ಕಟಕ ರಾಶಿಯ ಡಿಸೆಂಬರ್ ತಿಂಗಳಿನ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಕಟಕ ರಾಶಿಯವರಿಗೆ ಈ ತಿಂಗಳು ವಿಚಿತ್ರ ತಿಂಗಳಾಗಿದೆ. ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ ಬದಲಾವಣೆಗಳು ಇರುತ್ತವೆ. ಖುಷಿ ಮತ್ತು ಸಂತೋಷದ ವಾತಾವರಣ ಉಂಟಾಗುತ್ತದೆ. ಏನೇ ಸಂತೋಷವಿದ್ದರೂ ಕೆಲವೊಂದು ಬದಲಾವಣೆಗಳು ಇದ್ದೇ ಇರುತ್ತವೆ. ನಿಮಗೆ ಕೇತು ಗ್ರಹವು ಧನಾತ್ಮಕವಾದ ಪರಿಣಾಮವನ್ನು ಉಂಟುಮಾಡುತ್ತದೆ.
ಅಷ್ಟಮ ಶನಿ ಇರುವುದರಿಂದ ಅದನ್ನು ಎದುರಿಸಲು ಧೈರ್ಯ ಕೇತುಗ್ರಹವು ಕೊಡುತ್ತದೆ ಆಗ ನಿಮಗೆ ಸ್ವಲ್ಪ ಮುನ್ನುಗ್ಗುವ ಧೈರ್ಯ ಬರುತ್ತದೆ. ನಿಮ್ಮಲ್ಲಿ ಛಲವಿರುತ್ತದೆ ಆದರೇ ಹುಚ್ಚು ಸಾಹಸಕ್ಕೆ ಕೈ ಹಾಕಬಾರದು. ಧೈರ್ಯದ ಜೊತೆ ಹಠಮಾರಿತನವು ನಿಮ್ಮಲ್ಲಿ ಇದೆ. ಧೈರ್ಯ, ಛಲ, ಹಣ ಕೂಡ ಇರಬೇಕು ಆದರೇ ಇವೆಲ್ಲವೂ ಒಂದು ಎಲ್ಲೇ ಮೀರಬಾರದು.
ಈ ತಿಂಗಳು ನಿಮ್ಮನ್ನು ವ್ಯವಸ್ಥಿತವಾಗಿ ಒಂದು ಕಡೆ ನಡೆಯುತ್ತೀರಿ. ಈ ತಿಂಗಳು ನೀವು ಮಾಡಬೇಕಾದ ಕೆಲಸಗಳಿಗೆ ಸ್ಫೂರ್ತಿ ಸಿಗುತ್ತದೆ. ತಿಂಗಳ ಕೊನೆಯಲ್ಲಿ ಬಹಳಷ್ಟು ಯಶಸ್ಸು ಸಿಗುತ್ತದೆ. ಭೂಮಿ, ಭೂ ಅಭಿವೃದ್ಧಿ, ಕಂಟ್ರಕ್ಷನ್ಸ್, ಸ್ವಂತ ಉದ್ಯೋಗಿಗಳು, ಸರ್ಕಾರಿ ಉದ್ಯೋಗಿಗಳಿಗೆ ವಿಶೇಷವಾದ ಪ್ರಗತಿಯಾಗುತ್ತದೆ. ಹಾಗೆಯೇ ಶುಕ್ರ ಗ್ರಹವು ಪಂಚಮಭಾವದಲ್ಲಿರುತ್ತದೆ.
ವ್ಯಾಪಾರ ವ್ಯವಹಾರಗಳಲ್ಲಿ ಸಕ್ಸಸ್ ಅನ್ನು ತಂದುಕೊಡುತ್ತದೆ. ಈ ತಿಂಗಳಿನಲ್ಲಿ ಶುರುವಿನಲ್ಲಿ ವಿಘ್ನಗಳಿದ್ದರೂ ತಿಂಗಳ ಮಧ್ಯಭಾಗದಿಂದ ನೀವು ಅಂದುಕೊಂಡಂತೆ ಆಗುತ್ತದೆ. ಪ್ರಾಮಾಣಿಕವಾಗಿ ನೀವು ಶ್ರಮಪಟ್ಟಿದ ಕೆಲಸವು ಯಶಸ್ವಿಯಾಗುತ್ತದೆ. ಶತೃಗಳು ದೂರವಾಗುತ್ತಾರೆ. ವಿದ್ಯಾರ್ಥಿಗಳು ಗಮನವಿಟ್ಟು ಅಭ್ಯಾಸ ಮಾಡಬೇಕಾಗುತ್ತದೆ. ಕೆಲಸ ಮಾಡುವ
ವ್ಯಕ್ತಿಗಳಿಗೆ ಮಾಡುವ ಕೆಲಸಗಳಿಗೆ ಹೊಗಳಿಕೆ ಮತ್ತು ಪ್ರೋತ್ಸಾಹ ಸಿಗುತ್ತದೆ. ಸಂತೋಷ ಹೆಚ್ಚಾಗಿ ದುಃಖ ದೂರವಾಗುವಂತದ್ದು, ಹಾಗೆಯೇ ಶತೃಗಳು ಕಡಿಮೆಯಾಗುತ್ತಾರೆ. ಈ ತಿಂಗಳಿನಲ್ಲಿ ಘಟನೆಗಳು ಹಿಂದೆ ನಡೆದಿತ್ತು ಎಂಬ ಅನುಭವಗಳು ನಿಮಗೆ ಆಗುತ್ತದೆ. ಅನಾರೋಗ್ಯ, ಯಾವುದೋ ವ್ಯಕ್ತಿ ಜೊತೆ ವೈಮನಸ್ಸು ಇರಬಹುದು ಮತ್ತು ಬೇರೆಯವರಿಗೆ ಕೊಡು ಕೊಳ್ಳುವ ವ್ಯವಹಾರ ಮೋಸದ ವಿಚಾರದಲ್ಲಿ ಹಿಂದೆ ತೊಂದರೆಯನ್ನು ಅನುಭವಿಸಿರುತ್ತೀರಿ ಮತ್ತೆ ಅದು ಮರುಕಳಿಸದಂತೆ ಎಚ್ಚರವಹಿಸಿ.