುಪಿ ಮೆದುಳಿನ ಜೀವಕೋಶಗಳಿಗೆ ಹೆಚ್ಚಿನ ಶಕ್ತಿ ದೊರಕುತ್ತದೆ . ಹಾಗೂ ತನ್ಮೂಲಕ ಸ್ಮರಣ ಶಕ್ತಿ ಹೆಚ್ಚುತ್ತದೆ . 5 . ಇದು ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ . ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಒಳ್ಳೆಯ ಕೊಲೆಸ್ಟ್ರಾಲ್ ಆಗಿ ಪರಿವರ್ತಿಸಲು ನೆರವಾಗುತ್ತದೆ .

6 . ಸ್ವಲ್ಪ ಕೊಬ್ಬರಿ ಎಣ್ಣೆಯಿಂದ ಬಾಯನ್ನು ಮುಕ್ಕಳಿಸುವುದರಿಂದ ವಸಡಿನ ಸಮಸ್ಯೆ ಮಾಯವಾಗುತ್ತದೆ . ತೂಕ ಕಡಿಮೆ ಮಾಡಿಕೊಳ್ಳಲು ಕೊಬ್ಬರಿ ಎಣ್ಣೆಯನ್ನು ಅಡುಗೆಯಲ್ಲಿ ಬಳಸಿದರೆ ಉಪಯೋಗಕಾರಿ ಎಂದು ಹೇಳುತ್ತಾರೆ .8 . ಕೊಬ್ಬರಿ ಎಣ್ಣೆಯ ಮಸಾಜ್ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಲನ ಚೆನ್ನಾಗಿ ಆಗುತ್ತದೆ . ಹಾಗೂ ಚರ್ಮಕ್ಕೂ ಕೂಡ ಒಳ್ಳೆಯದು .

9 . ಕೂದಲಿಗೆ ವಾರದಲ್ಲಿ ಎರಡು ಬಾರಿ ಆದರೂ ಕೊಬ್ಬರಿ ಎಣ್ಣೆಯ ಮಸಾಜ್ ಮಾಡಿ. ಇದು ಕೂದಲನ್ನು ಉದ್ದವಾಗಿ ಬೆಳೆಯಲು ಹಾಗೂ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ . 10 . ತುಟಿಗಳು ಒಣಗುತ್ತಿದ್ದರೆ ಅಥವಾ ಒಡೆದಿದ್ದರೆ ಒಂದು ಚಿಟಿಕೆ ಕೊಬ್ಬರಿ ಎಣ್ಣೆ ತೆಗೆದುಕೊಂಡು ತುಟಿಗಳಿಗೆ ಹಚ್ಚಿ ಮಸಾಜ್ ಮಾಡಿ .

11 . ಸುಟ್ಟ ಕಲೆಗಳು ಹಾಗೂ ಯಾವುದಾದರೂ ಸ್ಟ್ರೆಚ್ ಮಾರ್ಕ್ಸ್ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿದರೆ ಕ್ರಮೇಣ ಕಲೆಗಳ ಸಮಸ್ಯೆಯಿಂದ ಮುಕ್ತಿ ದೊರಕುತ್ತದೆ . 12 . ರಾತ್ರಿ ಮುಖಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆ ಹಾಗೂ ಅಲೋವೆರಾ ಹಚ್ಚಿ ಮಲಗುವುದರಿಂದ ಕಪ್ಪು ಕಲೆಗಳು ಮಾಯವಾಗುತ್ತದೆ .

13 . ರಾತ್ರಿ ಮಲಗುವ ಮುನ್ನ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಹಿಮ್ಮಡಿ ಗಳಿಗೆ ಹಚ್ಚಿದರೆ ಹಿಮ್ಮಡಿ ಒಡೆಯುವುದನ್ನು ತಪ್ಪಿಸಬಹುದು . 14 . ನಮ್ಮ ಆಹಾರದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ಗುಣ ಕೊಬ್ಬರಿ ಎಣ್ಣೆಯಲ್ಲಿ ಇದೆ. ಹಾಗಾಗಿ ಇದನ್ನು ಅಡುಗೆಯಲ್ಲಿ ಬಳಸುವುದು ಒಳ್ಳೆಯದು .
ಈ ರೀತಿಯಾಗಿ ಕೊಬ್ಬರಿ ಎಣ್ಣೆಯನ್ನು ಬಳಸುವುದರಿಂದ ನಮಗೆ ತುಂಬಾ ಉಪಯೋಗಕಾರಿ ಆಗಿರುತ್ತದೆ ಎಂದು ಹೇಳಲಾಗಿದೆ .

Leave A Reply

Your email address will not be published.