ಹಣದ ಸಮಸ್ಯೆ ಬರಬಾರದೆಂದರೆ

0

ನಾವು ಈ ಲೇಖನದಲ್ಲಿ ಹಣದ ಸಮಸ್ಯೆ ಬರ ಬಾರದಂತೆ ನೋಡಿಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ.ಹಣದ ಸಮಸ್ಯೆ ಬರಬಾರದು ಎಂದರೆ ,ಈ ಅಭ್ಯಾಸಗಳನ್ನು ಈಗಲೇ ಬಿಟ್ಟುಬಿಡಿ.
ಈಗಿನ ಯುವಕರಿಗೆ ಏನು ಗೊತ್ತು ದುಡಿಮೆಯ ಬೆಲೆ . ಕಷ್ಟಪಟ್ಟು ತಂದೆ ತಾಯಿ ಸಂಪಾದಿಸಿದ ಹಣ ಮಕ್ಕಳು ನೀರಿನಂತೆ ಕ ಖರ್ಚು ಮಾಡುತ್ತಾರೆ.

ಯಾವುದಕ್ಕೂ ಇತಿಮಿತಿ ಇರುವುದಿಲ್ಲ ಹೊರಗಿನ ಆಹಾರ ಸೇವಿಸುವುದು, ಹುಡುಗಿಯರ ಜೊತೆಯಲ್ಲಿ ಅಥವಾ ಹುಡುಗರನ್ನ ಸುತ್ತಾಡಿ ಸುವುದು ಇದರಲ್ಲೇ ಕಾಲ ಕರೆಯುತ್ತಾರೆ. ಹಣ ಖರ್ಚು ಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ
ಅಗತ್ಯ ಇರುವ ಕಡೆ ಮಾತ್ರ ಹಣವನ್ನು ಖರ್ಚು ಮಾಡಿ. ಈಗಿನ ನವ ಯುವತಿಯರು ಅಥವಾ ಹುಡುಗಿಯರು ತಮ್ಮ ಮತ್ತು ಮಹಿಳೆಯರು ಮೇಕಪ್ ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ.

ಅವರು ಒಂದು ದಿನ ಉಪವಾಸ ಇರಬಹುದು , ಆದರೆ ಮೇಕಪ್ ಇಲ್ಲದೆ ಇರಲು ಕಷ್ಟ ಪಡುತ್ತಾರೆ. ಮೇಕಪ್ ಗೆ ಬೇಕಾಗುವಂತಹ ಹಲವಾರು ರೀತಿಯ ವಸ್ತುಗಳನ್ನು ಖರೀದಿ ಮಾಡುವುದಲ್ಲದೆ ತಮ್ಮ ತ್ವಚೆಯನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ. ಕೆಲವು ಪುರುಷರಿಗೆ ಧೂಮಪಾನ ಮದ್ಯಪಾನ ಚಟ ಇರುತ್ತದೆ ಇದರಲ್ಲೇ ಹಣ ನಷ್ಟ ಮಾಡುತ್ತಾರೆ. ಅದರ ಬದಲಿಗೆ ಅವರು ಒಳ್ಳೆಯ ಹಸಿರು ತರಕಾರಿ ಹಣ್ಣುಗಳನ್ನು ಸೇವಿಸಿ ಆರೋಗ್ಯಕರವಾಗಿರಬಹುದು .

ಆದರೆ ಒಳ್ಳೆಯ ಸಲಹೆ ಯಾರಿಗೂ ಇಷ್ಟವಾಗುವುದಿಲ್ಲ. ಅವರ ಮನಸ್ಸಿಗೆ ಬಂದಂತೆ ಮಾಡಿ ಆರೋಗ್ಯ ಹಾಗೂ ಕಷ್ಟಪಟ್ಟು ದುಡಿದ ಹಣ ಎರಡು ನ್ನೂ ನಷ್ಟ ಮಾಡಿಕೊಳ್ಳುತ್ತಾರೆ. ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತದ ನಂತರ ನಿದ್ರೆ ಮಾಡಬಾರದು. ಈ ಸಮಯದಲ್ಲಿ ಮನೆಯಲ್ಲಿ ಸ್ವಚ್ಛತೆ ಅಂದರೆ ಪೊರಕೆ ಒಡೆಯುವುದನ್ನು ಕೂಡ ಮಾಡಬಾರದು.

ಹೀಗೆ ಮಾಡುವುದರಿಂದ ಸಂಪತ್ತು ನಷ್ಟವಾಗುತ್ತದೆ . ಮತ್ತು ಎಂದು ಹೇಳಲಾಗಿದೆ. ಎಷ್ಟೋ ಬಾರಿ ಆಹಾರ ಸೇವಿಸಿದ ನಂತರ ಕೊಳಕು ಪಾತ್ರೆಗಳನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಇಡುವುದು ಅಭ್ಯಾಸ ಆಗಿರುತ್ತದೆ. ಅಲ್ಲದೆ ರಾತ್ರಿಯ ಕೊಳಕು ಪಾತ್ರೆಗಳನ್ನು ಬೆಳಿಗ್ಗೆ ತೊಳೆಯುತ್ತಾರೆ. ಇದು ಸರಿಯಲ್ಲ .ಹೀಗೆ ಮಾಡುವುದರಿಂದ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ ಆದ್ದರಿಂದ ಕೊಳಕು ಪಾತ್ರೆಗಳನ್ನು ರಾತ್ರಿಯ ವೇಳೆ ತೊಳೆಯಿರಿ.

ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಿ . ಮನೆಯಲ್ಲಿ ಎಂದಿಗೂ ಜೇಡರ ಬಲೆ ಇರಬಾರದು . ಇವುಗಳು ಮನೆಯಲ್ಲಿ ಇರುವುದರಿಂದ ಕುಟುಂಬದ ಚಿಂತೆ , ಗೊಂದಲ, ಹಣಕಾಸಿನ ಸಮಸ್ಯೆಗಳು ಉಂಟಾಗುತ್ತದೆ. ಅನೇಕ ಜನರು ಪೊರಕೆಯನ್ನು ದಾನ ಮಾಡುತ್ತಾರೆ. ಪೊರಕೆ ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗಿದೆ. ಏಕೆಂದರೆ ಅದನ್ನು ದಾನ ಮಾಡುವುದರಿಂದ ಮನೆಯಲ್ಲಿ ಠೇವಣಿ ಇಟ್ಟ ಹಣ ಕೊನೆಗೊಳ್ಳುತ್ತದೆ .

ಹಾಗಾಗಿ ಈ ತಪ್ಪನ್ನು ಎಂದಿಗೂ ಮಾಡಬೇಡಿ. ಚಾಕು ಗಳು ಮತ್ತು ಕತ್ತರಿ ಮುಂತಾದ ಅರಿತವಾದ ವಸ್ತುಗಳನ್ನು ಯಾರಿಗೂ ಕೂಡ ಉಪಯೋಗಿಸಲು ಕೊಡಬೇಡಿ ಹಾಗೆ ಮಾಡುವುದರಿಂದ ನಿಮ್ಮ ಅದೃಷ್ಟವೂ , ಆರ್ಥಿಕ ಸಮಸ್ಯೆ ಕುಟುಂಬದ ಸದಸ್ಯರ ನಡುವಿನ ಪರಸ್ಪರ ಸಂಬಂಧವು ಕೊನೆ ಗೊಳ್ಳಲು ಪ್ರಾರಂಭಿಸುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಇವುಗಳನ್ನು ಉಪಯೋಗಿಸಲು ಕೊಡಬೇಡಿ. ಹೀಗೆ ನಾವು ಹೇಳಿರುವ ಪ್ರಕಾರ ನೀವು ಮಾಡುತ್ತಾ ಬಂದರೆ ನಿಮಗೆ ಯಾವುದೇ ರೀತಿಯ ಹಣದ ಸಮಸ್ಯೆಗಳು ಎಂದಿಗೂ ಬರುವದಿಲ್ಲ. ಎಂದು ಹೇಳಲಾಗಿದೆ.

Leave A Reply

Your email address will not be published.