ಕಟಕ ರಾಶಿಯವರಿಗೆ ಇದೆಂಥ ವಿಚಿತ್ರ?

ನಾವು ಈ ಲೇಖನದಲ್ಲಿ ಫೆಬ್ರವರಿ ತಿಂಗಳ ಕಟಕ ರಾಶಿಯ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಸಲಾಗಿದೆ. ಬಹಳ ವಿಚಿತ್ರವಾದ ತಿಂಗಳು ಇದಾಗಿರುತ್ತದೆ .ಎಲ್ಲಾ ತಿಂಗಳುಗಳಲ್ಲೂ ಒಳ್ಳೆಯ ಘಟನೆ ಮತ್ತು ಕೆಟ್ಟ ಘಟನೆಗಳು ನಡೆಯುತ್ತವೆ. ನಾವು ನೋಡುವ ದೃಷ್ಟಿಕೋನದಲ್ಲೂ ವ್ಯತ್ಯಾಸಗಳು ಉಂಟಾಗುತ್ತವೆ . ಒಂದು ಕಡೆಯಿಂದ ಯಶಸ್ಸು ದೊರೆತರೂ ಮತ್ತೊಂದು ಕಡೆಯಿಂದ ಸವಾಲುಗಳು ಎದುರಾಗುತ್ತಿರುತ್ತದೆ . ಜೀವನದಲ್ಲಿ ನಡೆಯುವ ವೈಪರಿತ್ಯಗಳನ್ನು ತೆಗೆದುಕೊಳ್ಳಲು ನಿಮಗೆ ಸ್ವಲ್ಪ ಕಷ್ಟವಾಗುತ್ತದೆ .

ನೀವು ಹೆಚ್ಚು ಹೆಚ್ಚು ಕೆಲಸ ಮಾಡಿದಷ್ಟು ಅದರ ಆದಾಯ ಮತ್ತು ಉಳಿತಾಯದ ದಾರಿ ಸೃಷ್ಟಿಯಾಗುತ್ತದೆ . ಆದರೆ ಮೀತಿ ಮೀರಿದಾಗ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ . ಹೆಚ್ಚೆಚ್ಚು ಸಮಯ ಮತ್ತು ಹೆಚ್ಚು ಕೆಲಸ ಇದೆಲ್ಲಾ ನಮ್ಮ ಜೀವನದ ಒಂದು ಹೋರಾಟದ ಭಾಗ ಆಗಿರುತ್ತದೆ . ಕೆಲವೊಂದು ಸಲ ತೆಗೆದುಕೊಳ್ಳಲು ಆಗದ ಪರಿಸ್ಥಿತಿಗಳು ಕೂಡ ಇರುತ್ತದೆ . ಈ ರಾಶಿಯವರಿಗೆ ಅಷ್ಟಮ ಶನಿ ನಡೆಯುತ್ತಿದೆ . ಇದು 2025ರ ವರೆಗೂ ಇರುತ್ತದೆ. ನೀವು ಯಾವುದಾದರೂ ಒಂದು ವಿಷಯದಲ್ಲಿ ಗಮನ ವಹಿಸಿದರೆ,

ಅದರ ಬಗ್ಗೆಯೇ ಹೆಚ್ಚು ಗಮನ ಕೊಡಬೇಕಾಗುತ್ತದೆ. ಈ ತಿಂಗಳಲ್ಲಿ ಮಾನಸಿಕ ಒತ್ತಡಗಳು, ವೈಪರಿತ್ಯಗಳು ಇರುವುದರಿಂದ ಹೆಚ್ಚು ಗಮನ ಕೊಡಬೇಕಾದ ಅವಶ್ಯಕತೆ ಇರುತ್ತದೆ. ಮುಂಬರುವ ದಿನಗಳಲ್ಲಿ ಅಷ್ಟಮ ಶನಿ ಇರುವುದರಿಂದ , ನಿಮ್ಮ ಗಮನ ಆ ಕಡೆ ಈ ಕಡೆ ಆಗುವುದರಿಂದ ಅಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ . ಮಾನಸಿಕ ಗೊಂದಲಗಳು ಉಂಟಾಗುವ ಸಾಧ್ಯತೆ ಇರುತ್ತದೆ . ಒಂದು ಸಮಸ್ಯೆಯನ್ನು ಮೊದಲು ಬಗೆಹರಿಸಿ ನಂತರ ಮತ್ತೊಂದು ಸಮಸ್ಯೆಯನ್ನು ಬಗೆಹರಿಸಬೇಕು .

ಎರಡನ್ನು ಒಟ್ಟೊಟ್ಟಿಗೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಬಾರದು . ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ವಿಳಂಬವಾಗುವ ಸಾಧ್ಯತೆ ಇರುತ್ತದೆ . ಬೇರೆಯವರು ನೀವು ಅಡ್ಡಗೋಡೆಯ ಮೇಲೆ ದೀಪ ಇಡುವ ಹಾಗೆ ಮಾತನಾಡುತ್ತಾರೆ. ಯೋಗ್ಯವಾಗಿ ನಡೆಯುವ ಕೆಲಸ ಕಾರ್ಯಗಳಿಗೆ ಯಶಸ್ಸು ದೊರೆಯುತ್ತದೆ. ಚಿಕ್ಕ ಪುಟ್ಟ ಅನಾರೋಗ್ಯಗಳು ಆಗುವ ಸಾಧ್ಯತೆ ಇದೆ . ಹೊಸ ಪ್ರಯತ್ನಗಳನ್ನು ಮಾಡಲು ಹೋದಾಗ ಯಶಸ್ಸು ಮುಂದೆ ಹೋಗುವ ಸಾಧ್ಯತೆ ಇದೆ .

11ನೇ ತಾರೀಖಿಗೆ ರವಿ ಪರಿವರ್ತನೆಯಾಗಿ ಅಷ್ಟಮ ಭಾವಕ್ಕೆ ಹೋಗುತ್ತದೆ . ಅಷ್ಟಮದಲ್ಲಿ ಶನಿ ಇದೆ . ಬುಧ ಕೂಡ 19ನೇ ತಾರೀಖಿಗೆ ಅಷ್ಟಮ ಭಾವಕ್ಕೆ ಬರುತ್ತದೆ . ಅಷ್ಟಮ ಅಂದರೆ ರಂದ್ರ ಭಾವ ಮೃತ್ಯು ಸ್ಥಾನ ಎಂದು ಹೇಳಲಾಗುತ್ತದೆ . ಅಷ್ಟಮ ಶನಿ ಮೊದಲೇ ಇರುತ್ತದೆ . ಮೂರು ಗ್ರಹಗಳು ಅಷ್ಟಮ ಭಾವದಲ್ಲಿ ಇರುತ್ತದೆ. ನಿಮ್ಮ ಗಮನ ನಿಗೂಢ ವಿಚಾರಗಳ ಕಡೆಗೆ ಇರುತ್ತದೆ . ನಿಗೂಢ ವಿಚಾರಗಳು ಎಂದರೆ, ಗೊತ್ತಿಲ್ಲದೇ ಇರುವ ವಿಚಾರಗಳು . ವಿಶೇಷವಾಗಿ ನಿಗೂಢ ವಿಚಾರಗಳು ಎಂದರೆ,

ಭಯ, ಸಾವು , ಕುತೂಹಲ , ಆತಂಕ, ದಿಗಿಲು , ಸಂದೇಹ , ಹೀಗೆ ಸಾವಿರಾರು ವಿಚಾರಗಳು ಎಣೆದು ಕೊಳ್ಳುವಂತಹ
ನಿಗೂಢ ವಿಚಾರಗಳು ಇರುತ್ತವೆ. ಸ್ವರ್ಗ ನರಕದ ಕಲ್ಪನೆ , ಪುನರ್ಜನ್ಮದ ಕಲ್ಪನೆ ಹಾಗೆಯೇ ಪಾಪ ಪುಣ್ಯದ ಆಧಾರದ ಮೇಲೆ ಕರ್ಮವನ್ನು ಅನುಭವಿಸಬೇಕಾದ ಪರಿಕಲ್ಪನೆ ಸಿಗುತ್ತದೆ . ಬೇರೆ ವ್ಯಕ್ತಿಯ ಸಾವು ನಿಮಗೆ ನೋವು ಗೊಂದಲವನ್ನು ಉಂಟು ಮಾಡಬಹುದು . ಸ್ವತಃ ಈ ತರಹದ ವರ್ತುಲದಲ್ಲಿ ನೀವೇ ಸಿಕ್ಕಿ ಹಾಕಿಕೊಳ್ಳಬಹುದು . ಇದು ವಸ್ತು ಸ್ಥಿತಿ ಆಗಿರುವುದರಿಂದ ಭಯ ಪಡುವ ಅವಶ್ಯಕತೆ ಇರುವುದಿಲ್ಲ .

ಒಬ್ಬ ವ್ಯಕ್ತಿ ಗುರುಗಳ ಹತ್ತಿರ ಹೋಗುತ್ತಾನೆ . ಅವನು ಗುರುಗಳ ಹತ್ತಿರ ನೆನಪಿನ ಬರವಣಿಗೆಯನ್ನು ಕೇಳುತ್ತಾನೆ .ಆಗ ಗುರುಗಳು ಅಪ್ಪ ಸಾಯುತ್ತಾನೆ, ಮಗ ಸಾಯುತ್ತಾನೆ , ಮೊಮ್ಮಗ ಸಾಯುತ್ತಾನೆ ಎಂದು ಬರೆಯುತ್ತಾರೆ .ಅವನಿಗೆ ತಲೆ ಕೆಟ್ಟು ಹೋಗಿ ಹಿತ ನುಡಿಗಳನ್ನು ಕೇಳಿದರೆ ಈ ರೀತಿಯಾಗಿ ಯಾಕೆ ಬರೆದಿದ್ದಾರೆ ಎನ್ನುವ ಗೊಂದಲ ಶುರುವಾಗುತ್ತದೆ . ಆಗ ಗುರುಗಳು ಹೇಳುತ್ತಾರೆ . ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು . ಸನಾತನ ಧರ್ಮದಲ್ಲಿ ಅಂತ್ಯ ಅನ್ನುವುದೇ ಇರುವುದಿಲ್ಲ .

ನಾವು ತಿಳಿದುಕೊಳ್ಳಬೇಕಾದ ವಿಚಾರ ಎಂದರೆ , ಇದೇ ವಿಚಾರ ಮದುವೆಯ ವಿಚಾರಕ್ಕೂ ಅನ್ವಯಿಸುತ್ತದೆ . ದಾಂಪತ್ಯ ಜೀವನದಲ್ಲಿ ಚಿಂತೆ , ಸಮಸ್ಯೆಗಳು, ತಕರಾರು , ಗೊಂದಲಗಳು ಇರುತ್ತವೆ . ವಿಚಾರಗಳನ್ನು ಸೂಕ್ಷ್ಮವಾಗಿ ಬಗೆಹರಿಸಬೇಕಾಗುತ್ತದೆ. ಧನಾತ್ಮಕ ವಿಚಾರಗಳು ಕೂಡ ಸಾಕಷ್ಟು ಕಟಕ ರಾಶಿಯವರಿಗೆ ಇರುತ್ತದೆ . ಜೀವನದಲ್ಲಿ ಬರುವ ಏರುಪೇರುಗಳನ್ನು ಬಗೆಹರಿಸಿಕೊಂಡು ಹೋಗುವುದಕ್ಕೆ ಗಟ್ಟಿಯಾದ ಮನಸ್ಥಿತಿ ಬೇಕಾಗುತ್ತದೆ .

ತೃತೀಯ ಭಾವದಲ್ಲಿ ಇರುವ ಕೇತು ಧೈರ್ಯವನ್ನು ಕೊಡುವುದರಿಂದ ನಿಮಗೆ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವುದಕ್ಕೆ ಸಾಧ್ಯವಾಗುತ್ತದೆ . ಏನೇ ಬಂದರೂ ಧೈರ್ಯದಿಂದ ಎದುರಿಸುತ್ತೇನೆ ಎನ್ನುವ ಸಾಹಸ ಪ್ರವೃತ್ತಿ ನಿಮ್ಮಲ್ಲಿ ಬರುತ್ತದೆ . ಧೈರ್ಯದ ಭಾವನೆಯನ್ನು ಇನ್ನಷ್ಟು ಪ್ರಜ್ವಲ ಗೊಳಿಸುವುದಕ್ಕೆ ಪ್ರಯತ್ನ ಮಾಡಬೇಕು . ಕೇಂದ್ರದಲ್ಲಿ ಇರುವ ಗುರು ಗ್ರಹ ಧನಾತ್ಮಕ ಶಕ್ತಿಯನ್ನು ಕೊಡುತ್ತದೆ . ಇಂತಹ ಒಂದು ಶಕ್ತಿಯಿಂದ ನೀವು ಯಶಸ್ಸನ್ನು ಕಾಣಬಹುದು .

Leave a Comment