ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಆಗುವ ಪ್ರಯೋಜನಗಳ

0

ನಾವು ಈ ಲೇಖನದಲ್ಲಿ ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ . ಅವುಗಳು ಯಾವುವು ಎಂಬುದನ್ನು ಈ ಕೆಳಗೆ ಹೇಳಲಾಗಿದೆ. 1 ನವಿಲು ಗರಿಯನ್ನು ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗಿ ,ನಕಾರಾತ್ಮಕ ಶಕ್ತಿ ಸಂಚಯನ ಆಗುವುದು . 2 ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆಗುತ್ತಿದ್ದರೆ, ಅವರ ಬ್ಯಾಗಿನಲ್ಲಿ ಅಥವಾ ಅವರು ಓದುವ ಟೇಬಲ್ ನಲ್ಲಿ ಬಿಳಿ ನವಿಲು ಗರಿಯನ್ನು ಇಟ್ಟರೆ ಅದರ ಪ್ರಭಾವದಿಂದ ಚೆನ್ನಾಗಿ ಅಭ್ಯಾಸವನ್ನು ಮಾಡುವ ಮನಸ್ಸಾಗುತ್ತದೆ .

3 ಯಾರ ಮನೆಯಲ್ಲಿ ಎರಡು ನವಿಲು ಗರಿಗಳನ್ನು ತಂದಿರುತ್ತಾರೋ ಅವರ ಮನೆಯಲ್ಲಿ ಜಗಳ ಕಲಹ ಗಳಿಲ್ಲದೆ, ಎಲ್ಲರೂ ಒಂದಾಗಿ ಕೂಡಿ ಬಾಳುತ್ತಾರೆ . 4 ಯಾವ ವ್ಯಕ್ತಿ ತನ್ನ ಬಳಿ ನವಿಲು ಗರಿಯನ್ನು ಇಟ್ಟುಕೊಳ್ಳುತ್ತಾನೋ ಅವನ ಹತ್ತಿರ ದುಷ್ಟ ಶಕ್ತಿಗಳು ಸುಳಿಯುವುದಿಲ್ಲ .

5 ಜೀವನದಲ್ಲಿ ಕಷ್ಟಗಳು ಮತ್ತು ತೊಂದರೆಗಳು ಬಂದರೆ ಮನೆಯ ಕೋಣೆ ಅಲ್ಲಾಗಲಿ ಅಥವಾ ಅಗ್ನಿ ಕೋಣೆ ಅಲ್ಲಾಗಲಿ ನವಿಲು ಗರಿಯನ್ನು ಇಟ್ಟರೆ ಅದು ಸರಿಯಾಗುತ್ತದೆ . 6 ಮನೆಯಲ್ಲೂ ಮೂರು ನವಿಲು ಗರಿಗಳನ್ನು ಇಟ್ಟು ಅದರ ಕೆಳಗೆ ಗಣೇಶನ ಪ್ರತಿಮೆಗಳನ್ನು ಸ್ಥಾಪನೆ ಮಾಡಿದರೆ ವಾಸ್ತು ದೋಷ ನಿವಾರಣೆ ಯಾಗುವುದು .

7 ನವಿಲು ಗರಿಯನ್ನು ಮನೆಯಲ್ಲಿ ಅಥವಾ ನಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ರಾಹು ದೋಷ ನಿವಾರಣೆಯಾಗಬಹುದು . 8 ನವಿಲು ಗರಿಯನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳುವುದರಿಂದ ಕೆಟ್ಟ ಕನಸುಗಳು ಬೀಳುವುದಿಲ್ಲ .

9 ಯಾರಾದರೂ ನಿಮಗೆ ನವಿಲು ಗರಿಯನ್ನು ಕೊಟ್ಟರೆ ನಿಮ್ಮ ಜೀವನದಲ್ಲಿ ಯಶಸ್ಸಿನ ಬಾಗಿಲು ತೆರೆಯುವುದು ಎಂದರ್ಥ . 10 ಮನೆಯ ದಕ್ಷಿಣ ಮತ್ತು ಪೂರ್ವ ಕೋಣೆಯಲ್ಲಿ ನವಿಲು ಗರಿಯನ್ನು ಇಡುವುದರಿಂದ ಎಲ್ಲಾ ಉನ್ನತಿಯಾಗುವುದು ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸುವುದು .

11 ಗಂಡ ಹೆಂಡತಿಯರ ನಡುವೆ ಜಗಳ ಮನಸ್ತಾಪಗಳು ಆಗುತ್ತಿದ್ದರೆ ಅವರ ಕೋಣೆಯಲ್ಲಿ ಎರಡು ನವಿಲುಗರಿಯನ್ನು ಇಟ್ಟರೆ ಅವರು ಪ್ರೀತಿಯಿಂದ ಇರುವರು . 12 ನವಿಲು ಗರಿಯನ್ನು ಎಂದಿಗೂ ಎಸೆಯಬೇಡಿ, ಈ ರೀತಿ ಮಾಡಿದರೆ ವೃದ್ಧಿಯಾಗುವುದಿಲ್ಲ .

13 ನವಿಲು ಗರಿಯೂ ಯಾವುದೇ ರೀತಿ ಮುರಿದಿರ ಬಾರದು . ಒಳ್ಳೆಯದನ್ನು ನೋಡಿಕೊಂಡು , ಶುಭ ಸಮಯದಲ್ಲಿ ಭಗವಂತನಾದ ಶ್ರೀ ಕೃಷ್ಣನ ಹೆಸರು ನೆನಪಿಸಿಕೊಂಡು ತೆಗೆದುಕೊಂಡು ಬನ್ನಿ . 14 ನವಿಲುಗರಿಯನ್ನು ಸರಸ್ವತಿಯ ಫೋಟೋದ ಬಳಿ ಇಟ್ಟರೆ ವಿದ್ಯೆ ಪ್ರಾಪ್ತಿಯಾಗುವುದು .

15 ನವಿಲುಗರಿಯನ್ನು ಮನೆಯ ಅಜಾರದಲ್ಲಿ ಇಡುವುದರಿಂದ ಆಹ್ಲಾದಕರ ವಾತಾವರಣ ಸೃಷ್ಟಿಯಾಗುವುದು ಮತ್ತು ಧನಾತ್ಮಕ ಶಕ್ತಿ ಉಂಟಾಗುವುದು .16 ನವಿಲುಗರಿಯನ್ನು ಗೋಡೆಗೆ ಹಾಕುವುದರಿಂದ ಹಲ್ಲಿಗಳು ಓಡಾಡುವುದು ಕಡಿಮೆಯಾಗುತ್ತದೆ .ಮತ್ತು ಮಳೆಗಾಲದಲ್ಲಿ ಕ್ರಿಮಿ ಕೀಟಗಳು ಒಳಗೆ ಬರುವುದಕ್ಕೆ ಬಿಡುವುದಿಲ್ಲ .

17 ನವಿಲು ಎಣ್ಣೆಯನ್ನು ಹಚ್ಚುವುದರಿಂದ ಸೊಂಟ ನೋವು ,ಬೆನ್ನು ನೋವು, ಮತ್ತು ಕಾಲು ನೋವು ಸಮಸ್ಯೆಗಳು ನಿವಾರಣೆಯಾಗುವುದು . ಹೀಗೆ ನವಿಲುಗರಿಯನ್ನು ಮನೆಯಲ್ಲಿ ತಂದು ಇಟ್ಟುಕೊಳ್ಳುವುದರಿಂದ ನಾನಾ ರೀತಿಯ ಪ್ರಯೋಜನಗಳು ಆಗುತ್ತವೆ ಎಂದು ಹೇಳಲಾಗಿದೆ.

Leave A Reply

Your email address will not be published.