ಫೆಬ್ರವರಿ ತಿಂಗಳಿನ ಕಟಕ ರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ.

0

ಫೆಬ್ರವರಿ ತಿಂಗಳಿನ ಕಟಕ ರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. . ಈ ತಿಂಗಳಿನಲ್ಲಿ ಯಾವ ಫಲಗಳು ಸಿಗುತ್ತಿವೆ? ಏನೆಲ್ಲಾ ಪ್ರಯೋಜನಗಳಿವೆ? ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆಯಾ? ನಿಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ. ಚಂದ್ರಗ್ರಹವು ಕಟಕ ರಾಶಿಯ ರಾಶ್ಯಾಧಿಪತಿಯಾಗಿದೆ. ಅದೃಷ್ಟದ ಬಣ್ಣ ಕೆಂಪು ಮತ್ತು ಬಿಳಿಯಾಗಿದ್ದರೇ ಅದೃಷ್ಟದ ದಿನ ಸೋಮವಾರ ಮತ್ತು ಭಾನುವಾರವಾಗಿದೆ. ಮಹಾಶಿವನು ಅದೃಷ್ಟದೇವರಾಗಿದೆ.

ಅದೃಷ್ಟದ ಸಂಖ್ಯೆಗಳು 2,7,1 ಮತ್ತು 4 ಆಗಿದೆ. ವೃಶ್ಚಿಕ, ಮೀನಾ, ತುಲಾ ಮಿತ್ರರಾಶಿಯಾದರೇ, ಶತೃರಾಶಿ ಮೇಷ, ಸಿಂಹ, ಧನು, ಮಿಥುನ ರಾಶಿಗಳಾಗಿವೆ. 2,11,20 ಮತ್ತು 29 ಅದೃಷ್ಟದ ದಿನಾಂಕಗಳಾಗಿವೆ. ಕಟಕ ರಾಶಿಯ ವ್ಯಕ್ತಿಗಳು ಯಾವಾಗಲೂ ತಿಳಿದುಕೊಳ್ಳಬೇಕು ಎಂಬ ಜ್ಞಾನದ ಹಸಿವು ಇರುತ್ತದೆ. ಅಧ್ಯಯನ ಶೀಲರು ಮತ್ತು ಭಾವಜೀವಿಗಳಾಗಿರುತ್ತಾರೆ. ತಮಗೆ ಕಷ್ಟ ಬಂದರೂ ಮತ್ತು ಬೇರೆಯವರು ಕಷ್ಟದಲ್ಲಿದ್ದರೂ ತುಂಬಾ ಮರುಗುವ ಸ್ವಭಾವದವರಾಗಿರುತ್ತಾರೆ.

ಫೆಬ್ರವರಿ ತಿಂಗಳಿನಲ್ಲಿ ಕೆಲವೊಂದು ಚಿಂತೆ, ಗೊಂದಲಗಳು ಇರುತ್ತದೆ. ಅಂದುಕೊಂಡಂತಹ ಕೆಲಸ ಕಾರ್ಯಗಳು ನಡೆಯುತ್ತವೆಯಾ ಎಂಬ ಚಿಂತೆ ಕಾಡುತ್ತದೆ. ಬುದ್ಧಿವಂತಿಕೆಯಿಂದ ಈ ಸಮಯವನ್ನು ಬಳಸಿಕೊಳ್ಳಬೇಕಾಗುತ್ತದೆ. ಸಮಯವನ್ನು ವ್ಯರ್ಥ ಮಾಡದೇ, ಸಮಯವನ್ನು ಸರಿಯಾಗಿ ಸದ್ವಿನಿಯೋಗ ಮಾಡಿಕೊಂಡು ಸನ್ನಿವೇಶಕ್ಕೆ ತಕ್ಕಂತೆ ನಡೆದುಕೊಂಡರೆ ನೀವು ಅಂದುಕೊಂಡಿದ್ದಂತಹ ರೀತಿಯಲ್ಲಿ ಫಲ ಸಿಗುತ್ತದೆ. ನೀವು ಯಾವುದೇ ತೀರ್ಮಾನವನ್ನು ತೆಗೆದುಕೊಂಡರೂ ಅದು ಗಟ್ಟಿಯಾಗಿರಬೇಕು.

ವಿದ್ಯಾರ್ಥಿಗಳ ವಿಚಾರಕ್ಕೆ ಬಂದರೇ ಬಹಳ ಏಕಾಗ್ರತೆ ಬೇಕಾಗುತ್ತದೆ. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ. ಸ್ವಲ್ಪ ಏಕಾಗ್ರತೆಯಿಂದ ಓದಿಕೊಂಡರೇ ಒಳ್ಳೆಯ ಅಂಕ ಮತ್ತು ಒಳ್ಳೆಯ ಹೆಸರನ್ನು ಗಳಿಸುವ ಅವಕಾಶಗಳಿವೆ. ಕೆಲಸಗಳನ್ನು ಹುಡುಕುವವರಿಗೆ ಒಳ್ಳೆಯ ಫಲಗಳು ಸಿಗುತ್ತದೆ. ಮದುವೆಯ ಬಗ್ಗೆ ಚಿಂತೆ ಮಾಡುತ್ತಿದ್ದರೇ ಮದುವೆಯ ಬಗ್ಗೆ ಏನಾದರೂ ಶುಭ ಸೂಚನೆಗಳು ಬರಬಹುದು. ಹಣಕಾಸಿನ ವಿಷಯದಲ್ಲಿ ತಕ್ಕಮಟ್ಟಿಗೆ ಚೆನ್ನಾಗಿದೆ.

ಯಾವುದೋ ಮೂಲೆಯಿಂದ ದುಡ್ಡು ಬರುವಂತದ್ದು, ಕೆಲವೊಂದು ಸಮಸ್ಯೆಗಳು, ಗೊಂದಲಗಳು ತಕ್ಕ ಮಟ್ಟಿಗೆ ಸರಿಯಾಗುವಂತದ್ದು ಆಗುತ್ತದೆ. ಆದರೇ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಅನಾವಶ್ಯಕವಾದ ವಸ್ತುಗಳ ಖರೀದಿ, ಭೋಗದ ವಸ್ತುಗಳನ್ನು ಖರೀದಿ ಮಾಡುವಂತದ್ದು ಈ ರೀತಿ ಮಾಡಿದರೇ ನಷ್ಟ ಸಂಭವಿಸುವ ಸಾಧ್ಯತೆ ಇದೆ. ವ್ಯಾಪಾರ ವಹಿವಾಟು ಮಾಡುವವರು ಆಗಿದ್ದರೇ ಸ್ವತಃ ನೀವೇ ಕಾಳಜಿಯನ್ನು ವಹಿಸಿ ಅದರ ಕಡೆ ಗಮನ

ಕೊಟ್ಟಿದ್ದೇ ಆದರೇ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಲಾಭಗಳನ್ನು ಗಳಿಸುತ್ತೀರಿ. ಕೆಲವೊಂದು ಜನರಿಗೆ ಲಾಯರ್, ವಿದ್ಯಾರ್ಥಿಗಳು, ವಿಜ್ಞಾನಿಗಳಿಗೆ, ಡಾಕ್ಟರ್ ಗಳಿಗೆ , ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಆಸೆ ಇದ್ದರೇ ತಕ್ಕ ಮಟ್ಟಿಗೆ ಯಶಸ್ವಿಯಾಗುತ್ತೀರ. ಸರ್ಕಾರಿ, ಅರೆಸರ್ಕಾರಿ, ವ್ಯಾಪಾರ ವಹಿವಾಟಿನಲ್ಲಿ ಏನಾದರೂ ಬ್ಯುಸಿನೆಸ್ ಮಾಡುತ್ತಿದ್ದರೇ ಸ್ವಲ್ಪ ಜನರಿಗೆ ಸಂಬಂಧಿಸಿದಂತೆ ಎಚ್ಚರಿಕೆಯನ್ನು ಪಾಲಿಸಬೇಕಾಗುತ್ತದೆ. ಎಲ್ಲವರೂ ನಮ್ಮವರೇ ಎಂದು ಸಡನ್ ಆಗಿ ನಂಬಬಾರದು.

ಏನೇ ಮಾಡಿದರೇ ಸ್ವಲ್ಪ ಎಚ್ಚರಿಕೆಯಿಂದ ಮಾಡಿದರೇ ಒಳ್ಳೆಯ ಫಲಗಳು ಸಿಗುತ್ತದೆ. ಆದಾಯದಲ್ಲಿ ಏರಿಕೆ ಕಂಡುಬರುತ್ತದೆ. ಯಾವುದಾದರೂ ಮೂಲದಿಂದ ಧನಪ್ರಾಪ್ತಿಯೋಗ ಚೆನ್ನಾಗಿ ಇರುವುದರಿಂದ ಆದಾಯದಲ್ಲಿ ತುಂಬಾ ಚೆನ್ನಾಗಿದೆ. ಸದ್ಯಕ್ಕೆ ಬಂಡವಾಳ ಹೂಡಿಕೆ ಬೇಡ. ಆರೋಗ್ಯದ ವಿಚಾರಕ್ಕೆ ಬಂದರೆ ಆಹಾರದ ಶುಚಿತ್ತ್ವದ ಕಡೆ ಗಮನ ಕೊಡಿ. ನಿಮ್ಮ ಕುಟುಂಬದ ಸದಸ್ಯರಿಂದ ಹಣ ಬರುವುದರಿಂದ ಕೆಲವೊಂದು ಸಮಸ್ಯೆಗಳನ್ನು ತಕ್ಕ ಮಟ್ಟಿಗೆ ಪರಿಹಾರ ಮಾಡಿಕೊಳ್ಳಲು ಸಹಾಯವಾಗುತ್ತದೆ. ಈ ತಿಂಗಳ ಪೂರ್ತಿ ಅದ್ಭುತವಾದ ಫಲಗಳು ಇವೆ. ಆದರೇ ಕೆಲವೊಂದು ಎಚ್ಚರಿಕೆಯನ್ನು ಪಾಲಿಸಬೇಕು. ಕಟಕ ರಾಶಿಯವರ ದೋಷಗಳಿಗೆ ಪರಿಹಾರವೇನೆಂದರೆ ಆದಿತ್ಯ ಹೃದಯವನ್ನು ಪಠಣ ಮಾಡಿರಿ. ಸೂರ್ಯ ನಮಸ್ಕಾರದಿಂದ ಒಳ್ಳೆದಾಗುತ್ತದೆ.

Leave A Reply

Your email address will not be published.