ಫೆಬ್ರವರಿ ತಿಂಗಳಿನ ಧನಸ್ಸು ರಾಶಿಯ ಮಾಸ ಭವಿಷ್ಯ

0

ಸ್ನೇಹಿತರೇ ಫೆಬ್ರವರಿ ತಿಂಗಳಿನ ಧನಸ್ಸು ರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಈ ತಿಂಗಳಿನಲ್ಲಿ ಯಾವ ಫಲಗಳು ಸಿಗುತ್ತಿವೆ? ಏನೆಲ್ಲಾ ಪ್ರಯೋಜನಗಳಿವೆ? ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆಯಾ? ನಿಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ. ಧನಸ್ಸುರಾಶಿಯ ರಾಶ್ಯಾಧಿಪತಿ ಗುರು ಮತ್ತು ಬಿಲ್ಲಿನ ಆಕೃತಿಯನ್ನು ಹೊಂದಿದ್ದು, ಕೆಂಪು ಮತ್ತು ಹಳದಿ ಅದೃಷ್ಟದ ಬಣ್ಣವಾದರೇ ಗುರುವಾರ ಮತ್ತು ಭಾನುವಾರ ಅದೃಷ್ಟದ ದಿನಗಳಾಗಿರುತ್ತವೆ.

ಮಹಾವಿಷ್ಣು ಅದೃಷ್ಟದ ದೇವರಾಗಿದೆ. ಅದೃಷ್ಟದ ಸಂಖ್ಯೆಗಳು 3,1,4,5 ಆಗಿರುತ್ತವೆ. ಮೇಷ ಮತ್ತು ಸಿಂಹ ಮಿತ್ರರಾಶಿಗಳಾಗಿವೆ. ಕಟಕ, ವೃಶ್ಚಿಕ, ಮೀನಾ ಶತೃರಾಶಿಗಳಾಗಿವೆ. 3,12,21 ಮತ್ತು 31 ಅದೃಷ್ಟದ ದಿನಾಂಕಗಳಾಗಿವೆ. ಗುಪ್ತವಾದ ವಿದ್ಯೆ ಮತ್ತು ಗುಪ್ತವಾದ ವಿಚಾರಗಳಲ್ಲಿ ಮತ್ತು ಅಧ್ಯಯನಗಳಲ್ಲಿ ಬಹಳಷ್ಟು ಪಾಂಡಿತ್ಯವನ್ನು ಗಳಿಸಿರುವಂತಹ ವ್ಯಕ್ತಿಗಳೆಂದರೆ ಅವರೇ ಧನಸ್ಸು ರಾಶಿಯವರು. ಬೇರೆಯವರ ಅಧೀನದಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲ ಮತ್ತು ಸ್ವತಂತ್ರವಾಗಿ ಇರಲು ಇಷ್ಟಪಡುತ್ತಾರೆ.

ಫೆಬ್ರವರಿ ತಿಂಗಳಿನಲ್ಲಿ ಧನಸ್ಸು ರಾಶಿಯವರಿಗೆ ಬಹಳಷ್ಟು ವಿಷಯಗಳಲ್ಲಿ ಆಸಕ್ತಿ ಇರುತ್ತದೆ. ಡಾಕ್ಟರ್, ವಿಜ್ಞಾನಿಗಳು, ಹೊಸದಾಗಿ ಕೆಲಸ ಕಲಿಯುವ ವ್ಯಕ್ತಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಬಹಳ ಅನುಕೂಲಕರವಾದ ಮಾಸ ಇದಾಗಿದೆ. ಕಲಿಯಲು ಯಾವುದೇ ಅಂತರವಿಲ್ಲ. ಜೀವನ ಎಂದರೆ ಏನು? ಹಣಕಾಸಿನ ಬಗ್ಗೆ, ಜನ ಅಂದರೆ ಹೇಗೆ? ಏನು ಮಾಡಬೇಕು ಬಹಳಷ್ಟು ವಿಷಯಗಳನ್ನ ಕಲಿಯುತ್ತೀರಿ. ಅಧ್ಯಯನಕ್ಕೆ ಸೂಕ್ತವಾದ ತಿಂಗಳು ಇದಾಗಿದೆ. ಈ ತಿಂಗಳಿನಲ್ಲಿ ಬಹಳಷ್ಟು ಸಿಹಿ ಸುದ್ಧಿಯಲ್ಲಿ ಕೇಳುವಿರಿ.

ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆ ಇರುತ್ತದೆ. ಧನಸ್ಸು ರಾಶಿಯವರು ಮದುವೆಯ ಬಗ್ಗೆ ಚಿಂತೆ ಮಾಡುತ್ತಿದ್ದರೇ ಒಳ್ಳೆಯ ಅವಕಾಶಗಳು ಬರುತ್ತವೆ. ಈ ತಿಂಗಳಿನಲ್ಲಿ ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡುತ್ತೀರಿ. ನಿಮ್ಮ ಹಣಕಾಸಿನ ಸ್ಥಿತಿಗತಿಗಳನ್ನು ನೋಡಿಕೊಂಡು ವ್ಯವಹಾರ ನಡೆಸಿದರೆ ಉತ್ತಮ. ಗಣ್ಯವ್ಯಕ್ತಿಗಳು ಮತ್ತು ವಿಶೇಷ ವ್ಯಕ್ತಿಗಳನ್ನು ಭೇಟಿ ಮಾಡುತ್ತೀರಿ ಮತ್ತು ಮನಸ್ಸಿಗೆ ನೆಮ್ಮದಿಯು ಸಿಗುತ್ತದೆ. ಕೃಷಿಕರಿಗೆ ಯಾವುದೇ ಉದ್ಯೋಗವನ್ನು ಮಾಡುತ್ತಿರುವವರಿಗೆ ಧನರ್ ರಾಶಿಯವರು ಏನೇ ಕೆಲಸ ಮಾಡಿದರೂ,

ಕೊಟ್ಟಿರುವ ಕೆಲಸಗಳನ್ನು ನಿಯತ್ತು ಮತ್ತು ಪರಿಶ್ರಮದಿಂದ ಕೆಲಸ ಮಾಡಿದರೇ ನಿಮ್ಮ ನಿಮಗೆ ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗುತ್ತದೆ ಮತ್ತು ಮಾಡುವ ಕೆಲಸದಿಂದ ಬಡ್ತಿ ಸಿಗುತ್ತದೆ. ಮಾತೃ ಅಥವಾ ಅತ್ತೆಯ ಕಡೆಯಿಂದ ಖುಷಿಯ ವಿಚಾರಗಳು, ಹಣದ ಸಹಾಯ ಸಿಗುವ ಸಾಧ್ಯತೆ ಇದೆ. ಕೋರ್ಟ್ ಕೆಲಸಗಳಲ್ಲಿ ಅನುಕೂಲಕರವಾಗಿದೆ ಮತ್ತು ಜಯ ಸಿಗುತ್ತದೆ. ಆದರೇ ಯಾರ ಜೊತೆಗೂ ವಾದಗಳು ಬೇಡ, ಹೆಚ್ಚಾಗಿ ಕೆಲಸದ ಕಡ ಆದ್ಯತೆ ಕೊಟ್ಟರೇ ಅದ್ಭುತವಾದ ಫಲ ಸಿಗುತ್ತದೆ.

ಧನ ಲಾಭವಾಗುವ ಸಾಧ್ಯತೆ ಇದೆ. ನಿಮ್ಮ ಸಂಪತ್ತಿನಲ್ಲಿ ಅಭಿವೃದ್ಧಿಯಾಗುತ್ತದೆ ಆದರೇ ಎಚ್ಚರಿಕೆ ಇರಲಿ ದುಡ್ಡನ್ನು ಅನಾವಶ್ಯಕವಾಗಿ ಖರ್ಚು ಮಾಡಬೇಡಿ. ಯಾರಿಗಾದರೂ ಸಾಲ ಕೊಡಬೇಕಾದರೇ ಎಚ್ಚರಿಕೆಯಿಂದಿರಿ. ಈ ತಿಂಗಳಿನಲ್ಲಿ ನಿಮ್ಮ ಮನಸ್ಸಿನ ಯೋಚನೆ, ಆಸೆಗಳು ನೆರವೇರುತ್ತದೆ ಮತ್ತು ನಿಮ್ಮ ಗುರಿಯನ್ನು ತಲುಪುತ್ತೀರಿ. ಎಷ್ಟೇ ಕಷ್ಟ ಬಂದರೂ ಯಶಸ್ಸನ್ನು ಪಡೆಯುತ್ತೀರಿ.

ಕೆಲವರಿಗೆ ವಿಶೇಷ ಪ್ರಯಾಣ ಆಗುತ್ತದೆ. ಕೆಲವರು ಭಾರತದ ಒಳಗೆ ಮತ್ತು ವಿದೇಶಕ್ಕೆ ಪ್ರಯಾಣ ಹೋಗಬಹುದು. ಕೇತು ಅಷ್ಟೋತ್ತರವನ್ನು ಪಠಣ ಮಾಡುವುದರಿಂದ ಬಹಳಷ್ಟು ಅನುಕೂಲಗಳು ಆಗುತ್ತವೆ. ಮನೆ ದೇವರನ್ನು ಪ್ರಾರ್ಥನೆಯನ್ನು ಮಾಡಿಕೊಳ್ಳಿ. ಕಷ್ಟದಲ್ಲಿರುವವರಿಗೆ, ಅನಾಥರಿಗೆ, ಗುರುಗಳಿಗೆ, ಸಾಧು-ಸಂತರಿಗೆ ಅನ್ನಸಂತರ್ಪಣೆಯನ್ನು ಮಾಡಿರಿ. ಬಕಪಕ್ಷಿಗಳಿಗೆ ಆಹಾರವನ್ನು ನೀಡಿ ಖಂಡಿತವಾಗಿ ನಿಮಗೆ ಶುಭಫಲಗಳು ಸಿಗುತ್ತವೆ.

Leave A Reply

Your email address will not be published.