ಹೆಣ್ಣು ಹೇಗಿರಬೇಕು

ಹೆಣ್ಣು ಹೀಗಿರಬೇಕು…. ಹೇಗಿರಬೇಕು ಇವಳು ಹೇಗಿರಬೇಕು ಹೇಗಿರಬೇಕು ಎನ್ನುವರು ಕೆಲವರು…. ಹೀಗೆಯೇ ಇರಬೇಕೆನ್ನುವರು ಹಲವರು….ಹೇಗಿದ್ದರೂ ಸುಮ್ಮನೆ ಬಿಡಲ್ಲರು ಇವರು ಯಾವುದಕ್ಕೂ ಸಲ್ಲರು,
ಹೆಣ್ಣೆಂದರೆ ಹೀಗಿರಬೇಕು ಮೈತುಂಬ ಸೆರಗೊತ್ತು ಕೈ ತುಂಬಾ ಬಳೆ ತೊಟ್ಟು, ಖಾಸಗಲ ಸಿಂಗಾರ ಬಿಟ್ಟು ಗಂಡನ ಕಣ್ಣುಗಾವವಿನಲಿ

ಸದಾ ಅವನಿಂದ ಎಲ್ಲಾ ಕಲ್ಲು ಇದ್ದು ಇಲ್ಲದಂತೆ ಸದ್ದಿಲ್ಲದೆ ಮನದೊಳು, ಗುದ್ದಾಡುತ್ತ ಮೌನಗಳು ಮಾತುಗಳನ್ನು ನುಂಗಿ ಆಸೆ ಕನಸುಗಳನ್ನು ಮಣ್ಣಲ್ಲಿ ಕೂತಿಟ್ಟು… ನಾನು ಸಹ ಧರ್ಮಣೆ ಎನ್ನುವಳು ಎಲ್ಲರಿಗೂ ಹೆಣ್ಣೆಂದರೆ ಹೀಗಿರಬೇಕು ಸ್ವಂತಿಕೆಯ ಕೊಲ್ಲುತ್ತಾ ಪರವಿಚಯ ಪಾಲಿಸುತ್ತಾ ಅಸ್ತಿತ್ವವ ಮರೆಯುತ್ತ ಸಾಮಾಜಿಕ ಬಿಗಿ ಸರಪಣಿಗಳು ಬಂದಿಯಾಗಿ ಸ್ವ ಪ್ರತಿಭೆಯ ಹೃದಯದೊಳು ಬಚ್ಚಿಟ್ಟು ನಾನು ಹೆಣ್ಣು ಸಂಸಾರದ ಕಣ್ಣು ಎನ್ನುವಳು.
ಹೆಣ್ಣೆಂದರೆ ಹೀಗಿರಬೇಕು

ಸೋಲೊಪ್ಪಿಕೊಳ್ಳಬೇಕು ನೋವೆಂಬ ಕಹಿಯನ್ನು ಇಷ್ಟವಿಲ್ಲದೆ ಸಹಿಸಿಕೊಳ್ಳಬೇಕು. ಅನ್ಯಾಯದ ವಿರುದ್ಧ ಎತ್ತಿದರೆ ಧ್ವನಿ ಗಯ್ಯಾಳಿ ಎಂಬ ಬಾಣ ಸತ್ಯ ನಿರೂಪಿಸಲು ಹೋದರೆ ವಿಚ್ಛೇದನ ಎಂಬ ಅಸ್ತ್ರ, ಕಣ್ಣೀರು ಹಾಕಿದರೆ ನಾಟಕ ಮಾಡುವಳು ಎಂಬ ಅಣಕು ಶಾಸ್ತ್ರ, ಹೆಣ್ಣೆಂದರೆ ಹೀಗಿರಬೇಕು ಕರುಣೆ ಪ್ರೀತಿ ಮಮತೆ ಎಲ್ಲವೂ ಅಮ್ಮನ ತೋಳ್ತೆಕ್ಕೆಯಲ್ಲಿ ಮಾತ್ರ ಗಂಡನ ಮನೆಯಲ್ಲಿ ಎಲ್ಲವೂ ನೆಪ ಮಾತ್ರ ಆದರೂ ಕುಟುಂಬದಲ್ಲಿ ನಿರ್ವಹಿಸುವಳು ಹಲವಾರು ಪಾತ್ರ ಆದರೂ ಇವಳಿಗೆ ಇನ್ನೂ ಸಿಕ್ಕಿಲ್ಲ ಯಾವುದರಲ್ಲೂ ಸ್ವಾತಂತ್ರ್ಯ ಹೆಣ್ಣೆಂದರೆ ಹೇಗಿರಬೇಕು?
ಹೀಗಿರಬೇಕೆ?

Leave a Comment