ಇವ್ರಿಗೆ ಟೆನ್ಶನ್ ಇಲ್ವೇ ಇಲ್ಲ!

0

ಸ್ನೇಹಿತರೇ ಕೆಲವರು ಸಮಸ್ಯೆ ಬಂದರೇ ತಲೆ ಮೇಲೆ ಕೈ ಇಟ್ಟು ಕುಳಿತುಕೊಂಡುಬಿಡುತ್ತಾರೆ ಇನ್ನು ಕೆಲವರು ಏನೇ ಸಮಸ್ಯೆ ಇದ್ದರೂ ಮುಖದಲ್ಲಿ ಮುಗುಳು ನಗೆ ಇಟ್ಟುಕೊಂಡಿರುತ್ತಾರೆ. ಎಲ್ಲರ ಸ್ವಭಾವ ಒಂದೇ ಇರುವುದಿಲ್ಲ ಕಾರಣ ನೀವು ಹುಟ್ಟಿದ ರಾಶಿಗೆ ಮತ್ತು ನಿಮ್ಮ ವರ್ತನೆಗೆ ಲಿಂಕ್ ಇರುತ್ತದೆ. ಈ ಲೇಖನದಲ್ಲಿ ಯಾವಾಗಲೂ ಕೂಲ್ ಆಗಿ, ಶಾಂತವಾಗಿ ಕಷ್ಟಗಳನ್ನು ಎದುರಿಸುವ ಐದು ರಾಶಿಗಳ ಬಗ್ಗೆ ತಿಳಿಸಿಕೊಡುತ್ತೇವೆ.

ವೃಷಭ ರಾಶಿ: ಈ ರಾಶಿಯವರಿಗೆ ತುಂಬಾ ಕೋಪ ಬರುತ್ತದೆ. ಒತ್ತಡದಲ್ಲಿದ್ದಾಗ ಹೆಚ್ಚು ಟೆನ್ಷನ್ ಮಾಡಿಕೊಳ್ಳದೇ ಕೂಲ್ ಆಗಿ ಇರುತ್ತಾರೆ. ಏಕೆಂದರೆ ಈ ರಾಶಿಗೆ ಅಧಿಪತಿ ಶುಕ್ರ. ಈ ರಾಶಿಯವರು ಒತ್ತಡದಲ್ಲಿದ್ದಾಗ ಆ ಸಮಸ್ಯೆಗೆ ಮೊದಲು ಕಾರಣವನ್ನು ಹುಡುಕುತ್ತಾರೆ. ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುತ್ತಾರೆ. ಅದರಿಂದ ಹೊರಗೆ ಬರಲು ಒಂದಲ್ಲ ಎರಡಲ್ಲ ಎಷ್ಟು ದಾರಿ ಇದೆಯೋ ಅದನ್ನೆಲ್ಲಾವನ್ನು ಕಂಡು ಹಿಡಿಯುತ್ತಾರೆ. ಇದೇ ಕಾರಣಕ್ಕಾಗಿ ಒತ್ತಡಗಳನ್ನು ನಿಭಾಯಿಸುವಲ್ಲಿ ನಿಸ್ಸೀಮರು ಎಂದು ಹೇಳಬಹುದು.

ತುಲಾರಾಶಿ: ನ್ಯಾಯ ನೀತಿ ಎಂದು ಹೋರಾಟ ಮಾಡಲು ಯಾವಾಗಲೂ ತುಲಾರಾಶಿಯ ಜನರು ಮುಂದೆ ಇರುತ್ತಾರೆ. ಇವರ ರಾಶಿಯ ಅಧಿಪತಿ ಶುಕ್ರನಾಗಿರುತ್ತಾನೆ. ಇವರಿಗೆ ಹುಟ್ಟಿನಿಂದಲೇ ಎಲ್ಲರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಗುಣ ಬಂದಿರುತ್ತದೆ. ಕಾಟ ಕೊಡುವ ಜನರ ಜೊತೆಯಲ್ಲೂ ಚೆನ್ನಾಗಿಯೇ ಮಾತನಾಡುತ್ತಾರೆ. ವಿರೋಧಿಗಳನ್ನ ಕನ್ಫೀಜ್ ಮಾಡಿ ಗುಟ್ಟುಗಳನ್ನು ತಿಳಿದುಕೊಳ್ಳುವ ಸಾಮರ್ಥ್ಯವಿದೆ. ಜಗಳ ಆದ ಕಡೆ ಮಧ್ಯಸ್ಥಿಕೆ ವಹಿಸಿ ಶಾಂತಿಯನ್ನು ಕಾಪಾಡಲು ಆಸಕ್ತಿಯನ್ನು ತೋರಿಸುತ್ತಾರೆ. ಎಂತಹ ಪ್ರತಿಕೂಲ ಪರಿಸ್ಥಿತಿಯನ್ನು ಅನುಕೂಲಕರವಾಗಿ ಮಾಡಿಕೊಳ್ಳುವ ಕಲೆ ಅವರಲ್ಲಿರುತ್ತದೆ. ಎಲ್ಲವನ್ನು ಬ್ಯಾಲೆನ್ಸ್ ಮಾಡುವ ಗುಣವನ್ನು ಹೊಂದಿರುತ್ತಾರೆ ಆದ್ದರಿಂದ ಖುಷಿ ಬಂದರೂ ಹಿಗ್ಗುವುದಿಲ್ಲ, ದುಃಖ ಬಂದರೂ ಕುಗ್ಗುವುದಿಲ್ಲ. ಎಂತಹ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತಹವರಾಗಿರುತ್ತಾರೆ.

ಕನ್ಯಾರಾಶಿ: ಕಣ್ಣ ಎದುರೇ ವಿರೋಧಿಗಳನ್ನ ಬಕರ ಮಾಡುವುದನ್ನ ಕರಗತ ಮಾಡಿಕೊಂಡಿರುತ್ತಾರೆ. ಈ ರಾಶಿಗೆ ಅಧಿಪತಿ ಬುಧ ಆಗಿರುವುದರಿಂದ ಬುದ್ಧಿ ಹೆಚ್ಚು. ಈ ರಾಶಿಯಲ್ಲಿ ಹುಟ್ಟಿರುವ ತುಂಬಾ ಜನರು ಬಹಳ ಚುರುಕಾಗಿರುತ್ತಾರೆ. ಇವರಿಗೆ ಯಾವುದೇ ಒಂದು ವಿಚಾರದ ಬಗ್ಗೆ ಕಾರಣ ಕೊಟ್ಟರೇ ಸಾಕಾಗುವುದಿಲ್ಲ ಅದರ ಬಗ್ಗೆ ವಿವರಣಾತ್ಮಕವಾಗಿ ತಿಳಿಸಬೇಕಾಗುತ್ತದೆ. ಈ ರಾಶಿಯವರು ಬೇಗನೇ ಕನ್ವಿನ್ಸ್ ಆಗಲ್ಲ. ಕೆಲವು ಬಾರಿ ಒತ್ತಡಗಳನ್ನು ತಂದುಕೊಳ್ಳುತ್ತಾರೆ ಆ ಒತ್ತಡವಿದ್ದರೂ ಅದನ್ನು ಬುದ್ದಿವಂತಿಕೆಯಿಂದ ಮ್ಯಾನೇಜ್ ಮಾಡುವುದಕ್ಕೆ ಗೊತ್ತು ಮತ್ತು ಯಾವುದೇ ಸಮಸ್ಯೆ ಎದುರಾದರೂ ಅದರ ಸೂಕ್ಷ್ಮ ಅಂಶಗಳನ್ನು ಆಲೋಚನೆ ಮಾಡುತ್ತಾರೆ. ಪ್ರಾಕ್ಟಿಕಲ್ ಆಗಿ ಏನೇನು ಮಾಡಬೇಕು ಎಂದು ಉತ್ತರ ಹುಡುಕಿ ಮುಂದೆ ಹೆಜ್ಜೆ ಇಡುತ್ತಾರೆ. ಇವರು ಪ್ಲಾನ್ ಪಕ್ಕಾ ಆಗುವವರೆಗೂ ಯಾರಿಗೂ ತಿಳಿಸುವುದಿಲ್ಲ.

ಮಕರ ರಾಶಿ: ಜೀವನದಲ್ಲಿ ಎಂತಹ ಬಿರುಗಾಳಿ ಎದ್ದರೂ ಅದನ್ನು ನಿಭಾಯಿಸುತ್ತಾರೆ ಮತ್ತು ಗಟ್ಟಿಯಾಗಿ ನಿಲ್ಲುತ್ತಾರೆ. ಸರಿಯಾಗಿ ಪ್ಲಾನ್ ಮಾಡಿ ಸಮಸ್ಯೆಯ ಬುಡಕ್ಕೆ ಕೈ ಹಾಕಿ ಮತ್ತೆ ಆ ಸಮಸ್ಯೆ ಬರದ ಹಾಗೇ ನೋಡಿಕೊಳ್ಳುವ ಜನರು ಈ ರಾಶಿಯವರಾಗಿರುತ್ತಾರೆ. ಏಕಾಗ್ರತೆ ಹೆಚ್ಚು ಇರುತ್ತದೆ. ಈ ರಾಶಿಗೆ ಅಧಿಪತಿ ಶನಿ. ಇವರು ಹಾರ್ಡ್ ವರ್ಕ್ ಮಾಡುವವರು ಆಗಿರುತ್ತಾರೆ ಮತ್ತು ಇವರು ಯಾವುದು ಸರಿ? ಯಾವುದು ತಪ್ಪು ಎಂದು ತಿಳಿದುಕೊಂಡು ಮುಂದುವರೆಯುತ್ತಾರೆ. ಇವರಿಗೆ ಕಷ್ಟ ಮತ್ತು ಒತ್ತಡ ಬಂದಾಗಲೇ ಮೈಂಡ್ ಶಾರ್ಪ್ ಆಗುತ್ತದೆ. ಇವರು ಯಾವಾಗಲೂ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುವುದರಿಂದ ಯಾವುದೇ ಎಮೋಷನ್ ಗೆ ಒಳಗಾಗದೇ ಇರುವುದರಿಂದ ಇವರ ಮೈಂಡ್ ಅಷ್ಟು ಬೇಗ ಡಿಸ್ಟರ್ಬ್ ಆಗಲ್ಲ. ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಸ್ಪಷ್ಟ ಗುರಿ ಇರುತ್ತದೆ. ಅಸಾಧ್ಯವಾದದ್ದನ್ನ ಸಾಧಿಸುವ ಛಲ ಇರುತ್ತದೆ.

ವೃಶ್ಚಿಕ ರಾಶಿ: ಈ ರಾಶಿಯ ಅಧಿಪತಿ ಮಂಗಳ. ಈ ರಾಶಿಯಲ್ಲಿ ಹುಟ್ಟಿರುವ ಜನರು ಪವರ್ ಫುಲ್ ಆಗಿರುತ್ತಾರೆ. ಕೋಪ ಬರುವುದು ಅಪರೂಪ ಬಂದರೇ ರುದ್ರ ಅವತಾರ ಎನ್ನಬಹುದು. ಇವರು ಎಷ್ಟೇ ಒತ್ತಡ ಮತ್ತು ಕೋಪ ವಿದ್ದರೂ ಮಂಗಳ ಗ್ರಹದಿಂದ ಕೂಲ್ ಆಗಿಯೂ ಇರುತ್ತಾರೆ. ಇವರು ಗಮನವಿಟ್ಟು ಕೇಳುವ ಗುಣವನ್ನು ಹೊಂದಿರುತ್ತಾರೆ. ತಮ್ಮ ಒಂದು ಸಲದ ನಿರ್ಧಾರವನ್ನು ಮತ್ತೆ ಬದಲಾವಣೆ ಮಾಡುವುದಿಲ್ಲ. ಜವಾಬ್ದಾರಿಯನ್ನು ತೆಗೆದುಕೊಂಡು ನಿರ್ವಹಿಸುವ ಗುಣವನ್ನು ಹೊಂದಿರುತ್ತಾರೆ.

Leave A Reply

Your email address will not be published.