ತೂಕ / ಬೊಜ್ಜು ಕರಗಿಸೋಕೆ ಇದೆಂಥಾ ಜ್ಯೂಸ್ ನೋಡಿ | ಬೊಜ್ಜು ಕರಗಿಸುವ ವಿಧಾನ

0

ನಾವು ಈ ಲೇಖನದಲ್ಲಿ ತೂಕ, ಬೊಜ್ಜು ಕರಗಿಸುವ ವಿಧಾನಗಳು ಯಾವುದು ಎಂದು ತಿಳಿದುಕೊಳ್ಳೋಣ.
ನಾವು ಇಲ್ಲಿ ವಿಶೇಷವಾದ ಪಾನೀಯಾ ತೂಕ ಇಳಿಸುವುದಕ್ಕೆ ಹೇಗೆ ಸಹಾಯ ಮಾಡುತ್ತದೆ, ಎಂದು ತಿಳಿಯೋಣ.
ಬಹಳ ಅದ್ಭುತವಾದ ಪೇಯಗಳು ತೂಕ ಇಳಿಕೆಗೆ ಸಹಕಾರಿಯಾಗಿದೆ. ಅಂತಹ ಪೇಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಇದನ್ನು ಸತತವಾಗಿ ಒಂದು ತಿಂಗಳಿಂದ ಮೂರು ತಿಂಗಳ ವರೆಗೆ ಬಳಸಿದರೆ, ನಿಮ್ಮ ತೂಕದಲ್ಲಿ ಗಣನೀಯವಾಗಿ ಇಳಿಕೆ ಕಾಣಿಸಿಕೊಳ್ಳುತ್ತದೆ.

ಪ್ರತೀ ತಿಂಗಳು 3 ರಿಂದ 5 Kg ಯವರೆಗೆ ತೂಕ ಇಳಿಸಬಹುದು . ಮೊದಲನೇಯ ಪೇಯ ಯಾವುದು ಎಂದರೆ, ಬೆಟ್ಟದ ನೆಲ್ಲಿಕಾಯಿ . ಬೆಳಿಗ್ಗೆ ಎದ್ದ ತಕ್ಷಣ ಮೂರು ನೆಲ್ಲಿಕಾಯಿ ತೆಗೆದುಕೊಂಡು , ಅದರಲ್ಲಿ ಸ್ವಲ್ಪ ನೀರು ಹಾಕಿ . ಅದರಿಂದ ಬೀಜ ತೆಗೆದು ಮಿಕ್ಸಿಗೆ ಹಾಕಿದರೆ, ಚಟ್ನಿಯ ರೀತಿ ಆಗುತ್ತದೆ. ಅದನ್ನು ಬಟ್ಟೆಗೆ ಹಾಕಿ ಸೋಸಬೇಕು. ಚೆನ್ನಾಗಿ ಹಿಂಡಿದಾಗ , ಬರುವ ರಸಕ್ಕೆ 100 ml ನೀರು ಹಾಕಿ ಅದಕ್ಕೆ ಅರ್ಧ ಚಮಚ ಸೈಂದ್ರ ಲವಣ ಹಾಕಬೇಕು. ಎರಡು ಚಮಚ ಹಸಿ ಶುಂಠಿ ರಸವನ್ನು ಸೇರಿಸಬೇಕು .

ಆರು ಚಿಟಕಿ ಕಾಳು ಮೆಣಸಿನ ಪುಡಿಯನ್ನು ಹಾಕಬೇಕು. ಇಷ್ಟೆಲ್ಲಾ ಹಾಕಿ ಇದನ್ನು ನೀವು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಇದನ್ನು 10 ದಿನಗಳ ಕಾಲ ಸೇವಿಸಬೇಕು. ಮತ್ತೆ 10 ದಿವಸ ಎರಡನೆಯ ಪೇಯ ಬೂದ ಕುಂಬಳ ಕಾಯಿ ಜ್ಯೂಸ್ . ಇದರಲ್ಲೂ ಕೂಡ ಜ್ಯೂಸ್ ತಯಾರಿಸಿ ಅದಕ್ಕೆ 2 ಚಮಚ ಹಸಿ ಶುಂಠಿ ರಸ, ಆರು ಕಾಳು ಮೆಣಸು ಪುಡಿ, ಅರ್ಧ ಚಮಚ ಸೈಂದ್ರ ಲವಣ , ಸೇರಿಸಿ 10 ದಿನಗಳ ಕಾಲ ಕುಡಿಯಬೇಕು. ನಂತರ ಮತ್ತೇ 10 ದಿವಸ ಸೋರೆಕಾಯಿ ಜ್ಯೂಸ್ ತಯಾರಿಸಿ , ಇದರಲ್ಲೂ ಎರಡು ಚಮಚ ಶುಂಠಿ ರಸ, ಆರು ಕಾಳು ಮೆಣಸಿನ ಪುಡಿ, ಮತ್ತು ಅರ್ಧ ಚಮಚ ಸೈಂದ್ರ ಲವಣ ಹಾಕಿ 10 ದಿನಗಳ ಕಾಲ ಸೇವಿಸಬೇಕು.

ಹೀಗೆ ಮಾಡುವುದರಿಂದ ಒಂದು ತಿಂಗಳಲ್ಲಿ ಅದ್ಭುತವಾದ ಮೆಟಾಬಾಲಿಕ್ ಮಟ್ಟ ಹೆಚ್ಚಾಗುತ್ತದೆ. ಅದರ ಜೊತೆಗೆ ಮಧ್ಯಾಹ್ನದ ಸಮಯದಲ್ಲಿ ಆಹಾರಕ್ಕಿಂತ , ಒಂದು ಗಂಟೆಯ ಮೊದಲು ಒಂದು ಎಳನೀರನ್ನು ಕುಡಿಯಬೇಕು . ಇದು ಕೂಡ ತೂಕ ಇಳಿಕೆಗೆ ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಕ್ರಿಯಾಶೀಲತೆಗೆ , ಕರಳು ಶುದ್ಧಿಕರಣಕ್ಕೆ ಸಹಕಾರಿಯಾಗುತ್ತದೆ. ರಾತ್ರಿಯ ಸಮಯದಲ್ಲಿ ಅರ್ಧ ಚಮಚ ಜೀರಿಗೆ ಪುಡಿ ಮತ್ತು ಅರ್ಧ ಚಮಚ ಓಂ ಕಾಳಿನ ಪುಡಿಯನ್ನು ಸೇರಿಸಿ 400 ml ನೀರಿನಲ್ಲಿ ಕುದಿಸಿ,

ಅದನ್ನು 100 ml ನೀರಿಗೆ ಇಳಿಸಿ, ಮಲಗುವ ಮುನ್ನ ಈ ಒಂದು ಕಷಾಯವನ್ನು ಕುಡಿಯಬೇಕು . ಇದೆಲ್ಲವನ್ನು ಮಾಡುವುದರಿಂದ ಒಂದು ತಿಂಗಳಲ್ಲಿ ತೂಕ ಗಣನೀಯವಾಗಿ ಕಡಿಮೆಯಾಗುತ್ತದೆ . ಇದನ್ನು ಮೂರು ತಿಂಗಳು ಪುನಾರಾವರ್ತನೆ ಮಾಡುವುದರಿಂದ , ಮತ್ತು ಇದರ ಜೊತೆಗೆ ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಗಳನ್ನು ಬಿಡಬೇಕು .ಹೆಚ್ಚು ಸೊಪ್ಪು ತರಕಾರಿ ಯುಕ್ತ ಆಹಾರ ಪದಾರ್ಥಗಳನ್ನು ತಿನ್ನಬೇಕು . ರೊಟ್ಟಿ ,ಅನ್ನ, ಮುದ್ದೆ ಕಡಿಮೆ ತಿನ್ನಬೇಕು. ಪಲ್ಯ , ಸೊಪ್ಪು , ತರಕಾರಿ ಹೆಚ್ಚಾಗಿ ತಿನ್ನಬೇಕು .

ಹೀಗೆ ಮಾಡುವುದರಿಂದ ಕಾರ್ಬೋಹೈಡ್ರೇಟ್ಸ್ ಕಡಿಮೆಯಾಗಿ ಪೋಷಕಾಂಶಗಳು ಹೆಚ್ಚಾಗಿ ದೊರೆಯುತ್ತದೆ . ಫ್ಯಾಟ್ ಮೆಟಬಾಲಿಸಂ ಕ್ರಿಯಾಶೀಲವಾಗಿ , ಲಿವರ್ ಶಕ್ತಿಯುತ ಆಗುವುದರ ಜೊತೆಗೆ ದೇಹದಲ್ಲಿ ಇರುವ ಕೊಬ್ಬಿನ ಕಣಗಳು ಸಂಪೂರ್ಣವಾಗಿ ಕರಗಿ , ನಮ್ಮ ಶರೀರದಲ್ಲಿ ಇರುವ ಫ್ಯಾಟ್ ಸೆಲ್ಸ್ ಗಳನ್ನು ಸುಟ್ಟಿ ಹಾಕುವುದರಿಂದ ತೂಕ ಕಡಿಮೆಯಾಗುತ್ತದೆ. ಹೃದಯ ತೊಂದರೆ ಇರುವವರು , ಕಿಡ್ನಿ ತೊಂದರೆ ಇರುವವರು , ಗರ್ಭಿಣಿ ಸ್ತ್ರೀಯರು , ಸ್ತನ ಪಾನ ಮಾಡಿಸುವ ಸ್ತೀಯರು ಮಾಡಬಾರದು. ಉಳಿದವರು ಬೇರೆ ಎಲ್ಲರೂ ಈ ಪ್ರಯೋಗವನ್ನು ಮಾಡುವುದರಿಂದ , ತಮ್ಮ ತೂಕವನ್ನು ಬೇಗ ಇಳಿಸಿಕೊಳ್ಳಲು ಸಾಧ್ಯವಾಗುತ್ತದೆ .

Leave A Reply

Your email address will not be published.