ಗೆಲುವಿನ ದಾರಿ !

ಗೆಲುವಿಗೆ ದಾರಿ ಯಾವುದು ಎಂದರೆ ಚಾಣಾಕ್ಯ ನೀತಿ. ಚಾಣಾಕ್ಯರು ಹೇಳಿರುವ ಸೂಕ್ಷ್ಮ ವಿಚಾರಗಳು. ನಮ್ಮ ಬದುಕನ್ನ ರೂಪಿಸಿಕೊಳ್ಳುವುದು ಹೇಗೆ? ನಾವು ಬದುಕನ್ನ ರೂಪಿಸಿಕೊಳ್ಳಬೇಕೆಂದರೆ ನಾವಿಕನಲ್ಲಿರುವ ಗುಣಗಳನ್ನ ಕಲಿಯಬೇಕು. ಆ ನಾವಿಕನ ಗುಣಗಳು ಯಾವುವು ಎಂಬುದನ್ನ ತಿಳಿಸಿಕೊಡುತ್ತೇವೆ. ಗೆಲುವಿನ ನಿರೀಕ್ಷೆಯಲ್ಲಿರುವವನು ಮಾತುಬಲ್ಲ ಮಹಾಶಯನ ಹಿಂದೆ ಕೋತಿಯಂತೆ ಇರಬೇಕು, ಆಗ ಮಾತ್ರ ಗೆಲುವಿನ ಹಾದಿ ನಡೆಯಲು ಸುಲಭವಾಗುತ್ತದೆ.

ಅತಿಗಿಂತ ಹಿತ ಒಳ್ಳೆಯದು. ಅತಿಯಾದ ಆಲೋಚನೆ ಇಟ್ಟುಕೊಳ್ಳದೇ ಹಿತವಾಗಿ ಸಣ್ಣ ಸಣ್ಣ ಆಲೋಚನೆಗಳ ಮೇಲೆ ಗೆಲುವನ್ನ ಸಾಧಿಸಬೇಕು. ಗೆಲ್ಲಲು ಮತ್ತು ಗುರಿಯನ್ನ ತಲುಪಲು ಎಂತಹ ಸಮಸ್ಯೆಗಳಿಂದ ದೂರವಿರಬೇಕು ಈ ಎಲ್ಲದರ ಮಾಹಿತಿಯನ್ನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮನುಷ್ಯನು ಸಮಸ್ಯೆಯಿಂದ ದೂರವಿರಬೇಕೆಂದರೆ ನಾವಿಕನ ಈ ಗುಣಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ. ನಮ್ಮ ಜೀವನ ಸರಾಗವಾಗಿ ಸಾಗುತ್ತದೆ

ಎಂದು ಹೇಳುತ್ತಾರೆ ಆಚಾರ್ಯ ಚಾಣಾಕ್ಯರು. ನಾವಿಕ ಮತ್ತು ನಮ್ಮ ಬದುಕಿಗೆ ಸುಂದರ ಹೋಲಿಕೆ ಇದೆ. ಏನೆಂದರೆ ಹಡಗಿನಲ್ಲಿ ಸಣ್ಣ ಸಮಸ್ಯೆ ಇರಲಿ, ದೊಡ್ಡ ಸಮಸ್ಯೆ ಇರಲಿ ಅದನ್ನು ಅವನು ಕಡೆಗಣಿಸುವುದಿಲ್ಲ. ಸಮಸ್ಯೆ ಚಿಕ್ಕದಿದ್ದರೂ ಅಥವಾ ದೊಡ್ಡದಿದ್ದರೂ ಅದನ್ನು ಅತೀ ಶೀಘ್ರದಲ್ಲಿ ಬಗೆಹರಿಸುತ್ತಾನೆ. ಏಕೆಂದರೆ ಆ ಸಮಸ್ಯೆ ಯಾವಾಗ ಬೇಕಾದರೂ ದೊಡ್ಡದಾಗಬಹುದು. ತಾನು ಮಧ್ಯೆ ಸಮುದ್ರದಲ್ಲಿದ್ದಾಗ ಸಮಸ್ಯೆ ಉದ್ಭವಿಸಿ ಹಡಗು ಮುಳುಗಿ ಅವನ ಜೀವನಕ್ಕೆ ಕುತ್ತು ತರಬಹುದು.

ನಾವಿಕನ ಈ ಗುಣವನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಣ್ಣ ಪುಟ್ಟ ಕಾಯಿಲೆಗಳಿರಲಿ, ಯಾವುದೇ ಹಣದ ಸಮಸ್ಯೆ ಇರಲಿ ತಪ್ಪು ನಡೆಯುತ್ತಿದೆ ಎಂದಾಗಲೇ ಹುಷಾರಾಗಿರಬೇಕು. ಆ ಸಮಯಕ್ಕೆ ಉಪಚಾರಗಳನ್ನ ಮಾಡಿ ಮುಗಿಸಬೇಕು. ಇಲ್ಲವಾದ್ದಲ್ಲಿ ನಮ್ಮ ಜೀವನದ ಸಮಸ್ಯೆ ಸಣ್ಣದಿರಲಿ ಅಥವಾ ದೊಡ್ಡದಿರಲಿ ಅದನ್ನ ಆ ಕ್ಷಣ ಮಾತ್ರದಲ್ಲಿ ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೇ ನಮ್ಮ ಜೀವನ ಯಾವಾಗ ಮುಳುಗುತ್ತದೆಯೋ ಗೊತ್ತಿರುವುದಿಲ್ಲ. ನಮ್ಮ ಜೀವನ ಅಷ್ಟೇ ಅಲ್ಲ ನಮ್ಮನ್ನ ನಂಬಿಕೊಂಡಿರುವ ಕುಟುಂಬಸ್ಥರು ಮುಳುಗಿ ಹೋಗುತ್ತಾರೆ. ಎಚ್ಚರವಿರಲಿ ವಿಚಾರ ಚಿಕ್ಕದಿದ್ದರೂ ನಾವು ಕಲಿಯಬೇಕಾದ ಮಾಹಿತಿ ಇದಾಗಿದೆ.

Leave a Comment