ಈ ಹಣ್ಣು ಎಲ್ಲಿ ಸಿಕ್ಕರೂ ಬಿಡಬೇಡಿ ದೊಡ್ಡ ಖಾಯಿಲೆ ಬರಲ್ಲ 70ವರ್ಷದಲ್ಲೂ 25 ರ ಎನರ್ಜಿ ಬರುತ್ತೆ

0

ಸ್ನೇಹಿತರೇ ಇಂದಿನ ಲೇಖನದಲ್ಲಿ ಖರ್ಜೂರದ ಬಗ್ಗೆ ತಿಳಿಸಿಕೊಡುತ್ತೇವೆ. ಖರ್ಜೂರದಲ್ಲಿ ತುಂಬಾನೇ ವಿಧಗಳಿವೆ. ಖರ್ಜೂರವನ್ನು ತಿನ್ನುವುದರಿಂದ ನಮ್ಮಲ್ಲಿ ಇಮ್ಯುನಿಟಿ ಪವರ್ ಇಂಪ್ರೂ ಆಗುತ್ತದೆ. ನಮಗೆ ಯಾವುದೇ ಕಾಯಿಲೆಗಳು ಬಂದರೂ ಅವುಗಳನ್ನು ತಡೆಯುವಂತಹ ಶಕ್ತಿ ಇರುತ್ತದೆ ಮತ್ತು ಯಂಗ್ ಅಂಡ್ ಎನರ್ಜಿಟಿಕ್ ಆಗಿರುತ್ತೀವಿ. ಖರ್ಜೂರದಲ್ಲಿ ನ್ಯೂಟ್ರಿಯನ್ಸ್,

ಕಬ್ಬಿಣದ ಅಂಶಗಳು ಹೇರಳವಾಗಿವೆ. ಇದರಲ್ಲಿ ಫೈಬರ್ ಅಂಶ ಮತ್ತು ಆಂಟಿಆಕ್ಸಿಜಂಟ್ ಗಳು ಇರುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆಯುರ್ವೇದದ ಪ್ರಕಾರ ಖರ್ಜೂರ ತಂಪಿನ ಗುಣವನ್ನು ಹೊಂದಿದೆ. ವಾತ, ಪಿತ್ತ ಸಮಸ್ಯೆಯನ್ನು ಕಡಿಮೆ ಮಾಡುವ ಗುಣ ಈ ಖರ್ಜೂರಕ್ಕಿದೆ. ಹಾಗಾಗಿ ನಮ್ಮ ದೇಹಕ್ಕೆ ಎನರ್ಜಿಯನ್ನು ಕೊಡುತ್ತದೆ. ಪದೇ ಪದೇ ತಲೆನೋವು, ಹೊಟ್ಟೆಗೆ ಸಂಬಂಧಪಟ್ಟ ಯಾವುದೇ

ಸಮಸ್ಯೆ ಇದ್ದರೇ ಕಡಿಮೆ ಮಾಡುವ ಗುಣ ಈ ಖರ್ಜೂರಕ್ಕಿದೆ. ಖರ್ಜೂರದಲ್ಲಿ ಕಾಪರ್, ಮೆಗ್ನೇಷಿಯಂ ಇರುವುದರಿಂದ ಮೂಳೆಗಳು ಗಟ್ಟಿಯಾಗಲು, ಆರೋಗ್ಯವಾಗಿರುತ್ತದೆ ಅದಲ್ಲದೇ ಕ್ಯಾಲ್ಸಿಯಂ ಮತ್ತು ಪಾಸ್ಪರಸ್ ಅಂಶ ನಾವು ತಿಂದಂತಹ ಆಹಾರದ ಅಬ್ಜರ್ ವೇಷನ್ಗಳಿಗೆ ತುಂಬಾನೇ ಒಳ್ಳೆಯದು. ಪ್ರತಿದಿನ ಖರ್ಜೂರವನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೇ ಸೊಂಟನೋವು,

ಕೈ ಕಾಲು ನೋವು, ಮಂಡಿಯಲ್ಲಿ ಸವಕಲಿ ಇಂತಹ ಮೂಳೆಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳು ಯಾವುದು ಉಂಟಾಗುವುದಿಲ್ಲ. ಖರ್ಜೂರದಲ್ಲಿ ಫ್ಯಾಟ್ ಮತ್ತು ಫೈಬರ್ ಅಂಶವಿರುವುದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆಮಾಡುತ್ತದೆ ಆದ್ದರಿಂದ ಖರ್ಜೂರವನ್ನು ಸೇವನೆ ಮಾಡುವುದರಿಂದ ನಮ್ಮ ಹೃದಯಕ್ಕೆ ತುಂಬಾ ಒಳ್ಳೆಯದು. ಯಾರಿಗೆ ರಕ್ತಹೀನತೆ ಇರುತ್ತದೆಯೋ ಅಂತಹವರು ಖರ್ಜೂರವನ್ನು ಸೇವನೆ ಮಾಡಿದರೇ

ರಕ್ತಹೀನತೆ ಕಡಿಮೆಯಾಗುತ್ತದೆ. ಖರ್ಜೂರದಲ್ಲಿರುವ ವಿಟಮಿನ್ ಸಿ ಮತ್ತು ಇನ್ನಿತ್ತರ ವಿಟಮಿನ್ಸ್ ಗಳು ಐರನ್ ಲೆವಲ್ ಅನ್ನು ಇಂಪ್ರೂ ಮಾಡುತ್ತದೆ. ಖರ್ಜೂರವೂ ಮುಖದಲ್ಲಿರುವ ಕಪ್ಪು ಕಲೆ, ಬಂಗು, ಜೋತುಬಿದ್ದ ಸ್ಕಿನ್ ಗೆ ಖರ್ಜೂರ ಸೇವನೆ ಒಳ್ಳೆಯದು. ಖರ್ಜೂರವೂ ನಮ್ಮ ಮೆದುಳಿಗೂ ಒಳ್ಳೆಯದು. ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಓದುವಂತಹ ಮಕ್ಕಳು ಪ್ರತಿದಿನ ಖರ್ಜೂರವನ್ನು

ಸೇವನೆ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಖರ್ಜೂರದಲ್ಲಿರುವ ಆಂಟಿಆಕ್ಸಿಜಂಟ್ ಗಳು ನಮ್ಮ ನೆನಪಿನ ಶಕ್ತಿಯನ್ನು ಇಂಪ್ರೂ ಮಾಡುತ್ತದೆ. ಬ್ರೈನ್ಸ್ ಗೆ ಸಂಬಂಧಪಟ್ಟ ಯಾವುದೇ ನರದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ವಯಸ್ಸಾದವರೂ ಕೂಡ ಖರ್ಜೂರವನ್ನು ಸೇವನೆ ಮಾಡಿದರೇ ನೆನಪಿನ ಶಕ್ತಿ ಚೆನ್ನಾಗಿ ಇರುವುದರ ಜೊತೆಗೆ ಚುರುಕಾಗಿರುತ್ತೀವಿ. ಖರ್ಜೂರದಲ್ಲಿರುವ ಕಾಪರ್ ಮತ್ತು ಐರನ್ ಅಂಶ

ನಮ್ಮ ಕೂದಲು ದಟ್ಟವಾಗಿ ಮತ್ತು ಸ್ಟ್ರಾಂಗ್ ಆಗಿ ಬೆಳೆಯಲು ತುಂಬಾನೇ ಸಹಾಯ ಮಾಡುತ್ತದೆ. ಖರ್ಜೂರವನ್ನು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದರ ಜೊತೆಗೆ ಮಲಬದ್ಧತೆಯೂ ಕಡಿಮೆಯಾಗುತ್ತದೆ. ತುಂಬಾ ಜನಕ್ಕೆ ಹೀಟ್ ಆಗುವುದು, ಹೊಟ್ಟೆ ಉರಿಯಾಗುವುದು, ಹುಳಿ ತೇಗು ಬರುವುದನ್ನ ನಿವಾರಣೆ ಮಾಡುತ್ತದೆ. ಯಾರಿಗೆ ಸ್ವಲ್ಪ ಕೆಲಸ ಮಾಡಿದರೂ ಸುಸ್ತು,

ಕೈಕಾಲು ನಡುಕ ಆಗುತ್ತಿರುವವರಿಗೆ ಪ್ರತಿದಿನ ಖರ್ಜೂರ ಸೇವನೆ ಮಾಡುವುದರಿಂದ ಶಕ್ತಿ ಬರುತ್ತದೆ ತುಂಬಾನೇ ಎನರ್ಜಿಯಾಗಿ ಕೆಲಸ ಮಾಡುತ್ತೀರ. ಅನಿಮೀಯ ಇರುವಂತಹ ಮಹಿಳೆಯರು ಖರ್ಜೂರವನ್ನು ಸೇವನೆ ಮಾಡುವುದರಿಂದ ತುಂಬಾನೇ ಒಳ್ಳೆಯದು. ಮಹಿಳೆಯರು 35 ವಯಸ್ಸಿನ ನಂತರ ಖರ್ಜೂರವನ್ನು ಸೇವನೆ ಮಾಡುವುದರಿಂದ ಮುಂದೆ ಬರುವ ಮೂಳೆಗಳ ಸಂಬಂಧಿತ ಸಮಸ್ಯೆಗಳು ಬರುವುದಿಲ್ಲ.

ಗರ್ಭಿಣಿ ಮಹಿಳೆಯರು ಪ್ರಸವಕ್ಕಿಂತ ಮುಂಚಿನ ಕೆಲವು ವಾರಗಳಲ್ಲಿ ಖರ್ಜೂರ ಸೇವನೆ ಮಾಡುವುದರಿಂದ ನಾರ್ಮಲ್ ಡೆಲಿವೆರಿಯಾಗುತ್ತದೆಂದು ಹೇಳುತ್ತಾರೆ. ಮಧುಮೇಹಿಗಳು ಪ್ರತಿನಿತ್ಯ ಖರ್ಜೂರವನ್ನು ಪ್ರತಿನಿತ್ಯ ಎರಡು ಮೂರು ತಿನ್ನಬಹುದು. ಆದರೇ ಅವರ ಶುಗರ್ ಲೆವೆಲ್ ನಾರ್ಮಲ್ ಆಗಿದ್ದರೇ ಖರ್ಜೂರವನ್ನು ಸೇವನೆ ಮಾಡಬಹುದು.

ಅತಿಯಾಗಿ ಖರ್ಜೂರವನ್ನು ಸೇವನೆ ಮಾಡಬಾರದು ಅಷ್ಟೆ ಏಕೆಂದರೆ ಖರ್ಜೂರದಲ್ಲಿ ಹೇರಳವಾಗಿ ಕ್ಯಾಲೋರಿ ಇರುವುದರಿಂದ ಶುಗರ್ ಹೆಚ್ಚಾಗುವ ಸಂಭವವಿರುತ್ತದೆ. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಖರ್ಜೂರವಿದೆ ಅದರಲ್ಲೂ ತುಂಬಾ ಚೆನ್ನಾಗಿರುವ, ಹಣ್ಣಾಗಿರುವ ಖರ್ಜೂರವನ್ನು ಸೇವನೆ ಮಾಡುವುದರಿಂದ ಆರೋಗ್ಯಕರ ಲಾಭಗಳಿವೆ. ಒಣ ಖರ್ಜೂರವನ್ನು ರಾತ್ರಿ ನೆನೆಸಿ ಬೆಳಿಗ್ಗೆ ತಿನ್ನುವುದರಿಂದ ಆರೋಗ್ಯಕರ ಲಾಭಗಳಿವೆ.

Leave A Reply

Your email address will not be published.