ಇವರಿಗೆ ಕೆಲ್ಸ ಬಿಟ್ರೆ ಜೀವನನೇ ಇಲ್ವಾ?

0

ನಾನು ಇವತ್ತು ಫುಲ್ ಬಿಜಿ ಇದ್ದೆ, ಕೆಲಸ ತುಂಬಾ ಇದೆ ತೊಂದರೆ ಕೊಡಬೇಡಿ ಸಾಧಿಸುವುದು ತುಂಬಾನೇ ಇದೆ ಇನ್ನು ಹೆಸರು ಮಾಡಬೇಕು ಹಣ ಗಳಿಸಬೇಕು ನಾನು ಶ್ರೀಮಂತ ಆಗಲೇಬೇಕು ಹೀಗೆಲ್ಲ ಹೇಳುತ್ತಾ ಊಟ ತಿಂಡಿ ಬಿಟ್ಟು ಕೆಲಸ ಮಾಡಲು ಯಾರ ಹತ್ತಿರ ಆಗುವುದಿಲ್ಲ. ಬೇಗ ಬೋರ್ ಬರುತ್ತದೆ ಯಾರು ನಿರಂತರವಾಗಿ ಕೆಲಸ ಮಾಡುತ್ತಾರೆ? ಫ್ರೀ ಸಿಕ್ಕರೆ ಸಾಕು ಅಂದುಕೊಳ್ಳುವ ಜನರೇಹೆಚ್ಚು, ಹೀಗಿರುವಾಗ ತಮ್ಮ ಜೀವನದ ಎಲ್ಲಾ ಟೈಮನ್ನು ಕೆಲಸಕ್ಕೆ ಮಾತ್ರ ಸೀಮಿತಗೊಳಿಸಲು ಯಾರಿಂದ ಆಗುತ್ತದೆ ಹೇಳಿ.

ಮಹತ್ವಾಕಾಂಕ್ಷೆ ಇಟ್ಕೊಂಡು ಕೆಲಸ ಮಾಡುವುದಕ್ಕೆ ಎಷ್ಟು ಜನರ ಕೈಯಲ್ಲಿ ಆಗುತ್ತದೆ? ಅನ್ನುವ ಪ್ರಶ್ನೆ ಕಾಡುವುದು ಸಹಜ ಆದರೆ ಜ್ಯೋತಿಷ್ಯದಲ್ಲಿ ಉತ್ತರವಿದೆ. ಇರುವ 12 ರಾಶಿ ಚಕ್ರದಲ್ಲಿ ನೀವೇನಾದರೂ ಆ ನಾಲ್ಕು ರಾಶಿಯಲ್ಲಿ ಹುಟ್ಟಿದರೆ ನಿಮ್ಮ ಹುಟ್ಟು ಹಾರ್ಡ್ ವರ್ಕಿಂಗ್ ಜನ ಎಂದು ಹೇಳಬಹುದು. ಆಶ್ಚರ್ಯ ಅಂದರೆ ನಮ್ಮ ಪ್ರಧಾನಿ ಮೋದಿಯವರು ಮತ್ತು ಒಲಂಪಿಕ್ ಗೋಲ್ಡ್ ಮೆಡಲಿಸ್ಟ್ ನಿರಂಜನ್ ಚೋಪ್ರಾ ರವರ ರಾಶಿ ಕೂಡ ಈ ನಾಲ್ಕು ರಾಶಿಯಲ್ಲಿ

ಒಂದು ಕೆಲಸದ ವಿಷಯದಲ್ಲಿ 100% ಪರಿಶ್ರಮ ಹಾಕಲು ಎಲ್ಲರ ಹತ್ತಿರ ಸಾಧ್ಯವಿಲ್ಲ ಆದರೆ ಈ ನಾಲ್ಕು ರಾಶಿಯ ಜನ ಮಾತ್ರ ತಮಗೆ ಆಗುವಷ್ಟು ಸಮಯ ಶಕ್ತಿ ಮತ್ತು ಗಮನ ಕೊಟ್ಟು ಸರಿಯಾಗಿ ಕೆಲಸ ಮುಗಿಸುವ ಗುಣ ದವರಾಗಿರುತ್ತಾರೆ. ಅದರಲ್ಲಿ ಒಂದನೇ ರಾಶಿಯವರು ಕನ್ಯಾ ರಾಶಿಯವರು. ಇವರ ಬಗ್ಗೆ ಹೇಳುವುದಾದರೆ ಬ್ರೀಥ್ ವಿತ್ ಬ್ರೈನ್ಎಂದರೆ

ನೆನಪಾಗುವುದು ಕನ್ಯಾ ರಾಶಿ ಎಂತಹ ಸಮಸ್ಯೆ ಇದ್ದರೂ ಪರಿಹಾರ ಮಾಡುವ ತಾಕತ್ತು ಇವರಲ್ಲಿ ಇರುತ್ತದೆ . ಏನೇ ಮಾತನಾಡಿದರು ಒಂದು ಕಾರಣ ಇದ್ದೇ ಇರುತ್ತದೆ ಆ ಮಾತಿಗೆ ಸಾಕ್ಷಿ ಇಟ್ಟುಕೊಂಡು ಮಾತನಾಡುತ್ತಾರೆ ಕೆಲಸದ ವಿಚಾರದಲ್ಲೂ ಅಷ್ಟೇ ಆ ಕೆಲಸದ ನಿಖರವಾದ ಕಾರಣ ಇಟ್ಟುಕೊಂಡು ಸರಿಯಾಗಿ ಅಧ್ಯಯನ ಮಾಡಿಕೊಂಡೇ ಕೆಲಸ ಆರಂಭ ಮಾಡುತ್ತಾರೆ

ಬೇಕಾಬಿಟ್ಟಿ ಕೆಲಸ ಮಾಡುವುದಿಲ್ಲ ಅದಕ್ಕಾಗಿ ಇವರನ್ನು ಮಿಸ್ ಪರ್ಫೆಕ್ಟ್ ಎಂದು ಕರೆಯುತ್ತೇವೆ. ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಕೆಲಸದಿಂದ ಹಿಂದೆ ಸರಿಯುವ ಜನ ಇವರಲ್ಲ ಹಾಗೆ ಕನ್ಯಾ ರಾಶಿಯ ಅಧಿಪತಿ ಬುಧ ಆಗಿರುವುದರಿಂದ ಆತ ವೇಗತನವನ್ನು ಕೊಡುತ್ತಾನೆ. ಒಂದೇ ಸಲ ಎರಡು ಮೂರು ಕೆಲಸ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ.

ಮುಂದಿನ ರಾಶಿಯವರ ಬಗ್ಗೆ ಹೇಳಬೇಕೆಂದರೆ ಇವು ಇವರು ಆಡು ಮಟ್ಟದ ಸೊಪ್ಪಿಲ್ಲ ಅನ್ನುವ ರೀತಿಯವರು ಅವರೇ ಮೇಷ ರಾಶಿ ಜನರು ಇವರು ಯಾವುದೇ ಕೆಲಸವನ್ನು ನಿರ್ಲಕ್ಷ ಮಾಡುವುದಿಲ್ಲ ಸವಾಲಿಗೆ ತೆಗೆದುಕೊಂಡು ಕೆಲಸ ಮಾಡುತ್ತಾರೆ ಕೆಲಸದ ವಿಷಯದಲ್ಲಿ ಸಾಧನೆ ಮಾಡುತ್ತಾರೆ ಹೆಚ್ಚಿನ ಜನ ಎಲ್ಲಾ ಕೆಲಸವನ್ನು ತಮ್ಮ ತಲೆಯ ಮೇಲೆ ಹಾಕಿಕೊಂಡು ಮಾಡುತ್ತಾರೆ ನಾಯಕತ್ವ ಗುಣ ಹೊಂದಿರುತ್ತಾರೆ.

ಮುಂದಿನ ರಾಶಿ ಯಾವುದು ಅಂದರೆ ಮಕರ ರಾಶಿಯವರು ಛಲಗಾರರಾಗಿರುತ್ತಾರೆ ಪ್ರಸಿದ್ಧಿ ಆಗಬೇಕು ಎನ್ನುವ ಮನೋಭಾವನೆ ಹೊಂದಿರುತ್ತಾರೆ ಶಿಸ್ತಿನ ಮನುಷ್ಯರಾಗಿರುತ್ತಾರೆ ಹೊಂದಾಣಿಕೆ ಗುಣವಿರುತ್ತದೆ ಕರ್ತವ್ಯವೇ ದೇವರು ಎಂದು ನಂಬಿರುತ್ತಾರೆ.ಮುಂದಿನ ರಾಶಿ ವೃಶ್ಚಿಕ ರಾಶಿಯವರು ಇವರನ್ನು ಶ್ರಮ ಜೀವಿಎಂದು ಹೇಳಬಹುದು ಕಷ್ಟದ ಪರಿಸ್ಥಿತಿಯಲ್ಲಿ ಹೆದರುವುದಿಲ್ಲ.

ಕೊಟ್ಟಿರುವ ಕೆಲಸ ದೊಡ್ಡದಾಗಿರಲಿ ಸಣ್ಣದಾಗಿರಲಿ ಮೊದಲು ಅದರ ಬಗ್ಗೆ ಅಧ್ಯಯನ ಮಾಡುತ್ತಾರೆ. ಹೇಳಿದ ಸಮಯಕ್ಕಿಂತ ಮೊದಲು ಆ ಕೆಲಸವನ್ನು ಮಾಡುತ್ತಾರೆ ಇವರ ಕೆಲಸದಲ್ಲಿ ತಪ್ಪು ಕಂಡು ಹಿಡಿಯುವುದು ಕಷ್ಟ. ಸಮಯ ಪಾಲನೆ ಇವರಲ್ಲಿ ಹೆಚ್ಚು. ವೈಯಕ್ತಿಕ ಸಮಸ್ಯೆಯನ್ನು ಕೆಲಸದಲ್ಲಿ ಸೇರಿಸುವುದಿಲ್ಲ. ಇವೆಲ್ಲ ಕಾರಣಕ್ಕೆ ವೃಶ್ಚಿಕ ರಾಶಿಯವರನ್ನು ಕಠಿಣ ಶ್ರಮ ಜೀವಿಗಳು ಎಂದು ಹೇಳಬಹುದು.

Leave A Reply

Your email address will not be published.