ಈ ವಸ್ತುಗಳಿಗೆ ಮರೆತು ಕೂಡ ಕೈ ಚಾಚಬೇಡಿ

0

ವಾಸ್ತುಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು ಬೇರೆಯವರಿಂದ ಪಡೆದರೆ ತೊಂದರೆ ಕಟ್ಟಿಟ್ಟ ಬುತ್ತಿ.
ನಾವು ಮನೆಗೆ ಬೇಕಾದ ವಸ್ತುಗಳು ಸರಿಯಾದ ಸಮಯಕ್ಕೆ ಸಿಗದೇ ಇದ್ದಾಗ ನಾವು ಬೇರೆಯವರಿಂದ ವಸ್ತುಗಳನ್ನು ಪಡೆಯುತ್ತೇವೆ. ವಾಸ್ತುಶಾಸ್ತ್ರದ ಪ್ರಕಾರ ಈ ರೀತಿ ವಸ್ತುಗಳನ್ನು ಪಡೆದುಕೊಂಡರೇ ನಾವು ದೊಡ್ಡ ನಷ್ಟವನ್ನು ಅನುಭವಿಸಬಹುದು ಎಚ್ಚರ.

ಅಪ್ಪಿತಪ್ಪಿಯೂ ಯಾರ ಕರವಸ್ತ್ರವನ್ನು ಬಳಸಬೇಡಿ ಹಾಗೂ ಎರವಲು ಪಡೆಯಬೇಡಿ. ಇದರಿಂದ ಸಂಬಂಧ ಹಾಳಾಗಿ ಮನಸ್ತಾಪಗಳು ಉಂಟಾಗುತ್ತದೆ.

ಕೆಲವರು ಫಂಕ್ಷನ್ ಗಳಿಗೆ ಹೋಗುವಾಗ ತಮ್ಮ ಡ್ರೆಸ್ಸಿಗೆ ಮ್ಯಾಚಿಂಗ್ ಆಗುತ್ತೆ ಮತ್ತು ತುಂಬಾ ಚೆನ್ನಾಗಿದೆ ಎಂದು ಬೇರೆಯವರ ಪಾದರಕ್ಷೆಗಳನ್ನು ಅಥವಾ ಶೂಗಳನ್ನು ಬಳಸುತ್ತಾರೆ. ಇದು ತುಂಬಾ ತಪ್ಪು ಇದರಿಂದ ಅವರ ಕಷ್ಟಗಳನ್ನು ನೀವು ಹೊತ್ತುಕೊಂಡಂತೆ ಆಗುತ್ತದೆ.

ಕಸ ಗುಡಿಸುವ ಪೊರಕೆಯನ್ನು ಯಾವತ್ತೂ ಬೇರೆಯವರಿಂದ ಎರವಲು ಪಡೆಯಬೇಡಿ. ನೀವು ನಿಮ್ಮ ಮನೆಯ ಕಸವನ್ನು ಗುಡಿಸಿ ಅವರಿಗೆ ಕೊಟ್ಟರೆ ಅದರಿಂದ ಇಬ್ಬರಿಗೂ ಕೆಡಕಾಗುವುದು ನೆನಪಿಡಿ.

ಬೇರೆಯವರಿಂದ ಹಾಸಿಗೆ ಚಾಪೆ ದಿಂಬು ಕೇಳಿ ಪಡೆದು ಬಳಸಬಾರದು ಇದರಿಂದ ಸಂಬಂಧಗಳು ಹದಗೆಡುತ್ತದೆ.

ಸಮಯಕ್ಕೆ ಸರಿಯಾಗಿ ಬಟ್ಟೆ ಇಸ್ಟ್ರಿಯಾಗಿಲ್ಲ ಅಥವಾ ಒಗೆದ ಬಟ್ಟೆಗಳಿಲ್ಲ ಎಂದು ಬೇರೆಯವರ ಬಟ್ಟೆಯನ್ನು ಹಾಕಿಕೊಂಡು ಯಾವುದೇ ಕಾರ್ಯಕ್ಕೆ ಹೋಗಬೇಡಿ ಅದು ನಮ್ಮ ವ್ಯಕ್ತಿತ್ವವನ್ನು ಹಾಳು ಮಾಡುವುದು ಮತ್ತು ನಕಾರಾತ್ಮಕತೆ ಉಂಟಾಗುವುದು ಎಚ್ಚರ.

ಬೇರೆಯವರ ಕೈ ಗಡಿಯಾರವನ್ನು ಯಾವತ್ತು ಬಳಸಬೇಡಿ ಅವರ ಕೆಟ್ಟ ಸಮಯವನ್ನು ನೀವು ಅನುಭವಿಸಬೇಕಾಗುತ್ತದೆ.

ಬೇರೆಯವರ ಉಂಗುರವನ್ನು ಅಥವಾ ರತ್ನವನ್ನು ಎಂದಿಗೂ ಧರಿಸಬೇಡಿ ಏಕೆಂದರೆ ಅವರ ಉಂಗುರ ನಿಮಗೆ ಸೂಕ್ತವಾಗದೆ ಪ್ರತಿಕೂಲ ಪರಿಣಾಮ ಬೀರಬಹುದು ಏಕೆಂದರೆ ರತ್ನಗಳು ಗ್ರಹಗಳೊಂದಿಗೆ ಸಂಬಂಧ ಹೊಂದಿರುತ್ತವೆ.

ಸಾಮಾನ್ಯವಾಗಿ ಅಡುಗೆ ಸಾಮಾಗ್ರಿಗಳು ಖಾಲಿಯಾದಾಗ ಪಕ್ಕದ ಮನೆಯವರ ಬಳಿ ತೆಗೆದುಕೊಳ್ಳುವುದು ಕೆಲವರಲ್ಲಿ ಇರುತ್ತದೆ. ಆದರೇ ಉಪ್ಪನ್ನು ಹೀಗೆ ತೆಗೆದುಕೊಳ್ಳಬಾರದು ಆದ್ದರಿಂದ ನೀವು ಜೀವನದಲ್ಲಿ ಸಾಲಗಾರರು ಆಗುವಿರಿ ಮತ್ತು ಸಾಲು ಸಾಲಾಗಿ ಆರ್ಥಿಕ ತೊಂದರೆಗಳು ಬರಬಹುದು.

ಬೇರೆಯವರಿಂದ ಅವರ ಹಳೆಯ ಬಟ್ಟೆಗಳನ್ನು ಯಾವತ್ತಿಗೂ ಪಡೆಯಬೇಡಿ ಏಕೆಂದರೆ ಅವರು ಬಳಸಿರೋ ವಸ್ತು ನಿಮಗೆ ಕಂಟಕ ಆಗಬಹುದು.

Leave A Reply

Your email address will not be published.