ನಾವು ಈ ಲೇಖನದಲ್ಲಿ, ಯಾವ ಎಂಟು ವಸ್ತುಗಳು ಪೂಜಾ ಮಂದಿರದಲ್ಲಿ ಇದ್ದರೆ , ಎಷ್ಟು ಪೂಜೆ ಮಾಡಿದರೂ ಫಲ ಸಿಗುವುದಿಲ್ಲ , ಎಂಬುದನ್ನು ತಿಳಿದುಕೊಳ್ಳೋಣ. ಶರೀರದಲ್ಲಿ ಹೃದಯ ಅನ್ನುವುದು ಎಷ್ಟು ಮುಖ್ಯವೋ , ಮನೆಯಲ್ಲಿ ಪೂಜಾ ಮಂದಿರವು ಅಷ್ಟೇ ಮುಖ್ಯವಾಗಿ ಇರಬೇಕು. ಪೂಜಾ ಮಂದಿರದಲ್ಲಿ ಎಂಟು ರೀತಿಯ ವಸ್ತುಗಳನ್ನು ಇಟ್ಟರೆ ಆ ಮನೆಯಲ್ಲಿ ದೇವತೆಗಳು ನಿಲ್ಲುವುದಿಲ್ಲ . ಕೆಲವೊಂದು ಸಾರಿ ಎಷ್ಟೇ ವ್ರತ ಮಾಡಿದರೂ , ಪೂಜೆ ಮಾಡಿದರೂ ಅದು ದೇವರಿಗೆ, ಸಲ್ಲುವುದಿಲ್ಲ.
ಅದರ ಫಲ ಸಿಗುವುದಿಲ್ಲ. ದೇವರ ಮನೆಯಲ್ಲಿ ಈ ಎಂಟು ರೀತಿಯ ವಸ್ತುಗಳನ್ನು, ಇಡಬಾರದು ಎಂದು ಪರಿಹಾರ ಶಾಸ್ತ್ರ ಎನ್ನುವ ಗ್ರಂಥದಲ್ಲಿ ಹಿರಿಯರು ಹೇಳಿದ್ದಾರೆ. ಮೊದಲನೆಯದಾಗಿ ಪಿತೃ ದೇವತೆಗಳ ಚಿತ್ರಪಟ ಅಂದರೆ ಮೃತ್ಯು ಆಗಿರುವವರ ಚಿತ್ರಪಟವನ್ನು , ಎಂದಿಗೂ ದೇವರ ಮನೆಯಲ್ಲಿ ಇಡಬಾರದು. ಪೂಜಾ ಮಂದಿರ ಎಂಬುದು ದೇವತೆಗಳಿಗೆ ಮಾತ್ರ ಸ್ವಂತ . ಹೆಸರೇ ಹೇಳುವಂತೆ, ಅಲ್ಲಿ ದೇವರ ಪಟಗಳಿಗೆ ಮಾತ್ರ ಪೂಜೆಯನ್ನು, ಮಾಡಬೇಕು. ಪಿತೃ ದೇವತೆಗಳು ಇರುವ ಸ್ಥಳದಲ್ಲಿ ದೇವರು ಇರುವುದಿಲ್ಲ . ಅದೇ ರೀತಿ ದೇವರುಗಳು ಇರುವ ಸ್ಥಳದಲ್ಲಿ ಪಿತೃ ದೇವತೆ ಗಳು , ಇರುವುದಿಲ್ಲ.
ಪಿತೃ ಕಾರ್ಯವನ್ನು ಮಾಡುವಾಗ ಮನೆಯ ಮುಂದೆ, ರಂಗೋಲಿಯನ್ನು ಹಾಕುವುದಿಲ್ಲ. ಸೂತಕ ವಿದ್ದರೆ , ಹಣೆಗೆ ಕುಂಕುಮವನ್ನು ಸಹ ಇಡುವುದಿಲ್ಲ. ಮತ್ತು ಮನೆಗೆ ತೋರಣವನ್ನು ,ಕಟ್ಟುವುದಿಲ್ಲ. ತೋರಣ ಕಟ್ಟುವುದು, ರಂಗೋಲಿ ಹಾಕುವುದು ,ಇದು ದೇವತಾ ಕಾರ್ಯಗಳಲ್ಲಿ ಮಾತ್ರ ಮಾಡಲಾಗುತ್ತದೆ. ಬ್ರಾಹ್ಮಣರು ಕೂಡ ದೇವತಾ ಕಾರ್ಯ ಮಾಡುವಾಗ , ಯಜ್ಞೋಪವಿತ ಎಡಬುಜದ ಮೇಲೆ ಬಲಗೈ ಕೆಳಗೆ ಇರುತ್ತದೆ. ಪಿತೃ ಕಾರ್ಯ ಮಾಡುವಾಗ ,ಬಲ ಭುಜದ ಮೇಲೆ ಎಡಗೈಯ ಕೆಳಗೆ ಇರುತ್ತದೆ. ಇದೇ ರೀತಿ ಪಿತೃ ಕಾರ್ಯಗಳಿಗೂ ಮತ್ತು ದೇವತಾ ಕಾರ್ಯಗಳಿಗೂ , ಭಿನ್ನವಾದಂತಹ ಪೂಜೆ ಇರುತ್ತದೆ. ಯಾವುದೇ ಕಾರಣಕ್ಕೂ ತೀರಿ ಹೋದವರ ಫೋಟೋಗಳನ್ನು , ದೇವರ ಮನೆಯಲ್ಲಿ ಇಡುವುದು ಶ್ರೇಷ್ಠವಲ್ಲ.
ಎರಡನೆಯದಾಗಿ ದೇವರ ಕೋಣೆಯಲ್ಲಿ ಕಬ್ಬಿಣದ ವಸ್ತುಗಳನ್ನು ಇಡಬಾರದು. ಅಂದರೆ ಚಾಕು , ಕತ್ತರಿ , ಇತ್ಯಾದಿ, ಕಬ್ಬಿಣದ ವಸ್ತುಗಳನ್ನು ಇಡಬಾರದು . ಯಾಕೆಂದರೆ ಕಬ್ಬಿಣ ಎನ್ನುವುದು ದರಿದ್ರ ದೇವತೆಗೆ ಪ್ರತಿನಿಧಿಯಾಗಿರುತ್ತದೆ. ಹಣದಲ್ಲಿ ಹೇಗೆ ಲಕ್ಷ್ಮಿ ದೇವಿಯು ವಾಸವಾಗಿರುತ್ತಾಳೋ , ಹಾಗೆ ಕಬ್ಬಿಣದಲ್ಲಿ ದರಿದ್ರ ದೇವತೆಯು, ವಾಸವಾಗಿರುತ್ತಾಳೆ .ಆದ್ದರಿಂದ ಯಾವುದೇ ಕಾರಣಕ್ಕೂ ಪೂಜಾ ಮಂದಿರದಲ್ಲಿ ಕಬ್ಬಿಣವನ್ನು ಇಡಬಾರದು. ಫೋಟೋ ಹಿಡಿಕೆಯು ಕಬ್ಬಿಣದಾಗಿದ್ದರೆ, ಅದಕ್ಕೆ ನೀವು ಸ್ವಲ್ಪ ಅರಿಶಿಣವನ್ನು , ಉಜ್ಜಿ . ಅರಿಶಿಣದಲ್ಲಿ ಲಕ್ಷ್ಮಿ ದೇವಿ ವಾಸವಾಗಿರುವುದರಿಂದ, ಕಬ್ಬಿಣದಲ್ಲಿರುವ , ದರಿದ್ರ ದೇವತೆಯು ಹೊರಟು ಹೋಗುತ್ತಾಳೆ. ದೋಷ ನಿವಾರಣೆಯಾಗುತ್ತದೆ.
ಮೂರನೆಯದಾಗಿ ಹರಿದು ಹೋಗಿರುವ ಬಟ್ಟೆಯನ್ನು ಯಾವುದೇ ಕಾರಣಕ್ಕೂ , ಪೂಜಾ ಮಂದಿರದಲ್ಲಿ ಇಡಬಾರದು. ಇದು ಲಕ್ಷ್ಮೀ ದೇವಿಗೆ ಇಷ್ಟವಾಗುವುದಿಲ್ಲ.
ನಾಲ್ಕನೇಯದು ಒಡೆದು ಹೋಗಿರುವ ಚಿತ್ರಪಟಗಳನ್ನು, ದೇವರ ಭಾವಚಿತ್ರ ಮಂಕಾಗಿರುವ ಫೋಟೋಗಳನ್ನು , ಸಹ ಇಡಬಾರದು. ತಕ್ಷಣವೇ ಅದನ್ನು ದೇವರ ಮನೆಯಿಂದ ತೆಗೆದು ಬಾವಿಯಲ್ಲಿ ಅಥವಾ ಕೆರೆಯಲ್ಲಾಗಲಿ ವಿಸರ್ಜನೆ ಮಾಡಬೇಕು.
ಐದನೇ ವಸ್ತುವೆಂದರೆ, ಒಣಗಿ ಹೋಗಿರುವ ಅಥವಾ ಬಾಡಿ ಹೋಗಿರುವ ಹೂಗಳನ್ನು ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಇಡಬಾರದು .ಅದನ್ನು ಆಚೆ ಹಾಕಬೇಕು .
ಆರನೇ ಮತ್ತು ದೇವರ ಮನೆಯ ದೀಪದ ಬತ್ತಿ ಕಪ್ಪಾಗಿದ್ದರೆ, ಬಾಡಿಹೋದ ಹೂಗಳನ್ನು ಒಂದು ಚೀಲದಲ್ಲಿಟ್ಟು ಬಾಗಿಲ ಹಿಂದೆ ಇಡಬಾರದು. ದೇವರ ಮನೆಯನ್ನು ತುಂಬಾ ಶುಭ್ರವಾಗಿ ಇಟ್ಟುಕೊಳ್ಳಬೇಕು. ಯಾರ ಮನೆಯಲ್ಲಿ ದೇವರ ಮನೆ ತುಂಬಾ ಸ್ವಚ್ಛವಾಗಿರುತ್ತದೆಯೋ ಅಲ್ಲಿ ಲಕ್ಷ್ಮಿ ದೇವಿ. ನೆಲೆಸಿರುತ್ತಾಳೆ.
ಏಳನೇ ವಸ್ತು ಯಾವುದೇ ಕಾರಣಕ್ಕೂ ದೇವರ ಮನೆಯಲ್ಲಿ ನೆಲದ ಮೇಲೆ ಕೂತು ಪೂಜೆ ಮಾಡಬಾರದು. ಅದರ ಬದಲಿಗೆ ಒಂದು ಮಣೆಯನ್ನು , ಅಥವಾ ಒಂದು ವಸ್ತ್ರವನ್ನಾಗಲಿ ಹಾಕಿಕೊಂಡು, ಅದರ ಮೇಲೆ ಕೂತು ದೇವರಿಗೆ ಪೂಜೆ ಮಾಡಬೇಕು. ಪೂಜೆ ಮಾಡಿದ ತಕ್ಷಣ ನಾವು ಹಾಕಿ ಕೊಂಡಿರುವಂತಹ , ವಸ್ತ್ರ ಅಥವಾ ಮಣೆಯನ್ನು , ಆಚೆ ತಂದು ಇಡಬೇಕು . ಇಲ್ಲವಾದರೆ ಅಲ್ಲಿ ದರಿದ್ರ ದೇವತೆಯು ಬಂದು ಕೂರುತ್ತಾಳೆ.
ಮಾಡಿದ ಪೂಜೆಯ ಫಲವನ್ನೆಲ್ಲ ತೆಗೆದುಕೊಂಡು, ಹೋಗುತ್ತಾಳೆ . ಎಂಬ ನಂಬಿಕೆ ಇದೆ. ಮುಖ್ಯವಾಗಿ ದೇವರ ಮನೆಯಲ್ಲಿ ಎರಡು ವಿಧವಾದಂತ ವಿಗ್ರಹಗಳನ್ನು , ಇಟ್ಟುಕೊಳ್ಳಬಾರದು. ಒಂದೇ ರೀತಿಯಾದಂತಹ ಎರಡು ಚಿತ್ರಪಟಗಳು , ಎರಡು ವಿಗ್ರಹಗಳನ್ನು ದೇವರ ಮನೆಯಲ್ಲಿ ಇಡಬಾರದು. ಮುಖ್ಯವಾಗಿ ವಿಗ್ರಹಗಳು ನಮ್ಮ ಹೆಬ್ಬರಳಿನ ಗಾತ್ರದಷ್ಟೇ, ಇರಬೇಕು ಹೆಬ್ಬೆರಳಿನ ಗಾತ್ರಕ್ಕಿಂತ ದೊಡ್ಡದಿದ್ದರೆ,
ವಿಗ್ರಹಗಳು ಅದಕ್ಕೆ ದಿನನಿತ್ಯ. ಅಭಿಷೇಕವನ್ನು ಮಾಡಬೇಕಾಗುತ್ತದೆ. ದಿನನಿತ್ಯ ನೈವೇದ್ಯವನ್ನು ಮಾಡಬೇಕಾಗುತ್ತದೆ. ವಿಗ್ರಹಗಳು ಯಾವಾಗಲೂ ಟೊಳ್ಳು ಇರಬಾರದು . ಅಂದರೆ ವಿಗ್ರಹದ ಒಳಗಡೆ ತೂತು ಇರಬಾರದು. ಅದು ಪರಿಪೂರ್ಣವಾಗಿರಬೇಕು. ಈ ರೀತಿಯ ವಿಗ್ರಹಗಳನ್ನು ಇಟ್ಟರೆ ನಿಮಗೆ ಪೂಜೆಯ ಪರಿಪೂರ್ಣ ಫಲ ಸಿಕ್ಕುವುದಿಲ್ಲ .
ಕೊನೆಯದಾಗಿ ಯಾವಾಗಲೂ ಸಹ ದೇವರ ಮನೆಯಲ್ಲಿ , ದೀಪವು ಉರಿಯುತ್ತಿರಬೇಕು. ದೀಪವನ್ನು ಬೆಳಗಿಸಲು ಸಾಧ್ಯವಾಗದಿದ್ದರೆ , ಕೊನೆ ಪಕ್ಷ ದೇವರ ಮನೆಯಲ್ಲಿ, ಒಂದು ವಿದ್ಯುತ್ ದೀಪವಾದರೂ, ಬೆಳಗುತ್ತಿರಬೇಕು. ದೇವರ ಮನೆಯಲ್ಲಿ ಬೆಳಕು ನೆಲೆಸಿರುತ್ತದೆಯೋ , ಅಲ್ಲಿ ದೇವತೆಗಳು ಬಂದು ವಾಸಿಸುತ್ತಾರೆ. ನಾವು ಈ ರೀತಿಯ ನಿಯಮಗಳನ್ನು ಪಾಲಿಸಿಕೊಂಡು ಬಂದರೆ , ನಮ್ಮ ಜೀವನದಲ್ಲಿ ಲಕ್ಷ್ಮೀನಾರಾಯಣರ ಆಶೀರ್ವಾದ, ಪಾರ್ವತಿ ಪರಮೇಶ್ವರರ , ಅನುಗ್ರಹ ನಮಗೆ ಲಭಿಸುತ್ತದೆ.