ಕಾಲಿಗೆ ಬಿದ್ದರೂ ಕೂಡ ಯುಗಾದಿ ಹಬ್ಬದ ದಿನ ಮನೆಯಿಂದ ಈ ವಸ್ತುಗಳನ್ನು ಹೊರಗಿನ ಜನರಿಗೆ ಕೊಡಬೇಡಿ

0

ನಾವು ಈ ಲೇಖನದಲ್ಲಿ ಕಾಲಿಗೆ ಬಿದ್ದರೂ ಕೂಡ ಯುಗಾದಿ ಹಬ್ಬದ ದಿನ ಮನೆಯಿಂದ ಈ ವಸ್ತುಗಳನ್ನು ಹೊರಗಿನ ಜನರಿಗೆ ಏಕೆ ಕೊಡಬಾರದು ಎಂದು ತಿಳಿಯೋಣ. ಯುಗಾದಿ ಹಬ್ಬವು ಒಂದು ರೀತಿಯಲ್ಲಿ ಮನೆಗೆ ತಳಹದಿ ಇದ್ದ ಹಾಗೆ . ಮನೆಯನ್ನು ಕಟ್ಟುವಾಗ ಹೇಗೆ ನಾವು ತಳಹದಿಯನ್ನು ನಿರ್ಮಿಸುತ್ತೆವೆಯೋ , ಅದೇ ರೀತಿಯಾಗಿ ನಾವೆಲ್ಲರೂ ಚೆನ್ನಾಗಿರಬೇಕು ಎಂದರೆ, ಯುಗಾದಿ ಹಬ್ಬದ ದಿನ ಕೆಲವು ಚಿಕ್ಕ ಪುಟ್ಟ ಎಚ್ಚರಿಕೆಗಳನ್ನು ವಹಿಸಿಕೊಂಡು ಎಷ್ಟು ಸಂತೋಷದಿಂದ ಖುಷಿಯಾಗಿ ಇರುತ್ತೇವೆಯೋ

ಅದೇ ರೀತಿಯಾಗಿ ಸಂತೋಷದಿಂದ ಇರಬಹುದು. ಇದಕ್ಕಾಗಿ ಯುಗಾದಿ ಹಬ್ಬದ ದಿನ ನಾವೆಲ್ಲರೂ ಯಾವ ರೀತಿ ನಡೆದು ಕೊಳ್ಳುತ್ತೇವೆ ಎಂಬುದು ತುಂಬಾ ಮುಖ್ಯವಾಗಿರುತ್ತದೆ. ಈ ಒಂದು ದಿನ ಮನೆಯಲ್ಲಿ ಇರುವ ವಸ್ತುವನ್ನು ಆಚೆ ಇರುವ ಜನರಿಗೆ ಕೊಡುವುದಾಗಲಿ ಅಥವಾ ಆಚೆ ಇರುವ ಜನರಿಂದ ಕೆಲವು ವಸ್ತುಗಳನ್ನು ತೆಗೆದುಕೊಳ್ಳುವುದು ಮಾಡಲೇ ಬಾರದು. ನಿಮ್ಮ ಜೇಬಿನಿಂದ ಆಗಿರಬಹುದು , ಅಥವಾ ಮನೆಯಿಂದ ಕೊಡುವ ಈ ವಸ್ತುಗಳು ಆಗಿರಬಹುದು , ಇವುಗಳನ್ನು ಬೇರೆಯವರಿಗೆ ಕೊಡುವುದು ಶಾಸ್ತ್ರಗಳಲ್ಲಿ ಒಳ್ಳೆಯದಲ್ಲ ಎಂದು ತಿಳಿಸಿದ್ದಾರೆ.

ಆ ದಿನ ಯಾರೇ ಇರಲಿ, ಬೇರೆ ರೀತಿ ನಾವು ಸಹಾಯವನ್ನು ಮಾಡಬಹುದು. ಆದರೆ ಇಲ್ಲಿ ಇರುವ ಕೆಲವು ವಸ್ತುಗಳು ಹೇಗಿರುತ್ತವೆ ಎಂದರೆ, ಮರೆತರೂ ಸಹ ನೀವು ಅವುಗಳನ್ನೂ ಬೇರೆಯವರಿಗೆ ಕೊಡಲೇ ಬಾರದು . ಇವುಗಳನ್ನು ಪಾಲಿಸುವುದು ತುಂಬಾ ಮುಖ್ಯವಾಗಿರುತ್ತದೆ. ಯುಗಾದಿ ಹಬ್ಬದ ದಿನ ಮನೆಯವರು ಮಾಡುವ ಕೆಲಸ ಯಾವುದು ಎಂದರೆ ಮನೆಯ ಮುಖ್ಯ ದ್ವಾರಕ್ಕೆ ಮಾವಿನ ತೋರಣವನ್ನು ಕಟ್ಟಲು ಮಾವಿನ ಎಲೆ ಮತ್ತು ಬೇವಿನ ಎಲೆಗಳನ್ನು ತರುತ್ತಾರೆ .ಒಂದು ಬಾರಿ ಮಾವಿನ ಎಲೆ ಮತ್ತು ಬೇವಿನ ಎಲೆಗಳನ್ನು ಮನೆಗೆ ತಂದರೆ ಮುಗಿಯಿತು. ನಂತರ ಅವರು ನಿಮ್ಮ ಹತ್ತಿರ ಮಾವಿನ ಸೊಪ್ಪು ಬೇವಿನ ಸೊಪ್ಪು ಕೊಡಿ ಎಂದು ಕೇಳುತ್ತಾರೆ .

ಯಾವುದೇ ಕಾರಣಕ್ಕೂ ಅವರಿಗೆ ಇದನ್ನು ಕೊಡುವ ತಪ್ಪು ಕೆಲಸಗಳನ್ನು ಮಾಡಬಾರದು . ಯಾಕೆಂದರೆ ಸಮೃದ್ಧಿಯ ಸಂಕೇತದ ರೂಪದಲ್ಲಿ ಆ ದಿನ ನಿಮ್ಮ ಮನೆಗೆ ಮಾವಿನ ಎಲೆಯನ್ನು ಮತ್ತು ಬೇವಿನ ಸೊಪ್ಪುಗಳನ್ನು ತಂದಿರುತ್ತೀರಾ . ಆ ದಿನ ಸಮೃದ್ಧಿಯಾಗಿ ಇರುತ್ತದೆ. ಒಂದು ಬಾರಿ ಆ ಸಮೃದ್ಧಿಯನ್ನು ನಿಮ್ಮ ಮನೆಯ ಒಳಗಡೆ ಪ್ರವೇಶ ಮಾಡಿದ ನಂತರ ,

ಆಹ್ವಾನ ಮಾಡಿದ ನಂತರ ಬೇರೆಯವರು ಎಷ್ಟೇ ಕೇಳಿದರೂ ಅದನ್ನು ಕೊಡಬಾರದು . ಅವರಿಗೆ ಎಂದು ಬೇರೆ ತೆಗೆದುಕೊಂಡು ತಂದು ಕೊಡಬಹುದು. ಆದರೆ ಎಲ್ಲವನ್ನು ಒಂದು ಭಾರಿ ತೆಗೆದುಕೊಂಡು ಬಂದು ನಿಮ್ಮ ಮನೆ ಪ್ರವೇಶ ಮಾಡಿದ ನಂತರ ಹೊರಗಡೆ ಜನರಿಗೆ ಕೊಡಬಾರದು. ಯಾವುದೇ ಕಾರಣಕ್ಕೂ ಕೊಡಬಾರದು. ಆಚೆ ಇರುವ ಜನರು ಕೇಳಿದರೂ ಇಲ್ಲ ಎಂದು ಹೇಳಬೇಕು . ಮರೆತರೂ ಸಹ ಇವುಗಳನ್ನು ಕೊಡಬೇಡಿ.

ಇನ್ನು ಎರಡನೇಯದಾಗಿ ಅರಿಶಿಣದ ಪುಡಿ . ಸಾಮಾನ್ಯನಾಗಿ ಅರಿಶಿಣ ಮತ್ತು ಕುಂಕುಮವನ್ನು ಕೇಳುವುದಿಲ್ಲ. ಆದರೆ ಕೆಲವು ಭಾರಿ ಜನರು ಬೇಕಂತಲೇ ಇವುಗಳನ್ನು ಕೇಳುತ್ತಾರೆ. ಇನ್ನೂ ಕೆಲವರು ಹಬ್ಬದ ದಿನ ಬೇಕು ಅಂತಲೇ ಕಲ್ಲು ಉಪ್ಪು , ಮೊಸರು , ಅರಿಶಿಣ , ಕುಂಕುಮವನ್ನು ಕೇಳಲು ಬರುತ್ತಾರೆ. ಇನ್ನು ಕೆಲವರು ಸೀಗೆಕಾಯಿ ಸೋಪನ್ನು ಕೇಳಿಕೊಂಡು ಬರಬಹುದು . ಇನ್ನು ಕೆಲವು ಜನರು ಒಡವೆಗಳನ್ನು ಕೇಳಿಕೊಂಡು ಬರುತ್ತಾರೆ . ಇಂತಹ ವಸ್ತುಗಳನ್ನು ಹಬ್ಬದ ದಿನ ಕೊಡಬಾರದು .

ಇನ್ನೂ ಮೂರನೇ ವಸ್ತು ರಂಗೋಲಿ ಪುಡಿ . ಕೆಲವರು ನಿಮ್ಮ ಬಳಿ ಬಂದು ರಂಗೋಲಿ ಪುಡಿಯನ್ನು ಕೊಡಿ ಎಂದು ಕೇಳುತ್ತಾರೆ . ಆದರೆ ಮರೆತರು ನೀವು ಈ ತಪ್ಪನ್ನು ಮಾಡಬಾರದು .ಯಾಕೆಂದರೆ ರಂಗೋಲಿ ಪುಡಿಯನ್ನು ಬೇರೆಯವರಿಗೆ ಕೊಟ್ಟರೆ ನಿಮಗೆ ನಷ್ಟ ಆಗುವ ಸಾಧ್ಯತೆ ಇರುತ್ತದೆ .ಹಾಗಾಗಿ ರಂಗೋಲಿ ಪುಡಿಯನ್ನು ಬೇರೆಯವರಿಗೆ ಕೊಡಬಾರದು .ಸಾಮಾನ್ಯವಾಗಿ ರಂಗೋಲಿಯನ್ನು ಕಲ್ಲು ಮತ್ತು ಮಣ್ಣಿನಿಂದ ತಯಾರಿಸುತ್ತಾರೆ .ಇದೇ ಕಾರಣದಿಂದಾಗಿ ಯಾರು ಎಷ್ಟೇ ಬೇಡಿಕೊಂಡರೂ ರಂಗೋಲಿ ಪುಡಿಯನ್ನು ಬೇರೆಯವರಿಗೆ ಕೊಡಬಾರದು . ನಗರಗಳಲ್ಲಿ ಬಿಟ್ಟು ಹಳ್ಳಿಯ ಜನರು ಪಾತ್ರೆಗಳನ್ನು ಕೇಳಲು ಬರುತ್ತಾರೆ.

ಅಡುಗೆ ಮಾಡಲು ಪಾತ್ರೆ ಇಲ್ಲ ಎಂದು ನಿಮ್ಮ ಬಳಿ ಕೇಳಲು ಬರಬಹುದು . ಖಾರ ಉಪ್ಪು ಹುಣಸೆಹಣ್ಣು ಇತ್ಯಾದಿಗಳನ್ನು ಕೇಳಲು ಬರುತ್ತಾರೆ . ಈ ವಸ್ತುಗಳು ನಿಮ್ಮ ಬಳಿ ಇಲ್ಲ ಎಂದರೆ ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ . ಒಂದು ವೇಳೆ ಇವುಗಳನ್ನು ನಿಮ್ಮ ಬಳಿ ಕೇಳಲು ಬಂದರೆ , ನೀವು ಇಲ್ಲ ಎಂದು ಒಂದೇ ಮಾತಿನಲ್ಲಿ ಹೇಳಬೇಕು . ನಿಮ್ಮ ಮನೆ ಹತ್ತಿರ ಯಾರಾದರೂ ಅಂಗವಿಕಲರು ಅಥವಾ ವೃದ್ಧರು ಭಿಕ್ಷುಕರು ಆಗಲಿ ಭಿಕ್ಷೆ ಬೇಡಲು ಬಂದರೆ ನಿಮ್ಮ ಅಡುಗೆ ಮನೆಯಲ್ಲಿ ಏನೇ ತಿನ್ನಲು ಆಹಾರವನ್ನು ನೀವು ತಯಾರಿಸಿದ್ದರೆ ಅದನ್ನು ತಿನ್ನಲು ಆ ಜನರಿಗೆ ಕೊಟ್ಟು ಕಳುಹಿಸಬೇಕು .

ಯಾವುದೇ ಕಾರಣಕ್ಕೂ ಮನೆಯ ಮುಖ್ಯ ದ್ವಾರದ ಬಳಿ ಬಂದ ಜನರನ್ನು ಕಾಲಿ ಕೈಯಲ್ಲಿ ಹಿಂದೆ ತಿರುಗಿ ಹೋಗಲು ಬಿಡಬಾರದು . ಅಂತವರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕು .ಹೀಗೆ ಮಾಡುವುದರಿಂದ ನಿಮಗೆ ಪುಣ್ಯದ ಫಲ ಸಿಗುತ್ತದೆ . ಯುಗಾದಿ ಹಬ್ಬದ ದಿನ ಯಾರಾದರೂ ನಿಮ್ಮ ಬಳಿ ಆಹಾರವನ್ನು ಕೇಳಿಕೊಂಡು ಬಂದಾಗ , ಅವರಿಗೆ ತಿನ್ನಲು ಏನಾದರೂ ಕೊಡಬೇಕು . ನೀವು ಹಬ್ಬದ ದಿನ ಕಾರ್ಯ ನಿರತವಾಗಿದ್ದಾಗ , ಈ ಸಮಯದಲ್ಲಿ ಅಂತಹ ಜನ ಮನೆಯ ಬಳಿ ಬರಬಹುದು ಅವರನ್ನು ಬರಿಗೈಯಲ್ಲಿ ಹೋಗಲು ಬಿಡಬಾರದು. ಮನೆಯಲ್ಲಿ ನಿಮ್ಮಲ್ಲಿ ಯಾವ ಒಂದು ಒಳ್ಳೆಯ ಆಹಾರ ಇರುತ್ತದೆಯೇ , ಅದನ್ನು ಅವರಿಗೆ ತಿನ್ನಲು ಕೊಟ್ಟು ಕಳಿಸಬೇಕು .

ಯಾಕೆಂದರೆ ದಾನಗಳಲ್ಲಿ ಶ್ರೇಷ್ಠ ದಾನ ಅನ್ನದಾನ ಆಗಿರುತ್ತದೆ . ಒಂದು ವೇಳೆ ನಿಮ್ಮ ಮನೆ ಹತ್ತಿರ ಯಾರಾದರೂ ಬ್ರಾಹ್ಮಣರು ಅಥವಾ ಭಿಕ್ಷುಕರು ಯಾವುದೇ ಕಾರಣಕ್ಕೂ ಅವರನ್ನು ಬರಿಗೈಯಲ್ಲಿ ಕಳುಹಿಸಬೇಡಿ . ಈ ಹಬ್ಬದ ದಿನ ನಿಮ್ಮ ಕೈಲಾದಷ್ಟು ಅನುಕೂಲಕ್ಕೆ ತಕ್ಕಂತೆ ದಾನ ಧರ್ಮಗಳನ್ನು ಮಾಡಬೇಕು . ಈ ರೀತಿ ಮಾಡುವುದರಿಂದ ಇಡೀ ವರ್ಷ ನೆಮ್ಮದಿ ಮತ್ತು ಸುಖವಾಗಿ ಇರಬಹುದು , ತಾಯಿ ಲಕ್ಷ್ಮಿ ದೇವಿಯ ವಿಶೇಷವಾದ ಆಶೀರ್ವಾದ ನಿಮ್ಮೆಲ್ಲರ ಮೇಲೆ ಇರುತ್ತದೆ. ಅವರು ಕೂಡ ತಾಯಿಯ ರೂಪದಲ್ಲಿ ಮನೆಯಲ್ಲಿ ವಾಸ ಮಾಡುತ್ತಾರೆ . ಮುಸ್ಸಂಜೆಯ ಸಮಯದಲ್ಲಿ ಹಣವನ್ನು ಮತ್ತು ಒಡವೆಯನ್ನು ಬೇರೆಯವರಿಗೆ ಕೊಡಬಾರದು . ಅದರಲ್ಲೂ ಈ ಯುಗಾದಿ ಹಬ್ಬದ ದಿನ ಕೊಡಬಾರದು . ಹಾಗಾಗಿ ಹಣ ಒಡವೆಯ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರುವುದು ಒಳ್ಳೆಯದು .

Leave A Reply

Your email address will not be published.