ಹೆಣ್ಣು ಲಕ್ಷ್ಮಿ ಸ್ವರೂಪ ಅಂತಹ ಲಕ್ಷ್ಮಿ ಮನೆಯಲ್ಲಿ ಹೇಗಿರಬೇಕು ಎಂಬುದನ್ನು ದಯವಿಟ್ಟು

0

ಹೆಣ್ಣು ಲಕ್ಷ್ಮಿ ಸ್ವರೂಪ ಅಂತಹ ಲಕ್ಷ್ಮಿ ಮನೆಯಲ್ಲಿ ಹೇಗಿರಬೇಕು ಎಂಬುದನ್ನು ದಯವಿಟ್ಟು ತಾಳ್ಮೆಯಿಂದ ಕೇಳಿ ಆಲೋಚಿಸ ಬೇಡಿ, ಚಿಂತಿಸಬೇಡಿ ಹೆಣ್ಣು ನಗುಮುಖದಿಂದ ಸದಾ ಹಸನ್ಮುಖಿಯಾಗಿ ಇರಬೇಕು. ಹೀಗಿದ್ದರೆ ಗಂಡ ಮಕ್ಕಳಿಗೆ ಮತ್ತು ಮನೆಗೆ ಯಶಸ್ಸು. ಮನೆಯಲ್ಲಿರುವ ಹೆಣ್ಣು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮನೆಯನ್ನು ಸ್ವಚ್ಛಗೊಳಿಸಿ ಹೊಸ್ತಿಲ ಭಾಗಕ್ಕೆ ಅರಿಶಿಣ ಕುಂಕುಮ ಇಟ್ಟು ರಂಗೋಲಿ ಹಾಕಬೇಕು. ಮನೆಗೆ ಬಾಗಿಲನ್ನು ಲಕ್ಷ್ಮಿ ಎಂದು ಕರೆಯಲಾಗುತ್ತದೆ.

ಆದ್ದರಿಂದ ಮನೆಯ ಹೊಸ್ತಿಲು ಯಾವಾಗಲೂ ಶುಭ್ರವಾಗಿರಬೇಕು. ಮನೆಯ ಅಂಗಳದಲ್ಲಿ ಪೂರ್ವಭಿಮುಖವಾಗಿ ತುಳಸಿ ಗಿಡ ಇರಬೇಕು. ಅದಕ್ಕೆ ಮನೆಯ ಹೆಣ್ಣು ಪ್ರತಿದಿನ ಪೂಜೆ ಮಾಡಬೇಕು. ಮನೆಯಲ್ಲಿ ಕೂದಲು ಬಿಟ್ಟುಕೊಂಡು ಇರಬಾರದು. ಇದರಿಂದ ಮನೆಯ ಕೆಲಸಗಳಿಗೆ ವಿಘ್ನಗಳಾಗುತ್ತದೆ. ಸಂಜೆಯ ವೇಳೆ ಕೂದಲನ್ನು ಬಾಚಬಾರದು. ಶುಕ್ರವಾರ ಮತ್ತು ಮಂಗಳವಾರ ಮನೆಯಿಂದ ದಾನ ಮಾಡಬಾರದು. ಮುಖ್ಯವಾಗಿ ದುಡ್ಡು ಯಾರಿಗೂ ಕೊಡಬಾರದು.

ಹೆಣ್ಣು ಯಾವುದೇ ಕಾರಣಕ್ಕೂ ಹೊಸ್ತಿಲ ಒಳಗಿನಿಂದ ಯಾರಿಗೂ ದಾನ ಕೊಡಬಾರದು. ಲಕ್ಷ್ಮಿ ಸ್ವರೂಪಿಯಾದ ಹೆಣ್ಣು ಮುಸ್ಸಂಜೆಯಲ್ಲಿ ಕಣ್ಣೀರು ಹಾಕಬಾರದು. ಇದರಿಂದ ಮನೆಗೆ ಏಳಿಗೆ ಆಗುವುದಿಲ್ಲ. ಸ್ನಾನ ಮುಗಿಸಿ ಕೂದಲು ಬಿಚ್ಚಿಕೊಂಡು ಪೂಜೆ ಮಾಡಬಾರದು. ತಲೆಯನ್ನು ಕಟ್ಟಿಕೊಂಡು ಮಾಡಬಹುದು. ಸ್ತ್ರೀ ಯಾದವಳು ಮನೆಗೆ ಬಂದ ಅತಿಥಿಗಳಿಗೆ ಒಳ್ಳೆಯ ಅತಿ ಸತ್ಕಾರ ಮಾಡಬೇಕು.

ಆಗ ದೇವರಿಗೆ ಸೇವೆ ಮಾಡಿದಂತೆ ಆಗುತ್ತದೆ. ಮನೆಯಲ್ಲಿರುವ ಹೆಣ್ಣು ಹೀಗೆದ್ದರೆ ಮಾತ್ರ ಲಕ್ಷ್ಮಿ ಒಲಿಯುತ್ತಾಳೆ. ಮನೆ ಹೆಣ್ಣು ಸಂಜೆ ಬಟ್ಟೆ ಒಗೆಯುವುದಾಗಲಿ ಮನೆಯಲ್ಲಿ ಕಸ ಗುಡಿಸುವುದಾಗಲಿ ಮಾಡಬಾರದು. ಮನೆಯಲ್ಲಿ ಜಗಳ ಮಾಡಬಾರದು. ಮನೆಯಲ್ಲಿ ಹೆಣ್ಣು ಯಾವ ವಸ್ತುವನ್ನು ಇಲ್ಲ ಅಂತ ಹೇಳಬಾರದು. ಅಶ್ವಿನಿ ದೇವತೆಗಳು ಅಸ್ತು ಅಂದುಬಿಡುತ್ತಾರೆ.

ಇದರಿಂದ ದಿನಸಿಗಳಿಗೆ ಕೊರತೆ ಉಂಟಾಗುತ್ತದೆ.ಮನೆಯ ಮಹಾಲಕ್ಷ್ಮಿಯಾದ ಹೆಣ್ಣು ಹಣೆಗೆ ಕುಂಕುಮ ಕೈಗೆ ಗಾಜಿನ ಬಳೆ, ಕಾಲಿಗೆ ಕಾಲುಂಗುರ, ಕಾಲ್ಗೆಜ್ಜೆ, ಕುತ್ತಿಗೆಗೆ ಮಾಂಗಲ್ಯ ಸರ ಕಡ್ಡಾಯವಾಗಿ ಧರಿಸಬೇಕು. ಸ್ತ್ರೀ ಯಾದವಳು ಮನೆಯಲ್ಲಿ ಕಾಲನ್ನು ನೆಲಕ್ಕೆ ಒರೆಸುತ್ತಾ ನಡೆಯಬಾರದು.ಸ್ತ್ರೀ ಯಾದವಳು ಮೈತುಂಬ ಬಟ್ಟೆ ಹಾಕಬೇಕು.ಯಾವುದೇ ಕಾರಣಕ್ಕೂ ಸ್ತ್ರೀ ಪಾದದಡಿ ಹೊಡೆದಿರಬಾರದು. ಮತ್ತು ಸ್ತ್ರೀಯ ಬಾಯಿಂದ ದುರ್ವಾಸನೆ ಬರಬಾರದು.

ಸ್ತ್ರೀಯ ಬಾಯಲ್ಲಿ ಯಾವುದೇ ಕಾರಣಕ್ಕೂ ಕೆಟ್ಟ ಮಾತುಗಳು ಬರಬಾರದು ಮತ್ತು ಇನ್ನೊಬ್ಬರನ್ನು ಬೈಯಬಾರದು. ಸ್ತ್ರೀಯರು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮನೆಯಲ್ಲಿ ಜೇಡರ ಬಲೆ ಧೂಳು ಇರದಂತೆ ನೋಡಿಕೊಳ್ಳಬೇಕು. ಸ್ತ್ರೀಯರುದಿನಾಲು ಕಾಲಿಗೆ ಅರಿಶಿನ ಹಚ್ಚಿಕೊಳ್ಳಬೇಕು.ಸ್ತ್ರೀಯರು ದಿನಾಲು ಗೋಧೂಳಿ ಸಮಯದಲ್ಲಿ ದೀಪವನ್ನು ಹಚ್ಚಬೇಕು.ಸ್ತ್ರೀಯರು ದಿನಾಲು ತಲೆಗೆ ಒಂದು ಚಿಕ್ಕ ಹೂವನಾದರೂ ಇಟ್ಟುಕೊಳ್ಳಬೇಕು.

ಸ್ತ್ರೀ ಆದವಳು ಸಂಸ್ಕೃತಿ ಮತ್ತು ಪರಂಪರೆಯನ್ನು ಪಾಲಿಸಬೇಕು. ಸ್ತ್ರೀಯುಯು ಉಳಿತಾಯ ಮಾಡುವ ಗುಣವನ್ನು ಹೊಂದಿರಬೇಕು. ಬೇಕಾಬಿಟ್ಟಿ ಖರ್ಚು ಮಾಡಬಾರದು. ಸ್ತ್ರೀ ಯಾದವಳು ಕಷ್ಟದ ಸಮಯದಲ್ಲಿ ದೈರ್ಯ ಮತ್ತು ಸಲಹೆಗಳನ್ನು ಕೊಡಬೇಕು. ಸ್ತ್ರೀಯರಲ್ಲಿ ಅಹಂಕಾರ ಅನ್ನೋದು ಇರಲೇಬಾರದು. ಸ್ತ್ರೀಯರು ರಾತ್ರೆ ಮಲಗುವ ವೇಳೆ ಓಲೆ ಮತ್ತು ಬಳೆಗಳನ್ನು ಬಿಚ್ಚಿಡುತ್ತಾರೆ.

ಇದನ್ನು ಮಾಡಲೇಬಾರದು. ಸ್ತ್ರೀ ಯಾದವಳು ತಾನು ಮುಡಿದ ಹೂವನ್ನು ಬೇರೆಯವರಿಗೆ ಕೊಡಬಾರದು. ಬೇರೆಯವರು ಮಾಡಿದ ಹೂವನ್ನು ತಾನು ಇಟ್ಟುಕೊಳ್ಳಬಾರದು. ಸ್ತ್ರೀಯಯಾದವಳು ಕಪ್ಪು ಬಣ್ಣದ ಬಟ್ಟೆಯನ್ನು ಯಾವುದೇ ಕಾರಣಕ್ಕೂ ಧರಿಸಬಾರದು ಸ್ತ್ರೀಯರು ಕಾಲು ಅಲುಗಾಡಿಸುವುದು ಮತ್ತು ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳಬಾರದು.

ಸ್ತ್ರೀ ಯಾದವಳು ರಾತ್ರಿ ಕೋಪಿಸಿಕೊಂಡು ಊಟ ಮಾಡದೆ ಮಲಗಬಾರದು. ಸ್ತ್ರೀ ಯಾದವಳು ಯಾವುದೇ ಕಾರಣಕ್ಕೂ ಯಾವ ವಸ್ತುಗಳನ್ನು ಎಡಗೈಯಿಂದ ಬೇರೆಯವರಿಗೆ ಕೊಡಬಾರದು. ಈ ನನ್ನ ಕಳಕಳಿಯ ಮನವಿಯನ್ನು ದಯವಿಟ್ಟು 10 ಬಾರಿ ಓದಿ ಕೇಳಿ ಚಿಂತಿಸಿ ಸರಿ ಇದ್ದರೆ ಇನ್ನು ಹತ್ತಾರು ಜನರಿಗೆ ಇದನ್ನು ದಯಮಾಡಿ ತಿಳಿಸಿಕೊಡಿ.

Leave A Reply

Your email address will not be published.