ನಾವು ಈ ಲೇಖನದಲ್ಲಿ ಹೋಳಿ ಹುಣ್ಣಿಮೆ ದಿನ ಇದನ್ನು ಮನೆಗೆ ತರಲು ಮರಿಯ ಬೇಡಿ. ಅನೇಕ ಜನ್ಮಗಳ ದಾರಿದ್ರ್ಯವೂ ಹೇಗೆ ನಿವಾರಣೆ ಆಗುತ್ತದೆ ಎಂದು ತಿಳಿಯೋಣ . ಈ ಬಾರಿ ಬಂದಿರುವ ಹೋಳಿ ಹುಣ್ಣಿಮೆಯು ತುಂಬಾ ವಿಶೇಷ ಮತ್ತು ಸುಂದರವಾಗಿ ಇದೆ. ಇದರ ಹಿಂದೆ ಇರುವ ಕಾರಣ ಏನೆಂದರೆ, ಮಾರ್ಚ್ 24 ನೇ ತಾರೀಖು ಹೋಳಿ ಕಾ ದಹನ ಮತ್ತು 25 ನೇ ತಾರೀಖು ರಂಗ ಪಂಚಮಿಯ ಹಬ್ಬವನ್ನು ಆಚರಿಸಲಾಗುತ್ತದೆ . ಮತ್ತು ಈ ವರ್ಷ ದೊಡ್ಡದಾದ ಚಂದ್ರ ಗ್ರಹಣ ಕೂಡ ಇದೇ ದಿನ ಇರುತ್ತದೆ. ಯಾವಾಗ ಚಂದ್ರ ಗ್ರಹಣ ಹಿಡಿಯುತ್ತದೆಯೋ, ಇಲ್ಲಿ ಹೋಳಿ ಹುಣ್ಣಿಮೆಯ ಪ್ರಭಾವ ಇನ್ನಷ್ಟು ಹೆಚ್ಚಾಗುತ್ತದೆ .
ತಂತ್ರಗಳನ್ನು ಮಾಡುವವರು ಮತ್ತು ಮಂತ್ರಗಳನ್ನು ಸಿದ್ದಿ ಮಾಡಿ ಕೊಂಡಿರುವವರು ಹಾಗೆಯೇ ಯಾರು ಆಧ್ಯಾತ್ಮಿಕ ಕ್ಷೇತ್ರಕ್ಕೆ ಹೊಂದಿ ಕೊಂಡಿರುತ್ತಾರೋ , ಅವರಿಗೋಸ್ಕರ ಈ ಹೋಳಿ ಹುಣ್ಣಿಮೆಯ ಹಬ್ಬದ ಚಂದ್ರ ಗ್ರಹಣ ತುಂಬಾ ಶುಭ ಆಗಿರುತ್ತದೆ . ಇಲ್ಲಿ ಇದರ ಬಗ್ಗೆ ವಿಸ್ತಾರವಾಗಿ ತಿಳಿಸಲಾಗಿದೆ. ಒಂದು ವೇಳೆ ಚಂದ್ರ ಗ್ರಹಣದ ಸಂದರ್ಭದಲ್ಲಿ ಯಾವುದಾದರೂ ಉಪಾಯಗಳನ್ನು ಮಾಡಿದರೆ, ಖಂಡಿತವಾಗಿ ಇಲ್ಲಿ ನಿಮಗೆ ಲಾಭ ಸಿಗುತ್ತದೆ. ಅದು ಧನ ಸಂಪತ್ತಿನ ಆಕರ್ಷಣೆ ಮಾಡುವುದು ಇರಲಿ , ಅಥವಾ ಯಾವುದಾದರೂ ಸಿರಿ ಸಂಪತ್ತನ್ನು ಪಡೆದುಕೊಳ್ಳಲು
ಈ ಹೋಳಿ ಹುಣ್ಣಿಮೆ ಅತ್ಯಂತ ಉತ್ತಮ ಸಮಯ ಆಗಿದೆ. ಹಿಂದೂ ಪಂಚಾಂಗದ ಅನುಸಾರವಾಗಿ , ಪಾಲ್ಲುಣಿ ಹುಣ್ಣಿಮೆ ದಿನ ಹೋಳಿ ಹುಣ್ಣಿಮೆ ಹಬ್ಬ ಇರುತ್ತದೆ . ಈ ಹುಣ್ಣಿಮೆಯ ಮಾರನೆಯ ದಿನ ಬಣ್ಣದ ಹೋಕುಳಿಯನ್ನು ಆಡುತ್ತಾರೆ .ಈ ಬಾರಿ ಪಾಲ್ಗುಣಿ ಹುಣ್ಣಿಮೆಯು 24 ಮಾರ್ಚ್ ಮುಂಜಾನೆ 9 ಗಂಟೆ 54 ನಿಮಿಷಕ್ಕೆ ಶುರುವಾಗುತ್ತದೆ. ಈ ತಿಥಿಯ ಸಮಾಪ್ತಿ ಯು ಮಾರನೇ ದಿನ 25 ಮಾರ್ಚ್ ಮಧ್ಯಾಹ್ನ 12 ಗಂಟೆ 29 ನಿಮಿಷಕ್ಕೆ ಮುಕ್ತಾಯವಾಗುತ್ತದೆ . ಹೋಳಿ ಕಾ ದಹನವು 24 ಮಾರ್ಚ್ ದಿನದಂದು ಇರುತ್ತದೆ.
ಹೋಳಿ ದಹನಕ್ಕೆ ಶುಭ ಮೂಹೂರ್ತ 24 ಮಾರ್ಚ್ ರಾತ್ರಿ 11 ಗಂಟೆಯಿಂದ ರಾತ್ರಿ 12 ಗಂಟೆ 27 ನಿಮಿಷದ ವರೆಗೆ ಇರುತ್ತದೆ. ಇಲ್ಲಿ ಹೋಳಿ ದಹನ ಆದ ಮಾರನೇ ದಿನವೇ ಬಣ್ಣದ ಆಟವನ್ನು ಆಡುತ್ತಾರೆ. ಹಾಗಾಗಿ ಈ 25 ನೇ ಮಾರ್ಚ್ ದಿನದಂದು ಹೋಳಿ ಹುಣ್ಣಿಮೆಯ ಹಬ್ಬ ಇರುತ್ತದೆ. ಇಡೀ ದೇಶದಲ್ಲಿ ವಿಜೃಂಭಣೆಯಿಂದ ಬಣ್ಣದ ಆಟವನ್ನು ಆಡುತ್ತಾರೆ . ಆದರೆ ಈ ದಿನ ಗ್ರಹಣವು ಇರುತ್ತದೆ. ಹಿಂದೂ ಪಂಚಾಂಗದ ಅನುಸಾರವಾಗಿ ಚಂದ್ರ ಗ್ರಹಣದ ಸಮಯವೂ ಮುಂಜಾನೆ ಹತ್ತು ಗಂಟೆ ಎರಡು ನಿಮಿಷದಿಂದ ಶುರುವಾಗುತ್ತದೆ .ಮಧ್ಯಾಹ್ನ 3 ಗಂಟೆ 2 ನಿಮಿಷಕ್ಕೆ ಇದರ ಮುಕ್ತಾಯವಾಗುತ್ತದೆ .
ಸಾಮಾನ್ಯವಾಗಿ ಇದು ಉಪಚಾಯ ಚಂದ್ರಗ್ರಹಣ ಆಗಿರುವ ಕಾರಣದಿಂದಾಗಿ ಭಾರತದಲ್ಲಿ ಇದು ಗೋಚರವಾಗುವುದಿಲ್ಲ . ಹಾಗಾಗಿ ಇಲ್ಲಿ ಸೂತಕ ಕಾಲಕ್ಕೆ ಮಾನ್ಯತೆ ಇರುವುದಿಲ್ಲ .ಹಾಗಾಗಿ ಇಲ್ಲಿ ಹೋಳಿ ಹುಣ್ಣಿಮೆಯ ಹಬ್ಬವನ್ನು ಮಾಡಬಹುದು . ಇಲ್ಲಿ ಯಾವ ಕಾರ್ಯವನ್ನು ಬೇಕಾದರೂ ಮಾಡಬಹುದು . ಭಾರತ ದೇಶದಲ್ಲಿ ಚಂದ್ರ ಗ್ರಹಣದ ಯಾವುದೇ ಪ್ರಭಾವ ಇರುವುದಿಲ್ಲ .ಇಲ್ಲಿ ಭಗವಂತನ ಹೆಸರನ್ನು ನೆನೆಯುತ್ತಾ , ಹೋಳಿ ಹುಣ್ಣಿಮೆ ಹಬ್ಬವನ್ನು ಆಚರಣೆ ಮಾಡಬಹುದು .
ಈ ಚಂದ್ರ ಗ್ರಹಣವು ವಿದೇಶದಲ್ಲಿ ಗೋಚರವಾಗುತ್ತದೆ . ಮತ್ತು ರಾತ್ರಿಯ ಸಮಯದಲ್ಲಿ ಇರುತ್ತದೆ . ವಿದೇಶದಲ್ಲಿ ರಾತ್ರಿ ಆದರೆ ನಮ್ಮ ದೇಶದಲ್ಲಿ ಹಗಲು ಆಗಿರುತ್ತದೆ . ಹಾಗಾಗಿ ನಮ್ಮ ದೇಶದ ಮೇಲೆ ಇದರ ಪ್ರಭಾವ ಇರುವುದಿಲ್ಲ . ಹೋಳಿ ಹುಣ್ಣಿಮೆಯ ಅಗ್ನಿಯಲ್ಲಿ ಈ ಮೂರು ವಸ್ತುಗಳನ್ನು ಅದರಲ್ಲಿ ಹಾಕಬಾರದು . ಇಲ್ಲವಾದರೆ ಇದರ ಉಲ್ಟಾ ನಿಮಗೆ ಬಡತನ ಬರುತ್ತದೆ . ಹೋಳಿ ಹುಣ್ಣಿಮೆಯ ದಿನ ಯಾವತ್ತಿಗೂ ಇಂತಹ ಪೂಜೆ ಮಾಡಬಾರದು . ನಮ್ಮ ಸನಾತನ ಧರ್ಮದಲ್ಲಿ ಹೋಳಿ ಹುಣ್ಣಿಮೆ ಹಬ್ಬವನ್ನು ಕೆಟ್ಟದರ ಮೇಲೆ ಒಳ್ಳೆಯದರ ವಿಜಯ ಎಂದು ತೋರಿಸಿಕೊಟ್ಟಿದ್ದಾರೆ .
ಈ ದಿನ ಕೆಟ್ಟ ಶಕ್ತಿಗಳ ನಾಶವಾಗುತ್ತದೆ . ಒಳ್ಳೆಯ ಶಕ್ತಿಗಳ ಉಗಮ ಆಗುತ್ತದೆ . ಇದನ್ನು ದರಿದ್ರತೆಯನ್ನು ನಾಶ ಮಾಡುವಂತ ಜೀವನದಲ್ಲಿ ನಡೆಯುತ್ತಿರುವ ಕಷ್ಟಗಳನ್ನು ದೂರ ಮಾಡುವಂತಹ ದುಃಖ ಕಷ್ಟ ಎಲ್ಲಾ ತೊಂದರೆಗಳಿಂದ ಮುಕ್ತಿ ಪಡೆಯಲು ಎಲ್ಲಾ ದಿನಗಳಿಗಿಂತ ಒಳ್ಳೆಯ ದಿನ ಎಂದು ತಿಳಿಯಲಾಗಿದೆ. ಈ ದಿನ ನಕಾರಾತ್ಮಕ ಮತ್ತು ಸಕಾರಾತ್ಮಕ ಶಕ್ತಿಗಳು ಸಂಪೂರ್ಣ ಸಕ್ರಿಯ ಅವಸ್ಥೆಯಲ್ಲಿ ಇರುತ್ತದೆ . ಹಾಗಾಗಿ ಪ್ರಾಚೀನ ಕಾಲದಿಂದಲೂ ಜನರು ಸಿದ್ದಿಗಳನ್ನು ಪಡೆಯಲು ಈ ದಿನ ಪ್ರಯತ್ನ ಮಾಡುತ್ತಿರುತ್ತಾರೆ . ಯಾವ ಸಾಧನೆಯನ್ನು ಹೋಳಿಯ ಅಗ್ನಿಯ ಬೂದಿಯಿಂದ ಮಾಡುತ್ತಾರೋ ,
ಅದು ನೂರಕ್ಕೆ ನೂರರಷ್ಟು ತನ್ನ ಕಾರ್ಯವನ್ನು ಮಾಡುತ್ತದೆ . ಇಲ್ಲಿ ಹೋಳಿ ಹುಣ್ಣಿಮೆಯ ದಿನದಂದು ಮಾಡುವ ಪ್ರಭಾವ ಶಾಲಿ ಉಪಾಯಗಳನ್ನು ತಿಳಿಸಲಾಗುತ್ತದೆ . ಇದರಿಂದ ವರ್ಷವಿಡೀ ನೀವು ಖುಷಿಯಾಗಿ ಇರಬಹುದು .ನಿಮ್ಮ ದುಃಖ ಕಷ್ಟಗಳನ್ನು ದೂರ ಮಾಡಬಹುದು . ಶಾಸ್ತ್ರಗಳ ಅನುಸಾರವಾಗಿ ಹೋಳಿ ಹುಣ್ಣಿಮೆಯ ದಿನ ಹೋಳಿ ಕಾ ಅಗ್ನಿಯಲ್ಲಿ ಮುರಿದಿರುವ ಕಬ್ಬನ್ನು ಹಾಕಬಾರದು . ಇದರಿಂದ ಹೋಳಿ ಕಾ ದೇವಿಯ ಶಾಪ ಹಂಟಬಹುದು . ಮುರಿದು ಹೋಗಿರುವ ಕಬ್ಬಿನ ಗಿಡವನ್ನು ಪೂಜೆಗಳಲ್ಲಿ ಬಳಸಬಾರದು . ಶಾಸ್ತ್ರಗಳ ಅನುಸಾರವಾಗಿ ಹೋಳಿ ಕಾ ಅಗ್ನಿಯಲ್ಲಿ ಪವಿತ್ರವಾದ ವಸ್ತುಗಳನ್ನು ಹಾಕಬೇಕು.
ಯಾವಾಗ ನೀವು ಕೊಬ್ಬನ್ನು ಹಾಕುತ್ತೀರಾ, ಅದರ ಮೇಲೆ ಹಸಿರು ಎಲೆಗಳು ಇರಬೇಕು . ಏಕೆಂದರೆ ಪೂಜೆಗಳಲ್ಲಿ ಅಪೂರ್ಣವಾದ ವಸ್ತುಗಳನ್ನು ಬಳಕೆ ಮಾಡಬಾರದು . ಅಪೂರ್ಣವಾದ ವಸ್ತುಗಳನ್ನು ಹಾಕಿದರೆ ಅಪೂರ್ಣವಾದ ಫಲಗಳೇ ಸಿಗುತ್ತವೆ . ಹೋಳಿಯ ದಹನಕ್ಕೂ ಮುನ್ನವೇ ಸರಿಯಾದ ಕಬ್ಬನ್ನು ಮನೆಗೆ ತಂದು ಇಡಬೇಕು . ಇದು ಒಂದು ಮೂರು ಐದು ಏಳು ಈ ರೀತಿಯಾಗಿ ಬೆಸ ಸಂಖ್ಯೆಯಲ್ಲಿ ಇರಬೇಕು . ಹೋಳಿ ಹುಣ್ಣಿಮೆಯ ಪವಿತ್ರವಾದ ಅಗ್ನಿಯಲ್ಲಿ ನೀರು ಇರುವ ತೆಂಗಿನಕಾಯಿಯನ್ನು ಹಾಕಬಾರದು, ಇದರಿಂದ ನಿಮಗೆ ಪಾಪವೂ ಹಂಟಬಹುದು . ಯಾವತ್ತಿಗೂ ಒಣಗಿದ ತೆಂಗಿನ ಕಾಯಿಯನ್ನು ಹೋಳಿಯ ಅಗ್ನಿಯಲ್ಲಿ ಹಾಕಬೇಕು .
ಎಳನೀರು ಇರುವ ತೆಂಗಿನಕಾಯಿಯನ್ನು ಹೋಳಿ ಅಗ್ನಿಯಲ್ಲಿ ಯಾವತ್ತಿಗೂ ಹಾಕಬಾರದು . ಒಣಗಿದ ತೆಂಗಿನಕಾಯಿಯನ್ನು ಅಗ್ನಿಯಲ್ಲಿ ಹಾಕುವ ಮುನ್ನ , ಮನೆಯ ಜನರೆಲ್ಲರೂ ಅದನ್ನು ಸ್ಪರ್ಶ ಮಾಡಿರಬೇಕು . ಇದರಿಂದ ಹೋಳಿ ಕಾ ದೇವಿಯ ಅಪಾರ ಕೃಪೆ ನಿಮಗೆ ಸಿಗುತ್ತದೆ . ನಿಮ್ಮ ಬಡತನವನ್ನು ಅವರು ತೆಗೆದುಕೊಂಡು ಹೋಗುತ್ತಾರೆ . ನೀರು ಇರುವ ತೆಂಗಿನಕಾಯಿಯನ್ನು ಪೂಜೆ ಸಮಯದಲ್ಲಿ ನೀವು ಹೊಡೆಯಬಹುದು . ಆದರೆ ಅಗ್ನಿಯಲ್ಲಿ ಯಾವತ್ತಿಗೂ ಹಾಕಬಾರದು .
ಒಣಗಿದ ತೆಂಗಿನಕಾಯಿಯನ್ನು ಅಗ್ನಿಯಲ್ಲಿ ಹಾಕುವುದರಿಂದ ನಿಮ್ಮ ಎಲ್ಲಾ ಕಷ್ಟಗಳನ್ನು ಅವರ ಜೊತೆ ತೆಗೆದುಕೊಂಡು ಹೋಗುತ್ತಾರೆ . ಒಂದು ವೇಳೆ ನಿಮ್ಮ ಮನಸ್ಸಿನಲ್ಲಿ ಕೆಟ್ಟ ಭಯ ಹುಟ್ಟುತ್ತಿದ್ದರೆ , ಕೆಟ್ಟ ವಿಚಾರಗಳು ಬರುತ್ತಿದ್ದರೆ , ಪೂಜೆ ಮಾಡುವ ಸಮಯದಲ್ಲಿ ಒಂದು ಒಣಗಿದ ತೆಂಗಿನಕಾಯಿ , ಕಪ್ಪು ಎಳ್ಳು, ಮತ್ತು ಸಾಸಿವೆ ಕಾಳನ್ನು ತೆಗೆದುಕೊಂಡು ,ನಿಮ್ಮ ತಲೆಯ ಮೇಲೆ ಹೇಳು ಬಾರಿ ತಿರುಗಿಸಿ , ಇದನ್ನು ಅಗ್ನಿಯಲ್ಲಿ ಹಾಕಬೇಕು . ನಿಮ್ಮ ಚಿಂತೆಯನ್ನು ತಾಯಿ ಹೋಳಿ ಕಾ ದೇವಿ ದೂರ ಮಾಡುತ್ತಾಳೆ .
ಒಂದು ನಂಬಿಕೆಯ ಅನುಸಾರವಾಗಿ ತಾಯಿ ಹೋಳಿ ಕಾ ದೇವಿಗೆ ಮನೆಯಲ್ಲಿ ತಯಾರಿಸಿದ ನೈವೇದ್ಯ ಅತಿ ಪ್ರಿಯವಾಗಿದೆ . ನಿಮ್ಮ ಮನೆಯಲ್ಲಿ ನೀವು ಏನೇ ನೈವೇದ್ಯವನ್ನು ರೆಡಿ ಮಾಡಿದರೂ ಹೋಳಿ ತಾಯಿಗೆ ಖಂಡಿತವಾಗಿ ಅರ್ಪಿಸಬಹುದು . ಏನೇ ನೈವೇದ್ಯವನ್ನು ಅರ್ಪಿಸಿದರು ಅದು ಬೆಸ ಸಂಖ್ಯೆಯಲ್ಲಿ ಇರಬೇಕು . ನೀವು ಹೋಳಿಗೆಯನ್ನು ಅರ್ಪಿಸಿದರೆ 3, 5 ಮತ್ತು 7 ಈ ರೀತಿಯಲ್ಲಿ ಅರ್ಪಿಸಬೇಕು . ಹೋಳಿ ಕಾ ದಹನದಲ್ಲಿ ನೀರನ್ನು ಅರ್ಪಿಸಬಹುದು .
ಹೋಳಿಯ ಅಗ್ನಿಯಲ್ಲಿ ಸಗಣಿಯಿಂದ ರೆಡಿಯಾದ ಕುಳ್ಳುಗಳನ್ನು ಖಂಡಿತವಾಗಿ ಹಾಕಬಹುದು . ಹೋಳಿ ಅಗ್ನಿಯಲ್ಲಿ ಯಾವುದಾದರೂ ಹೊಸದಾಗಿ ಇರುವ ಫಸಲನ್ನು ಅರ್ಪಿಸಬಹುದು.
ಇದರಿಂದ ಮನೆಯಲ್ಲಿ ಧನ ಧಾನ್ಯದ ಕೊರತೆ ಯಾವತ್ತಿಗೂ ಆಗುವುದಿಲ್ಲ . ಶಾಸ್ತ್ರಗಳ ಅನುಸಾರವಾಗಿ ಯಾವುದಾದರೂ ಸ್ತ್ರೀಯರ ಋತುಚಕ್ರದ ಸಮಯ ಬಂದರೆ , ಅಂತಹವರು ಹೋಳಿ ಹುಣ್ಣಿಮೆಯ ಪೂಜೆಯನ್ನು ಬೇರೆಯವರಿಂದ ಮಾಡಿಸಬೇಕು . ನೀವು ಯಾವ ರೀತಿಯಾಗಿ ಪೂಜೆಯನ್ನು ಪಾಲಿಸುತ್ತಾ ಬಂದಿರುತ್ತೀರಾ ಆ ರೀತಿಯಾಗಿ ಮಾಡಬಹುದು .
ಋತುಚಕ್ರದ ಸಮಯದಲ್ಲಿ ಹೋಳಿ ದಹನದ ಹತ್ತಿರ ಹೋಗಬಾರದು . ದೂರದಿಂದ ಅದನ್ನು ನೋಡಬಹುದು . ಬೇರೆಯವರಿಂದ ಪೂಜೆಗಳನ್ನು ಮಾಡಿಸಬಹುದು . ಇದರಿಂದ ಫಲದ ಪ್ರಪ್ತಿಯಾಗುತ್ತದೆ . ಹೋಳಿ ಅಗ್ನಿಯಲ್ಲಿ ಹಸಿ ಅಕ್ಷತೆಯನ್ನು ಖಂಡಿತವಾಗಿ ಹಾಕಬಹುದು . ಇದರಿಂದ ಧನಪ್ರಾಪ್ತಿ ಆಗುತ್ತದೆ . ನಿಮ್ಮ ಮನೆಯ ಬಡತನವು ನಾಶವಾಗುತ್ತದೆ. ಒಂದು ವೇಳೆ ಹೋಳಿಗೆಯನ್ನು ಮಾಡಿದ್ದರೆ ಅದನ್ನು ಅಗ್ನಿಯಲ್ಲಿ ಅರ್ಪಿಸಬಹುದು . ಇವುಗಳನ್ನು ಯಾವುದೇ ಕಾರಣಕ್ಕೂ ಎಂಜಲು ಮಾಡಬಾರದು . ಯಾವಾಗಲೂ ತಾಯಿಗೆ ನೈವೇದ್ಯ ಅರ್ಪಿಸಿದ ನಂತರ ನೀವು ಸೇವಿಸಬಹುದು . ಇದರಿಂದ ಕುಟುಂಬದಲ್ಲಿ ಪ್ರೀತಿ ಹೆಚ್ಚಾಗುತ್ತದೆ .
ಈ ದಿನ ಗೋ ಮಾತೆಗೆ ಏನನ್ನಾದರೂ ತಿನ್ನಿಸಬೇಕು . ಗೋ ಮಾತೆಗೆ ರೊಟ್ಟಿ ಮತ್ತು ಬೆಲ್ಲವನ್ನು ತಿನ್ನಿಸಬೇಕು . ಹೀಗೆ ಮಾಡುವುದರಿಂದ ಎಲ್ಲಾ ದೇವತೆಗಳಿಗೆ ನೈವೇದ್ಯ ಅರ್ಪಿಸಿದಂತೆ ಆಗುತ್ತದೆ . ನೀವು ಏನೇ ಮಾಡದೆ ಹೋದರು ತಪ್ಪದೇ ಈ ದಿನ ಗೋ ಮಾತೆಗೆ ರೊಟ್ಟಿ ಮತ್ತು ಬೆಲ್ಲವನ್ನು ತಿನ್ನಿಸಿ . ಇದರಿಂದ ಹೋಳಿ ಕಾ ದೇವಿ ಆಶೀರ್ವಾದ ನಿಮಗೆ ಯಾವಾಗಲೂ ಸಿಗುತ್ತದೆ . ಹೋಳಿ ಆದ ನಂತರ ಆ ಬೂದಿಯನ್ನು ಮನೆಗೆ ತೆಗೆದುಕೊಂಡು ಬನ್ನಿ . ಅದನ್ನು ಎಲ್ಲರಿಗೂ ಹಣೆಗೆ ಹಚ್ಚಿಕೊಳ್ಳಲು ಕೊಡಬೇಕು .
ಈ ಬೂದಿಯನ್ನು ನೀವು ಕಪ್ಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ನೀವು ಯಾವತ್ತಿಗೂ ನಿಮ್ಮ ಬಳಿ ಇಟ್ಟುಕೊಳ್ಳಿ . ಚಿಕ್ಕ ಮಕ್ಕಳಿಗೆ ಕೆಟ್ಟ ದೃಷ್ಟಿ ಆದಾಗ ಅವರಿಗೆ ಇದನ್ನು ಹಚ್ಚಿ . ಇದರಿಂದ ಕೆಟ್ಟ ದೃಷ್ಟಿ ದೋಷ ಎಲ್ಲವೂ ದೂರವಾಗುತ್ತದೆ . ಹೋಳಿ ಅಗ್ನಿಯ ಬೂದಿಯನ್ನು ತೆಗೆದುಕೊಂಡು , ಕಪ್ಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಇದನ್ನು ನೀವು ನಿಮ್ಮ ಅಂಗಡಿಯಲ್ಲಿ ಅಥವಾ ಹಣ ಇಡುವ ಕಬೋರ್ಡಿನಲ್ಲಿ ಇಡಬಹುದು . ಇದರಿಂದ ಧನ ಸಂಪತ್ತಿನಲ್ಲಿ ವೃದ್ಧಿಯಾಗುತ್ತದೆ . ಹೋಳಿ ಅಗ್ನಿಯ ಬೂದಿಯನ್ನು ಬಳಸಿಕೊಂಡು ಮನೆಯ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಬಹುದು .
ಹಲವಾರು ಒಳ್ಳೆಯ ಕಾರ್ಯಗಳಿಗೆ ಬಳಸಬಹುದು. ಒಂದು ಮಾಹಿತಿಯ ಅನುಸಾರವಾಗಿ ಹೋಳಿ ಹುಣ್ಣಿಮೆಯ ಹಬ್ಬದ ದಿನ ಯಾರ ಬಳಿಯೂ ಸಹ ಬಿಳಿ ಬಣ್ಣದ ವಸ್ತುಗಳನ್ನು ತೆಗೆದುಕೊಳ್ಳಬಾರದು. ಏಕೆಂದರೆ ಈ ದಿನ ಬಿಳಿ ಬಣ್ಣದ ವಸ್ತುಗಳನ್ನು ತೆಗೆದುಕೊಂಡು ಮಾಟ ಮಂತ್ರ ದಂತಹ ಕೆಟ್ಟ ಕ್ರಿಯೆಗಳನ್ನು ಹೆಚ್ಚಾಗಿ ಮಾಡಬಹುದು . ಹಾಗಾಗಿ ಅವುಗಳಿಂದ ದೂರ ಇರುವುದು ಒಳ್ಳೆಯದು . ಈ ದಿನ ಮಾಂಸ ಮಧ್ಯದ ಸೇವನೆ ಮಾಡಬಾರದು . ಶಾಸ್ತ್ರಗಳ ಅನುಸಾರವಾಗಿ ಭಗವಂತನಾದ ಶ್ರೀ ಕೃಷ್ಣನಿಗೆ ಹೋಳಿ ಹುಣ್ಣಿಮೆಯ ಹಬ್ಬ ಅತ್ಯಂತ ಪ್ರಿಯವಾಗಿದ್ದು , ಹಾಗಾಗಿ ಈ ದಿನ ಕೃಷ್ಣನಿಗೆ ಸಿಟ್ಟು ಬರುವ ಕಾರ್ಯಗಳನ್ನು ಮಾಡಬಾರದು .
ಈ ದಿನ ಸ್ತ್ರೀಯರಿಗೆ ಅವಮಾನ ಮಾಡಬಾರದು . ಈ ದಿನ ಮುಂಜಾನೆ ಬೇಗ ಎದ್ದೇಳಬೇಕು. ಹೋಳಿ ಹುಣ್ಣಿಮೆಯ ದಿನ ಹೆಚ್ಚಾಗಿ ನಿದ್ರೆ ಮಾಡಬಾರದು .. ಈ ದಿನ ಸ್ತ್ರೀಯರಿಂದ ದೂರ ಇರಬೇಕು. ಗಂಡ – ಹೆಂಡತಿ ಸಂಬಂಧ ಮಾಡಬಾರದು . ಪುರಾಣದ ಅನುಸಾರವಾಗಿ ಈ ದಿನ ಎಲ್ಲರೂ ಬಣ್ಣದ ಹೋಕುಳಿ ಆಡಬೇಕು . ಇಲ್ಲಿ ಯಾರು ಒಳ್ಳೆಯ ಮನಸ್ಸಿನಿಂದ ಹೋಳಿ ಹುಣ್ಣಿಮೆಯ ರಂಗ ಪಂಚಮಿ ಆಚರಿಸುತ್ತಾರೋ , ಅವರ ಮೇಲೆ ತಾಯಿ ಹೋಳಿ ಕಾ ದೇವಿಯ ಆಶೀರ್ವಾದ ಇರುತ್ತದೆ. ಹೋಳಿ ಹುಣ್ಣಿಮೆ ಒಂದು ಪವಿತ್ರವಾದ ಹಬ್ಬ ಆಗಿದ್ದು, ಇದನ್ನು ಅಪವಿತ್ರಗೊಳಿಸುವ ವ್ಯಕ್ತಿಯು ಯಾವತ್ತಿಗೂ ಕೃಷ್ಣನ ಶಾಪಕ್ಕೆ ಒಳಗಾಗುತ್ತಾರೆ. ಹಾಗಾಗಿ ಒಳ್ಳೆಯ ಮನಸ್ಸಿನಿಂದ ಹೋಳಿ ಹುಣ್ಣಿಮೆಯನ್ನು ಆಚರಿಸಿ ಎಂದು ಹೇಳಲಾಗಿದೆ.