ಸ್ನೇಹಿತರೇ ಈ ಲೇಖನದಲ್ಲಿ ಕುತೂಹಲಕಾರಿ ವಿಷಯವನ್ನು ತಿಳಿಸಿಕೊಡುತ್ತೇವೆ. ಟಾಪ್ 5 ಆಕರ್ಷಕ ಮಹಿಳೆಯರು ಯಾವ ರಾಶಿಯಲ್ಲಿ ಹುಟ್ಟಿರುತ್ತಾರೆ ಮತ್ತು ಆಕೆಯನ್ನು ನೋಡಿದರೇ ಏನೋ ಒಂದು ತರಹ ಆಕರ್ಷಣೆ, ನೋಡಿದರೇ ಮತ್ತೊಮ್ಮೆ ತಿರುಗಿ ನೋಡಬೇಕು ಎನಿಸುತ್ತದೆ. ನೂರಾರು ಜನರ ಮಧ್ಯೆ ಇದ್ದರೂ ಅವಳೇ ಎದ್ದು ಕಾಣುತ್ತಾಳೆ.
ಆಕೆಯ ಜೊತೆ ಮಾತನಾಡಿದರೇ ಸಾಕು ಆಕೆಯ ನಡೆ, ನುಡಿ ತುಂಬಾ ದಿನಗಳವರೆಗೆ ನೆನಪಿನಲ್ಲಿ ಇರುತ್ತದೆ. ಅಂತಹವರು ಹುಟ್ಟಿದ ರಾಶಿಯನ್ನು ಗಮನಿಸಿ. ಅಂತಹ ಆಕರ್ಷಣೆಯಾಗಿರುವ ಹೆಚ್ಚಿನ ಮಹಿಳೆಯರು ಮುಂದೆ ತಿಳಿಸಿರುವ ಐದು ರಾಶಿಗಳಲ್ಲಿ ಹುಟ್ಟಿರುತ್ತಾರಂತೆ. ಆಕರ್ಷಣೆಯಾಗಿರುವ ಮಹಿಳೆಯರ ರಾಶಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಕೆಲವು ಮಹಿಳೆಯರನ್ನು ನೋಡಿದರೇ ಆರಾಧನಾ ಭಾವ ಹುಟ್ಟುತ್ತದೆ. ಅವರ ಹೆಸರು ಊರು ಯಾವುದು ಗೊತ್ತಿಲ್ಲದಿದ್ದರೂ ಕಣ್ಣು ಹೊಳಪು, ನಗು, ಅವರ ಆಕರ್ಷಣೆಯಿಂದ ಅವರ ಫ್ಯಾನ್ ಆಗಿಬಿಡುತ್ತಿವಿ. ಅಂತಹ ಐದು ರಾಶಿಗಳಲ್ಲಿ ಮಾತ್ರ ಅಂತಹ ವ್ಯಕ್ತಿತ್ವವಿರುತ್ತದೆ. ಅಂತಹ ಐದು ರಾಶಿಗಳು ಯಾವುವು ಎಂದರೆ ಹನ್ನೆರಡು ರಾಶಿಗಳಲ್ಲಿ ಮೊದಲನೇ ರಾಶಿಯಾದ ಮೇಷರಾಶಿಯೇ
ಈ ಲೀಸ್ಟ್ ನಲ್ಲಿ ಮೊದಲನೆಯದು. ಮೇಷರಾಶಿಯ ಮಹಿಳೆಯರ ಬಣ್ಣ ಕಪ್ಪುಗಿದ್ದರೂ, ಬಿಳಿ ಅಥವಾ ಗೋಧಿ ಮೈಬಣ್ಣವಾಗಿರಲಿ ಮುಖದಲ್ಲಿ ಒಂದು ರೀತಿಯ ಕಳೆ ಇದರಿಂದ ಎಲ್ಲರನ್ನು ಸೆಳೆಯುವಂತಹವರು ಆಗಿರುತ್ತಾರೆ. ನಿಮ್ಮ ನಗು ನೋಡಿದರೇ ಮರೆಯಕ್ಕೆ ಆಗದೇ ಇರುವಂತಹ ಆಕರ್ಷಕ ನಗುವಾಗಿರುತ್ತದೆ. ಮೇಷರಾಶಿಯವರು ಅರಿತವಾದ ಕಣ್ಣುಗಳನ್ನು ಹೊಂದಿರುತ್ತಾರೆ.
ಮುಗ್ಧ ಮತ್ತು ಸುಂದರವಾದ ಮುಖ, ಮೀಡಿಯಂ ಹೈಟ್, ಒಳ್ಳೆ ಪರ್ಸನಾಲಿಟಿ ಇರುತ್ತದೆ. ಇವರಿಗೆ ಧೈರ್ಯ ಹೆಚ್ಚು ಯಾರಾದರೂ ತಪ್ಪು ಮಾಡಿದರೇ ಧೈರ್ಯವಾಗಿ ಹೇಳಿಬಿಡುತ್ತಾರೆ. ಈ ರಾಶಿಯವರಿಗೆ ಆತ್ಮವಿಶ್ವಾಸವೂ ಹೆಚ್ಚಾಗಿ ಇರುತ್ತದೆ. ಮೇಷರಾಶಿಯ ಚಿಹ್ನೆ ಟಗರು. ಇವರು ಟಗರಿನ ರೀತಿಯ ಸಾಹಸಮಯವಾಗಿರುತ್ತಾರೆ. ಚಾಲೆಂಜ್ ಮಾಡಿ ಅದರಿಂದ ಗೆಲ್ಲುವಂತಹವರು.
ನಿಮ್ಮಲ್ಲಿರುವ ಜೀವನೋತ್ಸಾಹ ಯಾವತ್ತು ಕಡಿಮೆಯಾಗುವುದಿಲ್ಲ. ಮೇಷರಾಶಿಯವರು ಆಕರ್ಷಣೆ ಮಾಡುವ ಮಹಿಳೆಯ ಪಟ್ಟಿಯಲ್ಲಿ ನಂಬರ್ ಒಂದನೇ ಸ್ಥಾನದಲ್ಲಿದ್ದಾರೆಂದರೆ ತಪ್ಪಾಗಲಾರದು. ಎರಡನೆ ರಾಶಿಯ ಜನರು ರಾಜ ಗಾಂಭೀರ್ಯದಿಂದನೇ ಹೆಸರು ವಾಸಿಯಾದವರು. ಅವರ ಕಮ್ಯಾಂಡಿಂಗ್ ಗುಣದಿಂದಲೇ ಆಕರ್ಷಣೆಯಾಗುವಂತಹವರು. ಈ ಗುಣಗಳನ್ನು ಹೊಂದಿರುವ ರಾಶಿ ಯಾವುದು ಎಂದರೆ ಸಿಂಹರಾಶಿ. ಕಷ್ಟ ಬಂದಾಗ ಹಿಂದೆ ಸರಿಯದೇ ಧೈರ್ಯವಾಗಿ ಮುನ್ನುಗ್ಗುವ ಸ್ವಭಾವ ಅವರದು.
ನೋಡಲು ಈ ರಾಶಿಯವರು ಸುಂದರವಾಗಿ ಇರುತ್ತಾರೆ. ಇವರು ಗಂಭೀರವಾದ ನಡಿಗೆಯಿಂದ ಜನರ ಗಮನ ಸೆಳೆಯುತ್ತಾರೆ. ತಮ್ಮ ಬಗ್ಗೆ ತಾವೇ ಹೆಮ್ಮೆ ಪಡುವುದು ಹೆಚ್ಚು. ಹುಟ್ಟುತ್ತಾ ಲೀಡರ್ ಆಗಿಯೇ ಹುಟ್ಟುತ್ತಾರೆ. ಇವರು ಆಲ್ ರೌಂಡರ್ ಅಂದರೂ ತಪ್ಪಾಗಲಾರದು. ಇವರು ಯಾರಿಗೋಸ್ಕರನೂ ತಮ್ಮನ್ನು ತಾವು ಬದಲಿಸಿಕೊಳ್ಳುವುದಿಲ್ಲ.
ಮೂರನೇ ರಾಶಿಯಾವುದು ಎಂದರೆ ಅಳೆದು ತೂಗಿ ಬ್ಯಾಲೆನ್ಸ್ ಮಾಡಿಕೊಳ್ಳುವ ತುಲಾರಾಶಿ. ಹೆಣ್ಣು ಮಕ್ಕಳಲ್ಲಿ ಇರಲೇಬೇಕಾದ ಗುಣವೆಂದರೆ ಬ್ಯಾಲೆನ್ಸಿಂಗ್ ಅದು ಈ ರಾಶಿಯವರಿಗೆ ಹುಟ್ಟುತ್ತಲೇ ಬಂದಿರುತ್ತದೆ. ಎಲ್ಲರನ್ನು ಪ್ರೀತಿಯಿಂದ ಕಾಣುತ್ತಾರೆ. ನೋಡಲು ಸುಂದರವಾಗಿದ್ದು, ಆಕರ್ಷಕ ಮೈಕಟ್ಟು, ದುಂಡು ಮುಖ, ಬಾದಾಮಿ ಆಕಾರದ ಕಣ್ಣುಗಳು ಹಾಗೂ ಕೆಲವರಿಗೆ ಕೆನ್ನೆಯಲ್ಲಿ ಕುಳಿ ಬೀಳಬಹುದು. ಅದರಿಂದ ತುಲಾರಾಶಿಯವರು ಇನ್ನಷ್ಟು ಆಕರ್ಷಕವಾಗಿ ಕಾಣುತ್ತಾರೆ.
ಜೊತೆಗೆ ಇವರಲ್ಲಿ ಇನ್ಸ್ ಸ್ಪೈರ್ ಮಾಡುವ ನಡೆನುಡಿಯನ್ನು ಹೊಂದಿರುತ್ತಾರೆ. ಹಾಗೆಯೇ ಸ್ವತಂತ್ರವಾಗಿರಬೇಕೆಂಬ ವ್ಯಕ್ತಿತ್ವದವರು. ರಾಶಿ ಚಕ್ರದಲ್ಲೆ ಬ್ಯೂಟಿಫೂಲ್ ರಾಶಿ ಎಂದು ಕರೆಯಿಸಿಕೊಳ್ಳುತ್ತೀರಿ. ಒಂದು ಕೆಲಸ ಕೈಗೆ ಎತ್ತುಕೊಂಡರೆ ಅದಕ್ಕೆ ಸಂಪೂರ್ಣ ಮನಸ್ಸು ಇಟ್ಟು ಮಾಡುತ್ತೀರಿ. ರಾಶಿಯ ಅಧಿಪತಿ ಶುಕ್ರನು ನಿಮಗೆ ಸಹಾನುಭೂತಿ ಮತ್ತು ಕರುಣೆಯನ್ನು ಕೊಡುವ ಜೊತೆಗೆ ಆಭರಣ,
ಮೇಕಪ್, ಬಟ್ಟೆಗಳ ಮೇಲೆ ಆಸಕ್ತಿಯನ್ನು ಕೊಡುತ್ತಾನೆ. ಇವರಲ್ಲಿ ಎಲ್ಲರೂ ನನ್ನನ್ನು ನೋಡಿ ಹೊಗಳಬೇಕು ಎಂಬ ಆಸೆಯೂ ಹೆಚ್ಚೇ ಇರುತ್ತದೆ. ಸಾಮರಸ್ಯ ಹಾಗೂ ಹೊಂದಾಣಿಕೆ ಗುಣದಿಂದಲೇ ಜನ ಆಕರ್ಷಕವಾಗಿ ಬಿಡುತ್ತಾರೆ.
ನಾಲ್ಕನೇ ರಾಶಿ ಯಾವುದು ಎಂದರೆ ಇವರು ಗುಟ್ಟು ಮಾಡಲು ನಂಬರ್ ಒನ್ ಆಗಿರುತ್ತಾರೆ. ಇವರ ಗುಟ್ಟನ್ನು ಹೊರಗೆಳೆಯುವುದು ಬಹಳ ಕಷ್ಟಕರ.
ಇಂತಹ ರಾಶಿಯ ಮಹಿಳೆಯರ ತಲೆಯಲ್ಲಿ ಏನು ಇದೆ ಎಂದು ಕಂಡುಹಿಡಿಯಲು ಸಾಧ್ಯವಿಲ್ಲವೆಂದು ಹೇಳಬಹುದು. ಅಂತಹ ರಾಶಿ ಯಾವುದು ಎಂದರೆ ವೃಶ್ಚಿಕರಾಶಿ. ಇವರು ಕೂಡ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವಂತಹವರು. ನೋಡಲು ಸುಂದರವಾಗಿದ್ದು, ನಗುಮುಖದವರಾಗಿರುತ್ತಾರೆ. ಹೆಚ್ಚಿನ ಮಹಿಳೆಯರು ಎತ್ತರವಾಗಿ, ಸ್ಟ್ರಾಂಗ್ ಆಗಿ ಇರುತ್ತಾರೆ.
ಇವರ ಮುಖ ತೇಜಸ್ಸಿನಿಂದ ಕೂಡಿರುತ್ತದೆ. ಇವರು ಮಾತುಗಾರಿಕೆಯಲ್ಲಿ ಚತುರರು ಆಗಿರುತ್ತಾರೆ.
ಕೊನೆಯದಾಗಿ ಚಾರ್ಮಿಂಗ್ ಪರ್ಸನಾಲಿಟಿ ಇರುವ ಮಹಿಳೆಯರು ಹೆಚ್ಚಾಗಿರುವ ರಾಶಿ ಯಾವುದು ಎಂದರೆ ಮೀನರಾಶಿಯವರು. ಈ ರಾಶಿಯ ಮಹಿಳೆಯರು ಸಿಕ್ಕಾಪಟ್ಟೆ ಸೂಕ್ಷ್ಮ ಮತ್ತು ಹೆಚ್ಚಿನ ಜ್ಞಾಪಕಶಕ್ತಿಯುಳ್ಳವರು. ಮೀನರಾಶಿಯವರು ಅವರ ಕಣ್ಣಿನಿಂದಲೇ ಆಕರ್ಷಿಸಲ್ಪಡುತ್ತಾರೆ.
ಸಿಲ್ಕ್ ಆಗಿ ಸ್ಮೂತ್ ಆಗಿರುವ ಉದ್ದನೆಯ ಕೂದಲನ್ನು ಹೊಂದಿರುತ್ತಾರೆ. ತೆಳ್ಳಗಿರುವ ದೇಹ, ಇವರ ಪಾದ, ಬೆರಳುಗಳು ಸುಂದರವಾಗಿರುತ್ತದೆ. ಅಪರೂಪದ ಸೌಂದರ್ಯವೆಂದೇ ಹೇಳಬಹುದು. ಜನ ಇವರನ್ನು ಸುಲಭವಾಗಿ ಮರೆಯುವುದಕ್ಕೆ ಆಗುವುದಿಲ್ಲ ಇವರು ಅಷ್ಟೂ ಛಾಪೂ ಮೂಡಿಸುತ್ತಾರೆ. ಸಿಕ್ಸ್ ಸೆನ್ಸ್ ಹೆಚ್ಚು ವರ್ಕ್ ಆಗುತ್ತದೆ ಎನ್ನಬಹುದು. ವೃಶ್ಚಿಕ ಮಹಿಳೆಯರ ತರಹನೇ ಸೀಕ್ರೆಟ್ ಮಾಡುವ ಗುಣದವರು.