ಗಂಡನೊಂದಿಗೆ ಊಟ ಮಾಡುವ ಮಹಿಳೆಯರು ಈ ವಿಡಿಯೋವನ್ನು ಖಂಡಿತ ನೋಡಲೇಬೇಕು: ಶ್ರೀ ಕೃಷ್ಣ ಏನು ಹೇಳುತ್ತಾರೆ?

0

ನಾವು ಈ ಲೇಖನದಲ್ಲಿ ಗಂಡನೊಂದಿಗೆ ಊಟ ಮಾಡುವ ಮಹಿಳೆಯರ ಸ್ಥಿತಿ ಏನು ಆಗುತ್ತದೆ. ಎಂದು ತಿಳಿಯೋಣ.
ಒಂದು ದಿನ ಭಗವಂತನಾದ ಶ್ರೀ ಕೃಷ್ಣ ರನ್ನು ಭೇಟಿ ಮಾಡಲು ದೇವಿ ಸತ್ಯ ಭಾಮೆ ಬರುತ್ತಾರೆ . ಅವರಿಗೆ ಒಂದು ಪ್ರಶ್ನೆಯನ್ನು ಕೇಳುತ್ತಾರೆ . ಹೇ ಸ್ವಾಮಿ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಇದೆ . ದಯವಿಟ್ಟು ನನ್ನ ಈ ಗೊಂದಲವನ್ನು ನೀವು ದೂರ ಮಾಡಿ . ಆಗ ಕೃಷ್ಣ ಹೇಳುತ್ತಾರೆ . ಹೇ ಪ್ರಿಯೆ ನಿನ್ನ ಮನಸ್ಸಿನಲ್ಲಿ ಏನೇ ಪ್ರಶ್ನೆ ಗೊಂದಲ ಇದ್ದರೂ , ನಿಸ್ಸಂಕೋಚವಾಗಿ ಕೇಳು, ನಿನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತೇನೆ . ಆಗ ದೇವಿ ತುಂಬಾ ಖುಷಿಯಿಂದ ಪ್ರಶ್ನೆಯನ್ನು ಮಾಡುತ್ತಾರೆ .

ಹೇ ಪ್ರಭು ನಿಮ್ಮ ಮೂವರು ಹೆಂಡತಿಯರು ಆದ ನಾವು ನಿಮಗೆ ಮೊದಲು ಊಟವನ್ನು ಬಡಿಸುತ್ತೇವೆ . ನಂತರ ನಾವು ಊಟವನ್ನು ಮಾಡುತ್ತೇವೆ . ಪ್ರತಿನಿತ್ಯ ನಿಮ್ಮ ಸೇವೆಯನ್ನು ಮಾಡುತ್ತೇವೆ . ಹೆಂಡತಿಯು ಗಂಡನ ಜೊತೆ ಅಥವಾ ಗಂಡನಿಗೂ ಮುನ್ನ ಊಟವನ್ನು ಮಾಡಬಹುದಾ . ಈ ರೀತಿ ಮಾಡುವುದು ಸರಿ ಇದೆಯಾ, ಈ ವಿಷಯದ ಬಗ್ಗೆ ಶಾಸ್ತ್ರಗಳು ಏನನ್ನು ಹೇಳುತ್ತವೆ . ಹೇ ಪ್ರಭು ಯಾವ ಪಾಪದ ಕಾರಣದಿಂದಾಗಿ ಸ್ತ್ರೀ ನರಕಕ್ಕೆ ಹೋಗುತ್ತಾಳೆ . ದಯವಿಟ್ಟು ಎಲ್ಲಾ ನನ್ನ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಸಿ .

ಭಗವಂತನಾದ ಶ್ರೀ ಕೃಷ್ಣ ಮುಗುಳ್ನಗುತ್ತಾ ಹೇಳುತ್ತಾರೆ . ಹೇ ದೇವಿ ಇಂದು ನೀನು ಸಮಸ್ತ ಮಾನವ ಜಾತಿಯ ಕಲ್ಯಾಣಕ್ಕಾಗಿ, ತುಂಬಾ ಒಳ್ಳೆಯ ಪ್ರಶ್ನೆಯನ್ನು ಕೇಳಿದ್ದೀಯಾ . ಹೇ ದೇವಿ ನಿಮ್ಮ ಪ್ರಶ್ನೆಗೆ ಇರುವ ಉತ್ತರವು ದೇವಿ
ಸುದೇವ ಅವರ ಕತೆಯನ್ನು ಕೇಳಿದ ನಂತರ , ನಿನ್ನ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ . ದೇವಿ ಸತ್ಯಭಾಮ ಹೇ ಪ್ರಭು ಈ ರಾಣಿ ಸುದೇವ ಅವರು ಯಾರಾಗಿದ್ದರು. ಇವರ ಆಚಾರ ವಿಚಾರಗಳು ಹೇಗಿದ್ದವು. ನನ್ನ ಮನಸ್ಸಿನಲ್ಲಿ ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗುತ್ತಿದೆ .

ಆಗ ಕೃಷ್ಣ ಹೇಳುತ್ತಾರೆ . ಹೇ ದೇವಿ ನಿನ್ನ ಆಜ್ಞೆಯ ಮೇಲೆ ನಾನು ಇಂದು ರಾಣಿ ಸುದೇವ ಅವರ ಕತೆಯನ್ನು ಹೇಳುತ್ತೇನೆ . ನಿನ್ನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಈ ಪ್ರಾಚೀನ ಕಥೆಯಲ್ಲಿಯೇ ಇದೆ. ಹಾಗಾಗಿ ಈ ಕಥೆಯನ್ನು ಗಮನವಿಟ್ಟು ಕೇಳು . ಯಾವ ಮನುಷ್ಯರು ಈ ಕಥೆಯನ್ನು ಗಮನವಿಟ್ಟು ಕೇಳುತ್ತಾರೋ , ಮತ್ತು ಇದರ ಪ್ರಚಾರವನ್ನು ಮಾಡುತ್ತಾರೋ , ಅಂಥವರು ಸೌಭಾಗ್ಯ ಶಾಲಿಗಳು ಆಗುತ್ತಾರೆ . ಅಂಥವರಿಗೆ ಯಾವತ್ತಿಗೂ ನರಕದ ಪ್ರಾಪ್ತಿ ಆಗುವುದಿಲ್ಲ .

ನಂತರ ದೇವಿ ಸತ್ಯಭಾಮೆಯವರು ಹೇಳುತ್ತಾರೆ . ಹೇ ಸ್ವಾಮಿ ನಾನು ಖಂಡಿತವಾಗಿ ಕಥೆಯನ್ನು ಗಮನವಿಟ್ಟು ಕೇಳುತ್ತೇನೆ . ದಯವಿಟ್ಟು ಈ ಕಥೆಯನ್ನು ಹೇಳಿ . ಭಗವಂತನಾದ ಶ್ರೀ ಕೃಷ್ಣ ರು ಈ ರೀತಿಯಾಗಿ ಹೇಳುತ್ತಾರೆ .
ಪ್ರಾಚೀನ ಕಾಲದಲ್ಲಿ ಐದ್ಯ ಪುರಿಯಲ್ಲಿ ಮಹಾರಾಜ ಈಶ್ವಾಕು ಅವರು ರಾಜ್ಯವನ್ನು ಆಳುತ್ತಿದ್ದರು . ಇವರು ಧರ್ಮವನ್ನು ಪಾಲಿಸುವಂತಹ ಗುಣವಂತ , ಮತ್ತು ಚರಿತ್ರವಂತ ಮತ್ತು ಅತ್ಯಂತ ಕುಶಲವಂತ ಸಾಮ್ರಾಟನೂ ಆಗಿದ್ದನು. ಇವರ ವಿವಾಹ ಕಾಶಿ ನರೇಶರ ಪುತ್ರಿಯಾದ ಸುದೇವ ಅವರೊಂದಿಗೆ ಆಗಿತ್ತು.

ಸುದೇವ ಅವರು ಸತ್ಯದ ವ್ರತವನ್ನು ಪಾಲಿಸುವಂತಹ ಮಹಾನ್ ಪತಿವ್ರತೆಯು ಆಗಿದ್ದಳು. ಈಶ್ವಾಕು ಅವರು ಪುಣ್ಯವಂತರು ಆಗಿದ್ದರು. ಇವರು ಅನೇಕ ಯಜ್ಞಗಳ ಜೊತೆಗೆ , ಅನೇಕ ಪುಣ್ಯ ಕಾರ್ಯಗಳನ್ನು ಮಾಡಿದ್ದರು . ಇವರು ದೇವಸ್ಥಾನಗಳನ್ನು ಕಟ್ಟಿಸಿದ್ದರು . ಅನೇಕ ಮನೆಗಳನ್ನು ಕಟ್ಟಿಸಿದ್ದರು . ಜೊತೆಗೆ ಯಾವತ್ತಿಗೂ ಸಾಧು ಸಂತರ ರಕ್ಷಣೆಯಲ್ಲಿ ಮುಂದೆ ಇರುತ್ತಿದ್ದರು . ಮಹಾರಾಜ ಈಶ್ವಾಕು ಅವರ ನಗರದ ಹತ್ತಿರ ಒಂದು ದಟ್ಟವಾದ ಕಾಡು ಇತ್ತು . ಆ ಕಾಡಿನಲ್ಲಿ ಒಂದು ಹಂದಿಯು ತನ್ನ ಹೆಂಡತಿ ಮೊಮ್ಮಕ್ಕಳ ಜೊತೆ ಇತ್ತು.

ಈ ಹಂದಿ ಯು ತುಂಬಾ ವಿಶಾಲವಾದ ಮತ್ತು ಭಯಂಕರವಾದ ಆಕಾರದಲ್ಲಿ ಇತ್ತು .ಇದನ್ನು ಕಂಡ ಮನುಷ್ಯರು ತುಂಬಾ ಭಯ ಪಡುತ್ತಿದ್ದರು . ಇದರ ಭಯದಿಂದಾಗಿ ಈ ಕಾಡಿನತ್ತ ಜನರು ಹೋಗುತ್ತಿರಲಿಲ್ಲ . ನಂತರ ಈ ವಿಷಯ ಮಹಾರಾಜ ಈಶ್ವಾಕು ಅವರಿಗೆ ತಿಳಿಯಿತು . ಆಗ ಅವರು ಬೇಟೆಯಾಡಲು ಯೋಚನೆ ಮಾಡುತ್ತಾರೆ . ನಂತರ ಮಹಾರಾಜರು ತನ್ನ ಪತ್ನಿ ಸುದೇವ ಜೊತೆಗೆ ಮತ್ತು ಅನೇಕ ಸೈನಿಕರು ನಾಯಿಗಳನ್ನು ಕರೆದುಕೊಂಡು ಆ ಕಾಡಿನಲ್ಲಿ ಬೇಟೆಯಾಡಲು ಹೋಗುತ್ತಾರೆ .

ಮಹಾರಾಜರು ದೊಡ್ಡ ಪರಾಕ್ರಮಿಯು ಆಗಿದ್ದರು . ಇವರ ಅನೇಕ ಪ್ರಕಾರದ ಹುಲಿ, ಸಿಂಹ , ರಾಕ್ಷಸರನ್ನು ಹೊಂದಿದ್ದರು . ಹಾಗಾಗಿ ಇವರು ಈ ಭಯಂಕರ ಹಂದಿಯಿಂದ ಗ್ರಾಮದ ಜನರನ್ನು ರಕ್ಷಣೆ ಮಾಡಲು ಆ ಕಾಡಿನಲ್ಲಿ ಹಂದಿಯನ್ನು ಬೇಟೆಯಾಡಲು ಹೋಗುತ್ತಾರೆ . ಯಾವಾಗ ಈ ಭಯಂಕರವಾದ ಹಂದಿಯು ಮಹಾರಾಜರು ಕಾಡಿನ ಒಳಗಡೆ ಬರುವುದನ್ನು ಕಂಡಿತು , ಆ ಹಂದಿಯು ತನ್ನ ಹೆಂಡತಿಗೆ ಹೇಳುತ್ತದೆ . ಹೇ ಪ್ರಿಯೆ ಈತ ಕೌಶಲ್ಯ ದೇಶದ ಮಹಾನ್ ಸಾಮ್ರಾಟ ಈಶ್ವಾಕು ಅವರು ಆಗಿದ್ದಾರೆ .

ಇವರು ಮಹಾನ್ ಪರಾಕ್ರಮಿ . ಮಹಾನ್ ತೇಜಸ್ವಿಯು ಆಗಿದ್ದಾರೆ . ಅವರು ಈ ಕಾಡಿಗೆ ನನ್ನನ್ನು ಭೇಟಿಯಾಗಲು ಬಂದಿದ್ದಾರೆ . ಅವರ ಜೊತೆ ಹಲವಾರು ನಾಯಿಗಳು ಮತ್ತು ಆಯುಧಗಳು ಇವೆ . ನನ್ನ ಮೇಲೆ ದಾಳಿ ಮಾಡಲು ಬಂದಿದ್ದಾರೆ , ಅನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ . ಮಹಾರಾಜರು ದೊಡ್ಡ ಪುಣ್ಯಾತ್ಮರು ಆಗಿದ್ದಾರೆ . ಇವರು ರಾಜರ ರಾಜರು ಆಗಿದ್ದಾರೆ . ಇಡೀ ವಿಶ್ವ ಇವರ ಅಧೀನದಲ್ಲಿ ಇದೆ . ಹೇ ಪ್ರಿಯೆ ನಿಮ್ಮೆಲ್ಲರ ರಕ್ಷಣೆಗಾಗಿ ನಾನು ನನ್ನ ಪರಾಕ್ರಮವನ್ನು ತೋರಿಸುತ್ತಾ , ಮಹಾರಾಜರ ಜೊತೆ ಯುದ್ಧವನ್ನು ಮಾಡುತ್ತೇನೆ . ಒಂದು ವೇಳೆ ಯುದ್ಧದಲ್ಲಿ ನಾನು ಇವರನ್ನು ಸೋಲಿಸಿದರೆ , ಮೂರು ಲೋಕದಲ್ಲಿ ನನ್ನ ಕೀರ್ತಿ ಹೆಚ್ಚಾಗುತ್ತದೆ .

ಒಂದು ವೇಳೆ ಇವರ ಕೈಯಿಂದ ನಾನು ಸತ್ತು ಹೋದರು ಕೂಡ , ನನಗೆ ಹಂದಿಯ ಜನ್ಮದಿಂದ ಮುಕ್ತಿ ಸಿಗುತ್ತದೆ .ವಿಷ್ಣು ಲೋಕಕ್ಕೆ ಹೋಗುತ್ತೇನೆ . ನನಗೆ ಹಿಂದಿನ ಜನ್ಮದ ಪಾಪದ ಕಾರಣದಿಂದಲೇ , ಹಂದಿಯ ಜನ್ಮ ಸಿಕ್ಕಿದೆ . ಹೇ ಪ್ರಿಯೇ ನೀನು ನನ್ನ ಮೋಹವನ್ನು ಬಿಟ್ಟು, ನನ್ನ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕರೆದುಕೊಂಡು , ಬೆಟ್ಟದ ಗುಹೆಗೆ ಹೋಗಿ ಬಿಡು . ಈಗ ಸಮಯ ಬಂದಿದೆ ಅದು ನನ್ನ ಪೂರ್ವ ಜನ್ಮದ ಪಾಪಗಳಿಂದ ಮುಕ್ತಿ ಪಡೆಯಲು . ಯಾವಾಗ ಮಹಾರಾಜರ ಬಾಣಗಳು ನನ್ನ ಶರೀರಕ್ಕೆ ಗಾಯ ಮಾಡುತ್ತದೆಯೋ ,

ಒಂದೊಂದು ಬಾಣದಿಂದ ನನ್ನ ಪೂರ್ವ ಜನ್ಮದ ಪಾಪಗಳು ನಷ್ಟ ಆಗುತ್ತವೆ . ಆಗ ಹಂದಿಯ ಹೆಂಡತಿ ಹೇಳುತ್ತದೆ . ಹೇ ಸ್ವಾಮಿ ನಮ್ಮ ಮಕ್ಕಳು ನಿಮ್ಮ ಪರಾಕ್ರಮ ಮತ್ತು ಸಾಹಸದ ಕಾರಣದಿಂದಲೇ , ಈ ಕಾಡಿನಲ್ಲಿ ನಿರ್ಭಯವಾಗಿ ತಿರುಗಾಡುತ್ತಿವೆ . ಸುಂದರವಾದ ಹೂಗಳ ಆಹಾರವನ್ನು ತಿನ್ನುತ್ತಿವೆ . ನಿಮ್ಮ ಕಾರಣದಿಂದಲೇ ಈ ಕಾಡಿನಲ್ಲಿ ಇರುವ ಸಿಂಹ , ಹುಲಿ ಇತ್ಯಾದಿ ಪ್ರಾಣಿಗಳ ಭಯ ಇಲ್ಲ . ಏಕೆಂದರೆ ನೀವೇ ಇವರ ರಕ್ಷಣೆಯನ್ನು ಮಾಡುತ್ತೀರಾ . ನಿಮ್ಮ ಕ್ರೂರವಾದ ಈ ರೂಪವನ್ನು ನೋಡಿ

ಯಾವುದೇ ಬೇಟೆಗಾರರು ನಮ್ಮನ್ನ ಭೇಟಿಯಾಗಲು ಈ ಕಾಡಿಗೆ ಬರುವುದಿಲ್ಲ. ಒಂದು ವೇಳೆ ನಿಮ್ಮ ಮೃತ್ಯು ಆದರೆ , ನನ್ನ ಮತ್ತು ನಿಮ್ಮ ಮಕ್ಕಳ ರಕ್ಷಣೆಯನ್ನು ಯಾರು ಮಾಡುತ್ತಾರೆ . ನೀವು ಇಲ್ಲ ಅಂದರೆ ನಾವು ಅಸಹಾಯಕರು ಆಗುತ್ತೇವೆ . ಗಂಡ ಇಲ್ಲದಿದ್ದರೆ , ನನ್ನ ಜೊತ ಏನು ಉತ್ತಮವಾದ ಬಂಗಾರದ ಬಳೆಗಳು ಆಭರಣಗಳು , ವಸ್ತ್ರಗಳನ್ನು ಧರಿಸಿದರು ಯಾವುದೇ ಸ್ತ್ರೀ ಗಂಡ ಇಲ್ಲದ ಶೋಭೆಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ . ಗಂಡನಿಂದಲೇ ಮಹಿಳೆಯರಿಗೆ ಸೌಂದರ್ಯ ಮತ್ತು ಶೋಭೆ ಸಿಗುತ್ತದೆ .

ನೀವು ಇಲ್ಲ ಅಂದರೆ ನನ್ನ ಜೀವನ ನಷ್ಟ ಆಗುತ್ತದೆ . ಹೇ ಪ್ರಾಣೇಶ್ವರ ನೀವು ಇಲ್ಲ ಎಂದರೆ , ನಾನು ಜೀವಂತವಾಗಿರಲು ಸಾಧ್ಯವಿಲ್ಲ . ನಾನು ಸತ್ಯವನ್ನು ಹೇಳುತ್ತಿರುವೆನು . ಒಂದು ವೇಳೆ ನಿಮ್ಮ ಜೊತೆ ನನ್ನನ್ನು ನರಕಕ್ಕೆ ಹಾಕಿದರೂ , ಅಲ್ಲಿಗೆ ನಾನು ಖುಷಿಯಾಗಿ ನಿಮ್ಮೊಡನೆ ಬರುತ್ತೇನೆ . ಹಾಗಾಗಿ ನೀವು ಸಹ ಮಹಾರಾಜರ ಮುಂದೆ ಹೋಗಬೇಡಿ . ನೀವು ಸಹ ನಮ್ಮೊಡನೆ ಪರ್ವತದ ಗುಹೆ ಒಳಗಡೆ ಬನ್ನಿ . ನಾವೆಲ್ಲರೂ ಅಲ್ಲಿಯೇ ಅಡಗಿ ಕುಳಿತುಕೊಳ್ಳೋಣ ..ನೀವು ಜೀವನದ ಇಚ್ಛೆಯನ್ನು ಬಿಟ್ಟು , ನೀವು ನಿಮ್ಮ ಹೆಂಡತಿ ಮಕ್ಕಳನ್ನು ಒಂಟಿಯಾಗಿ ಬಿಟ್ಟು ಹೋಗುತ್ತಿದ್ದೀರಾ .

ಇದರಿಂದ ನಿಮಗೆ ಯಾವ ಲಾಭ ಸಿಗುತ್ತದೆ . ನಂತರ ಆ ಹಂದಿಯು ಹೇಳುತ್ತದೆ . ಹೇ ಪ್ರಿಯೆ ನೀನು ವೀರರ ಧರ್ಮವನ್ನು ತಿಳಿದಿಲ್ಲ . ಹಾಗಾಗಿ ಈ ರೀತಿಯಾಗಿ ಹೇಳುತ್ತಿದ್ದೀಯಾ . ಒಂದು ವೇಳೆ ಶತ್ರುಗಳು ವೀರರನ್ನು ಕರೆದರೆ , ಯುದ್ಧಕ್ಕಾಗಿ ಆಮಂತ್ರಣವನ್ನು ಕೊಟ್ಟರೆ , ಇಲ್ಲಿ ವೀರ ಪುರುಷರು ಲೋಭ ಮತ್ತು ಭಯದಿಂದ ಹೇಡಿಗಳಂತೆ ಅಡಗಿಕೊಂಡು ಓಡಿ ಹೋಗಬಾರದು . ಇಂತಹ ಪುರುಷರನ್ನು 1000 ಸಾವಿರ ಯುಗಗಳ ತನಕ ಕುಂಭೀ ಪಾಕ ನರಕದಲ್ಲಿ ಹಾಕಿ ಕುದಿಸಲಾಗುತ್ತದೆ . ವೀರ ಪುರುಷರು ಶತ್ರುಗಳನ್ನು ಎದುರಿಸಿದರೆ, ಹೊಡೆದಾಡುತ್ತಾ ವೀರಗತಿಯನ್ನು ಪಡೆದುಕೊಂಡರೆ ,

ಅಂಥವರಿಗೆ ಮೃತ್ಯು ಆದ ನಂತರ ದಿವ್ಯ ಲೋಕದಲ್ಲಿ ಸ್ಥಾನ ಸಿಗುತ್ತದೆ . ಇಂದು ಮಹಾರಾಜ ಈಶ್ವಾಕು ಅವರು ನಮ್ಮ ಮೇಲೆ ಯುದ್ಧ ಮಾಡಲು ಬಂದಿದ್ದಾರೆ . ಇವರು ನಮ್ಮ ಅತಿಥಿಗಳು ಆಗಿದ್ದಾರೆ . ಈ ವ್ಯಕ್ತಿಗಳಿಗೆ ನಾವು ಆಗೌರವ ಕೊಡಬಾರದು . ಅತಿಥಿಗಳಿಗೆ ಅಗೌರವ ಕೊಟ್ಟರೆ, ಇದು ಸಾಕ್ಷಾತ್ ಭಗವಂತನಾದ ವಿಷ್ಣುವಿಗೆ ಮಾಡಿದ ಅಗೌರವ ಆಗುತ್ತದೆ .ಹಾಗಾಗಿ ಅವರೊಡನೆ ಯುದ್ಧ ಮಾಡುವುದು ನನ್ನ ಕರ್ತವ್ಯ ಆಗಿದೆ. . ನಂತರ ಆ ಹಂದಿಯ ಹೆಂಡತಿ ಹೇಳುತ್ತಾಳೆ . ಹೇ ಸ್ವಾಮಿ ನೀವು ಮಹಾ ರಾಜರೊಡನೆ ಯುದ್ಧ ಮಾಡಲು ಇಷ್ಟ ಪಡುತ್ತಿದ್ದರೆ,
ಇಲ್ಲಿ ನಾನು ಕೂಡ

ನಿಮ್ಮ ಒಡನೆ ಇದ್ದುಕೊಂಡು ನಿಮ್ಮ ಪರಾಕ್ರಮ ನೋಡುತ್ತೇನೆ . ಆ ಹಂದಿಯ ಹೆಂಡತಿಯು ತನ್ನ ಮಕ್ಕಳನ್ನು ಕರೆದು ಈ ರೀತಿಯಾಗಿ ಹೇಳುತ್ತದೆ . ಹೇ ಪುತ್ರರೇ ನನ್ನ ಮಾತನ್ನು ಕೇಳಿ ಇಂದು ಯುದ್ಧ ಭೂಮಿಯಲ್ಲಿ ಅತಿಥಿಗಳು ಬಂದಿದ್ದಾರೆ . ಅವರನ್ನು ಸತ್ಕರಿಸಲು ಮತ್ತು ಅವರೊಡನೆ ಯುದ್ಧ ಮಾಡಲು ,ನಿಮ್ಮ ತಂದೆ ಹೋಗುತ್ತಿದ್ದಾರೆ .ಅವರೊಡನೆ ನಾನು ಕೂಡ ಹೋಗುತ್ತಿದ್ದೇನೆ . ಹಾಗಾಗಿ ನೀವೆಲ್ಲರೂ ಬೆಟ್ಟದ ಗುಹೆಯೊಳಗೆ ಅಡಗಿ ಕೊಳ್ಳಿ .ಮಹಾರಾಜ ಈಶ್ವಾಕು ಅವರು ತುಂಬಾ ಶಕ್ತಿಶಾಲಿ ಆಗಿದ್ದಾರೆ .

ಅವರು ಈ ಯುದ್ಧದಲ್ಲಿ ನಮ್ಮನ್ನು ಸಂಹರಿಸುತ್ತಾರೆ . ಹಾಗಾಗಿ ನೀವೆಲ್ಲರೂ ಇಲ್ಲಿಂದ ಓಡಿ ಹೋಗಿರಿ ,ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳಿರಿ . ನಂತರ ಹಂದಿಯ ಚಿಕ್ಕ ಚಿಕ್ಕ ಮಕ್ಕಳು ಹೇಳುತ್ತಾರೆ .ಹೇ ತಾಯಿ ಯಾವ ಮಕ್ಕಳು ತಮ್ಮ ತಂದೆ ತಾಯಿಗಳನ್ನು ಸಂಕಟದಲ್ಲಿ ಬಿಟ್ಟು ಓಡಿ ಹೋಗುತ್ತಾರೋ , ಅಂಥವರು ಮಹಾ ಪಾಪಿಗಳು ಆಗುತ್ತಾರೆ . ಅಂಥವರನ್ನು ದೊಡ್ಡ ನರಕದಲ್ಲಿ ಹಾಕಲಾಗುತ್ತದೆ . ಇಲ್ಲಿ ಯಾವ ನಿರ್ದಯಿ ಪುತ್ರನು ತನ್ನ ತಾಯಿಯ ಎದೆಹಾಲನ್ನು ಕುಡಿದು ಇವರನ್ನು ದುಃಖದಲ್ಲಿ ಬಿಟ್ಟು ಓಡಿ ಹೋಗುತ್ತಾರೋ,

ಯಾವ ಪುತ್ರರು ತನ್ನ ತಂದೆಯು ವಿಪತ್ತಿನಲ್ಲಿ ಇರುವುದನ್ನು ಕಂಡು ದೂರ ಓಡಿ ಹೋಗುತ್ತಾರೋ, ಅಂಥವರು ಕೀಟಗಳು ತುಂಬಿರುವ ದುರ್ಗಂಧ ತುಂಬಿರುವ ನರಕದಲ್ಲಿ ಹೋಗಿ ಬೀಳುತ್ತಾರೆ. ಹಾಗಾಗಿ ಹೇ ತಾಯಿ ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ . ನಂತರ ಆ ಹಂದಿಯು ತನ್ನ ಹೆಂಡತಿ ಮಕ್ಕಳೊಡನೆ ಯುದ್ಧ ಮಾಡಲು ಸಿದ್ಧರಾಗುತ್ತಾರೆ .ನಂತರ ಯುದ್ದ ಭೂಮಿಯತ್ತ ಬರುತ್ತಾರೆ . ಎಲ್ಲಾ ಹಂದಿಗಳು ಸುತ್ತಮುತ್ತಲು ತಮ್ಮ ತಂದೆ ತಾಯಿಯನ್ನು ರಕ್ಷಣೆ ಮಾಡಲು ಮುಂದೆ ಬರುತ್ತವೆ .

ಇನ್ನೊಂದೆಡೆ ಮಹಾರಾಜ ಈಶ್ವಾಕು ಅವರು ತನ್ನ ಸೇನೆಯೊಂದಿಗೆ ಆ ಸ್ಥಾನಕ್ಕೆ ಬರುತ್ತಾರೆ . ತಮ್ಮ ಮುಂದೆ ನಿಂತಿರುವ ಹಂದಿಗಳನ್ನು ನೋಡಿ .ದೊಡ್ಡ ವೀರ ಸೈನಿಕರನ್ನು ಹಂದಿಯನ್ನು ಬೇಟೆಯಾಡಲು ಮುಂದೆ ಕಳಿಸುತ್ತಾರೆ. ಆ ಎಲ್ಲಾ ಶಕ್ತಿಶಾಲಿ ಸೈನಿಕರು ತಮ್ಮ ಕೈಗಳಲ್ಲಿ ಆಯುಧಗಳನ್ನು ಹಿಡಿದುಕೊಂಡು , ಹಂದಿಗಳ ಮೇಲೆ ಆಕ್ರಮಣ ಮಾಡುತ್ತಾರೆ. ಆ ನಂತರ ಹಂದಿಗಳು ಮತ್ತು ಸೈನಿಕರು, ರಾಜರ ನಡುವೆ ಭೀಕರ ಯುದ್ಧ ನಡೆಯುತ್ತದೆ . ಇಲ್ಲಿ ಒಬ್ಬರ ಮೇಲೆ ಒಬ್ಬರು ಪ್ರಹಾರ ಮಾಡಲು ಶುರು ಮಾಡುತ್ತಾರೆ .

ಹಂದಿಗಳು ತಮ್ಮ ಹಲ್ಲುಗಳಿಂದ ಸೈನಿಕರನ್ನು ಹೊಡೆಯಲು ಮುಂದಾಗುತ್ತದೆ . ಸೈನಿಕರು ತಮ್ಮ ಆಯುಧಗಳಿಂದ ಹಂದಿಗಳ ಮೇಲೆ ದಾಳಿ ಮಾಡಲು ಶುರು ಮಾಡುತ್ತಾರೆ . ಈ ಯುದ್ಧದಲ್ಲಿ ಅನೇಕ ಹಂದಿಗಳು ಸಾಯುತ್ತವೆ .ಎಷ್ಟೋ ಹಂದಿಗಳು ಗಾಯಗೊಳ್ಳುತ್ತದೆ . ಇಲ್ಲಿ ಮಹಾರಾಜರ ಅನೇಕ ಸಿಪಾಯಿಗಳು ಸತ್ತರು ಮತ್ತು ಗಾಯಗೊಂಡರು . ಇಲ್ಲಿ ಹಂದಿಯ ಹೆಂಡತಿ ಮತ್ತು ಏಳು ಜನ ಮಕ್ಕಳು ಉಳಿದಿದ್ದರು . ತನ್ನ ಕೆಲವು ಮಕ್ಕಳು ಸತ್ತಿರುವುದನ್ನು ಕಂಡು ಆ ಹಂದಿಯ ಹೆಂಡತಿಯು ತುಂಬಾ ಭಯಕ್ಕೆ ಒಳಗಾಗುತ್ತದೆ .

ತನ್ನ ಗಂಡನಿಗೆ ಹೇಳುತ್ತದೆ . ಹೇ ಸ್ವಾಮಿ ನನ್ನನ್ನು ಮತ್ತು ನನ್ನ ಮಕ್ಕಳನ್ನು ಇಲ್ಲಿಂದ ಕರೆದುಕೊಂಡು ಹೋಗಿ . ಇಲ್ಲವಾದರೆ ನಮ್ಮ ವಂಶ ನಾಶವಾಗುತ್ತದೆ . ಮಹಾರಾಜರು ನಮ್ಮನ್ನು ನಾಶ ಮಾಡಿಬಿಡುತ್ತಾರೆ . ನಂತರ ಆ ಹಂದಿ ಯು ಹೇಳುತ್ತದೆ . ಹೇ ಪ್ರಿಯೆ ಎರಡು ಸಿಂಹಗಳ ನಡುವೆ ಒಂದು ಹಂದಿ ನೀರನ್ನು ಕುಡಿಯಬಹುದು .ಆದರೆ ಎರಡು ಹಂದಿಗಳ ನಡುವೆ ಒಂದು ಸಿಂಹ ನೀರನ್ನು ಕುಡಿಯಲು ಸಾಧ್ಯವಿಲ್ಲ . ಹಂದಿಯ ಜಾತಿಯಲ್ಲಿ ಯಾವ ರೀತಿಯ ಶಕ್ತಿ ನೋಡಲಾಗುತ್ತದೆ ಎಂದರೆ ,

ಇದೇ ಒಂದು ಕಾರಣದಿಂದಾಗಿ ಹಂದಿಗೆ ಎಲ್ಲರೂ ಹೆದರಿಕೊಳ್ಳುತ್ತಾರೆ . ಒಂದು ವೇಳೆ ಈ ಸಮಯದಲ್ಲಿ ಮೃತ್ಯುವಿಗೆ ಭಯಪಟ್ಟು ನಾನು ಓಡಿ ಹೋದರೆ , ನನ್ನ ಹಂದಿಯ ಜೊತೆಯ ಪ್ರಸಿದ್ಧಿ ನಷ್ಟವಾಗುತ್ತದೆ . ಹಾಗಾಗಿ ಹೇ ಪ್ರಿಯೆ
ನನ್ನ ಮಕ್ಕಳನ್ನು ಕರೆದುಕೊಂಡು ನೀನು ಹೋಗಿ ಬಿಡು . ಮತ್ತು ಸುಖವಾಗಿ ಜೀವನವನ್ನು ನಡೆಸು . ಈ ಮಾತನ್ನು ಕೇಳಿದ ಹಂದಿಯ ಹೆಂಡತಿ ಈ ರೀತಿ ಹೇಳುತ್ತದೆ . ಹೇ ಸ್ವಾಮಿ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ . ನೀವು ನನಗೆ ಗೌರವವನ್ನು ಕೊಟ್ಟು , ಪ್ರತಿಕ್ರಿಯೆ ಮಾಡಿ ಮತ್ತು ರಕ್ಷಣೆಯನ್ನು ಮಾಡಿ . ನನ್ನ ಮನಸ್ಸನ್ನು ಗೆದ್ದಿದ್ದೀರಾ . ನಿಮ್ಮ ಮೇಲಿನ ನನ್ನ ಮೋಹ ಯಾವತ್ತಿಗೂ ಬಿಡುವುದಿಲ್ಲ .

ಹಾಗಾಗಿ ನನ್ನ ಮಕ್ಕಳ ಜೊತೆಗೆ ನನ್ನ ಪ್ರಾಣವನ್ನು ನಿಮ್ಮ ಮುಂದೆಯೇ ತ್ಯಾಗ ಮಾಡುವೆನು . ಆದರೆ ನಿಮ್ಮನ್ನು ಒಂಟಿಯಾಗಿ ಬಿಟ್ಟು ಹೋಗುವುದಿಲ್ಲ . ನಂತರ ಆ ಹಂದಿ ಯು ತನ್ನ ಹೆಂಡತಿಯ ಜೊತೆಗೆ ಮಹಾರಾಜರ ಜೊತೆ ಯುದ್ಧ ಮಾಡಲು ಬರುತ್ತದೆ . ಆ ಹಂದಿಯು ಭಯಂಕರವಾಗಿ ಘರ್ಜನೆಯನ್ನು ಮಾಡುತ್ತಾ, ಮಹಾರಾಜರನ್ನು ಯುದ್ಧ ಮಾಡಲು ಕರೆಯುತ್ತದೆ . ಆ ಹಂದಿ ಯು ತನ್ನ ಮುಂದೆ ಬಂದಿರುವ ಶೂರರನ್ನು ತನ್ನ ಹಲ್ಲುಗಳಿಂದ ಎತ್ತಿ ಬೀಸಾಡುತ್ತದೆ .ತನ್ನ ಸೈನಿಕರು ಸಾಯುತ್ತಿರುವುದನ್ನು ಕಂಡು ಮಹಾರಾಜರಿಗೆ ಸಿಟ್ಟು ಬರುತ್ತದೆ . ನಂತರ ತಮ್ಮ ಧನಸ್ಸನ್ನು ತೆಗೆದು ತುಂಬಾ ವೇಗವಾಗಿ ಬಾಣಗಳಿಂದ ಆಕ್ರಮಣವನ್ನು ಮಾಡುತ್ತಾರೆ .

ಮಹಾರಾಜರ ಒಂದು ಬಾಣವು ವೇಗವಾಗಿ ಹೋಗಿ ಹಂದಿಯ ಶರೀರದಲ್ಲಿ ಸಿಲುಕಿ ಕೊಳ್ಳುತ್ತದೆ . ನಂತರ ಆ ಹಂದಿ ಭೂಮಿಯ ಮೇಲೆ ಬೀಳುತ್ತದೆ . ಅವರ ಮೇಲೆ ದಾಳಿ ನಡೆಸುತ್ತಾರೆ .ನಂತರ ಹಂದಿಯನ್ನು ಕೊಲ್ಲುತ್ತಾರೆ . ಹಂದಿಯು ಸಾಯುತ್ತಿದ್ದಂತೆ , ಅದರ ಪ್ರಾಣ ಹೋಗುತ್ತದೆ . ನಂತರ ಅದು ವಿಷ್ಣು ಲೋಕಕ್ಕೆ ಹೋಗುತ್ತದೆ .ನಂತರ ಮಹಾರಾಜರ ಸೈನಿಕರು ಆ ಹಂದಿಯ ಹೆಂಡತಿಯನ್ನು ಹೊಡೆಯಲು ಹೋಗುತ್ತಾರೆ . ಆ ಹಂದಿಯ ಹೆಂಡತಿಯು ತನ್ನ ಮಕ್ಕಳ ಮುಂದೆ ನಿಲ್ಲುತ್ತದೆ .

ಮಕ್ಕಳಿಗೆ ಈ ರೀತಿಯಾಗಿ ಹೇಳುತ್ತದೆ . ಎಲ್ಲಿಯ ತನಕ ನಾನು ಹೀಗೆ ನಿಂತಿರುತ್ತೇನೆಯೋ, ಅಲ್ಲಿಯ ತನಕ ನೀವು ಬೇಗ ಓಡಿ ಹೋಗಿ .ಆ ಹಂದಿಯ ದೊಡ್ಡ ಮಗ ಹೇಳುತ್ತದೆ . ಹೇ ತಾಯಿ ಪ್ರಾಣ ಭಯದಿಂದ ನಾನು ಸಾಯುವಂತ ಸ್ಥಿತಿಯಲ್ಲಿ ನಿಮ್ಮನ್ನು ಹೇಗೆ ಬಿಟ್ಟು ಹೋಗಲಿ ಹೇಳಿ .ಒಂದು ವೇಳೆ ನಾನು ಈ ರೀತಿ ಮಾಡಿದರೆ , ನನ್ನ ಮೇಲೆ ಧಿಕ್ಕಾರ ಇರಲಿ . ನಾನು ಯುದ್ಧದಲ್ಲಿ ಶತ್ರುಗಳನ್ನು ಸೋಲಿಸುತ್ತೇನೆ .ನೀನು ನಿನ್ನ ಮಕ್ಕಳನ್ನು ಕರೆದುಕೊಂಡು ಇಲ್ಲಿಂದ ಹೋಗಿ ಬಿಡು .ನಂತರ ಆ ಹಂದಿಯ ಹೆಂಡತಿ ಹೇಳುತ್ತದೆ .

ಹೇ ನನ್ನ ಮಗನೇ ನಾನು ಮಹಾ ಪಾಪಿ. ನಿನ್ನನ್ನು ಒಂಟಿಯಾಗಿ ಬಿಟ್ಟು ಹೇಗೆ ಹೋಗಲಿ ಹೇಳು . ಇಷ್ಟರಲ್ಲಿ ಆ ರಾಜನ ಸೈನಿಕರು ಬಂದು ಆ ಹಂದಿಗಳ ಮೇಲೆ ದಾಳಿ ಮಾಡುತ್ತಾರೆ . ಆ ಹಂದಿಯ ದೊಡ್ಡ ಮಗ ಭಯಂಕರವಾದ ಯುದ್ಧವನ್ನು ಮಾಡುತ್ತಾನೆ. ಅನೇಕ ಸೈನಿಕರನ್ನು ಹೊಡೆದ ಉರುಳಿಸುತ್ತಾನೆ .ಆಗ ಮಹಾರಾಜರು ಮುಂದೆ ಬಂದು ಆ ಹಂದಿಯ ದೊಡ್ಡ ಮಗನನ್ನು ಕೂಡ ಕೊಂದು ಹಾಕುತ್ತಾರೆ .ತನ್ನ ದೊಡ್ಡ ಮಗ ಸತ್ತಿರುವುದನ್ನು ಕಂಡು , ಆ ಹಂದಿಯ ಹೆಂಡತಿಗೆ ತುಂಬಾ ಸಿಟ್ಟು ಬರುತ್ತದೆ .ನಂತರ ಭೀಕರವಾಗಿ ದಾಳಿ ನಡೆಸುತ್ತದೆ .ಇದು ಕೂಡ ಅನೇಕ ಸೈನಿಕರನ್ನು ಹೊಡೆದು ಉರುಳಿಸುತ್ತದೆ .

ಈ ಘಟನೆಯನ್ನು ಮಹಾರಾಣಿ ಸುದೇವ ಅವರು ನೋಡುತ್ತಿದ್ದರು .ಆಗ ಅವರು ಮಹಾರಾಜರಿಗೆ ಹೇಳುತ್ತಾರೆ . ಹೇ ಪ್ರಭು ಆ ಹಂದಿ ಹೆಂಡತಿಯು ನಿಮ್ಮ ಸೈನಿಕರನ್ನು ಹೊಡೆಯುತ್ತಿದೆ . ನೀವು ಮುಂದೆ ಸಾಗಿ ಅದನ್ನು ಏಕೆ ಕೊಲ್ಲುತ್ತಿಲ್ಲ . ಆಗ ಮಹಾರಾಜರು ಹೇಳುತ್ತಾರೆ. ಹೇ ಪ್ರಿಯ ಇದು ಒಂದು ಸ್ತ್ರೀ ಆಗಿದೆ .ನನ್ನ ವಚನ ಏನಿದೆ ಎಂದರೆ , ನಾನು ಸ್ತ್ರೀಯರನ್ನು ಕೊಲ್ಲುವುದಿಲ್ಲ . ಸ್ತ್ರೀಯರನ್ನು ಕೊಂದರೆ ಮಹಾ ಪಾಪ ಹಂಟುತ್ತದೆ . ಹಾಗಾಗಿ ಸ್ವತಹ ನಾನು ಆ ಹಂದಿಯ ಹೆಂಡತಿಯನ್ನು ಕೊಲ್ಲುತ್ತಿಲ್ಲ .

ಮತ್ತು ಅದನ್ನು ಕೊಲ್ಲಲು ಯಾರನ್ನು ಕಳುಹಿಸುತ್ತಿಲ್ಲ . ಸ್ತ್ರೀಯರನ್ನು ಕೊಲ್ಲಲು ನನಗೆ ತುಂಬಾ ಭಯವಾಗುತ್ತದೆ . ಈ ಮಾತನ್ನು ಹೇಳಿ ಮಹಾರಾಜರು ಸುಮ್ಮನಾಗುತ್ತಾರೆ .ನಂತರ ಮಹಾರಾಜರ ಸಿಪಾಯಿಗಳಲ್ಲಿ ಸುದರ್ಭ ಹೆಸರಿನ ಮಹಾನ್ ಸಿಪಾಯಿ ಒಬ್ಬ ಇದ್ದ . ಆತ ಆ ಹಂದಿಯ ಹೆಂಡತಿಯ ಮೇಲೆ ದಾಳಿ ನಡೆಸುತ್ತಾನೆ . ಅದನ್ನು ನೆಲದ ಮೇಲೆ ಉರುಳಿಸುತ್ತಾನೆ . ಆ ಹಂದಿಯ ಹೆಂಡತಿಯು ಮೂರ್ಚೆಗೆ ಒಳಗಾಗಿ ನೆಲದ ಮೇಲೆ ಬೀಳುತ್ತದೆ . ಆಳವಾದ ಉಸಿರನ್ನು ತೆಗೆದುಕೊಳ್ಳಲು ಶುರು ಮಾಡುತ್ತದೆ .ಯಾವಾಗ ರಾಣಿ ಸುದೇವ ಅವರು ಆ ಹಂದಿಯ ಹೆಂಡತಿ ನೆಲದ ಮೇಲೆ ಬಿದ್ದಿರುವುದನ್ನು ನೋಡುತ್ತಾರೋ ,

ಆಗ ಅದರ ಮೇಲೆ ಇವರಿಗೆ ತುಂಬಾ ಕರುಣೆ ಬರುತ್ತದೆ . ಆಗ ತಂಪಾದ ನೀರನ್ನು ಅದರ ಬಾಯಲ್ಲಿ ಹಾಕುತ್ತಾರೆ . ನಂತರ ಶರೀರದ ಮೇಲೆ ಸುರಿಯುತ್ತಾರೆ . ಇದರಿಂದ ಆ ಹಂದಿ ಎಚ್ಚರಗೊಳ್ಳುತ್ತದೆ . ಇದನ್ನು ಕಂಡು ಹಂದಿ ಸುಮ್ಮನಾಗುತ್ತದೆ . ನಂತರ ಮನುಷ್ಯರ ವಾಣಿಯಲ್ಲಿ ಮಾತನಾಡುತ್ತದೆ . ಹೇ ದೇವಿ ನನ್ನ ಮೇಲೆ ತಂಪಾದ ನೀರನ್ನು ಹಾಕಿ ಕಷ್ಟದಿಂದ ಮುಕ್ತಿ ಕೊಡಿಸಿದ್ದೀಯಾ . ನಿಮಗೆ ಕಲ್ಯಾಣವಾಗಲಿ . ಆ ಹೆಣ್ಣು ಹಂದಿಯ ಈ ಮಾತನ್ನು ಕೇಳಿದ ರಾಣಿ ಸುದೇವ ಅವರಿಗೆ ತುಂಬಾ ಅಚ್ಚರಿಯಾಗುತ್ತದೆ .

ನಂತರ ಅವರು ಯೋಚನೆ ಮಾಡುತ್ತಾ ಇಂದು ನಾನು ಕಂಡಿರುವುದು ತುಂಬಾ ವಿಚಿತ್ರವಾಗಿದೆ . ಈ ಹೆಣ್ಣು ಹಂದಿಯು ಮನುಷ್ಯನ ರೀತಿ ಸಂಸ್ಕೃತದಲ್ಲಿ ಸ್ಪಷ್ಟವಾಗಿ ಮಾತನಾಡುತ್ತಿದೆ . ನಂತರ ರಾಣಿ ಈ ರೀತಿ ಹೇಳುತ್ತಾರೆ . ಹೇ ಭದ್ರೆ ನೀನು ಯಾರು ನಿನ್ನ ವರ್ತನೆ ವಿಚಿತ್ರವಾಗಿದೆ . ಪಶುವಾದ ನಂತರವೂ ನೀನು ಮನುಷ್ಯರ ರೀತಿ ಮಾತನಾಡುತ್ತಿದ್ದೀಯಾ . ನೀನು ನಿನ್ನ ಪೂರ್ವ ಜನ್ಮದ ಬಗ್ಗೆ ನನಗೆ ತಿಳಿಸಿ ಕೊಡು . ಯಾವ ಕಾರಣದಿಂದಾಗಿ ನೀನು ಹೆಣ್ಣು ಹಂದಿಯಾಗಿ ಹುಟ್ಟಿದ್ದೀಯಾ . ಆ ಹಂದಿಯು ಹೇಳುತ್ತದೆ. ನನ್ನ ಗಂಡನು ಹಿಂದಿನ ಜನ್ಮದಲ್ಲಿ ಗುರು ಜನರಿಗೆ ಅವಮಾನವನ್ನು ಮಾಡಿದ್ದರು .

ಹಾಗಾಗಿ ಅವರಿಗೆ ಹಂದಿಯ ಜನ್ಮ ಸಿಕ್ಕಿದೆ . ನಾನು ನಿಮಗೆ ನನ್ನ ಹಿಂದಿನ ಜನ್ಮದ ಕಥೆಯನ್ನು ಹೇಳುತ್ತೇನೆ . ಹೇ ದೇವಿ ಕಳಿಂಗ ಹೆಸರಿನ ದೇಶದಲ್ಲಿ , ಶ್ರೀಪುರ ಹೆಸರಿನ ಒಂದು ಸುಂದರವಾದ ಊರು ಇತ್ತು . ಆ ಊರಿನಲ್ಲಿ ವಸುದತ್ತ ಹೆಸರಿನ ಒಬ್ಬ ವಿದ್ವಾನರು ಇದ್ದರು . ನಾನು ಅದೇ ವಸುದತ್ತರ ಬ್ರಾಹ್ಮಣರ ಪುತ್ರಿಯಾಗಿದ್ದೆ .ನನ್ನ ಹೆಸರು ಸುಕನ್ಯ ಆಗಿತ್ತು . ಆ ನಗರದಲ್ಲಿ ನನ್ನಷ್ಟು ಸುಂದರಿಯಾಗಿರುವ ಸ್ತ್ರೀ ಬೇರೆ ಯಾರು ಇರಲಿಲ್ಲ . ನನ್ನ ಸೌಂದರ್ಯ ಮತ್ತು ರೂಪದ ಅಹಂಕಾರದಲ್ಲಿ ಕುರುಡಿಯಾಗಿದ್ದೆ .

ನಾನು ಯಾವಾಗ ದೊಡ್ಡವಳು ಅದೇನೋ , ಆಗ ನನ್ನ ಸುಂದರವಾದ ರೂಪವನ್ನು ಕಂಡು ನನ್ನ ತಾಯಿಗೆ ತುಂಬಾ ಭಯ ಹುಟ್ಟಿತು . ನಂತರ ಅವರು ನನ್ನ ತಂದೆಗೆ ಹೇಳುತ್ತಾರೆ . ಹೇ ಸ್ವಾಮಿ ನಿನ್ನ ಮಗಳು ವಯಸ್ಸಿಗೆ ಬಂದಿದ್ದಾಳೆ . ಅವಳ ವಿವಾಹವನ್ನು ಮಾಡಬಹುದು ಅಲ್ಲವೇ . ಹಾಗಾಗಿ ಶೀಘ್ರವಾಗಿ ಇವಳ ಮದುವೆಯನ್ನು ಮಾಡಿಬಿಡಿ . ನಂತರ ಬ್ರಾಹ್ಮಣರು ಹೇಳುತ್ತಾರೆ . ಹೇ ಕಲ್ಯಾಣಿ ಯಾವ ಪುರುಷನು ನನ್ನ ಮಗಳನ್ನು ಮದುವೆಯಾದ ನಂತರ ನನ್ನ ಮನೆಯಲ್ಲಿ ಉಳಿದು ಕೊಳ್ಳುತ್ತಾನೋ , ಆತನಿಗೆ ಮಾತ್ರ ನನ್ನ ಮಗಳನ್ನು ಮದುವೆ ಮಾಡಿ ಕೊಡುತ್ತೇನೆ . ಸುಕನ್ಯಾ ನನಗೆ ತುಂಬಾ ಪ್ರಿಯವಾದ ಮಗಳು ಆಗಿದ್ದಾಳೆ .

ನಾನು ಆಕೆಯನ್ನ ನನ್ನ ಕಣ್ಣುಗಳಿಂದ ದೂರವಾಗಲು ಬಿಡುವುದಿಲ್ಲ . ನಂತರ ಒಂದು ದಿನ ಶಿವ ಶರ್ಮ ಹೆಸರಿನ ಯುವಕನು ನನ್ನ ತಂದೆಯ ಮನೆಗೆ ಬರುತ್ತಾನೆ . ನನ್ನ ತಂದೆಯವರು ಆತನ ಜ್ಞಾನ ಮತ್ತು ಕುಶಲತೆಯನ್ನು ನೋಡಿ , ಆತನನ್ನು ತುಂಬಾ ಮೆಚ್ಚುತ್ತಾರೆ . ನಂತರ ಆತನ ಬಳಿ ವಿವಾಹಕ್ಕಾಗಿ ಚರ್ಚೆಯನ್ನು ಮಾಡುತ್ತಾರೆ .ಮದುವೆ ಕೂಡ ಆಗುತ್ತದೆ . ನಂತರ ಅವರು ನಮ್ಮೊಡನೆ ನಮ್ಮ ಮನೆಯಲ್ಲಿ ಇರಲು ಶುರು ಮಾಡುತ್ತಾರೆ . ನನ್ನ ತಂದೆ ತಾಯಿ ನನ್ನನ್ನು ತುಂಬಾ ಮುದ್ದಾಗಿ ಬೆಳೆಸಿದ್ದರು .

ನನ್ನ ವಿವೇಕ ಶಕ್ತಿಯನ್ನು ಕಳೆದುಕೊಂಡಿದ್ದೆನು . ನಾನು ಯಾವತ್ತಿಗೂ ನನ್ನ ಗಂಡನ ಸೇವೆಯನ್ನು ಮಾಡಲಿಲ್ಲ . ಯಾವತ್ತಿಗೂ ಅವರ ಚರಣಗಳನ್ನು ಸ್ಪರ್ಶ ಮಾಡಿರಲಿಲ್ಲ . ನಾನು ತುಂಬಾ ಕ್ರೂರ ದೃಷ್ಟಿಯಿಂದ ನೋಡುತ್ತಿದ್ದೆ . ಅವರಿಗೆ ಅವಮಾನ ಮಾಡುತ್ತಿದ್ದೆ . ಅವರನ್ನು ಹೆಸರಿಡಿದು ಕರೆಯುತ್ತಿದ್ದೆ .ಅವರು ಊಟ ಮಾಡುವ ಮುನ್ನ ನಾನು ಊಟ ಮಾಡುತ್ತಿದ್ದೆ . ಗಂಡನೇ ನನಗೆ ಊಟವನ್ನು ಬಡಿಸುತ್ತಿದ್ದರು .ನಾನು ನನ್ನ ಮನಸ್ಸಿಗೆ ತಿಳಿದ ಹಾಗೆ ಎಲ್ಲಿ ಬೇಕು ಅಲ್ಲಿ ತಿರುಗಾಡುತ್ತಿದ್ದೆ .

ಮಾತು ಮಾತಿಗೂ ಗಂಡನಿಗೆ ಅವಮಾನ ಮಾಡುತ್ತಿದ್ದೆ . ಯಾವತ್ತಿಗೂ ನನ್ನ ಶರೀರವನ್ನು ಸ್ಪರ್ಶ ಮಾಡಲು ಕೂಡ ಬಿಡಲಿಲ್ಲ . ಶಿವ ಶರ್ಮ ಅವರು ತುಂಬಾ ಶಾಂತ ಸ್ವಭಾವದ ಮನುಷ್ಯರು ಆಗಿದ್ದರು .ಅನೇಕ ದಿನಗಳ ತನಕ ಅವರು ನನ್ನನ್ನು ಸಹಿಸಿಕೊಂಡರು . ಒಂದು ದಿನ ಅವರು ಅತ್ಯಂತ ದುಃಖಕ್ಕೆ ಒಳಗಾಗಿ ,ನನ್ನನ್ನು ಬಿಟ್ಟು ಹೋದರು . ನನ್ನ ಗಂಡ ಹೋಗುತ್ತಿದ್ದಂತೆ ನನ್ನ ತಂದೆಯವರು ತುಂಬಾ ದುಃಖದಿಂದ ನನ್ನ ತಾಯಿಗೆ ಈ ರೀತಿಯಾಗಿ ಹೇಳಿದರು . ಹೇ ಪ್ರಿಯೆ ನನ್ನ ಮಗಳನ್ನು ಅಳಿಯ ಬಿಟ್ಟು ಹೋದರು .

ನನ್ನ ಮಗಳು ಪಾಪಿಯಾಗಿದ್ದಾಳೆ .ಅಳಿಯ ಅಂತೂ ವಿದ್ವಾನನಾಗಿದ್ದ . ನನ್ನ ಮಗಳು ದುಷ್ಟ ಮತ್ತು ಕುಲ ನಾಶಿಣಿ ಆಗುತ್ತಾಳೆ ಎಂದು ನನಗೆ ಗೊತ್ತಿರಲಿಲ್ಲ . ನಂತರ ನನ್ನ ತಾಯಿ ಹೇಳಿದರು . ಹೇ ಸ್ವಾಮಿ ನಿಮ್ಮ ಮಗಳು ನಿಮ್ಮ ಪ್ರೀತಿಯಿಂದಲೇ ಈ ರೀತಿ ಹಾಗಿದ್ದಾಳೆ . ಆಕೆಯನ್ನು ಸರಿ ದಾರಿಗೆ ತರಲು ನೀವೇ ಏನನ್ನಾದರು ಮಾಡಬೇಕು. ತಂದೆಯ ಮನೆಯಲ್ಲಿ ಇರುವ ಹೆಣ್ಣು ಮಗಳು ದುರಾಚಾರಿ ಆಗುತ್ತಾಳೆ. ಹಾಗಾಗಿ ಕನೈಯನ್ನು ಯಾವತ್ತಿಗೂ ಮನೆಯಲ್ಲಿ ಇಟ್ಟುಕೊಳ್ಳಬಾರದು .

ಅಂಥವರನ್ನು ಗಂಡನ ಮನೆಯಲ್ಲಿ ಇರಲು ಬಿಡಬೇಕು . ನಮ್ಮ ಕನ್ಯೆ ತುಂಬಾ ದೃಷ್ಟೆ ಮತ್ತು ಪಾಪಿಣಿ ಆಗಿದ್ದಾಳೆ . ನೀವು ಈಕೆಯನ್ನು ತ್ಯಾಗ ಮಾಡಿ . ಈಕೆಯನ್ನು ಗಂಡನ ಮನೆಗೆ ಕಳುಹಿಸಿಬಿಡಿ . ಈ ರೀತಿಯ ತಾಯಿಯ ಮಾತನ್ನು ಕೇಳಿದ ನನ್ನ ತಂದೆಯವರು ತುಂಬಾ ಸಿಟ್ಟಿಗೆ ಒಳಗಾಗುತ್ತಾರೆ . ಆನಂತರ ನನಗೆ ಈ ರೀತಿಯಾಗಿ ಹೇಳುತ್ತಾರೆ . ಹೇ ದುಷ್ಟ ಹೆಣ್ಣೆ ನಮ್ಮ ಕುಲದಲ್ಲಿ ಕಳಂಕವನ್ನು ಉಂಟು ಮಾಡುವಂತಹ ದುರಾಚಾರಿಣಿ. ನಿನ್ನ ಕಾರಣದಿಂದ ಶಿವ ಶರ್ಮ ನಮ್ಮ ಎಲ್ಲರನ್ನು ಬಿಟ್ಟು ಹೋಗಿದ್ದಾನೆ .

ಹಾಗಾಗಿ ನಿನ್ನ ಗಂಡ ಎಲ್ಲಿ ಇದ್ದಾನೋ , ಅಲ್ಲಿಗೆ ನೀನು ಹೋಗಿ ಬಿಡು . ಅಥವಾ ನಿನಗೆ ಯಾವ ಸ್ಥಳ ಚೆನ್ನಾಗಿ ಕಾಣಿಸುತ್ತದೆ ಅಲ್ಲಿಗೆ ಹೋಗಿ ಬಿಡು . ನಂತರ ನಾನು ನನ್ನ ಮನೆಯನ್ನು ಬಿಟ್ಟು ಹೋದೆನು . ಆಚೆ ಹೋಗುತ್ತಿರುವಾಗ ಜನರು ನನ್ನನ್ನು ಕಂಡು ಪಾಪಿ ದುರಾಚಾರಿಣಿ ಎಂದು ಹೇಳಿದರು. ಹಾಗಾಗಿ ನನ್ನ ಗಂಡನನ್ನು ಹುಡುಕುತ್ತಾ ನಾನು ಕಾಡಿನತ್ತ ಹೋದೆನು .ನಂತರ ಒಂದು ದಿನ ಕಾಡಿನ ಗುಡಿಸಲಿನ ಹತ್ತಿರ ಮುಂದೆ ಹೋಗಿ ನಿಂತೆನು . ನಂತರ ಭಿಕ್ಷೆ ಕೇಳಲು ಶುರು ಮಾಡಿದೆ.

ಆ ಗುಡಿಸಲಿನಲ್ಲಿ ಇರುವ ಮಂಗಳ ಅನ್ನುವ ಸ್ತ್ರೀ , ನನ್ನನ್ನು ನೋಡಿ ತನ್ನ ಗಂಡನಿಗೆ ಈ ರೀತಿ ಹೇಳುತ್ತಾಳೆ. ಹೇ ಸ್ವಾಮಿ ದ್ವಾರದ ಬಳಿ ಒಬ್ಬ ದುಃಖಿತ ಮಹಿಳೆ ಭಿಕ್ಷೆಯನ್ನು ಕೇಳಲು ಬಂದಿದ್ದಾಳೆ . ಆ ಮಂಗಳನ ಗಂಡ ಶಿವ ಶರ್ಮನೆ ಆಗಿದ್ದ . ನನ್ನನ್ನು ಕಂಡು ಅವರು ಗುರುತು ಹಿಡಿದರು . ನಂತರ ತನ್ನ ಹೆಂಡತಿಗೆ ಹೇಳುತ್ತಾರೆ . ಹೇ ಪ್ರಿಯೇ ಇವಳು ನನ್ನ ಮೊದಲನೇ ಹೆಂಡತಿ ಸುಕನ್ಯಾ ಆಗಿದ್ದಾಳೆ . ಇವರು ನನಗೆ ತುಂಬಾ ಇಷ್ಟವಾಗಿದ್ದರು . ಹಾಗಾಗಿ ಇವರನ್ನು ನೀನು ಆದರ ,

ಸತ್ಕಾರ ಮಾಡು .ಮನೆಯಲ್ಲಿ ಈಕೆಗೆ ಸ್ಥಾನವನ್ನು ಕೊಡು . ನಂತರ ಮಂಗಳಾದೇವಿ ತನ್ನ ಗಂಡನ ಆಜ್ಞೆಯನ್ನು ಪಾಲಿಸುತ್ತಾ , ನನ್ನನ್ನು ಮನೆಯ ಒಳಗಡೆ ಕರೆದರು . ನನಗೆ ಧರಿಸಲು ವಸ್ತ್ರವನ್ನು ಕೊಟ್ಟಳು . ನಂತರ ಒಂದು ದಿನ ಕುಳಿತುಕೊಂಡು ಮಂಗಳಾ ದೇವಿಯ ಒಳ್ಳೆಯ ಸ್ವಭಾವ ಮತ್ತು ನನ್ನ ದುಷ್ಟ ಸ್ವಭಾವದ ಬಗ್ಗೆ ಯೋಚನೆ ಮಾಡಿದೆನು . ನಂತರ ನನಗೆ ತುಂಬಾ ದುಃಖವಾಯಿತು .ಅಧಿಕ ಚಿಂತೆ ಮಾಡಿದ ಕಾರಣ ನನ್ನ ಹೃದಯ ಒಡೆದು ಹೋಯಿತು . ಅದೇ ಕ್ಷಣ ನನ್ನ ಮೃತ್ಯು ಕೂಡ ಆಯಿತು .

ನಂತರ ಯಮನ ಎರಡೂ ದೂತರು ಆ ಸ್ಥಾನಕ್ಕೆ ಬಂದರು. ನನ್ನನ್ನು ಕರೆದುಕೊಂಡು ಯಮ ಲೋಕಕ್ಕೆ ಹೋದರು .ಅಲ್ಲಿ ಯಮ ರಾಜರು ನನ್ನ ಎಲ್ಲಾ ಲೆಕ್ಕಾಚಾರವನ್ನು ನೋಡಿದರು . ನಂತರ ಯಮ ದೂತರಿಗೆ ಹೇಳುತ್ತಾರೆ . ಈ ಪಾಪಿ ಸ್ತ್ರೀ ತನ್ನ ಗಂಡನಿಗೆ ತುಂಬಾ ಅವಮಾನಗಳನ್ನು ಮಾಡಿದ್ದಾಳೆ . ಈಕೆ ಗಂಡನಿಗೂ ಮುನ್ನವೇ ಊಟವನ್ನು ಮಾಡುತ್ತಿದ್ದಳು . ತನ್ನ ಗಂಡನನ್ನು ಹೆಸರಿಟ್ಟು ಕರೆಯುತ್ತಿದ್ದಳು . ಮನೆ ಕೆಲಸವನ್ನು ಗಂಡನ ಕೈಯಲ್ಲಿ ಮಾಡಿಸುತ್ತಿದ್ದಳು . ಹಾಗಾಗಿ ಈ ಪಾಪಿ ಸ್ತ್ರೀಯನ್ನು ನರಕಕ್ಕೆ ಹಾಕಿರಿ . ನಂತರ ಯಮ ದೂತರು ನನ್ನನ್ನು ನರಕಕ್ಕೆ ಕರೆದೊಯ್ಯುತ್ತಾರೆ .

ನಂತರ ನನ್ನನ್ನು ಸುಡುತ್ತಿರುವ ಬೆಂಕಿಯಲ್ಲಿ ಹಾಕಿದರು. ನಂತರ ನರಕದಲ್ಲಿ ಅನೇಕ ವರ್ಷ ಕಷ್ಟ ಅನುಭವಿಸಿದೆನು. ನರಕದ ಶಿಕ್ಷೆ ಅನುಭವಿಸಿದ ನಂತರ ಯಮ ರಾಜರು ನನಗೆ ಹಂದಿಯ ಜನ್ಮ ನೀಡಿದರು . ಹೇ ದೇವಿ ನಾನು ನನ್ನ ಹಿಂದಿನ ಜನ್ಮದ ಬಗ್ಗೆ ಈ ರೀತಿಯಾಗಿ ತಿಳಿಸಿದ್ದೇನೆ. ದಯವಿಟ್ಟು ನನಗೆ ಈ ಜೀವನದಿಂದ ಮುಕ್ತಿಯನ್ನು ಕೊಡಿಸಿ . ನೀವು ನಿಮ್ಮ ಗಂಡನ ಸೇವೆಯನ್ನು ಮಾಡಿದ್ದೀರಾ . ಹಾಗಾಗಿ ನಿಮ್ಮ ಸ್ವಲ್ಪ ಪುಣ್ಯವನ್ನು ನಿನಗೆ ನೀಡಿರಿ . ನಂತರ ರಾಣಿ ಸುದೇವ ಮಹಾರಾಜರಿಗೆ ಹೇಳುತ್ತಾರೆ . ಹೇ ಸ್ವಾಮಿ ನಾನು ಈಗ ಏನು ಮಾಡಲಿ .ನೀವು ಆಜ್ಞೆ ಕೊಟ್ಟಂತೆ ನಾನು ಮಾಡುತ್ತೇನೆ .

ಮಹಾರಾಜ ಈಶ್ವಾಕು ಅವರು ಹೇಳುತ್ತಾರೆ . ಹೇ ಪ್ರಿಯೆ ಈಕೆ ತುಂಬಾ ದುಃಖವನ್ನು ಪಡೆದಿದ್ದಾಳೆ. ನೀನು ನಿನ್ನ ಪುಣ್ಯದಿಂದ ಈಕೆಯ ಉದ್ದಾರವನ್ನು ಮಾಡು . ಮಹಾರಾಜರ ಆಜ್ಞೆಯನ್ನು ಪಡೆದುಕೊಂಡು, ರಾಣಿ ಸುದೇವ ಅವರು ಆ ಸುವರ್ಣಿಗೆ ಹೇಳುತ್ತಾರೆ. ಹೇ ದೇವಿ ನಾನು ನನ್ನ ಒಂದು ವರ್ಷದ ಪುಣ್ಯವನ್ನು ನಿನಗೆ ನೀಡುತ್ತೇನೆ . ರಾಣಿಯ ಈ ಮಾತನ್ನು ಕೇಳುತ್ತಿದ್ದಂತೆ ,ಆ ಹೆಣ್ಣು ಹಂದಿಯ ಪ್ರಾಣ ಹೋಗಿಬಿಡುತ್ತದೆ . ನಂತರ ಆ ಶರೀರದಿಂದ ಒಬ್ಬ ದಿವ್ಯ ಸ್ತ್ರೀ ಹುಟ್ಟುತ್ತಾಳೆ .

ನಂತರ ಆಕೆ ಮಹಾರಾಜ ಮತ್ತು ಮಹಾರಾಣಿ ಅವರಿಗೆ ನಮಸ್ಕಾರ ಮಾಡಿ, ವಿಷ್ಣು ಲೋಕಕ್ಕೆ ಹೋಗುತ್ತಾಳೆ . ಭಗವಂತನಾದ ಶ್ರೀ ಕೃಷ್ಣರು ಹೇಳುತ್ತಾರೆ . ಹೇ ಸತ್ಯಭಾಮ ಈ ಪ್ರಕಾರದಲ್ಲಿ ನಾನು ನಿನಗೆ ಈ ಮಹಾನ್ ಕತೆಯನ್ನು ಹೇಳಿದ್ದೇನೆ, ನಿನಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಬಹುದು . ದೇವಿ ಸತ್ಯಭಾಮ ಈ ರೀತಿ ಹೇಳುತ್ತಾರೆ . ಹೇ ಸ್ವಾಮಿ ಇಂದು ನನಗೆ ನೀವು ತುಂಬಾ ಪವಿತ್ರವಾದ ಕಥೆಯನ್ನು ಹೇಳಿದ್ದೀರಾ . ನನ್ನ ಎಲ್ಲಾ ಪ್ರಶ್ನೆಗಳಿಗೂ ಸಹ ಉತ್ತರವನ್ನು ಹೇಳಿದ್ದೀರಾ .

Leave A Reply

Your email address will not be published.