ಫೆಬ್ರವರಿ ತಿಂಗಳಿನ ಕನ್ಯಾರಾಶಿಯ ಮಾಸ ಭವಿಷ್ಯ

0

ಫೆಬ್ರವರಿ ತಿಂಗಳಿನ ಕನ್ಯಾರಾಶಿಯ ಮಾಸ ಭವಿಷ್ಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಕನ್ಯಾರಾಶಿಯವರಿಗೆ ಯಾವ ಸವಾಲುಗಳಿವೆ? ಇರುವ ಸಮಸ್ಯೆಗಳು ಪರಿಹಾರವಾಗುತ್ತದೆಯಾ? ಲಾಭ ನಷ್ಟದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಕನ್ಯಾ ರಾಶಿಯ ರಾಶ್ಯಾಧಿಪತಿ ಬುಧಗ್ರಹವಾಗಿದೆ. ಕನ್ಯೆ ಈ ರಾಶಿಯ ಚಿಹ್ನೆಯಾಗಿದೆ. ಹಸಿರು ಮತ್ತು ಹಳದಿ ಅದೃಷ್ಟದ ಬಣ್ಣವಾಗಿರುತ್ತದೆ. ಅದೃಷ್ಟದ ವಾರ ಸೋಮವಾರ ಮತ್ತು ಬುಧವಾರವಾದರೇ ಅದೃಷ್ಟದ ದೇವರು ಗಣೇಶ ದೇವರಾಗಿದೆ.

2,3,5,6, ಮತ್ತು 7 ಅದೃಷ್ಟದ ಸಂಖ್ಯೆಗಳಾಗಿವೆ. ಮಿತ್ರ ರಾಶಿ ಮೇಷ, ಮಿಥುನ, ಸಿಂಹ ಆದರೇ, ಶತೃ ರಾಶಿ ಕಟಕ ರಾಶಿಯಾಗಿದೆ. ಅದೃಷ್ಟದ ದಿನಾಂಕ 5, 14 ಮತ್ತು 23 ಆಗಿದೆ. ಕನ್ಯಾ ರಾಶಿಯವರ ವಿಶೇಷ ಗುಣವೇನೆಂದರೆ ರಾಜೀ ಮಾಡಿಕೊಳ್ಳುತ್ತಾರೆ. ಯಾರ ಜೊತೆಯಲ್ಲೂ ಬೇಧ ಭಾವ ಮಾಡದೇ ಯಾರಿಗೂ ಕೆಟ್ಟದ್ದನ್ನ ಬಯಸದೇ, ಏನೇ ಸಮಸ್ಯೆ ಇದ್ದರೂ ತಕ್ಷಣವೇ ಅದನ್ನು ಪರಿಹಾರ ಮಾಡಿಕೊಳ್ಳಬೇಕು ಎನ್ನುವ ಮನೋಭಾವನೆಯನ್ನು ಹೊಂದಿರುತ್ತಾರೆ. ಇವರನ್ನು ಚುರುಕಾಗಿರುವ ವ್ಯವಹಾರದ ಜ್ಞಾನಿಗಳು ಎನ್ನಬಹುದು.

ಸಮಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಇವರು ಕಲೆ, ಸಂಗೀತವನ್ನು ಇಷ್ಟಪಡುವವರಾಗಿರುತ್ತಾರೆ. ಕನ್ಯಾರಾಶಿಯವರು ತಮ್ಮ ಕೆಲಸಕ್ಕಿಂತ ಬೇರೆಯವರ ಬಗ್ಗೆ ಚಿಂತನೆಗಳು, ಸಾರ್ವಜನಿಕವಾದಂತಹ ಚಿಂತನೆಗಳು, ಇವರು ಸಮಾಜಕ್ಕೆ ಬಹಳಷ್ಟು ಕೊಡುಗೆಗಳನ್ನು ಕೊಟ್ಟಿರುವವರಾಗಿರುವುದರಿಂದ ಸಾರ್ವಜನಿಕವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಬಹಳಷ್ಟು ಅನುಕೂಲತೆಗಳು ಸಿಗುತ್ತವೆ. ಸಂಘ, ಸಂಸ್ಥೆ ರಾಜಕಾರಣದಲ್ಲಿರಬಹುದು ಅಥವಾ ಸಭೆ ಸಮಾರಂಭಗಳಲ್ಲಿ ಇರಬಹುದು ಬಹಳಷ್ಟು ಒಳ್ಳೆಯ ಸ್ಥಾನಮಾನಗಳು

ಮತ್ತು ಗೌರವಗಳು ಸಿಗುತ್ತದೆ. ಬಹಳಷ್ಟು ಖರ್ಚು ವೆಚ್ಚಗಳು ಇರುತ್ತವೆ, ಒತ್ತಡಗಳು ಇರುತ್ತವೆ ಆ ಒತ್ತಡಗಳ ಎಲ್ಲಾದರಲ್ಲಿಯೂ ಕೂಡ ಅನಿರೀಕ್ಷಿತವಾದಂತಹ ಧನ ಲಾಭಗಳು ಆಗುವುದು. ಹಣಕಾಸಿನ ಅನುಕೂಲಗಳು ಆಗುವುದರಿಂದ ಬಹಳಷ್ಟು ಅನುಕೂಲತೆಗಳು ಸಿಗುತ್ತವೆ. ಮಕ್ಕಳ ವಿಚಾರದಲ್ಲಿ ಚಿಂತೆ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸ, ಮದುವೆ, ಕೆಲಸಗಳ ಬಗ್ಗೆ ಚಿಂತೆ ಇರುತ್ತದೆ. ಆ ಚಿಂತೆಯು ಸಂತೋಷಕ್ಕೆ ಕಾರಣವಾಗುತ್ತದೆ. ಕನ್ಯಾ ರಾಶಿಯ ಮಕ್ಕಳಿಗೆ ಒಳ್ಳೆಯ ರೀತಿಯ ಫಲಗಳು ಸಿಗುತ್ತವೆ.

ಕನ್ಯಾ ರಾಶಿಯ ವಿದ್ಯಾರ್ಥಿಗಳು ವಿದ್ಯೆಯಲ್ಲಿ ಒಳ್ಳೆಯ ರೀತಿಯಲ್ಲಿ ಸಾಧನೆಯನ್ನು ಮಾಡುವಂತಹ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಬಹಳಷ್ಟು ಆಸಕ್ತಿ ಇರುವುದರಿಂದ ಒಳ್ಳೆಯ ಪ್ರಶಂಸೆಗೆ ಕಾರಣವಾಗುತ್ತಾರೆ. ಕೆಲವು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು. ಕನ್ಯಾ ರಾಶಿಯವರು ಮದುವೆಯ ಬಗ್ಗೆ ಚಿಂತೆ ಮಾಡುತ್ತಿದ್ದರೇ, ಸಂತಾನ ಭಾಗ್ಯಕ್ಕಾಗಿ ಚಿಂತೆ ಮಾಡುತ್ತಿದ್ದರೇ ಒಳ್ಳೆಯ ಸಮಯ ಇದಾಗಿದೆ.

ನೀವು ವ್ಯಾಪಾರ ವಹಿವಾಟು ಮಾಡುವವರಾಗಿದ್ದರೇ ಒಳ್ಳೆಯ ಯೋಗವಿದೆ ಆದರೇ ವಿಶೇಷವಾಗಿ ಲೇವಾದೇವಿ, ಕೊಡು ಕೊಳ್ಳುವಿಕೆ, ಹಣಕಾಸಿನ ವ್ಯವಹಾರ, ಮಾರಾಟ ಮಾಡುವಂತದ್ದು, ಖರೀದಿ ಮಾಡುವಂತದ್ದು ಈ ರೀತಿಯ ವ್ಯವಹಾರಗಳಲ್ಲಿ ಮೋಸ ಹೋಗುವ ಸಾಧ್ಯತೆಗಳು ಇರುವುದರಿಂದ ನೀವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾವುದೇ ವ್ಯಾಪಾರ ವ್ಯವಹಾರವನ್ನು ಮಾಡಿದರೂ ಅದರ ಸವಾಲುಗಳನ್ನು ಮೆಟ್ಟಿನಿಲ್ಲುವಂತದ್ದು ಮತ್ತು ಅದನ್ನು ನಿಲ್ಲಿಸುವಂತಹ ಶಕ್ತಿ ನಿಮ್ಮಲ್ಲಿ ಇದೆ.

ನಿಮ್ಮ ಕೆಲಸವನ್ನು ಪ್ರೀತಿಸಿ ಮತ್ತು ಆಸಕ್ತಿಯನ್ನು ತೋರಿಸಿರಿ ಇದರಿಂದ ನಿಮ್ಮ ಜೀವನದಲ್ಲಿ ತುಂಬಾ ಸುಖಿಯಾಗಿರುತ್ತೀರಿ. ಕೃಷಿಗೆ ಸಂಬಂಧಿಸಿದ ಮತ್ತು ದೊಡ್ಡ ಉದ್ಯಮ ಮತ್ತು ಸರ್ಕಾರಿ, ಅರೆ ಸರ್ಕಾರಿ ಕೆಲಸದಲ್ಲಿರುವವರಿಗೆ ಒಳ್ಳೆಯ ಫಲಿತಾಂಶವಿದೆ ಆದರೇ ಕೆಲಸದಲ್ಲಿ ವಾದ ವಿವಾದಗಳನ್ನು ಮಾಡಬೇಡಿ. ತಾಳ್ಮೆ ಮತ್ತು ಸಹನೆಯನ್ನು ಹೊಂದಿದ್ದರೇ ಅದರಿಂದ ನಿಮಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ. ಕೆಲವರು ರಾಜಕೀಯಕ್ಕೆ ಹೊಸದಾಗಿ ಪ್ರವೇಶ ಮಾಡಬೇಕೆಂದಿದ್ದರೇ

ಮಾಡಬಹುದು ಆದರೇ ಅಂತಹ ದೊಡ್ಡ ಬದಲಾವಣೆಗಳು ನಿಮ್ಮ ಜೀವನದಲ್ಲಿ ಆಗುವುದಿಲ್ಲ, ನಿಮ್ಮ ಆರ್ಥಿಕ ಸ್ಥಿತಿಗತಿಗಳು ಮತ್ತು ನಿಮ್ಮ ಮನೆಯ ಪರಿಸ್ಥಿತಿಯನ್ನು ತಿಳಿದುಕೊಂಡು ಮುನ್ನುಗ್ಗಿದರೇ ಒಳ್ಳೆಯದು. ನೀವು ಷೇರು ವಹಿವಾಟಿನಲ್ಲಿ ಕೆಲಸ ಮಾಡುತ್ತಿದ್ದರೇ, ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದರೇ, ಹೂಡಿಕೆ ಮಾಡುತ್ತಿದ್ದರೇ ಒಳ್ಳೆಯ ಫಲಗಳು ಸಿಗುತ್ತದೆ. ಆರೋಗ್ಯ ವಿಚಾರದ ಬಗ್ಗೆ ನೋಡುವುದಾದರೇ ವಿಶೇಷವಾಗಿ ಮಧುಮೇಹಿಗಳಿಗೆ ಸ್ವಲ್ಪ ಆರೋಗ್ಯದಲ್ಲಿ ಎಚ್ಚರಿಕೆ ಇರಬೇಕಾಗುತ್ತದೆ.

ಕೆಲವು ಜನರಲ್ಲಿ ಎಲುಬು, ಕೀಲು ಮತ್ತು ಕಣ್ಣಿನ ಸಮಸ್ಯೆ ಇರುವಂತದ್ದು ಕಂಡುಬರುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೇನೆಂದರೆ ಶ್ರೀ ಆಂಜನೇಯಸ್ವಾಮಿಯ ಸಹಸ್ರನಾಮ ಪಠಣ ಮಾಡುವುದರಿಂದ ಶುಭದಾಯಕ ಫಲಗಳು ಸಿಗುತ್ತದೆ. ಮನೆ ದೇವರ ಪ್ರಾರ್ಥನೆಯನ್ನು ಮಾಡಿಕೊಳ್ಳಿ ಮತ್ತು ನಿಮ್ಮ ಮನೆಯ ಮಾಳಿಗೆಯ ಮೇಲೆ ಹಕ್ಕಿಗಳಿಗೆ ಆಹಾರ ಮತ್ತು ನೀರನ್ನು ಹಾಕಿರಿ. ಪಶುಪ್ರಾಣಿಗಳ ರಕ್ಷಣೆಯನ್ನು ಮಾಡುವಂತಹ ಕೆಲಸವನ್ನು ಮಾಡಿರಿ.

Leave A Reply

Your email address will not be published.