ಹಿರಿಯರು ಹೇಳಿರುವ ಸಲಹೆಗಳು

ನಾವು ಈ ಲೇಖನದಲ್ಲಿ ಸದಾ ಆರೋಗ್ಯವಾಗಿ ಇರುವ , ಹಿರಿಯರು ಹೇಳಿರುವ ಸಲಹೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ದ್ರಾಕ್ಷಿಯನ್ನು ತಿಂದ ತಕ್ಷಣ ನೀರು ಕುಡಿಯಬೇಡಿ. ಇದು ಕಾಲರಾ ರೋಗಕ್ಕೆ ಕಾರಣವಾಗುತ್ತದೆ. ಹೆಬ್ಬೆರಳಿಗೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನಿಮ್ಮ ದೃಷ್ಟಿ ಸುಧಾರಣೆಯಾಗುತ್ತದೆ. ಹಾಲು ಕುಡಿದ ನಂತರ ಖರ್ಜೂರ ತಿಂದರೆ ಮೆದುಳು ಚುರುಕು ಕೊಳ್ಳುತ್ತದೆ.

ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉಗುರುಗಳು ದುರ್ಬಲ ಆಗುತ್ತವೆ. ತಣ್ಣನೆಯ ನೀರು ಕುಡಿದ ನಂತರ ಚಹಾ ಕುಡಿಯಬಾರದು. ಬೆಳ್ಳುಳ್ಳಿ ರಸದಿಂದ ಈಗಿರುವ ಹೊಟ್ಟೆಯನ್ನು ಮಸಾಜ್ ಮಾಡುವುದರಿಂದ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ.

ಸೌತೆಕಾಯಿ ತಿನ್ನುವುದರಿಂದ ಮೈದಾ ಹಿಟ್ಟಿನಿಂದ ಉಂಟಾಗುವ ಉರಿ ಕಡಿಮೆಯಾಗುತ್ತದೆ. ಊಟ ಮಾಡಿದ ನಂತರ ಸ್ನಾನ ಮಾಡುವುದರಿಂದ ದೇಹಕ್ಕೆ ಹಾನಿಯಾಗುತ್ತದೆ. ಉಪವಾಸ ಮಾಡುವುದರಿಂದ ಹೊಟ್ಟೆಯ ರೋಗಗಳು ಗುಣವಾಗುತ್ತವೆ. ಉಸಿರಾಟ ತೊಂದರೆ ಇರುವವರು ಬಾಳೆಹಣ್ಣನ್ನು ತಿನ್ನುವುದರಿಂದ ಕಡಿಮೆಯಾಗುತ್ತದೆ.

ಹಾಗಲಕಾಯಿ ನೀರನ್ನು ಕುಡಿಯುವುದರಿಂದ ಮುಖದ ಮೇಲಿರುವ ಕಲೆಗಳು ಬರದಂತೆ ತಡೆಯುತ್ತದೆ. ಬಿಳಿ ಈರುಳ್ಳಿಯ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ. ಮಲಗುವ ಮುನ್ನ ಒಂದು ಏಲಕ್ಕಿಯನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಬಾಯಿಯ ದುರ್ವಾಸನೆಯನ್ನು ತಡೆಯುತ್ತದೆ.

ಮೂಲವ್ಯಾಧಿ ರೋಗ ಇದ್ದವರು ಮೆಂತ್ಯ ಚಟ್ನಿಯನ್ನು ಮಾಡಿ ತಿನ್ನುವುದರಿಂದ ಕಡಿಮೆಯಾಗುತ್ತದೆ. ಹೆಚ್ಚು ಕಪ್ಪು ಬಟ್ಟೆಯನ್ನು ಧರಿಸುವುದರಿಂದ ಮೂಢನಂಬಿಕೆಯ ರೋಗ ಬರುತ್ತದೆ. ಎಳ್ಳು ತಿನ್ನುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.

ಜವೆ ಗೋಧಿಯ ಗಂಜಿ ಮಾಡಿ ತಿನ್ನುವುದರಿಂದ ಮಾನಸಿಕ ದೌರ್ಬಲ್ಯ ಕಡಿಮೆಯಾಗುತ್ತದೆ . ರಾತ್ರಿಯ ವೇಳೆ ಸಿಹಿ ತಿನ್ನುವುದನ್ನು ತಪ್ಪಿಸಿ ಮತ್ತು ರಾತ್ರಿಯಲ್ಲಿ ಕಡಿಮೆ ಆಹಾರವನ್ನು ಸೇವಿಸಿ. ಅರಿಶಿಣವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ.

ಶೀತ ಕಡಿಮೆ ಆಗದಿದ್ದರೆ ಕಬ್ಬಿನ ಹಾಲಿನಲ್ಲಿ ನಿಂಬೆರಸ ಬೆರೆಸಿ ಕುಡಿಯಿರಿ. ಬೀಟ್ರೋಟ್ ರಸವನ್ನು ಕುಡಿಯುವುದರಿಂದ ಮುಖ ಎಂದಿಗೂ ಕಪ್ಪಾಗುವುದಿಲ್ಲ. ಹೆಚ್ಚು ಹೊತ್ತು ಮಲಗದೆ ಇರುವುದರಿಂದ ಬುದ್ಧಿವಂತಿಕೆ ಕಡಿಮೆಯಾಗುತ್ತದೆ .ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿದ್ದ ದೌರ್ಬಲ್ಯವನ್ನು ತೆಗೆದುಹಾಕುತ್ತದೆ .

ತಣ್ಣನೆಯ ರೊಟ್ಟಿ ತಿನ್ನುವುದರಿಂದ ಮೆದುಳು ಚುರುಕು ಕೊಳ್ಳುತ್ತದೆ. ಪ್ರತಿನಿತ್ಯ ಟೊಮೇಟೊ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆ ಬರುವುದಿಲ್ಲ.

ಬೆಳಿಗ್ಗೆ ಮುಖಕ್ಕೆ ಮೊಸರು ಹಚ್ಚುವುದರಿಂದ ನಿಮ್ಮ ಮುಖವು ಹೊಳೆಯುತ್ತದೆ . ಗೋಡಂಬಿಯನ್ನು ತಿನ್ನುವುದರಿಂದ ನಿಮ್ಮ ಬುದ್ಧಿಶಕ್ತಿ ಚುರುಕುಕೊಳ್ಳುತ್ತದೆ. ಬಿಕ್ಕಳಿಕೆಯನ್ನು ನಿಲ್ಲಿಸಲು ಒಂದು ಲವಂಗವನ್ನು ನೀರಿನ ಜೊತೆ ತೆಗೆದುಕೊಳ್ಳಿ ಬಿಕ್ಕಳಿಕೆ ತಕ್ಷಣವೇ ಕಡಿಮೆಯಾಗುತ್ತದೆ.

ಹಾಲಿನಲ್ಲಿ ನಿಂಬೆರಸ ಬೆರೆಸಿ ರಾತ್ರಿ ಮುಖಕ್ಕೆ ಹಚ್ಚಿದರೆ ಮುಖ ಸುಂದರವಾಗುತ್ತದೆ. ಉಪ್ಪು ಮತ್ತು ಜೇನುತುಪ್ಪದೊಂದಿಗೆ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿದರೆ ಇದು ನಿಮ್ಮ ಹಲ್ಲುಗಳನ್ನು ಹೊಳೆಯುವಂತೆ ಮಾಡುತ್ತದೆ. ಸಿಹಿ ಮಾವು ಅಥವಾ ಔಡಲ ಬೀಜದ ತಿರುಳು ಮತ್ತು ಬೇವಿನ ಎಲೆ ಸೇರಿಸಿ ಅಗಿದು ತಿನ್ನುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.

ಸಿಹಿ ಮತ್ತು ಬೇವಿನ ಎಲೆಗಳನ್ನು ಬೆಳಿಗ್ಗೆ ಮತ್ತು ಸಾಯಂಕಾಲ ಅಗಿಯುವು ದರಿಂದ ಹಾಗೂ ಬೇವಿನ ಎಲೆಯ ಚೂರ್ಣದಿಂದ ಹಲ್ಲುಜ್ಜುವುದರಿಂದ ,ಬಾಯಿಯ ದುರ್ಗಂಧ ದೂರವಾಗುತ್ತದೆ .ಜೊತೆಗೆ ಹಲ್ಲುಗಳ ಆರೋಗ್ಯ ವೃದ್ಧಿಯಾಗುತ್ತದೆ ಮತ್ತು ಅವು ಸದೃಢವಾಗುತ್ತದೆ.

ನಿಂಬೆ ಬೀಜಗಳನ್ನು ವಿನಿಗರ್ ನಲ್ಲಿ ಅರೆದು ಮುಖದಲ್ಲಿ ಕಪ್ಪು ಕಲೆಗಳ ಮೇಲೆ ಲೇಪಿಸುತ್ತಾ ಬಂದರೆ , ಕಲೆಗಳು ನಿಧಾನವಾಗಿ ಮಾಯವಾಗುತ್ತದೆ. ಮತ್ತು ಮುಖ ತಿಳಿಯಾಗುತ್ತದೆ.ಕಣ್ಣುಗಳ ಕೆಳಗೆ ಕಪ್ಪು ಛಾಯೆ ಉಂಟಾಗಿದ್ದರೆ, ಪ್ರತಿನಿತ್ಯ ಜೇನುತುಪ್ಪದಲ್ಲಿ ನಿಂಬೆ ರಸವನ್ನು ಸೇರಿಸಿ ಹಚ್ಚಿಕೊಳ್ಳಬೇಕು.

35 . ನಿಂಬೆ ರಸ ಮತ್ತು ತುಳಸಿಯ ರಸ ಸಮ ಪ್ರಮಾಣದಲ್ಲಿ ಸೇರಿಸಿ ಮುಖಕ್ಕೆ ನಿತ್ಯ ಹಚ್ಚುತ್ತಾ ಬಂದರೆ ,ಮುಖದಲ್ಲಿನ ಕಪ್ಪು ಕಲೆ ಮತ್ತು ಮೊಡವೆಗಳು ದೂರವಾಗಿ ,ಮುಖದಲ್ಲಿ ಕಾಂತಿ ನೆಲೆಸುತ್ತದೆ.
ಹೀಗೆ ನಾವು ಹೇಳಿದ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.

Leave a Comment