ಕಟಕ ರಾಶಿ ರಾಹು ಗೋಚಾರ ಫಲ

0

ಆತ್ಮೀಯ ಕಟಕ ರಾಶಿಯ ವೀಕ್ಷಕರೆe ನೋಡ್ತಾ ನೋಡ್ತಾ ಅರ್ಧ ವರ್ಷ ಕಳೆದೆe ಹೋಯಿತು. ಅಕ್ಟೋಬರ್ ಅನ್ನುವಷ್ಟೊತ್ತಿಗೆ ರಾಹು ಪರಿವರ್ತನೆ ಆಗುತ್ತಿದೆ. ಅದರಿಂದ ನಿಮ್ಮ ಲೈಫ್ ಅಲ್ಲಿ ಏನೇನು ನಡೆಯಲಿದೆ ಎಂಬುದನ್ನು ಈ ವಿಡಿಯೋದ ಮೂಲಕ ತೋರಿಸಿ ಕೊಡುತ್ತಿದ್ದೇವೆ. ನಿಮಗೆ ಈ ಸಲ ರಾಹು ಪರಿವರ್ತನೆಯಿಂದ ದೊಡ್ಡ ಕೊಡುಗೆಗಳೇ ಇವೆ.

ಬೋನಸ್ ನಿರೀಕ್ಷೆಯಲ್ಲಿರುವ ನಿಮಗೆ ಕೆಲವೊಂದು ವಿಚಾರದಲ್ಲಿ ಲಾಟರಿನೇ ಹೊಡೆಯೋದಿದೆ. ಅಂತಹ ಹೆದರುವ ವಿಚಾರ ಏನು ಇಲ್ಲ. ಆದರೂ ಒಂದಷ್ಟು ಸಣ್ಣ ವಿಚಾರಗಳನ್ನ ತೆಗೆದುಹಾಕುವಂತಿಲ್ಲ. ಮೊದಲು ಬೆಟರ್ ವಿಚಾರಗಳನ್ನು ನೋಡಿ ನಂತರ ಬೆಸ್ಟ್ ಎನ್ನುವ ವಿಚಾರಗಳನ್ನು ನೋಡೋಣ. ಇಷ್ಟು ದಿನ ಮೇಷ ರಾಶಿಯಲ್ಲಿದ್ದ ರಾಹು, ಈ ವರ್ಷ ಅಕ್ಟೋಬರ್ 30ಕ್ಕೆ ಮೀನ ರಾಶಿಗೆ ಪರಿವರ್ತನೆ ಆಗುವವನಿದ್ದಾನೆ.

ಅದು ನಿಮ್ಮಿಂದ ಒಂಬತ್ತನೇ ಮನೆ ಅಂದರೆ ನವಮ ಸ್ಥಾನದಲ್ಲಿದೆ. 9ನೇ ಮನೆಗೆ ಭಯ ಸ್ಥಾನ ಎಂದೂ ಕರೆಯುತ್ತೇವೆ. ಹಾಗಾದರೆ ಯಾವ ವಿಚಾರದಲ್ಲಿ ಭಯ ಕಾಡುವುದು ಎಂದರೆ, ನಂಬಿಕೆಯ ವಿಚಾರದಲ್ಲಿ ಎಂದು ಹೇಳಬಹುದು. ಉದಾಹರಣೆಗೆ ನೀವು ಯಾರನ್ನು ತುಂಬಾ ನಂಬಿದ್ದೀರಿ, ನಿಮ್ಮ ಗೌಪ್ಯ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೀರಿ,

ನಿಮ್ಮಲ್ಲಿ ಏನೇ ಮನಸ್ತಾಪಗಳಿದ್ದರೂ ಅವರಲ್ಲಿ ಹೇಳುತ್ತಿದ್ದೀರಿ, ಏನಾದರೂ ಲಾಭವಾದರೆ, ಖುಷಿಯ ವಿಚಾರಗಳಿದ್ದರೆ, ಅವರ ಬಳಿ ಹೇಳಿಕೊಳ್ಳುತ್ತಿದ್ದೀರಿ ಎಂದಿಟ್ಟುಕೊಳ್ಳಿ, ಇದೆಲ್ಲ ಒಂದೆರಡು ದಿನದ ಪರಿಚಯದಿಂದಲ್ಲ, ಅವರು ತುಂಬಾ ವರ್ಷದಿಂದ ನಿಮ್ಮೊಂದಿಗೆ ಇದ್ದವರು, ಅಂತಹ ಜನ ಈ ರಾಹು ನ್ಯೂಟ್ರಲ್ ಆಗಿರುವ ಸಮಯದಲ್ಲಿ, ಸ್ವಲ್ಪ ಅನುಮಾನ ಬರುವ ಹಾಗೆ ನಡೆದುಕೊಳ್ಳಬಹುದು.

ಅಥವಾ ನಿಮ್ಮ ಮನೆಯಲ್ಲಾಗುವ ಘಟನೆಗಳ ಬಗ್ಗೆ ಮೂರನೆಯ ವ್ಯಕ್ತಿಗಳು ಮಾತನಾಡುವಾಗ, ನಿಮಗೆ ಅನುಮಾನ ಶುರುವಾಗುತ್ತದೆ. ಅದೇನೆಂದರೆ ನಿಮಗೆ ನಂಬಿಕಸ್ತ ವ್ಯಕ್ತಿ ಎಂದುಕೊಂಡವನೇ, ನಿಮ್ಮ ಬಗ್ಗೆ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು. ಅಥವಾ ಹೀಗೂ ಆಗಬಹುದು ನೀವು ಯಾವುದೋ ದುರುದ್ದೇಶಪೂರಿತವಾಗಿ ಒಬ್ಬರ ಸ್ನೇಹ ಮಾಡಿ ಅವರ ನಂಬಿಕೆ ಗಳಿಸುತ್ತೀರಾ. ನಂತರ ಅವರ ವಿಶ್ವಾಸ ಘಾತ ಮಾಡುವ ಸಾಧ್ಯತೆ ಇರುತ್ತದೆ.

ಬೇಕೆಂದೇ ಮಾಡುತ್ತೀರಿ ಎಂದೇನಲ್ಲ, ಈ ರಾಹು ಬಂದಾಗ, ಸುಳ್ಳು ಹೇಳುವುದು, ಮೋಸ ಮಾಡುವುದು ಅಥವಾ ದುರಾಸೆ ಇಂತಹ ಭಾವನೆಗಳು ಮನಸ್ಸಿನಲ್ಲಿ ಬೆಳೆಯುತ್ತಿರುತ್ತದೆ. ಒಂದು ವೀಕ್ ಮೂಮೆಂಟಲ್ಲಿ ಹೊರಗೆ ಬರುವುದು ಅಷ್ಟೇ. ಮತ್ತೆ ಕೆಲವರು ಅತಿ ಬುದ್ಧಿವಂತಿಕೆ ತೋರಿಸಲು ಹೋಗಿ, ಎಡವಟ್ಟು ಮಾಡಿಕೊಳ್ಳಬಹುದು. ಅಥವಾ ಯಾರಾದರೂ ನಿಮ್ಮನ್ನು ನೋಡಿ ನಗುವಂತಹ ಪರಿಸ್ಥಿತಿ ತಂದುಕೊಳ್ಳಬಹುದು ಹುಷಾರು!

ಮತ್ತೆ ಚಂದ್ರ ನಿಮ್ಮ ರಾಶಿಯ ಅಧಿಪತಿ ಯಾಗಿರುವುದರಿಂದ, ನೀರಿನ ಬಗೆಗೆ ಕುತೂಹಲ ಹೆಚ್ಚಾಗಿಯೇ ಇರುತ್ತದೆ. ಸಮುದ್ರ, ಜಲಪಾತ, ಹೊಳೆ, ಕೆರೆ, ಇಂತಹ ಕಡೆ ಹೋದಾಗ ಹೆಚ್ಚು ಹುಷಾರಾಗಿರಬೇಕು. ಸುಳಿ ಇರುವ ಕಡೆ ನೀರನ್ನು ನೋಡುವುದು ಅಥವಾ ಸೆಲ್ಫಿ ತೆಗೆದುಕೊಳ್ಳಲು ಅಥವಾ ಫೋಟೋಗ್ರಾಫಿ ಮಾಡುವ ಸಾಹಸ ಮಾಡಲು ಹೋಗಬೇಡಿ.

ಇಷ್ಟೇ ಅಲ್ಲ ಕೆಲವರು ಕನಸು ಕಾಣುವ ವಿಚಾರದಲ್ಲೂ ಮುಳುಗಿರುವ ಸಾಧ್ಯತೆ ಇರುತ್ತದೆ. ಬರೀ ಭ್ರಮಾಲೋಕದಲ್ಲಿ ತೇಲಾಡುವುದು ಕೆಲವೊಮ್ಮೆ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನೇ ಗಮನಿಸುವುದಿಲ್ಲ. ನಿಂತಲ್ಲೇ ಕೋಟ್ಯಾಧಿಪತಿ ಆದ ಹಾಗೆ ಕಲ್ಪಿಸಿಕೊಳ್ಳುವುದು. ಬಾಡಿಗೆ ಮನೆಯಲ್ಲಿದ್ದರೆ ಸ್ವಂತ ಮನೆ ತೆಗೆದುಕೊಂಡರೆ ಹೇಗಿರುತ್ತದೆ! ಎಂಬ ಕಲ್ಪನೆ, ಇನ್ನು ಮದುವೆಯಾಗದವರು ಮದುವೆಯಾಗುವ ಕನಸು ಕಾಣುವುದು, ಇಂತಹದ್ದನ್ನೆಲ್ಲ ಆದಷ್ಟು ನಿಲ್ಲಿಸಿ.

ರಿಯಾಲಿಟಿ ಯನ್ನು ಎಂಜಾಯ್ ಮಾಡಿ. ಕೆಲವರು ತ್ಯಾಗಮನೋಭಾವವನ್ನು ಕಡಿಮೆ ಮಾಡಿ, ಸ್ವಲ್ಪ ಸ್ವಾರ್ಥಿಗಳ ಹಾಗೆ ವರ್ತಿಸಲು ಶುರು ಮಾಡಬಹುದು. ಪ್ರೀತಿಯ ವಿಚಾರದಲ್ಲಿ ಇರಬಹುದು, ಅಥವಾ ಅಣ್ಣ ತಮ್ಮಂದಿರ ಮಧ್ಯೆ ಆಸ್ತಿಯ ವಿಚಾರದಲ್ಲಿ ಇರಬಹುದು, ಹಾಗೆಯೇ ಅಕ್ಕ-ತಂಗಿಯರಿದ್ದರೆ, ತಾಯಿಯ ಒಡವೆ ವಸ್ತ್ರ ಪಡೆದುಕೊಳ್ಳುವ ಸಲುವಾಗಿ ಜಗಳ ಮನಸ್ತಾಪ ಆಗುವ ಸಾಧ್ಯತೆ ಇರುತ್ತದೆ.

ಇಂಥದ್ದನ್ನೆಲ್ಲ ಹುಷಾರಾಗಿ ನಿಭಾಯಿಸಿ. 9ನೇ ಮನೆಯನ್ನು ಪಿತೃ ಸ್ಥಾನ ಎಂದು ಕರೆಯುತ್ತೇವೆ. ತಂದೆ ಅಥವಾ ತಂದೆ ಸಮಾನರಾದವರ ವಿಚಾರದಲ್ಲಿ ಸ್ವಲ್ಪ ಹುಷಾರಾಗಿ ಇರಬೇಕು. ಅಂದರೆ ಅವರ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಎಚ್ಚರಿಕೆ ತೆಗೆದುಕೊಳ್ಳಬೇಕು. ಹಾಗೂ ಅವರೊಂದಿಗೆ ನೋವಾಗದ ಹಾಗೆ ನಡೆದುಕೊಳ್ಳಬೇಕು. ನಿಮ್ಮ ಎಚ್ಚರಿಕೆಯಲ್ಲಿದ್ದರೆ ಏನು ಆಗುವುದಿಲ್ಲ.

ಈಗ ಒಳ್ಳೆಯ ಫಲಗಳನ್ನು ನೋಡೋಣ. ತತ್ ಕ್ಷಣ ಯಾವುದೇ ಘಟನೆ ನಡೆದಾಗ ನಿಮ್ಮಷ್ಟಕ್ಕೆ ನಿಮಗೆ, ದೇವರ ಮೊರೆ ಹೋದರೆ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದು ಅನಿಸುವುದು. ಹೀಗಾಗಿ ಹೆಚ್ಚಿನ ಜನ ದೇವರ ಆರಾಧನೆ, ಪೂಜೆ, ಪುನಸ್ಕಾರ ಇಂತಹದರೆಡೆ ಮನಸ್ಸು ಮಾಡುವಿರಿ. ಪದೇ ಪದೇ ದೇವತಾ ಕಾರ್ಯಗಳನ್ನು ಮಾಡಿಸುವುದು, ದೇವಾಲಯಕ್ಕೆ ಭೇಟಿಕೊಡುವುದು, ಹರಕೆ ತೀರಿಸುವುದು,

ಇನ್ನು ಕೆಲವರು ಒಳ್ಳೆಯ ಉದ್ದೇಶಕ್ಕಾಗಿ ದೇಣಿಗೆ ಕೊಡುವುದು. ದಾನ ಧರ್ಮ ಮಾಡಲು ಮುಂದೆ ಹೋಗುತ್ತಾರೆ. ಗುರುಗಳ ಉಪದೇಶ ಸಿಗಬಹುದು ಅಥವಾ ಆಶೀರ್ವಾದ ಸಿಗಬಹುದು ಅಥವಾ ತಾಯಿಯ ಆಶೀರ್ವಾದದಿಂದ ಸಾಕಷ್ಟು ನೆಮ್ಮದಿ ನಿಮಗೆ ಸಿಗುತ್ತದೆ. ಈ ನವಮಸ್ಥಾನಕ್ಕೆ ಭಾಗ್ಯಸ್ಥಾನ ಎಂದು ಕರೆಯುತ್ತೇವೆ. ಭಾಗ್ಯ ಎಂದರೆ ಅದೃಷ್ಟ ಎಂದರ್ಥ.

ರಾಹು ಭಾಗ್ಯಸ್ಥಾನದಲ್ಲಿ ನಿಂತು ಒಂದಷ್ಟು ಹಣಕಾಸಿನ ಲಾಭವನ್ನು ಮಾಡಿಕೊಡುತ್ತಾನೆ. ಮೇ 18 2025 ರವರೆಗೆ ನಿಮಗೆ ಸಮಯವಿದೆ. ಅಷ್ಟರೊಳಗೆ ರಾಹುವಿನಿಂದ ಬರಬೇಕಾದ ಹಣ ಬಂದೇ ಬರುತ್ತದೆ. ಕೆಲವರಿಗೆ ಕೆಲಸದ ವಿಚಾರದಲ್ಲಿ ಒಳ್ಳೆಯ ಸುದ್ದಿ ಸಿಗಬಹುದು. ಅಕಸ್ಮಾತಾಗಿ ಒಂದಷ್ಟು ಮೂಲದಿಂದ ಹಣ ಬರಬಹುದು. ಯಾವುದಾದರೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದರಿಂದ ಬಹುಮಾನ

ಅಥವಾ ಧನ ಸಹಾಯ ಸಿಗಬಹುದು. ಕೆಲವರಿಗೆ ಬಡ್ತಿ ಸಿಗಬಹುದು. ಬೇರೆ ಕಂಪನಿಯಲ್ಲಿ ಕೆಲಸದ ಅವಕಾಶ ಸಿಗಬಹುದು. ಕಂಪನಿ ಅಥವಾ ಫ್ಯಾಕ್ಟರಿಯಲ್ಲಿ ಬೋನಸ್ ಸಿಗಬಹುದು. ಕಾಂಟ್ರಾಕ್ಟರ್ಗಳಿಗೆ ಒಳ್ಳೆಯ ಕಾಂಟ್ರಾಕ್ಟ್ ಸಿಗಬಹುದು. ಇತ್ಯಾದಿ. ಒಳ್ಳೆಯ ರೀತಿಯಲ್ಲಿ ಹಣ ಮಾಡುವ ಅವಕಾಶ ತುಂಬಾ ಇದೆ. ರಾಹು ಸ್ವಲ್ಪ ಅಡ್ಡ ದಾರಿಯಿಂದ ದುಡ್ಡು ಬರುವ ಹಾಗೆ ಮಾಡುತ್ತಾನೆ.

ಕಂಪನಿಗೆ ಬರಬೇಕಾದ ಟೆಂಡರ್ ಕಿತ್ತುಕೊಳ್ಳುವುದು ಅಥವಾ ಲಾಸ್ ಆಗುವ ಹಾಗೆ ಮಾಡುವುದು. ಪ್ರಮುಖವಾದ ಡಾಕ್ಯುಮೆಂಟ್ ಗಳಲ್ಲಿರುವ ಮಾಹಿತಿಯನ್ನು ಬಹಿರಂಗಪಡಿಸುವುದು. ನಿಮ್ಮ ಓನರ್ ಸೀಕ್ರೆಟ್ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ನೀವು ಅವರ ಕಣ್ಣಿಗೆ ಬೀಳುವುದು, ನಿಮ್ಮ ಮನಸ್ಸಿನಲ್ಲಿ ಹೀಗೆ ಅಡ್ಡ ದಾರಿಯಿಂದ ದುಡ್ಡು ಮಾಡಲು ಪ್ರೇರೇಪಿಸಬಹುದು. ಕೆಲವರು ಇದೇ ದಾರಿಯಿಂದ ದುಡ್ಡು ಮಾಡಲು ಪ್ರಾರಂಭಿಸುತ್ತೀರಿ. ಈ ಎಲ್ಲ ರೀತಿಯಲ್ಲೂ ನೀವು ಶ್ರೀಮಂತರಾಗಬಹುದು.

ಆದರೆ ನೆನಪಿನಲ್ಲಿಡಿ ಒಂದು ದಿನ ರಾಹು ಪೂರ್ತಿ ಡೌನ್ ಆದಾಗ ಅಡ್ಡ ದಾರಿಯಲ್ಲಿ ಬಂದದ್ದನ್ನೆಲ್ಲಾ ಬಡ್ಡಿ ಸಮೇತ ವಸೂಲಿ ಮಾಡುತ್ತಾನೆ ಅಷ್ಟೇ. ಆದಷ್ಟು ಪ್ರಾಮಾಣಿಕರಾಗಿ ಇರಿ. ಮತ್ತೆ ಜನಪ್ರಿಯತೆ ನಿಮಗೆ ಸಿಗುವುದು. ಒಳ್ಳೆಯ ರೀತಿಯಲ್ಲಾದರೂ ಆಗಿರಬಹುದು ಅಥವಾ ಕಾಂಟ್ರವರ್ಸಿಯಿಂದಲಾದರೂ ಆಗಿರಬಹುದು, ಜನ ನಿಮ್ಮನ್ನು ಗುರುತಿಸುವಹಾಗೆ ಮುನ್ನಡೆಗೆ ಬರಬಹುದು. ಅಥವಾ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದೆ ಟ್ರೆಂಡ್ ಆಗಬಹುದು.

ನೀವು ನಿಮ್ಮ ಸಂಗೀತ, ನೃತ್ಯ, ಕಾಮಿಡಿ, ರೀಲ್, ವೀಡಿಯೋಸ್, ಅಥವಾ ಯಾವುದಾದರೂ ಕಲಿಕೆಯ ಮೂಲಕ, ಯೂಟ್ಯೂಬ್, ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಂ, ಇಂತಹ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಸುದ್ದಿಯಾಗುವ ಸಾಧ್ಯತೆಗಳಿವೆ. ಆದರೆ ಮುಂದಾಲೋಚನೆಯಿಂದ ಕೆಲಸ ಮಾಡಿದರೆ ಮಾತ್ರ ನೆಗೆಟಿವ್ ವಿಚಾರದಲ್ಲಿ ಸುದ್ದಿಯಾಗುವುದನ್ನು ತಪ್ಪಿಸಬಹುದು. ಮತ್ತಷ್ಟು ಪಾಸಿಟಿವ್ ವಿಚಾರಗಳೆಂದರೆ, ಕೆಲವರು ಎಷ್ಟೋ ದಿನಗಳಿಂದ ವಿಮಾನದಲ್ಲಿ ಹೋಗಲು ಆಸೆ ಪಟ್ಟಿರಬಹುದು, ಅಂತಹ ಕನಸುಗಳು ನಿಮ್ಮ ಮಕ್ಕಳ ಮೂಲಕ ಅಥವಾ ನಿಮ್ಮಿಂದಲೇ ಸಾಕಾರಗೊಳ್ಳಲಿದೆ.

ಹಡಗಿನಲ್ಲಿ ಪ್ರಯಾಣಿಸುವ ಅವಕಾಶ ಅಥವಾ ವಿದೇಶಿ ಪ್ರಯಾಣದ ಯೋಗವು ಹಲವರಿಗೆ ಕೂಡಿ ಬರಬಹುದು. ಇನ್ನು ಕುಟುಂಬದ ವಿಚಾರಕ್ಕೆ ಬಂದರೆ ಮನೆಯಲ್ಲಿ ತಾತ ಹಾಗೂ ಮೊಮ್ಮಕ್ಕಳ ನಡುವೆ ಒಳ್ಳೆಯ ಬಾಂಡಿಂಗ್ ಇರುತ್ತದೆ. ತಾತ ಹೇಳಿದ ಮಾತನ್ನು ಮೊಮ್ಮಕ್ಕಳು ತೆಗೆದು ಹಾಕುವುದಿಲ್ಲ. ಅವರಿಷ್ಟದ ಪ್ರಕಾರವೇ ಓದುವುದು, ಮದುವೆ, ಕೆಲಸ ಮಾಡುತ್ತಾರೆ. ಮಾತು ಯಾವುದೇ ಕಾರಣದಿಂದ ಮಗು ಅಜ್ಜಿ ತಾತನಿಂದ ದೂರವಿದ್ದರೆ ಅಥವಾ ಸಂಬಂಧದಲ್ಲಿ ಬಿರುಕು ಬಂದಿದ್ದರೆ, ಅವರಿಂದ ದೂರ ಉಳಿಯುವ ಪ್ರಸಂಗ ಬಂದಿದ್ದರೆ, ಈಗ ಹೇಳಿದ ಕಾಲಾವಧಿಯಲ್ಲಿ ಎಲ್ಲವೂ ಸರಿ ಹೋಗುತ್ತದೆ.

Leave A Reply

Your email address will not be published.