ಗರ್ಭಿಣಿ ಸ್ತ್ರೀಯರು ಗಮನಿಸಬೇಕಾದ

ನಮಸ್ಕಾರ ಸ್ನೇಹಿತರೇ ಗರ್ಭಿಣಿ ಸ್ತ್ರೀಯರು ಗಮನಿಸಬೇಕಾದ ಮುಖ್ಯ ವಿಷಯಗಳು #ಗರ್ಭಾವಸ್ಥೆ ಮಹಿಳೆಯರ ಜೀವನದಲ್ಲಿ ಬಹು ಮುಖ್ಯವಾದ ಕಾಲಘಟ್ಟ ಪ್ರತಿ ಮಹಿಳೆಯು ಸುರಕ್ಷಿತ ಹಾಗೂ ಆರೋಗ್ಯ ಯುತ ಹೆರಿಗೆ ಬಯಸುತ್ತಾಳೆ ಸ್ವಲ್ಪ ಎಚ್ಚರ ತಪ್ಪಿದರೂ ಇದರಿಂದ ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರುವುದು ಖಚಿತ ನಿಮಗೆ ಗೊತ್ತಿರಬಹುದು ಅಪೌಷ್ಟಿಕತೆಯ ಕಾರಣದಿಂದ

ಬಹುತೇಕ ಮಕ್ಕಳು ಸಾವನಕುತ್ತಿದ್ದಾರೆ ಹಾಗಾಗಿ ಗರ್ಭಾವಸ್ಥೆಯ ಸಮಯದಲ್ಲಿ ಯಾವೆಲ್ಲ ಆರೈಕೆಯನ್ನು ಮಾಡಬೇಕು ಎಂಬುದರ ಬಗ್ಗೆ ನೋಡೋಣ ಬನ್ನಿ,ದೀರ್ಘ ಸಮಯದವರೆಗೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು ಅಥವಾ ನಿಲ್ಲುವುದು ಗರ್ಭಿಣಿ ಸ್ತ್ರೀಯರಿಗೆ ಆರೋಗ್ಯಕಾರಿ ಅಲ್ಲ ಅದು ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಿಸುತ್ತದೆ,

ಮನೆಯಲ್ಲಿರುವ ಪುಟ್ಟ ಮಕ್ಕಳಿಗೆ ಒಂದು ರೀತಿಯ ಆಹಾರ ಪದ್ಧತಿ ಇದ್ದರೆ ದೊಡ್ಡವರಿಗೆ ಇನ್ನೊಂದು ರೀತಿಯ ಪದ್ಧತಿ ಇರುತ್ತದೆ ವಯಸ್ಸಾದವರಿಗೆ ಮತ್ತೊಂದು ರೀತಿ ಇದ್ದರೆ ಅದೇ ರೀತಿ ಗರ್ಭಿಣಿ ಸೀರು ಕೂಡ ಒಂದು ರೀತಿಯ ವಿಶೇಷವಾದ ಆಹಾರ ಪದ್ಧತಿ ಇರಬೇಕು ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ

ಹೀಗಾಗಿ ಗರ್ಭಿಣಿ ಮಹಿಳೆಯರು ತಮ್ಮ ಗರ್ಭಾವಸ್ಥೆಯ ಸಮಯದಲ್ಲಿ ಕೇವಲ ಹೆಚ್ಚಾಗಿ ನೀರು ಕುಡಿಯುವುದು ಮಾತ್ರವಲ್ಲದೆ ಇನ್ನಿತರ ಆರೋಗ್ಯಕರವಾದ ಮನೆಯಲ್ಲಿ ತಯಾರಿಸಿದ ಪಾನೀಯಗಳನ್ನು ಸೇವನೆ ಮಾಡಬೇಕು # ಹಣ್ಣುಗಳಲ್ಲಿ ನಿಮಗೆ ಗೊತ್ತಿರುವ ಹಾಗೆ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಗುಣಗಳನ್ನು ಹೊಂದಿರುತ್ತವೆ ಯಾವುದೇ ಬಗೆಯ ಹಣ್ಣಿನ ರಸವನ್ನು ತೆಗೆದುಕೊಂಡರೂ

ಕೂಡ ವಿಟಮಿನ್ ಸಿ ಅಂಶ ಇದ್ದೇ ಇರುತ್ತದೆ ಜೊತೆಗೆ ಆಂಟಿ ಆಕ್ಸಿಡೆಂಟ್ ಅಂಶಗಳು ಕಂಡುಬರುತ್ತವೆ ಇದು ಮಗುವಿನ ದೇಹಕ್ಕೆ ಅಗತ್ಯವಾಗಿ ಬೇಕಾದ ಪೌಷ್ಟಿಕಾಂಶ ಸತ್ವಗಳುನ್ನು ನೀಡುವ ಜೊತೆಗೆ ಮಗುವಿನ ದೈಹಿಕ ಬೆಳವಣಿಗೆಯಲ್ಲಿ ಕೂಡ ಅನುಕೂಲವಾಗಿ ಕೆಲಸ ಮಾಡುತ್ತದೆ ಯಾವುದೇ ಕಾರಣಕ್ಕೂ ಪ್ಯಾಕ್ ಮಾಡಿದ ಹಣ್ಣಿನ ರಸಗಳನ್ನು ಸೇವನೆ ಮಾಡಬೇಡಿ ಇವುಗಳಲ್ಲಿ ಹಾನಿಕಾರಕ ಫ್ಲೇವರಗಳು

ಮತ್ತು ಸಕ್ಕರೆ ಅಂಶ ಅಧಿಕವಾಗಿರುತ್ತದೆ ಪ್ರತಿಯೊಬ್ಬರಿಗೂ ಬೆಳಿಗ್ಗೆ ಎದ್ದು ಬೆಡ್ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸವಿರುತ್ತದೆ ಆದರೆ ಮಹಿಳೆಯರು ಗರ್ಭಾವಸ್ಥೆಗೆ ತಲುಪಿದ ಸಂದರ್ಭದಲ್ಲಿ ಈ ಅಭ್ಯಾಸಗಳನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕು ಬೆಳಗಿನ ಸಮಯದಲ್ಲಿ ಕೆಪಿನ ಅಂಶಗಳನ್ನು ದೇಹಕ್ಕೆ ಸೇರಿಸುವ ಬದಲು ಆರೋಗ್ಯಕರವಾದ ಪುದಿನ ಚಹಾ ಕುಡಿಯಬಹುದು

ಇವುಗಳಿಂದ ದೇಹಕ್ಕೆ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟ್ ಅಂಶಗಳು ಸಿಗುತ್ತವೆ ಸಾಧ್ಯವಾದಷ್ಟು ನಿಮ್ಮ ಆಹಾರ ಪದ್ಧತಿಯಲ್ಲಿ ಕ್ಯಾರೆಟ್ ಪಾಲಕ್ ಸೊಪ್ಪು ಹಸಿರು ಎಲೆ ತರಕಾರಿಗಳು ಇತ್ಯಾದಿಗಳನ್ನು ಸೇವನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ ಇದು ನಿಮ್ಮ ದೇಹಕ್ಕೆ ಆರೋಗ್ಯಕರ ಪ್ರಭಾವವನ್ನು ಒದಗಿಸುತ್ತದೆ # ಇದರ ಜೊತೆಗೆ ಕ್ಯಾರೆಟ್ ಬೀಟ್ರೂಟ್ ಸೌತೆಕಾಯಿ ಇತ್ಯಾದಿಗಳಿಂದ

ರಾಸ ತಯಾರಿಸಿಕೊಂಡು ಕುಡಿಯಿರಿ ಯಾಕೆ ಅಂದರೆ ಇವುಗಳಲ್ಲಿ ಬೀಟಾ ಕ್ಯಾರೋಟಿನ್ ಅಪಾರ ಪ್ರಮಾಣದಲ್ಲಿ ಸಿಗುವುದರಿಂದ ಮಗುವಿನ ಅಂಗಾಂಗಗಳ ಬೆಳವಣಿಗೆಗೆ ಕಣ್ಣಿನ ದೃಷ್ಟಿಯನ್ನು ಹೆಚ್ಚು ಮಾಡುವಲ್ಲಿ ಮತ್ತು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇವುಗಳು ಪ್ರಮುಖವಾಗಿ ಕೆಲಸ ಮಾಡುತ್ತದೆ ಸೌತೆಕಾಯಿ ನಿಮ್ಮ ದೇಹಕ್ಕೆ ನೀರಿನ

ಅಂಶವನ್ನು ಒದಗಿಸಿದರೆ ಬೀಟ್ರೂಟ್ ಕಬ್ಬಿಣದ ಅಂಶವನ್ನು ಹೆಚ್ಚಾಗಿ ನೀಡುತ್ತದೆ ಮತ್ತು ಇದು ಬೆಳವಣಿಗೆಯಾಗುತ್ತಿರುವ ಮಗುವಿಗೆ ತುಂಬಾ ಅವಶ್ಯಕ ಗರ್ಭಾವಸ್ಥೆಯ ಮಹಿಳೆಯರು ಕೆಟ್ಟ ಆಲೋಚನೆಯಿಂದ ನಕಾರಾತ್ಮಕ ವಾತಾವರಣ ಅಥವಾ ನೆಗೆಟಿವ್ ಜನರಿಂದ ಆದಷ್ಟು ದೂರ ಇರಬೇಕು ಆ ಸಮಯದಲ್ಲಿ ಆದಷ್ಟು ಖುಷಿಯಾಗಿರಿ ಯಾವುದೇ ರೀತಿಯ ಲೋಡ್ ಆಗುವ ಕೆಲಸಗಳನ್ನು ಮಾಡಲೇಬಾರದು ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment