ಕನ್ಯಾ ರಾಶಿಗಿದೆ ಎಚ್ಚರಿಕೆಯ ಸಂಕೇತ!

0

ನಾವು ಈ ಲೇಖನದಲ್ಲಿ ಮಾರ್ಚ್ ತಿಂಗಳ ಕನ್ಯಾ ರಾಶಿಯ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ . ಮಾರ್ಚ್ ತಿಂಗಳು ನಿಮಗೆ ಬಹಳ ಆಸಕ್ತಿದಾಯಕ ತಿಂಗಳು ಆಗುವ ಸಾಧ್ಯತೆ ಇದೆ. ಬಹಳಷ್ಟು ದಿನಗಳಿಂದ ಕಾಡುವ ಸಮಸ್ಯೆಗಳು ಇರುತ್ತವೆ. ಏನೇ ಮಾಡಿದರೂ ಅದಕ್ಕೆ ಪರಿಹಾರ ಸಿಗುತ್ತಿರುವುದಿಲ್ಲ. ಪರಿಸ್ಥಿತಿ ಕೈ ಮೀರಿ ಹೋಗುತ್ತಿರುತ್ತದೆ .ಅಂದರೆ ಯಾರಿಂದಲೂ ಸಹಾಯ ಸಿಗುತ್ತಿರುವುದಿಲ್ಲ . ನೀವು ಕೂಡ ಏನೂ ಮಾಡುವುದಕ್ಕೆ ಆಗುತ್ತಿರುವುದಿಲ್ಲ .

ಕನ್ಯಾ ರಾಶಿಯ ವ್ಯಕ್ತಿಗಳಿಗೆ ಇದೆಲ್ಲಾ ವಿಚಾರಗಳು ಅನುಭವಕ್ಕೆ ಬಂದಿರುತ್ತವೆ . ಒಂದು ರೀತಿಯ ಸೋಲುವ ಭಾವನೆ ಕಾಡುತ್ತಿರುತ್ತದೆ . ಇದಕ್ಕೆ ಕಾರಣ ಒಂದು ನಮ್ಮ ಶತ್ರು ಅಥವಾ ಅಂದುಕೊಳ್ಳುವ ವಿಚಾರಗಳು ನಮಗಿಂತಲೂ ಬಹಳ ಎತ್ತರಕ್ಕೆ ಇರುತ್ತವೆ . ನಮ್ಮ ಅವಶ್ಯಕತೆಗಳು ತುಂಬಾ ಜಾಸ್ತಿ ಇರುತ್ತವೆ . ನಾವು ಅದರ ಹತ್ತಿರ ತಲುಪಲು ಆಗದೆ ಇರುವುದು .

ಇಂತಹ ವಿಚಾರಗಳ ಬಗ್ಗೆ ನಿಮ್ಮ ಗಮನ ಇರುತ್ತದೆ . ಇಂತಹ ವಿಚಾರದ ಬಗ್ಗೆ ಗಮನ ಹರಿಸುವ ಕೆಲವೊಂದು ಗ್ರಹಗತಿಗಳು ನಡೆಯುತ್ತಿರುತ್ತವೆ . ಶನಿ ಗ್ರಹ ಮೊದಲೇ ಇದೆ . ನಿಮ್ಮ ಷಷ್ಟ ಭಾವದ ಮೇಲೆ ತುಂಬಾ ಪ್ರಭಾವ ಬೀರುತ್ತಿದೆ .ಕನ್ಯಾ ರಾಶಿಯವರಿಗೆ ಶತ್ರುಗಳು ಇಲ್ಲದೆ ಇರಬಹುದು . ಇದ್ದರೂ ಕೂಡ ಹಿತ ಶತ್ರುಗಳ ರೀತಿ ಇರುತ್ತಾರೆ. ಈ ಮುಸುಕಿನ ಗುದ್ದಾಟಕ್ಕೆ ವಿದಾಯ ಹೇಳುವ ಪರಿಸ್ಥಿತಿ ಬರುತ್ತದೆ. ಒಂದು ಬಲಿಷ್ಠ ಗ್ರಹ ರವಿ ಹದಿನಾಲ್ಕನೇ ತಾರೀಖಿನ ವರೆಗೆ ಷಷ್ಟ ಭಾವದಲ್ಲಿ ಶನಿಯ ಜೊತೆ ಇರುತ್ತದೆ.

ಬಹಳಷ್ಟು ಗೊಂದಲಗಳು ಉಂಟಾಗುವ ಸಾಧ್ಯತೆ ಇದೆ . ಎರಡು ವಿಚಾರಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು .ಒಂದು ಕುಟುಂಬದ ಜೀವನ . ಸಂಬಂಧಗಳಲ್ಲಿ ಗೊಂದಲಗಳು , ಮಾತಿನಲ್ಲಿ ಬರುವ ವಿರುದ್ಧತೆಗಳು . ಕುಟುಂಬದಲ್ಲಿ ಗುಂಪುಗಳು ಶುರುವಾಗುತ್ತದೆ . ಕೆಲವರು ಒಂದು ಕಡೆ ಇದ್ದರೆ , ಇನ್ನೊಂದಷ್ಟು ಜನ ಮತ್ತೊಂದು ಕಡೆ ಇರುತ್ತಾರೆ . ಆದ್ದರಿಂದ ಇವರಿಗೆ ಯಾರ ಕಡೆಗೆ ಹೋಗುವುದು ಎಂದು ಗೊಂದಲಗಳು ಉಂಟಾಗುತ್ತದೆ . ಈ ರೀತಿಯ ಗೊಂದಲಗಳಲ್ಲಿ ಸಮಯ ಕಳೆಯಬೇಕಾಗುತ್ತದೆ.

ಏನು ಮಾಡಬೇಕು ಬಿಡಬೇಕು ಎನ್ನುವ ಪರಿಸ್ಥಿತಿ ಉಂಟಾಗುತ್ತದೆ . ಕನ್ಯಾ ರಾಶಿಯ ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಇರಬೇಕು . ಬುಧ ಗ್ರಹ ಮತ್ತು ಗುರು ಗ್ರಹ ಇವೆರಡೂ ಅಷ್ಟಮದಲ್ಲಿ ಇದೆ . ಅಷ್ಟಮ ಭಾವ ಎಂದರೆ ರಂಧ್ರ ಸ್ಥಾನ .ಬಹುಮಟ್ಟಿಗೆ ಈ ಸ್ಥಾನ ಎನ್ನುವುದು ವ್ಯರ್ಥ . ಈ ಸ್ಥಾನದಲ್ಲಿ ಇರುವಾಗ ಗ್ರಹಗಳು ಬಹಳ ದುರ್ಬಲವಾಗಿ ಇರುತ್ತವೆ . ಒಳ್ಳೆಯದನ್ನು ಮಾಡುವ ಶಕ್ತಿ ಬಹಳ ಕ್ಷೀಣವಾಗಿ ಇರುತ್ತದೆ . ಇವೆರಡೂ ವಿದ್ಯಾ ಗ್ರಹಗಳು ಇಂತಹ ಒಂದು ಸ್ಥಿತಿಯಲ್ಲಿ ಸಿಲುಕಿ ಕೊಂಡಿರುವಾಗ ,

ಗಮನ ಕಡಿಮೆಯಾಗುತ್ತಾ ಹೋಗುತ್ತದೆ . ಗಮನವನ್ನು ನಾವು ಬಹಳ ಕೇಂದ್ರೀಕರಿಸಬೇಕಾಗುತ್ತದೆ . ಒಂದು ಅಥವಾ ಎರಡು ದಿನಗಳು ಬಹಳ ನಿರ್ಣಾಯಕವಾದ ದಿನವಾಗಿರುತ್ತದೆ . ಅದೇ ಸಮಯದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇರುತ್ತದೆ . ಓದಿನಲ್ಲಿ ಹೆಚ್ಚು ಕಡಿಮೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ . ಇಂತಹ ವಿಷಯಗಳನ್ನು ತುಂಬಾ ಎಚ್ಚರಿಕೆಯಿಂದ ಇರಬೇಕು . ನೀವು ನಿರ್ಲಕ್ಷಿಸುವುದನ್ನು ಕಲಿಯಬೇಕು . ಗ್ರಹಗತಿಗಳು ಏರುಪೇರು ಇದ್ದರೂ ಕೂಡ ಮಾನವ ಪ್ರಯತ್ನ ಅನ್ನುವುದೇ ಬಹಳ ಮುಖ್ಯವಾಗಿರುತ್ತದೆ .

ಇದನ್ನು ಮೀರುವ ಶಕ್ತಿ ಬಹಳಷ್ಟು ಜನರಿಗೆ ಇದ್ದೇ ಇರುತ್ತದೆ . ಕುಜ ಮತ್ತು ರವಿ ಗ್ರಹ ಈ ತಿಂಗಳಲ್ಲಿ ಯಾವ ರೀತಿಯಾಗಿ ಕೊಡುಗೆಯನ್ನು ಕೊಡುತ್ತವೆ ಅಂದರೆ , ಹಾಗೆಯೇ ನಿಮ್ಮ ಶತ್ರು ಭಾವ ಯಾವ ರೀತಿಯ ಪ್ರಭಾವವನ್ನು ಬೀರುತ್ತದೆ . ಗ್ರಹಗಳು ಸ್ಥಾನದಿಂದ ಸ್ಥಾನಕ್ಕೆ ಬದಲಾಯಿಸುವ ರೀತಿಯಲ್ಲಿ ಕೆಲಸ ಮಾಡುತ್ತವೆ . 14ನೇ ತಾರೀಕಿನ ವರೆಗೆ ನಿಮ್ಮ ಷಷ್ಠ ಭಾವದಲ್ಲಿ ಶನಿಯ ಜೊತೆ ರವಿ ಗ್ರಹ ಇರುತ್ತದೆ . ನಂತರ ರವಿ ಗ್ರಹ ಸಪ್ತಮಕ್ಕೆ ಪರಿವರ್ತನೆಯಾಗುತ್ತದೆ .

15ನೇ ತಾರೀಕಿಗೆ ಕುಜ ಗುರುಗ್ರಹ ಬಂದು ಕೋರುತ್ತದೆ . ರೋಗ ರುಜಿನಗಳಿಂದ ಮುಕ್ತಿ ದೊರೆಯುತ್ತದೆ . ಯಾವುದಾದರೂ ಬೇಸರ. ನೋವು , ದುಃಖ, ಈ ರೀತಿಯಾಗಿ ಇದ್ದರೆ, ಇದರಿಂದಲೂ ಮುಕ್ತಿ ಹೊಂದಿ, ನಿಮಗೆ ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತದೆ .ಸಪ್ತಮದಲ್ಲಿ ಮೊದಲೇ ರಾಹು ಗ್ರಹ ಇದೆ . ಶುಕ್ರ ಕೂಡ ಅದೇ ಭಾವದಲ್ಲಿ ಇರುತ್ತದೆ. ಹಾಗೆ ರವಿ ಕೂಡ ಅಲ್ಲೇ ಹೋಗಿ ಸೇರುತ್ತದೆ . ಇದೊಂದು ರೀತಿಯ ಪೆಚಾಟವನ್ನು ಉಂಟು ಮಾಡುತ್ತದೆ . ವಿಶೇಷವಾಗಿ ಪತಿ ಪತ್ನಿಯ ವೈವಾಹಿಕ ಸಂಬಂಧಗಳಲ್ಲಿ , ಪಾಲುದಾರಿಕೆಯಲ್ಲಿ ಮಾಡುವ ವ್ಯವಹಾರಗಳಿಗೆ, ವ್ಯವಹಾರಿಕರು ಎಚ್ಚರಿಕೆಯಿಂದ ಇರಬೇಕಾದ ಸಮಯ ಇದಾಗಿರುತ್ತದೆ .

ರಾಹು ಇರುವುದರಿಂದ ವ್ಯಾಪಾರ ವ್ಯವಹಾರಗಳಲ್ಲಿ ಮೋಸ ಆಗುವ ಸಾಧ್ಯತೆ ಇರುತ್ತದೆ . ನಿಮ್ಮ ಕಣ್ಣಿಗೆ ಕಾಣಿಸುವುದು ಸತ್ಯವಾಗಿ ಇರುವುದಿಲ್ಲ . ಕಳ್ಳರಿಂದ, ವಂಚಕರಿಂದ, ನಯವಂಚಕರಿಂದ , ಇವರುಗಳಿಂದ ಎಚ್ಚರಿಕೆಯಿಂದ ಇರಬೇಕು. ಪುರುಷರು ಆಗಿದ್ದರೆ, ಸ್ತ್ರೀಯರಿಂದ ಮತ್ತು ಮಹಿಳೆಯರು ಆಗಿದ್ದರೆ. ಪುರುಷರಿಂದ ಎಚ್ಚರಿಕೆಯಿಂದ ಇರುವ ಅನಿವಾರ್ಯತೆ ಇರುತ್ತದೆ. ರಾಹು ಸಪ್ತಮದಲ್ಲಿ ಇರುವಾಗ ವ್ಯವಹಾರದ ವಿಚಾರದಲ್ಲಿ ಸಂಬಂಧಗಳು ತೀರ ಮುಂದೆ ಹೋಗುವುದನ್ನು ನೀವು ತಡೆಯಬೇಕು.

ಎಷ್ಟು ಬೇಕೋ ಅಷ್ಟು ಮಾತ್ರ ನಿಮ್ಮ ಸಂಬಂಧ ಇರಬೇಕು . ಕೆಲಸದ ಬಗ್ಗೆ ಅಷ್ಟೇ ಇರಬೇಕು. ಸಂಬಂಧವನ್ನು ಬೆಳೆಸುವುದಕ್ಕೆ ಹೋಗಬೇಡಿ . ವೈಯಕ್ತಿಕವಾಗಿ ಸಂಬಂಧ ಇಟ್ಟುಕೊಳ್ಳುವ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು . ವ್ಯವಹಾರಿಕ ಸಂಬಂಧ ಬೇರೆ ವೈಯಕ್ತಿಕ ಸಂಬಂಧ ಬೇರೆ ಈ ಒಂದು ಸಂಬಂಧವನ್ನು ನೀವು ಅರ್ಥ ಮಾಡಿಕೊಂಡು ಮುಂದುವರಿಯಬೇಕು .ಈ ತಿಂಗಳಲ್ಲಿ ಯಶಸ್ಸು ಕೂಡ ದೊರೆಯುತ್ತದೆ . ರವಿ ಕುಜ ಮತ್ತು ಶನಿ ಈ ಮೂರು ಗ್ರಹಗಳು ನಿಮಗೆ ಬಹಳ ಧನಾತ್ಮಕವಾಗಿ ಕೊಡುಗೆಯನ್ನು ಕೊಡುತ್ತವೆ. ಮತ್ತು ಶತ್ರು ಕಾಟದಿಂದ ಕೂಡ ನಿಮಗೆ ರಕ್ಷಣೆ ದೊರೆಯುತ್ತದೆ. ಯಶಸ್ಸು ದೊರೆಯಬೇಕು ಎಂದರೆ ಯಾವುದೇ ಸಂಘರ್ಷಕ್ಕೂ ಕೂಡ ನೀವು ತಯಾರು ಆಗಬೇಕಾಗುತ್ತದೆ . ಆ ಸಂಘರ್ಷ ಒಳ್ಳೆಯ ಗುರಿಯತ್ತ ಕರೆದುಕೊಂಡು ಹೋಗುತ್ತದೆ .

Leave A Reply

Your email address will not be published.