ಕಟಕ ರಾಶಿ ನವೆಂಬರ್ ಮಾಸ ಭವಿಷ್ಯ 

0

ಕಟಕ ರಾಶಿಯವರ ನವೆಂಬರ್ ತಿಂಗಳಿನ ಮಾಸಭವಿಷ್ಯವನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಅಕ್ಟೋಬರ್ ಕೊನೆಯಲ್ಲಿ ರಾಹು ಕೇತುಗಳು ಬದಲಾವಣೆಯಾಗುತ್ತಾರೆ. ನಿಮ್ಮಲ್ಲಿ ಬೆಳವಣಿಗೆ ಆಗುತ್ತದೆ. ನಿಮ್ಮ ಸಪೋರ್ಟ್ ಗೆ ರಾಹು ಕೇತು ಗ್ರಹಗಳು ಬರುತ್ತವೆ. ನಿಮಗೆ ಅಷ್ಟಮ ಶನಿ ಇದೆ. ಗುರುವು ಸಾಮಾನ್ಯವಾಗಿರುತ್ತಾನೆ. ಈ ತಿಂಗಳಿನಲ್ಲಿ ದುಡ್ಡು ಇದ್ದರೂ ನಿಮಗೆ ಖುಷಿಯನ್ನು ತರುವುದಿಲ್ಲ.

ಕೆಲಸದಲ್ಲಿ ಯಶಸ್ಸು ಎನ್ನುವುದು ಸಿಗುತ್ತದೆ. ಬರಬೇಕಾಗಿರುವ ನಿಮ್ಮ ದುಡ್ಡು ವಾಪಸ್ಸು ಬರುತ್ತದೆ ಆದರೇ ಅದು ನಿಮಗೆ ಸಾಕಾಗುವುದಿಲ್ಲ. ಕೆಲಸ ಹುಡುಕುತ್ತಿರುವವರಿಗೆ ಕೆಲಸ ಆಕಸ್ಮಿಕವಾಗಿ ಸಿಗುತ್ತದೆ. ನಾವು ಅಂದುಕೊಂಡ ರೀತಿಯಲ್ಲಿ ಮೇಲೇ ಹೋಗದೇ ಇದ್ದಾಗ ನಮ್ಮಲ್ಲೇ ಸಮಾಧಾನವನ್ನು ತಂದುಕೊಳ್ಳಬೇಕು ಅಂದರೆ ಮುಂದೆ ಮಾಡಿದರೇ ಆಯಿತು ಎಂಬ ನಮ್ಮಲ್ಲೇ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು.

ಒತ್ತಡವನ್ನು ಮಾಡಿಕೊಳ್ಳದೇ ಸರಿದಾರಿಯಲ್ಲಿ ಹೋಗಲು ಪ್ರಯತ್ನ ಪಡಬೇಕು ಆಗ ಯಶಸ್ಸು ಸಿಗುತ್ತದೆ. ಹೆಚ್ಚು ಒತ್ತಡ ಮಾಡಿಕೊಂಡರೆ ಕೌಟುಂಬಿಕವಾಗಿ ಸಮಸ್ಯೆಗಳು ಕಾಡುತ್ತದೆ. ಕೆಲಸದ ವಿಷಯದಲ್ಲಿ ಬಹಳ ತಾಳ್ಮೆ ವಹಿಸುವುದು ಉತ್ತಮ. ನೀವೇ ಯಜಮಾನನಾಗಿದ್ದರೇ ತಾಳ್ಮೆಯಿಂದ ಕೆಲಸಗಾರರ ಹತ್ತಿರ ಕೆಲಸವನ್ನು ಮಾಡಿಸಿಕೊಳ್ಳಿ.

ಕೆಲಸಗಾರರ ಮೇಲೆ ಒತ್ತಡವನ್ನು ಏರುವುದು, ಬೈಯ್ಯುವುದು ಮಾಡಬೇಡಿ. ನೀವು ಯಜಮಾನನಾಗಿದ್ದರೇ ಕೆಲಸಗಾರರಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಿ ಕೆಲಸ ಮಾಡಿಸಿ ಮತ್ತು ಯೋಜನೆಯನ್ನು ಮಾಡಿಕೊಳ್ಳಿ ಇಲ್ಲದಿದ್ದರೇ ನೀವು ತೊಂದರೆಗೆ ಸಿಲುಕಿಕೊಳ್ಳಬಹುದು. ಈ ಮಾಸದಲ್ಲಿ ಯಾವ ವಿಷಯದಲ್ಲಿ ಕೇಂದ್ರೀಕರಣ ಮಾಡಬೇಕೋ ಆ ವಿಷಯದಲ್ಲಿ ಏಕಾಗ್ರತೆ ವಹಿಸಲು ಸಾಧ್ಯವಾಗುವುದಿಲ್ಲ.

ಬೇರೆ ಕಡೆ ಗಮನ ಕೊಟ್ಟರೇ ಅದರಲ್ಲೇ ಇದ್ದುಬಿಡುತ್ತೀರಿ ಇದರಿಂದ ಕೆಲಸಗಳಿಗೆ ತೊಂದರೆಯಾಗುತ್ತದೆ ಎಚ್ಚರದಿಂದ ಕೆಲಸದ ಕಡೆ ಗಮನ ಕೊಡಿ. ಉದಾಹರಣೆಗೆ ಪೋನ್ ಇಡಿದುಕೊಂಡರೇ ಅದರಲ್ಲೇ ಮುಳುಗಿ ಬಿಡುತ್ತೀರಿ ಇದರಿಂದ ನಿಮ್ಮ ಕೆಲಸದ ಕಡೆ ಗಮನ ನೀಡದೇ ಇದ್ದರೇ ನಿಮ್ಮ ಕೆಲಸಕ್ಕೆ ತೊಂದರೆಯಾಗುತ್ತದೆ. ಏಕಾಗ್ರತೆಯಿಂದ ನಿಮ್ಮ ಕೆಲಸದ ಕಡೆ ಗಮನ ಕೊಡಿರಿ. ಶುಕ್ರ ಗ್ರಹವು ನಿಮಗೆ ಒಳಿತನ್ನು ಮಾಡುತ್ತದೆ ಮತ್ತು ಶುಕ್ರನ ಬೆಂಬಲವಿರುತ್ತದೆ.

ಶುಕ್ರನುತೃತೀಯ ಮತ್ತು ಚತುರ್ಥ ಭಾವದಲ್ಲಿರುತ್ತಾನೆ ಇದರಿಂದ 29ನೇ ತಾರೀಖಿನಿಂದ ಬಹಳ ಒಳಿತಾಗುವ ಸೂಚನೆಗಳಿವೆ. ನೆಮ್ಮದಿ ಮತ್ತು ಸಂತೋಷ ಸಿಗುತ್ತದೆ ಮತ್ತು ಕುಟುಂಬದಿಂದ ನಿಮಗೆ ನೆಮ್ಮದಿ,ಸಂತೋಷ, ಧೈರ್ಯ ಸಿಗುತ್ತದೆ. ನಿಮ್ಮ ಚಿಂತನೆಗಳಿಗೆ ಪೂರಕವಾಗಿರುತ್ತಾರೆ. ನಿಮಗೆ ಬೆನ್ನೆಲುಬಾಗಿರುತ್ತಾರೆ. ಗಂಡ ಹೆಂಡತಿಗೆ, ಹೆಂಡತಿಗೆ ಗಂಡನ ಪರಸ್ಪರ ಸಹಕಾರವಿರುತ್ತದೆ. ಸಾಮರಸ್ಯದಿಂದ ಜೀವನ ನಿಮ್ಮದಾಗಿರುತ್ತದೆ. ಕಟಕ ರಾಶಿಯವರಿಗೆ ನವೆಂಬರ್ ತಿಂಗಳ ಕೊನೆಯಲ್ಲಿ ಲಾಭದಾಯಕವಾಗಿರುತ್ತದೆ.

Leave A Reply

Your email address will not be published.