ಹೆಂಡತಿಯಾದವಳು ತನ್ನ ಗಂಡನೊಂದಿಗೆ ಹೇಗೆ ಇರಬೇಕು

ನಾವು ಈ ಲೇಖನದಲ್ಲಿ ಹೆಂಡತಿಯಾದವಳು ತನ್ನ ಗಂಡನೊಂದಿಗೆ ಹೇಗೆ ಇರಬೇಕು ಎಂಬುದರ ಬಗ್ಗೆ ನೋಡೋಣ . ಹೆಂಡತಿಯಾದವಳು ತನ್ನ ಗಂಡನೊಂದಿಗೆ ಹೇಗಿರಬೇಕು ಎಂದರೆ , ಮೈ ಮುಖದಿಂದ ಸುಂದರವಾಗಿರುವ ಸ್ತ್ರೀ ಕೇವಲ ಒಂದು ರಾತ್ರಿ ಮಾತ್ರ ಸುಖ ಕೊಡ ಬಲ್ಲಳು . ಆದರೆ ಮನಸ್ಸಿನಿಂದ ಸುಂದರವಾಗಿರುವ ಸ್ತ್ರೀ ಜೀವನಪೂರ್ತಿ ಸುಖ ಕೊಡುತ್ತಾಳೆ .

ಮನಸ್ಸಿನಿಂದ ಸುಂದರವಾಗಿ ಇರುವವಳನ್ನು ಸ್ವೀಕರಿಸುವುದು ಒಳ್ಳೆಯದು . ಓರ್ವ ಒಳ್ಳೆಯ ಹೆಂಡತಿ ತನ್ನ ಗಂಡನನ್ನು ಬೆಳಗ್ಗೆ ಮಗನಂತೆ ನೋಡುತ್ತಾಳೆ . ದಿನವೆಲ್ಲಾ ತಾಯಿಯಂತೆ ಕಾಳಜಿ ಮಾಡುತ್ತಾಳೆ. ರಾತ್ರಿಯಲ್ಲಿ ವೇಶ್ಯೆ ಅಂತೆ ಗಂಡನನ್ನು ಸಂತೃಪ್ತಿ ಪಡಿಸುತ್ತಾಳೆ . ಉನ್ನತ ಆದರ್ಶಗಳು ಇಲ್ಲದ ಪತ್ನಿಯ ಜೊತೆ ಬದುಕುವುದು ಮತ್ತು ಬೆನ್ನಿಂದೆ ಚೂರಿ ಹಾಕುವವನ ಜೊತೆ ಸ್ನೇಹ ಬೆಳೆಸುವುದು , ಬರಿ ಮಾತನಾಡುವವನ ಜೊತೆ ಕೆಲಸ ಮಾಡುವುದು ವಿಶೇಷ ಸರ್ಪಗಳಿರುವ ಮನೆಯಲ್ಲಿ ವಾಸಿಸುವುದು ಎಲ್ಲಾ ಒಂದೇ ಮತ್ತು ಅದು ಎಂದಿಗೂ ಕ್ಷೇಮವಲ್ಲ .

ನಡತೆಗೆಟ್ಟ ಹೆಂಗಸಿನ ಸಹವಾಸವು ಆಯಸ್ಸು ಹೆಸರು ಮತ್ತು ಪುಣ್ಯಗಳು ಕ್ಷೀಣಿಸುವಂತೆ ಮಾಡುತ್ತದೆ . ತನ್ನ ಕರ್ತವ್ಯವನ್ನು ಮಾಡುವಾಗ ಕೆಲಸಗಾರರನ್ನು ಕಷ್ಟದಲ್ಲಿ ಸಂಬಂಧಿಕರನ್ನು ಬಡತನದಲ್ಲಿ ಸ್ನೇಹಿತರನ್ನು ಹಾಗೂ ದುರದೃಷ್ಟದ ಸಮಯದಲ್ಲಿ ಹೆಂಡತಿಯನ್ನು ಪರೀಕ್ಷಿಸುವ ಆಗ ಮಾತ್ರ ಅವರ ನಿಜ ಸ್ವರೂಪ ನಿಮಗೆ ತಿಳಿಯುತ್ತದೆ . ಹೆಣ್ಣಿಗೆ ಗಂಡಿಗಿಂತಲೂ ನಾಲ್ಕು ಪಟ್ಟು ನಾಚಿಕೆ ಆರು ಪಟ್ಟು ಧೈರ್ಯ ಹಾಗೂ 8 ಪಟ್ಟು ಸ್ವಾಭಿಮಾನ ಇರುತ್ತದೆ.
ಈ ಜಗತ್ತಿನಲ್ಲಿ

ನಾಲ್ಕು ದೊಡ್ಡ ಶತ್ರುಗಳೆಂದರೆ ಸಾಲಗಾರನಾದ ತಂದೆ ನಡತೆಗೆಟ್ಟ ತಂಗಿ ಸುಂದರವಾದ ಆದರೆ ತಾಳ್ಮೆ ಇಲ್ಲದ ಹೆಂಡತಿ ಮತ್ತು ಕೆಟ್ಟ ಚಟಗಳು ಹೊಂದಿರುವ ಸಂತಾನ . ಇವರೆಲ್ಲರೂ ದೊಡ್ಡ ಶತ್ರುಗಳು . ಸ್ತ್ರೀ ಒಬ್ಬಳು ತನ್ನನ್ನು ಪ್ರೀತಿಸುತ್ತಿದ್ದಾಳೆಂದು ಭಾವಿಸಿ ಭ್ರಮಿಸುವ ಪುರುಷನಿಗೆ ನಾನು ಅವಳ ಕೈಯಲ್ಲಿ ಸೂತ್ರದ ಬೊಂಬೆ ಆಗಿರುವುದರ ಅರಿವಿರುವುದಿಲ್ಲ .

ಅವಳು ಅವನನ್ನು ಆಟದ ಬೊಂಬೆ ತರಹ ಆಡಿಸುತ್ತಾಳೆ . ಸ್ತ್ರೀ ಮತ್ತು ಸಂಪತ್ತು ಎರಡು ಚಂಚಲ ಎನ್ನುವುದನ್ನು ಎಂದೂ ಮರೆಯ ಕೂಡದು . ಏಕೆಂದರೆ ಇವೆರಡೂ ಅವನನ್ನು ಒಂದೇ ಕ್ಷಣದಲ್ಲಿ ವಂಚಿಸಬಹುದು .ಯಾವಾಗಲೂ ಗೊಣಗಾಡುತ್ತಿರುವ ಇತರ ಹಾವಭಾವ ಕಡೆಗೆ ವಿಶೇಷ ಆಶಕ್ತಿ ತಳೆದಿರುವ ಮತ್ತು ಸತತವಾಗಿ ಎಲ್ಲರನ್ನೂ ಗಮನಿಸುತ್ತಿರುವ ಸ್ತ್ರೀಯು ನಿಷ್ಠಾವಂತಳು ಆಗಿರುವುದಿಲ್ಲ .

ಪರಿಶುದ್ಧ ಸುಗುಣಶೀಲ ಚತುರ ಸುಮಧುರ ಸ್ವಭಾವ ಹಾಗೂ ಪತಿನಿಷ್ಠಳು ಆಗಿರುವ ಪತ್ನಿಯು ಮಾತ್ರ ಪತಿಯ ಆಶ್ರಯ ಪಡೆಯಲು ಅರ್ಹಳು ಆಗಿರುತ್ತಾಳೆ . ಹಾಗೆ ನೋಡಿದರೆ ಪ್ರತಿಯೊಬ್ಬ ಪುರುಷನ ಮನದಲ್ಲಿ ಹೆಂಡತಿಯಾದವಳು ತನ್ನ ಗಂಡನೊಂದಿಗೆ ಹೇಗಿರಬೇಕು ಎಂಬ ಅಭಿಪ್ರಾಯ ಬೇರೆ ಇರುತ್ತದೆ .ಅದು ಅವರವರ ದೃಷ್ಟಿಕೋನ ಆಗಿರುತ್ತದೆ .

Leave a Comment