2023 ರ ಕಾಲದ ಸೊಸೆ…!!!

0

2023ರ ಕಾಲದ ಸೊಸೆ ಸೊಸೆ ಮದುವೆಯಾದ ಮರುದಿನ 7 ಗಂಟೆಗೆ ಅವಳ ರೂಮಿನಿಂದ ಎದ್ದು ಬರುತ್ತಾಳೆ. ಹೊರಗಡೆಯಿಂದ ಅತ್ತೆಯ ಶಬ್ಧ ಜೋರಾಗಿ ಕೇಳುತ್ತದೆ. ಅತ್ತೆ ಸೊಸೆಯ ಹತ್ತಿರ ಹೇಳುತ್ತಾಳೆ ನಿನ್ನ ಮನೆಯಲ್ಲಿ ಮಲಗುವ ರೀತಿ ಇಲ್ಲಿ ನಡೆಯುವುದಿಲ್ಲ. ಅತ್ತೆ ಸೊಸೆಯ ಹತ್ತಿರ ಹೇಳುತ್ತಾಳೆ ಬೆಳಿಗ್ಗೆ ಐದು ಗಂಟೆಗೆ ಎದ್ದು ಮೊದಲು ಟೀ ಮಾಡಿ

ನನ್ನ ರೂಮಿಗೆ ತಂದು ಕೊಡಬೇಕು ಆದಾದ ಮೇಲೆ ಉಳಿದಿರುವ ಕೆಲಸವನ್ನು ಟಕಾಟಕಾ ಎಂದು 7 ಗಂಟೆ ಆಗುವಷ್ಟರಲ್ಲಿ ಮುಗಿಸಬೇಕು ಗೊತ್ತಾಯಿತಾ ಎಂದಾಗ ಅದಕ್ಕೆ ಸೊಸೆ ಇದೆಲ್ಲಾ ನನ್ನ ಹತ್ರ ನಡೆಯಲ್ಲ ನಿಮ್ಮ ಮಗಳು ಅಥವಾ ಮಗನ ಹತ್ತಿರ ಮಾಡಿಸಿಕೊಳ್ಳಿ ಅಂತ ಸೊಸೆ ಅತ್ತೆಯ ಹತ್ತಿರ ಹೇಳುತ್ತಾಳೆ. ಮತ್ತೆ ತಕ್ಷಣ ಅವಳ ರೂಮಿಗೆ ಹೋಗಿ

ಒಂದು ಚಿಕ್ಕ ಬ್ಯಾಗನ್ನು ತೆಗೆದುಕೊಂಡು ಬರುತ್ತಾಳೆ ಮತ್ತೆ ಅತ್ತೆ ಹತ್ರ ಹೇಳುತ್ತಾಳೆ ಇನ್ಮುಂದೆ ನಾನ್ ಏನ್ ಮಾಡ್ತಿದ್ದೀನಿ ಎಷ್ಟು ಗಂಟೆಗೆ ಎದ್ದೇಳುತೀನಿ ಅಂತ ನಿಮಗೆ ಗೊತ್ತಾಗದೆ ಇಲ್ಲ ಅಂತ ಅತ್ತೆ ಅತ್ರ ಹೇಳುತ್ತಾಳೆ. ಸೊಸೆಗೆ ಅತ್ತೆ ಕೇಳುತ್ತಾಳೆ ಯಾಕೆ ನಾನೆಲ್ಲಿ ಹೋಗ್ತಿನಿ ಇಲ್ಲೇ ಇರ್ತೀನಿ ಎಂದಾಗ ಸೊಸೆ ಒಮ್ಮೆ ಈ ಬ್ಯಾಗಲ್ಲಿ ನೋಡಿ ಅತ್ತೆ ಅಂತ ಬ್ಯಾಗಿನ ಜಿಬ್ಬನ್ನು ಓಪನ್ ಮಾಡಿ ತೋರಿಸುತ್ತಾಳೆ

ತೋರಿಸಿದ ಕೂಡಲೇ ಅತ್ತೆಗೆ ಉಸಿರುಗಟ್ಟಿದ ಹಾಗೆ ಆಗುತ್ತದೆ ಉಸಿರೇ ನಿಂತೋಯ್ತನೋ ಅಂತ ಸೊಸೆ ಅಂದುಕೊಳ್ಳುತ್ತಾಳೆ. ಆ ಬ್ಯಾಗಿನ ಒಳಗೆ ಒಂದು ದೊಡ್ಡ ಗನ್ ಇರುತ್ತದೆ ಅದನ್ನು ನೋಡಿ ಅತ್ತೆಗೆ ಭಯ ಶುರುವಾಗುತ್ತದೆ. ಅತ್ತೆ ತಕ್ಷಣ ಉಸಿರು ತೆಗೆದುಕೊಂಡು ಸೊಸೆ ನೀನಿಲ್ಲಿ ಕೂತ್ಕಮ್ಮ ನಾನೀಗ ನಿನಗೆ ಟೀ ಮಾಡಿಕೊಂಡು ಬರ್ತೀನಿ ಅಂತ ಹೇಳಿ

ಓಡಿ ಅಡಿಗೆ ಮನೆಗೆ ಹೋಗುತ್ತಾರೆ. ಆವಾಗ ಸೊಸೆ ಬೇಗ ಬರ್ಲಿ ಟೀ ಅಂತ ಹೇಳುತ್ತಾಳೆ. ಸೊಸೆ ಮನಸ್ಸಿನಲ್ಲಿ ಈ ರೀತಿ ಅನ್ಕೊಳ್ತಾಳೆ. ನಿಮ್ಮಂತ ಅತ್ತೆಯಂದಿರಿಗೆ ಹೇಗೆ ಬುದ್ಧಿ ಕಲಿಸಬೇಕು ಎಂದು ಈಗಿನ ಕಾಲದ ನಮ್ಮ ಅಪ್ಪ ಅಮ್ಮ ಕಲಿಸಿಕೊಟ್ಟಿದ್ದಾರೆ ಎಂದು ಆ ರೀತಿ ಮನಸ್ಸಿನಲ್ಲಿ ಅಂದುಕೊಳ್ಳುತ್ತ ನಗುತ್ತಾಳೆ ಸೊಸೆ.

Leave A Reply

Your email address will not be published.