ಮಕರ ರಾಶಿಯಲ್ಲಿ ಜನಿಸಿದವರ ಗುಣಗಳು

0

ಇಂದಿನ ಲೇಖನದಲ್ಲಿ ಮಕರ ರಾಶಿಯವರ ಗುಣಲಕ್ಷಣಗಳನ್ನು ತಿಳಿಸಿಕೊಡುತ್ತೇವೆ. ಮಕರ ರಾಶಿಯವರು ತಮ್ಮ ಜೀವನದಲ್ಲಿ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಾರೆ. ಸಿಕ್ಕಿದ ಅವಕಾಶಗಳನ್ನು ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಇವರು ತಮ್ಮ ಗುರಿಯನ್ನು ತಲುಪಲು ಏನನ್ನು ತ್ಯಾಗಮಾಡಲು ತಯಾರು ಇರುತ್ತಾರೆ. ಇವರು ಯಾರಿಗಾದರೂ ಈ ಕೆಲಸ ಮಾಡುತ್ತೀನಿ ಎಂದು ಮಾತುಕೊಟ್ಟರೆ ಅದನ್ನು ಖಂಡಿತವಾಗಿ ಮಾಡುತ್ತಾರೆ. ಇವರು ಯಾವುದೇ ಕೆಲಸವನ್ನು ಅದರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಮುಗಿಸುತ್ತಾರೆ.

ಬೇರೆಯವರಿಗೂ ಇವರ ಬಗ್ಗೆ ಒಳ್ಳೆಯ ನಂಬಿಕೆ ಇರುತ್ತದೆ ಕಾರಣ ಇವರು ಜವಾಬ್ದಾರಿಯಿಂದ ಕೆಲಸವನ್ನು ಮುಗಿಸುತ್ತಾರೆ. ಇವರು ಹಾರ್ಡ್ ವರ್ಕಿಂಗ್ ಆಗಿರುವುದರಿಂದ ಅವರಿಗೋಸ್ಕರ ಕಡಿಮೆ ಸಮಯವನ್ನು ಕೊಡುತ್ತಾರೆ. ಮಕರ ರಾಶಿಯವರ ವ್ಯಕ್ತಿಗಳನ್ನು ಬೇರೆಯವರು ಯಾವ ರೀತಿ ತಿಳಿದುಕೊಳ್ಳುತ್ತಾರೆಂದರೆ ಇವರು ಯಾರ ಜೊತೆಯೂ ಸ್ನೇಹವನ್ನು ಬಯಸುವುದಿಲ್ಲ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಾರೆ ಎಂಬ ಭಾವನೆ ಇರುತ್ತದೆ ಆದರೆ ಮಕರ ರಾಶಿಯವರ ಜೊತೆ ಯಾರು ಇರುತ್ತಾರೋ ಅವರಿಗೆ ಮಾತ್ರ ಗೊತ್ತಿರುತ್ತದೆ

ಇವರು ಎಷ್ಟು ಜವಾಬ್ದಾರಿಯುತ ವ್ಯಕ್ತಿತ್ವವುಳ್ಳವರು ಮತ್ತು ಹಾರ್ಡ್ ವರ್ಕರ್ ಎಂದು ತಿಳಿದಿರುತ್ತದೆ. ಈ ರಾಶಿಯವರು ಜನ ಅಥವಾ ಕೆಲಸದ ಕಂಟ್ರೋನ್ ನನ್ನ ಹತ್ತಿರವೇ ಇರಬೇಕೆಂದು ಬಯಸುತ್ತಾರೆ ಮತ್ತು ಇವರೇ ಬಾಸ್ ಆಗಿರಬೇಕೆಂದು ಬಯಸುತ್ತಾರೆ. ಆದರೇ ಇವರ ಗುಣ ಬೇರೆಯವರಿಗೆ ಸರಿ ಎನಿಸುವುದಿಲ್ಲ. ಇವರು ಮೇಲು ನೋಟಕ್ಕೆ ವರಟು ಎನಿಸಿದರೂ ಅವರು ಸ್ವಭಾವತಃ ಮೃದು ಸ್ವಭಾವದವರು. ಇವರಿಗೆ ಯಾರಾದರೂ ಸಹಾಯ ಮಾಡಿದರೇ ಅವರಿಗೆ ಮತ್ತೆ ಸಹಾಯ ಮಾಡುತ್ತಾರೆ.

ಇವರು ಯಾರ ಋಣದಲ್ಲಿ ಇರಲು ಇಷ್ಟಪಡುವುದಿಲ್ಲ. ಇವರಿಗೆ ತಮ್ಮ ಗುರಿಯೇ ಮುಖ್ಯವಾಗಿರುತ್ತದೆ ಮತ್ತು ಪ್ರತಿಯೊಂದನ್ನು ಇವರ ಪರಿಶ್ರಮದಿಂದಲೇ ಪಡೆಯಬೇಕೆಂಬುದು ಇರುತ್ತದೆ. ಮಕರ ರಾಶಿಯ ವ್ಯಕ್ತಿಗಳಿಗೆ ಯಾರಾದರೂ ಮೋಸ ಮಾಡಿದರೇ ಇವರು ಅವರನ್ನ ಸುಮ್ಮನೇ ಬಿಡುವುದಿಲ್ಲ. ಈ ರಾಶಿಯ ವ್ಯಕ್ತಿಗಳು ಸೆಕ್ಯುರ್ ಆಗಿ ಇರಲು ಇಷ್ಟಪಡುತ್ತಾರೆ. ಇವರ ಕೆಲಸವನ್ನು ಬೇರೆಯವರಿಗೆ ಬಿಟ್ಟುಕೊಡಲು ಇಷ್ಟಪಡುವುದಿಲ್ಲ. ಬೇರೆಯವರು ಮಧ್ಯಬಂದರೆ ಅವರಿಗೆ ಇಷ್ಟವಾಗುವುದಿಲ್ಲ.

ಈ ರಾಶಿಯ ವ್ಯಕ್ತಿಗಳು ಪ್ರಾಕ್ಟಿಕಲ್ ಆಗಿ ಇರುತ್ತಾರೆ ಮತ್ತು ಹಠ ಸ್ವಭಾವವು ಕಂಡುಬರುತ್ತದೆ ಮತ್ತು ಅವರಿಗೆ ಯಾವುದು ಸರಿ ಎನಿಸುತ್ತದೆಯೋ ಅದನ್ನೇ ಮಾಡುತ್ತಾರೆ. ಹೊಸ ಯೋಚನೆ ಮತ್ತು ಹೊಸದನ್ನ ಮಾಡಲು ಇಷ್ಟಪಡುತ್ತಾರೆ. ಇವರು ಯಾವುದಾದೂ ಒಂದು ವಿಷಯದ ಬಗ್ಗೆ ಒಂದು ಸಾರಿ ನಿರ್ಧಾರವನ್ನು ತೆಗೆದುಕೊಂಡರೆ ಮತ್ತೆ ಅದನ್ನು ಬದಲಾಯಿಸಲು ಇಷ್ಟಪಡುವುದಿಲ್ಲ. ಮಕರ ರಾಶಿಯ ರಾಶ್ಯಾಧಿಪತಿ ಶನಿಗ್ರಹವಾಗಿರುತ್ತದೆ. ಇದು ಶಿಸ್ತು ಮತ್ತು ಲಿಮಿಟೇಷನ್ ಅನ್ನು ಸೂಚಿಸುತ್ತದೆ.

ಹಾಗಾಗಿ ಈ ರಾಶಿಯವರಿಗೆ ಯಾವುದನ್ನು ಸುಲಭವಾಗಿ ಪಡೆಯಲು ಆಗುವುದಿಲ್ಲ, ಕಷ್ಟಪಟ್ಟು ಪಡೆಯಬೇಕಾಗುತ್ತದೆ. ಹಾಗಾಗಿ ಮಕರ ರಾಶಿಯವರಿಗೆ ತಾಳ್ಮೆಯ ಅಗತ್ಯವಿರುತ್ತದೆ. ನೀವು ನಿಮ್ಮ ಹಾರ್ಡ್ ವರ್ಕ್ ಮತ್ತು ಶಿಸ್ತಿನಿಂದ ನಿಮ್ಮ ಗುರಿಯನ್ನು ತಲುಪುತ್ತೀರಿ. ಮಂಗಳಗ್ರಹ ಮಕರ ರಾಶಿಯಲ್ಲಿ ಪ್ರಭಾವಶಾಲಿಯಾಗಿ ಇರುತ್ತದೆ. ಮಕರ ರಾಶಿ ಪವರ್, ಅಥಾರಿಟಿ, ಪೊಜಿಷನ್, ಹೊಸದನ್ನ ಮಾಡುವ ಪ್ರಯತ್ನ, ಲೈಫ್ ನಲ್ಲಿ ಮುಂದೆ ಬರುವ ಆಸಕ್ತಿ ಎಲ್ಲಾ ಲಕ್ಷಣಗಳನ್ನು ಸೂಚಿಸುತ್ತದೆ.

ಮಂಗಳ ಗ್ರಹ ಎನರ್ಜಿಯಾಗಿರುತ್ತದೆ. ಮಕರ ರಾಶಿಯವರು ಸಾಹಸಿಗಳಾಗಲು ಇಷ್ಟಪಡುತ್ತಾರೆ. ತಮ್ಮ ಪ್ರಯತ್ನದಿಂದ ಗುರಿ ಮುಟ್ಟುತ್ತಾರೆ ಆದರೇ ಇವರು ಸುಲಭವಾಗಿ ತಲುಪಲು ಆಗುವುದಿಲ್ಲ ತಮ್ಮ ಪರಿಶ್ರಮದಿಂದಲೇ ಎಲ್ಲವನ್ನು ಪಡೆಯಬೇಕಾಗುತ್ತದೆ. ರಿಲೇಷನ್ ಶಿಪ್ ವಿಷಯಕ್ಕೆ ಬಂದರೆ ವಿಷಯವನ್ನು ತಮ್ಮ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ಬಯಸುತ್ತೀರಿ ನಿಮ್ಮ ಈ ಗುಣ ರಿಲೇಷನ್ ಶಿಪ್ ನಲ್ಲಿ ಸಮಸ್ಯೆಯನ್ನು ತಂದುಕೊಡುತ್ತದೆ.

ಮಕರ ರಾಶಿಯವರು ತಮ್ಮ ಫ್ಯಾಮಿಲಿ ಬಗ್ಗೆ ತುಂಬಾ ಚೆನ್ನಾಗಿ ಕೇರಿಂಗ್ ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಮಕರ ರಾಶಿಯವರು ಹಣಕ್ಕೆ ತುಂಬಾ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಇವರ ಹತ್ತಿರ ತುಂಬಾ ಹಣವಿರಬೇಕೆಂದು ಬಯಸುತ್ತಾರೆ ಮತ್ತು ಇದಕ್ಕೆ ಪರಿಶ್ರಮವನ್ನು ಪಡುತ್ತಾರೆ. ಮಕರ ರಾಶಿಯವರಿಗೆ 32 ಅಥವ 35 ವಯಸ್ಸಿನ ನಂತರ ಯಶಸ್ಸು ಎನ್ನುವುದು ಸಿಗುತ್ತದೆ.

Leave A Reply

Your email address will not be published.