ಹೊಟ್ಟೆ ತುಂಬಾ ತಿಂದು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಊಟ ಹೆಚ್ಚು ತಿಂದರೆ ತೂಕ ಹೆಚ್ಚು ಆಗುತ್ತದೆ ಎಂದು ಊಟವನ್ನು ಬಿಟ್ಟರೆ ತೂಕ ಇನ್ನು ಹೆಚ್ಚು ಆಗುತ್ತದೆ. ನಮ್ಮ ಆರೋಗ್ಯದಲ್ಲೂ ಹಲವು ಸಮಸ್ಯೆಗಳು ಉಂಟಾಗುತ್ತವೆ. ಹೊಟ್ಟೆ ತುಂಬಾ ಊಟ ಮಾಡುವುದರ ಜೊತೆಗೆಈ ಮನೆಮದ್ದನ್ನು ಮಾಡಿ ನೋಡಿ ನಿಮ್ಮ ತೂಕ ಕಡಿಮೆಯಾಗುವುದರ ಜೊತೆಗೆ ಆರೋಗ್ಯ ಚೆನ್ನಾಗಿರುತ್ತದೆ. ಸ್ಕಿನ್ ತುಂಬಾ ಹೊಳೆಯುತ್ತದೆ. ಕೂದಲು ಕೂಡ ದಟ್ಟವಾಗಿ ಬೆಳೆಯುತ್ತದೆ.
ಹೇಗೆ ಆರೋಗ್ಯಕರವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಇಸಬ್ಗೋಲ್ ಎಂಬುದು ಆಯುರ್ವೇದದ ಅಂಗಡಿಗಳಲ್ಲಿ ಸಿಗುತ್ತದೆ. ಜೊತೆಗೆ ಆನ್ಲೈನ್ನಲ್ಲಿ ಸಿಗುತ್ತದೆ. ಇದು ಮಲಬದ್ಧತೆಯನ್ನು ಹೋಗಲಾಡಿಸುತ್ತದೆ. ಈ ಇಸಬ್ಗೋಲ್ ನಮಗೆ ಹೇಗೆ ಸಹಾಯ ಮಾಡುತ್ತದೆ ಎಂದರೆ ಇದರಲ್ಲಿನ ನಾರಿನಾಂಶ ಮಲಬದ್ಧತೆಯನ್ನ ನಿವಾರಣೆ ಮಾಡುತ್ತದೆ.
ಇದರಿಂದ ನಮ್ಮ ಹೊಟ್ಟೆಯಲ್ಲಿ ಸೇರಿಕೊಂಡಂತಹ ಕೆಟ್ಟ ಕಲ್ಮಶವೆಲ್ಲವೂ ಹೊರಗಡೆ ಹೋಗುತ್ತದೆ. ಯಾವಾಗ ಹೊಟ್ಟೆ ಕ್ಲೀನ್ ಆಗುತ್ತದೆಯೋ ನಮ್ಮ ಜೀರ್ಣಕ್ರಿಯೆಯೂ ಸರಿಯಾಗಿ ಆಗುತ್ತದೆ. ಬೇಡವಾದ ಕೊಬ್ಬು ಬೊಜ್ಜು ನಮ್ಮ ದೇಹಕ್ಕೆ ಸೇರಿಕೊಳ್ಳುವುದಿಲ್ಲ ಅದೆಲ್ಲವೂ ನಮ್ಮ ದೇಹದಿಂದ ಹೊರಹಾಕಲ್ಪಡುತ್ತದೆ. ಒಂದು ಸ್ಪೂನ್ ಇಸಬ್ಗೋಲ್ ಅನ್ನು ತೆಗೆದುಕೊಂಡು
ಸ್ವಲ್ಪ ಉಗುರು ಬೆಚ್ಚಗಿನ ಒಂದು ಲೋಟ ನೀರಿಗೆ ಹಾಕಬೇಕು ನಂತರ ಮಿಕ್ಸ್ ಮಾಡಬೇಕು. ನೀರಿನಲ್ಲಿ ನೆನೆದು ಒಂದು ತರಹದ ಜೆಲ್ ತರಹ ಆಗುತ್ತದೆ. ಇದನ್ನು ರಾತ್ರಿ ಊಟವಾದ ಅರ್ಧ ಗಂಟೆ ಆದ ಮೇಲೆ ಸೇವಿಸಬೇಕು. ಇದರಿಂದ ನಮ್ಮ ದೇಹದಲ್ಲಿ ಸೇರಿಕೊಂಡಂತಹ ಕೆಟ್ಟ ಕಲ್ಮಶ ಹೊರಹಾಕಲ್ಪಡುತ್ತದೆ. ಜೊತೆಗೆ ಬೆಳಿಗ್ಗೆ ಒಂದು ಲೋಟ ನೀರಿಗೆ ಒಂದು ಸ್ಪೂನ್ ಕಾಮಕಸ್ತೂರಿ
ಬೀಜವನ್ನು ಹಾಕಬೇಕು. ಇದನ್ನು ಕುಡಿಯುವುದರಿಂದ ಹೊಟ್ಟೆ ಹಸಿವು ಕಡಿಮೆಯಾಗುತ್ತದೆ. ಹೀಟ್ ಆಗಿರುವ ನಮ್ಮ ದೇಹವನ್ನು ಕೂಲ್ ಮಾಡುವ ಗುಣ ಈ ಕಾಮಕಸ್ತೂರಿ ಬೀಜಕ್ಕೆ ಇದೆ. ಇದು ನಮ್ಮ ಕಣ್ಣು, ಸ್ಕಿನ್, ಕೂದಲಿಗೆ ಒಳ್ಳೆಯದು ಜೊತೆಗೆ ಎನರ್ಜಿಯನ್ನು ಕೊಡುತ್ತದೆ. ಜೀರ್ಣಕ್ರಿಯೆಗೂ ಕೂಡ ಒಳ್ಳೆಯದು. ಈ ಬೀಜವನ್ನು ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್
ನೀರಿಗೆ ಒಂದು ಸ್ಪೂನ್ನಷ್ಟು ಕಾಮಕಸ್ತೂರಿ ಬೀಜವನ್ನು ಹಾಕಬೇಕು ಇದು ರಾತ್ರಿ ಎಲ್ಲಾ ನೀರಿನಲ್ಲಿ ಚೆನ್ನಾಗಿ ನೆಂದು ಅರಳಿರುತ್ತದೆ. ಇದು ನಮ್ಮ ದೇಹಕ್ಕೆ ಎನರ್ಜಿಯನ್ನು ಕೊಡುತ್ತದೆ ತುಂಬಾ ಒಳ್ಳೆಯದು. ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರೆ ಕಾಮಕಸ್ತೂರಿ ಬೀಜವಿರುವ ನೀರಿನ ಗ್ಲಾಸ್ಗೆ ಅರ್ಧ ಹೋಳು ನಿಂಬೆಹಣ್ಣು ಇಂಡಿಕೊಳ್ಳಬೇಕು.
ಜೊತೆಗೆ ಇದಕ್ಕೆ ಒಂದು ಸ್ಪೂನ್ ಜೇನುತುಪ್ಪವನ್ನು ಸೇರಿಸಬೇಕು. ಹನಿ ಕೂಡ ನಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಇದು ಕುಡಿಯಲು ಕೂಡ ರುಚಿಯಾಗಿರುತ್ತದೆ. ಇದನ್ನು ಬೆಳಗಿನ ತಿಂಡಿ ಮಧ್ಯಾಹ್ನದ ಊಟ, ರಾತ್ರಿಯ ಊಟಕ್ಕೆ ಅರ್ಧ ಗಂಟೆ ಮುಂಚೆ ಯಾವುದಾದರೂ ಒಂದು ಸಮಯ ತೆಗೆದುಕೊಳ್ಳಬೇಕು. ಅರ್ಧ ಗಂಟೆ ಮುಂಚೆ ಕುಡಿಯುವುದರಿಂದ
ಈ ಕಾಮಕಸ್ತೂರಿ ಬೀಜದಿಂದ ಹೊಟ್ಟೆ ಹಸಿವು ಕಡಿಮೆಯಾಗುತ್ತದೆ. ಇದನ್ನು ಕುಡಿದು ಬೆಳಿಗ್ಗೆ ಹೊಟ್ಟೆ ತುಂಬಾ ಆಹಾರ ಸೇವನೆ ಮಾಡಿದರೆ ಅದನ್ನು ಕಡಿಮೆ ತಿನ್ನುತ್ತೀರಿ. ಯಾವ ಸಮಯದಲ್ಲಾದರೂ ಊಟಕ್ಕೆ ಮುಂಚೆ ಸೇವಿಸಬೇಕು ಅಷ್ಟೆ. ಈ ರೀತಿಯ ಮನೆಮದ್ದನ್ನು ಅನುಸರಿಸಿದರೆ ಒಂದು ವಾರದಲ್ಲೇ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತೀರ.
ಇಸಬ್ಗೋಲ್ಅನ್ನು ಒಂದು ವಾರ ಮಾತ್ರವೇ ತೆಗೆದುಕೊಳ್ಳಬೇಕು. ಒಂದು ವಾರದಲ್ಲೇ ನಿಮಗೆ ಫಲಿತಾಂಶ ಗೊತ್ತಾಗುತ್ತದೆ. ನಂತರ ಒಂದು ತಿಂಗಳು ಬಿಟ್ಟು ಮತ್ತೆ ಒಂದು ವಾರ ತೆಗೆದುಕೊಳ್ಳಬೇಕು. ಇದನ್ನು ತಿಂಗಳಿಗೆ ಒಂದು ವಾರ ಮಾತ್ರವಷ್ಟೆ ತೆಗೆದುಕೊಳ್ಳಬೇಕು. ಇನ್ನು ಕಾಮಕಸ್ತೂರಿ ಬೀಜವನ್ನು ಇಡೀ ತಿಂಗಳು ತೆಗೆದುಕೊಳ್ಳಬಹುದು. ಅಂತಹ ಅಡ್ಡ ಪರಿಣಾಮಗಳೇನು ಇಲ್ಲ.
ಇನ್ನೊಂದು ಸೂಚನೆ ಎಂದರೆ ಇಸಬ್ಗೋಲ್ಅನ್ನು ತೆಗೆದುಕೊಳ್ಳುವಾಗ ಭೇದಿ ಆಯಿತೆಂದರೆ ಅದನ್ನು ತೆಗೆದುಕೊಳ್ಳಬೇಡಿ ನಿಲ್ಲಿಸಿಬಿಡಿ. ಈ ಎರಡು ವಿಧಾನಗಳು ನಮ್ಮ ಹೊಟ್ಟೆಯಲ್ಲಿ ಸೇರಿಕೊಂಡಿರುವ ಕೊಬ್ಬನ್ನು ಕರಗಿಸಲು ತುಂಬಾ ಸಹಾಯ ಮಾಡುತ್ತದೆ. ಆರೋಗ್ಯಕರವಾದ ಫಲಿತಾಂಶ ನಿಮಗೆ ಸಿಗುತ್ತದೆ. ತೂಕವನ್ನು ಇಳಿಸುತ್ತಿರುವುದರಿಂದ
ಬೆಲ್ಲ ಮತ್ತು ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡಬೇಕು. ಹೊಟ್ಟೆ ತುಂಬಾ ತಿನ್ನಿ ಎಂದರೆ ಮನೆಯ ಆಹಾರವನ್ನು ಚೆನ್ನಾಗಿ ಊಟ ಮಾಡಿ, ಚೆನ್ನಾಗಿ ನೀರನ್ನು ಕುಡಿದು, ಕಣ್ಣು ತುಂಬಾ ನಿದ್ದೆಯನ್ನು ಮಾಡಬೇಕು. ಯಾವಾಗಲೂ ಸಂತೋಷದಿಂದಿದ್ದು ಪಾಸಿಟಿವ್ ಯೋಚನೆಗಳನ್ನು ಮಾಡಬೇಕು. ಸೋಮಾರಿಯಾಗಿರದೇ ಯಾವಾಗಲೂ ಚಟುವಟಿಕೆಯಿಂದ ಇರುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು