ಈ ದಿನ ಉಗುರು ಕತ್ತರಿಸಿದರೆಬಡತನ ಬರುವುದಿಲ್ಲ

ಈ ದಿನ ನೀವು ಉಗುರು ಕತ್ತರಿಸಿದರೆ ಬಡತನ ಬರುವುದಿಲ್ಲ. ಉಗುರುಗಳನ್ನು ಕತ್ತರಿಸೋದು ಸ್ವಚ್ಛವಾಗಿಟ್ಟುಕೊಳ್ಳುವುದು ಆರೋಗ್ಯದ ದೃಷ್ಠಿಯಿಂದ ಬಹಳ ಮುಖ್ಯ ಅಲ್ಲದೇ ಉದ್ದ ಉಗುರುಗಳಲ್ಲಿ ಸಿಲುಕಿಕೊಂಡಿರುವ ಕೆಸರಿನಲ್ಲಿರುವ ಕೀಟಾಣುಗಳು ಹೊಟ್ಟೆಗೆ ಸೇರಿ ಆರೋಗ್ಯ ಕೆಡಿಸಬಹುದು. ಆದರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉಗುರುಗಳನ್ನು ಇಂಥದ್ದೇ ನಿರ್ದೀಷ್ಟ ದಿನಗಳಲ್ಲಿ ಕತ್ತರಿಸಬೇಕು ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ನಮ್ಮ ಹಿರಿಯರು ದಿನನಿತ್ಯದ ಅಭ್ಯಾಸಗಳಿಗೆ ಸಂಬಂಧಿಸಿ ಒಂದಿಷ್ಟು ನಿಯಮಗಳನ್ನು ಹೇಳುತ್ತಲೇ ಇರುತ್ತಾರೆ.

ಇಂತಹ ದಿನಗಳಂದು ಕೂದಲಿಗೆ ಕತ್ತರಿ ಹಾಕಬಾರದು ಸಂಜೆ ಹೊತ್ತು ಉಗುರು ತೆಗೆದುಕೊಳ್ಳಬಾರದು ಮುಂತಾದ ಮಾತುಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಇದರಲ್ಲಿ ಕೆಲವೊಂದು ಪದ್ಧತಿಗಳಿಗೆ ವೈಜ್ಞಾನಿಕ ಕಾರಣಗಳೂ ಕೂಡಿವೆ. ಹಾಗಿದ್ದರೇ ಯಾವ ದಿನಗಳಲ್ಲಿ ಉಗುರುಗಳನ್ನು ಕತ್ತರಿಸಬಹುದು ಹಾಗೂ ಅದರಿಂದ ಏನು ಪ್ರಯೋಜನವಾಗಬಹುದು. ಹಾಗೆಯೇ ಯಾವ ದಿನದಂದು ಈ ಕೆಲಸವನ್ನು ಮಾಡಲೇಬಾರದು ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

ಸೋಮವಾರದಂದು ಭಗವಾನ್ ಶಿವನನ್ನು ಪೂಜಿಸಲಾಗುತ್ತದೆ. ಈ ದಿನ ಚಂದ್ರ ಮತ್ತು ಮನಸ್ಸಿಗೆ ಸಂಬಂಧಿಸಿದೆ ಆದ್ದರಿಂದ ಸೋಮವಾರದಂದು ನಿಮ್ಮ ಉಗುರುಗಳನ್ನು ಕತ್ತರಿಸುವುದರಿಂದ ನಿಮ್ಮ ಜೀವನದಲ್ಲಿ ದುಷ್ಪರಿಣಾಮವನ್ನು ಉಂಟುಮಾಡುವಂಥ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಹನುಮಂತ ದೇವರನ್ನು ಪೂಜಿಸಲು ಮಂಗಳವಾರವನ್ನು ಪರಿಗಣಿಸಲಾಗುತ್ತದೆ. ಹಾಗೆಯೇ ಈ ದಿನಗಳಲ್ಲಿ ಉಗುರು ಅಥವಾ ಕೂದಲನ್ನು ಕತ್ತರಿಸಿದರೆ ಅಶುಭ ಎಂದು ಹೇಳಲಾಗುತ್ತದೆ. ಅಲ್ಲದೇ ಇದು ಸಾಲಕ್ಕೆ ದಾರಿ ಮಾಡಿಕೊಡಬಹುದು ಎಂದೂ ನಂಬಲಾಗುತ್ತದೆ.
ಬುಧವಾರ ನಿಮ್ಮ ಉಗುರುಗಳನ್ನು ಕತ್ತರಿಸಲು ಒಳ್ಳೆಯ ದಿನವಾಗಿದೆ. ಈ ದಿನ ನಿಮ್ಮ ಉಗುರುಗಳನ್ನು ಕತ್ತರಿಸಿದರೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ಹಾಗೆಯೇ ನಿಮ್ಮ ಬುದ್ಧಿವಂತಿಕೆಗೆ ತಕ್ಕಂತೆ ನೀವು ಹೆಚ್ಚು ಹಣವನ್ನು ಗಳಿಸುತ್ತೀರಿ.
ಗುರುವಾರ ನಿಮ್ಮ ಉಗುರುಗಳನ್ನು ಕತ್ತರಿಸುವುದರಿಂದ ನಿಮ್ಮಲ್ಲಿರುವ ಮಾನವೀಯ ಗುಣಗಳು ಇನ್ನಷ್ಟು ಉತ್ತಮಗೊಳ್ಳುತ್ತವೆ. ಈ ದಿನವು ಸುಖ ಶಾಂತಿ ಹಾಗೂ ಸಂಪತ್ತಿಗೆ ಸಂಬಂಧಿಸಿದ ದಿನವಾಗಿದೆ ಆದ್ದರಿಂದ ಈ ದಿನ ಉಗುರುಗಳನ್ನು ಕತ್ತರಿಸುವುದು ಶುಭ ಎಂದೇ ಹೇಳಲಾಗುತ್ತದೆ. ಅಲ್ಲದೇ ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಗೊಳಿಸುತ್ತದೆ ಎಂದು ನಂಬಲಾಗಿದೆ.
ನಿಮ್ಮ ಉಗುರುಗಳನ್ನು ಕತ್ತರಿಸಲು ನೀವು ಶನಿವಾರವನ್ನು ಪರಿಗಣಿಸಲೇಬಾರದು ಏಕೆಂದರೆ ಈ ದಿನ ನೀವು ಉಗುರು ಕತ್ತರಿಸುವ ಕೆಲಸ ಮಾಡಿದರೆ ನಿಮ್ಮ ಗ್ರಹಗತಿಯ ಮೇಲೆ ಪರಿಣಾಮ ಬೀರಬಹುದು ಹಾಗೆಯೇ ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೂ ಪರಿಣಾಮ ಬೀರಬಹುದು.
ಭಾನುವಾರ ಈ ದಿನ ಸಾಮಾನ್ಯವಾಗಿ ಎಲ್ಲರಿಗೂ ರಜೆ ಇರುವುದರಿಂದ ಇಂಥ ಸ್ವಚ್ಛತಾ ಕಾರ್ಯಗಳನ್ನು ಮಾಡುತ್ತಾರೆ ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರದಂದು ಉಗುರು ಕತ್ತರಿಸುವುದು ನಿಮ್ಮ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

Leave a Comment