ಘಂಟೆ ಅದ್ಭುತ ಮಾಹಿತಿ

ನಾವು ಈ ಲೇಖನದಲ್ಲಿ ಘಂಟೆಯ ಅದ್ಭುತ ಮಾಹಿತಿ ಏನು ಎಂಬುದನ್ನು ತಿಳಿದುಕೊಳ್ಳೋಣ. ದೇವರ ಪೂಜಾ ಸಂದರ್ಭದಲ್ಲಿ ತುಂಬಾ ತರಹದ ಘಂಟೆ ಉಪಯೊಗಿಸುತ್ತಾರೆ!

ಅಂಜನೇಯ ಸ್ವಾಮಿಯ ಗಂಟೆ… ಗರುಡ ದೇವರ ಘಂಟೆ…. ಬಸವ ಇರುವ ಗಂಟೆ ಇತ್ಯಾದಿ… ಆಂಜನೇಯ ಘಂಟೆ :
ಆಂಜನೇಯ ಸ್ವಾಮಿಯ ಘಂಟೆ ಸರ್ವಶ್ರೇಷ್ಠ….

ಯಾರು ಆಂಜನೇಯ ಸ್ವಾಮಿ ಘಂಟೆ ಉಪಯೋಗಿಸುತ್ತಾರೋ , ಆ ಮನೆಯಲ್ಲಿ ಎಲ್ಲರೂ ಸನ್ಮಾರ್ಗದಲ್ಲಿ ನಡೆಯುತ್ತಾರೆ… ಆ ಮನೆಯ ಮೇಲೆ ಯಾವ ದುಷ್ಟ ಶಕ್ತಿಯೂ ಕೆಲಸ ಮಾಡುವುದಿಲ್ಲ …

ಮಾಟ ಮಂತ್ರ ಆ ಮನೆಗೆ ತಟ್ಟೋ ದಿಲ್ಲ ಮನೆಯ ಯಜಮಾನರಿಗೆ ತುಂಬಾ ಧೈರ್ಯ ಮತ್ತು ಬಲ ಇದ್ದು ಆಂಜನೇಯ ಸ್ವಾಮಿಯ ಅನುಗ್ರಹ ಯಾವಾಗಲೂ ಇರುತ್ತದೆ

ಪೂಜೆಯ ಕೊನೆಯಲ್ಲಿ ಆಂಜನೇಯ ಸ್ವಾಮಿಗೆ ಗಂಧ ಇಟ್ಟು, ರಾಮದೇವರು ಅಥವಾ ವಿಷ್ಣು ದೇವರ ಪ್ರಸಾದದ ತುಳಿಸಿಯನ್ನು ಆಂಜನೇಯ ಸ್ವಾಮಿಯ ತಲೆಯ ಮೇಲೆ ಇಡಬೇಕು….

ಇದರಿಂದ ಆಂಜನೇಯ ಸ್ವಾಮಿಯ ಪೂರ್ಣ ಅನುಗ್ರಹವಾಗಿ ಸುಖ ಶಾಂತಿ ನೆಲೆಸುತ್ತದೆ …. ಗರುಡ ದೇವರ ಘಂಟೆ : ಗರುಡ ದೇವರ ಘಂಟೆಯನ್ನು ಮಾಂತ್ರಿಕರು , ಶಕ್ತಿ ದೇವತೆಗಳ ಆರಾಧಕರು, ದುಷ್ಟ ಶಕ್ತಿಗಳ ಶಮನಕ್ಕೆ ಹೆಚ್ಚು ಉಪಯೋಗಿಸುತ್ತಾರೆ….. ಸುದರ್ಶನ ಚಕ್ರಗಳ ಪೂಜಿಗೆ ಬಳಸುತ್ತಾರೆ….

ಈ ಘಂಟೆಯನ್ನು ಉಪಯೋಗಿಸುವುದರಿಂದ ಮಾಟ ಮಂತ್ರ ತಟ್ಟುವುದಿಲ್ಲ, ದುಷ್ಟ ಶಕ್ತಿ ಇರುವುದಿಲ್ಲ….

ದೇವರ ಘಂಟೆ ಬಾರಿಸುವಾಗ,ದೇವರ ಪಾದ ಹಿಡಿದು ಬಾರಿಸಬೇಕು…ತಲೆಯನ್ನು ಹಿಡಿದು ಮುಟ್ಟಿ ಬಾರಿಸಬಾರದು
ಪಾದವೇ ಗತಿ ,ನಮ್ಮ ರಕ್ಷಿಸುವ ತನಕ ಪಾದ ಬಿಡುವುದಿಲ್ಲ ಎಂದರ್ಥ…ಬಸವ ಇರುವ ಘಂಟೆ :

ಬಸವ ದೇವರ ಘಂಟೆ ಶೈವ ಪೂಜಾ ಪದ್ಧತಿಯಲ್ಲಿ ಬರುವುದು… ಶೈವರು ಇದನ್ನು ಅನುಸರಿಸುವರು ಮನೆಯಲ್ಲಿ ಸುಖ ಶಾಂತಿ,ಸಮೃದ್ಧಿ ನೆಲೆಸಿರುತ್ತದೆ… ಶಿವ ಪೂಜೆಗೆ ನಂದಿ ವಾಹನದ ಫಂಟೆಯನ್ನು ಉಪಯೋಗಿಸಿದರೆ ಸಾಕ್ಷಾತ್ ಶಿವನ ಕೃಪಾಕಟಾಕ್ಷ ದೊರೆಯುವುದು ಎಂದು ಶೈವ ಪದ್ಧತಿಯಲ್ಲಿ ತಿಳಿಸಿದ್ದಾರೆ…

ಮುಕ್ಕಾದ ಸರಿಯಾಗಿ ನಾದವಿಲ್ಲದ, ಹಾಳಾದ, ಶುದ್ಧವಿಲ್ಲದ, ಘಂಟೆಯನ್ನು ಬಳಸಬಾರದು ಇದು ಮನೆಗೆ ಬಡತನ ಮತ್ತು ದಾರಿದ್ರ್ಯವನ್ನು ತರುತ್ತದೆ …

Leave a Comment