ವೃಶ್ಚಿಕ ರಾಶಿ ಡಿಸೆಂಬರ್ ಮಾಸ ಭವಿಷ್ಯ

0

ಇಂದಿನ ಲೇಖನದಲ್ಲಿ ಡಿಸೆಂಬರ್ ತಿಂಗಳಿನ ವೃಶ್ಚಿಕ ರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಎಲ್ಲಾ ವಿಚಾರಗಳು ಯಶಸ್ವಿಯಾಗಿ ಹೋಗುತ್ತಿರುವಾಗ ನಮ್ಮ ಚಟುವಟಿಕೆ, ವೇಗ, ನಾವು ಪಡೆದುಕೊಳ್ಳುವ ಖುಷಿ, ನಮ್ಮ ಸ್ಪಿರಿಟ್ ಬಹಳ ಚೆನ್ನಾಗಿರುತ್ತದೆ. ನಮ್ಮ ಜೀವನದಲ್ಲಿ ಕಷ್ಟ ಸುಖವು ಒಂದು ನಾಣ್ಯದ ಎರಡು ಮುಖವಿದ್ದಾ ಹಾಗೆ, ಆದರೇ ನಾವು ಸುಖ ಮತ್ತು ಯಶಸ್ಸಿಗಾಗಿ ಹೋರಾಟ ನಡೆಸುತ್ತಿರುತ್ತೇವೆ. ಕಷ್ಟಪಟ್ಟರೇ ಮಾತ್ರ ಯಶಸ್ಸು ಸಿಗುತ್ತದೆ. ನೆಗೆಟಿವ್ ವಿಚಾರಗಳು ನಿಮ್ಮನ್ನು ಕಾಡುತ್ತವೆ

ಆದ್ದರಿಂದ ನೀವು ಎಚ್ಚರವಹಿಸಬೇಕಾಗುತ್ತದೆ. ಶನಿಗ್ರಹವು ಚತುರ್ಥ ಸ್ಥಾನದಲ್ಲಿರುವುದರಿಂದ ನಿಮ್ಮನ್ನು ನೆಗೆಟಿವ್ ಚಿಂತನೆಗೆ ಒಳಪಡಿಸುತ್ತಾನೆ. ಆರೋಗ್ಯದಲ್ಲಿ ನೋಡುವುದಾದರೇ ಸುಸ್ತು ಕಾಡುವಂತದ್ದು, ಕೆಲಸ ಕಾರ್ಯಗಳಲ್ಲಿ ಸರಿಯಾದ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕು. ನಮ್ಮನ್ನು ನಾವು ಪಾಸಿಟಿವ್ ಸಂಗತಿಗಳಿಗೆ ಪ್ರೇರೇಪಿಸಿಕೊಳ್ಳಬೇಕು.

ಆದರೇ ಅದು ನಿಮ್ಮ ಹತ್ತಿರ ಸಾಧ್ಯವಾಗುವುದಿಲ್ಲ. ಈ ಡಿಸೆಂಬರ್ ನಲ್ಲಿ ಮೊದಲು ಇದ್ದ ರೀತಿಯಲ್ಲಿ ನಿಮ್ಮ ಆಲೋಚನೆಗಳು ಇರುವುದಿಲ್ಲ, ಕಾರಣ ಸಣ್ಣಪುಟ್ಟ ಕಿರಿಕಿರಿ, ಮನೆಯಲ್ಲಿ ಏನೋ ಚಿಂತೆ, ಹೊಸ ಸಮಸ್ಯೆ ಮತ್ತು ಸವಾಲುಗಳು, ಕೆಲಸ ಕಾರ್ಯಗಳಲ್ಲಿ ಏನೋ ಒಂದು ತರಹ ಅಡ್ಡಿಗಳು ಅಥವಾ ನಿಮ್ಮ ಜವಾಬ್ದಾರಿ ಹೆಚ್ಚಾಗಬಹುದು. ಇದರಿಂದ ಮಾನಸಿಕ ಒತ್ತಡ ಉಂಟಾಗುತ್ತದೆ.

ಆಲೋಚನೆಯನ್ನ ಮಾಡಿ ಮಾಡಿ ನೆಗೆಟಿವ್ ವಿಚಾರಗಳು ನಮಗೆ ಗೊತ್ತಿಲ್ಲದಂತೆ ಮನೆಮಾಡಿಬಿಡುತ್ತದೆ. ಸಣ್ಣ ಪುಟ್ಟ ಸೋಲುಗಳು ನಿಮ್ಮನ್ನು ಘಾಸಿಗೊಳಿಸಬಹುದು. ಮರೆಗುಳಿತನ, ತಪ್ಪು ನಿರ್ಧಾರಗಳು ನಿಮ್ಮನ್ನು ಸಮಸ್ಯೆಗೆ ನೂಕುತ್ತವೆ ಎಚ್ಚರವಹಿಸಬೇಕಾಗುತ್ತದೆ. ಅಂದುಕೊಂಡಿದಂತಹ ಕೆಲಸಗಳು ಆಗದೇ ಇದ್ದಾಗ, ಬರಬೇಕಿರುವ ಹಣ ಬರದೇ

ಇದ್ದಾಗ ಒತ್ತಡಗಳು ಹೆಚ್ಚಾಗಿ ಟೆನ್ಷನ್ ಆಗುವ ಸಾಧ್ಯತೆ ಇರುತ್ತದೆ. ಒತ್ತಡ ಹೆಚ್ಚಾದಾಗ ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಡಿಸೆಂಬರ್ 16ರ ವರೆಗೂ ದೇಹವನ್ನು ತಂಪಾಗಿ ಇಟ್ಟುಕೊಳ್ಳಬೇಕು ಏಕೆಂದರೆ ಈ ಸಮಯದಲ್ಲಿ ನಿಮಗೆ ನಿಮ್ಮ ದೇಹದಲ್ಲಿ ಉಷ್ಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ, ವಾಕಿಂಗ್,

ಮೆಡಿಟೇಷನ್, ಪ್ರಾರ್ಥನೆ, ಪ್ರಾಣಾಯಾಮಗಳು ಇಂತಹವುಗಳನ್ನು ಅಳವಡಿಸಿಕೊಂಡರೆ ನೀವು ರಿಲೀಫ್ ಅನ್ನು ಪಡೆದುಕೊಳ್ಳಬಹುದು. ರಾಶಿಯಲ್ಲಿ 16ನೇ ತಾರೀಖಿನವರೆಗೂ ರವಿಗ್ರಹವಿರುತ್ತದೆ. ಈ ಸಮಯದಲ್ಲಿ ಅಂತಹ ಬೆಳವಣಿಗೆ ಏನು ಆಗುವುದಿಲ್ಲ ಕಾರಣ ಕುಜ ಗ್ರಹ ರಾಶಿಯಲ್ಲಿಯೇ ಇರುತ್ತದೆ. ಡಿಸೆಂಬರ್ 27ರವರೆಗೂ ಈ ಕುಜ ಗ್ರಹ ರಾಶಿಯಲ್ಲಿಯೇ ಇರುವುದರಿಂದ ಆರೋಗ್ಯದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

24ನೇ ತಾರೀಖು ಶುಕ್ರ ಗ್ರಹ ವೃಶ್ಚಿಕ ರಾಶಿಗೆ ಬರುವುದರಿಂದ ಒತ್ತಡ ಸ್ವಲ್ಪ ಕಡಿಮೆಯಾಗಿ ಕೆಲಸ ಮಾಡುವ ಸ್ಥಳ ಮತ್ತು ಕುಟುಂಬದಲ್ಲಿ ಒಳ್ಳೆಯ ವಾತಾವರಣ ಉಂಟಾಗಿ ಸಂತೋಷ ಸಿಗುತ್ತದೆ. ನಿಮಗೆ ಶುಕ್ರಗ್ರಹವು ಪಾಸಿಟಿವ್ ಆಗಿ ಕೆಲಸ ಮಾಡುತ್ತದೆ. ಹೆಣ್ಣು ಮಕ್ಕಳಿಗೆ ಒಳ್ಳೆಯದು, ಈ ತಿಂಗಳು ಸುಖಪ್ರಾಪ್ತಿಯ ಯೋಗವಿದೆ. ಯಾವ ವಿಷಯಗಳಲ್ಲಿ ಅಂದರೆ ನಿದ್ರಾಹೀನತೆ ಇರುವವರಿಗೆ ಒಳ್ಳೆಯ ನಿದ್ರೆ ಸಿಗುತ್ತದೆ.

ಮನಸ್ಸಿಗೆ ಶಾಂತಿ, ವ್ಯಾಪಾರ ವ್ಯವಹಾರ ಮಾಡುವವರಿಗೆ ಒಳ್ಳೆಯ ಪ್ರಗತಿ, ಹೂಡಿಕೆ ಮಾಡುವವರಿಗೆ ಲಾಭಗಳು ಸಿಗುತ್ತದೆ. ವಿಶೇಷವಾಗಿ ಅಲಂಕಾರಿಕ ವ್ಯವಹಾರ ಮಾಡುವವರಿಗೆ ಅಂದರೆ ಸೀರೆ, ಬಟ್ಟೆ, ವ್ಯಾಪಾರ ಮಾಡುವವರಿಗೆ ಯಶಸ್ಸು ಸಿಗುತ್ತದೆ. ಕಲೆ, ಸಾಹಿತ್ಯ, ಸಂಗೀತ, ನೃತ್ಯ ಇತರೆ ಕ್ಷೇತ್ರದವರಿಗೆ ಮಧ್ಯಮ ಪ್ರಮಾಣದಲ್ಲಿ ಪ್ರಗತಿ ಇದೆ. ರಿಯಲ್ ಎಸ್ಟೇಟ್, ಭೂಮಿಗೆ ಸಂಬಂಧಪಟ್ಟ ಕೆಲಸಗಳು, ಸರ್ಕಾರಿ ಕೆಲಸಗಳಲ್ಲಿ ಅಂತಹ ಒಳ್ಳೆಯ ಪ್ರಗತಿಗಳು ಇರುವುದಿಲ್ಲ.

ಕೃಷಿ, ಬೇರೆ ಬೇರೆ ಉದ್ಯಮದವರಿಗೆ ಸ್ವಲ್ಪ ಮಟ್ಟಿಗೆ ಎಚ್ಚರಿಕೆವಹಿಸಬೇಕಾಗುತ್ತದೆ. ಶತೃಗಳ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆವಹಿಸಬೇಕಾಗುತ್ತದೆ. ಮಕ್ಕಳಿಂದ ಸಂತೋಷ ಸಮಾಧಾನವಿದ್ದರೂ ಕೂಡ ಸ್ವಲ್ಪ ಅವರ ವರ್ತನೆ ಬಗ್ಗೆ ಗಮನವಿಟ್ಟಿರಬೇಕು. ರಿಸ್ಕ್ ತೆಗೆದುಕೊಂಡು ಮಾಡುವ ವ್ಯವಹಾರಗಳನ್ನು ಮಾಡುವ ವ್ಯಕ್ತಿಗಳಿಗೆ ದಿಢೀರ್ ಯಶಸ್ಸು ಸಿಗುತ್ತದೆ. ಉದಾಹರಣೆಗೆ ಬಿಟ್ ಕಾಯಿನ್, ಷೇರುಪೇಟೆ ಇಂತಹ ವ್ಯವಹಾರ ಮಾಡುವವರಿಗೆ ಒಳ್ಳೆಯ ಫಲಿತಾಂಶ ಸಿಗಲಿದೆ. ನಿಮ್ಮ ಹಣವನ್ನು ಎಚ್ಚರಿಕೆಯಿಂದ ಹೂಡಿಕೆ ಮಾಡಿ ಮುಂಬರುವ ದಿನಗಳು ಬಹಳಷ್ಟು ಒಳ್ಳೆಯ ದಿನಗಳಾಗಿವೆ.

Leave A Reply

Your email address will not be published.