ಕುಂಭ ರಾಶಿ: 5 ವರ್ಷದ ಗುರು ಫಲ

0

ಕುಂಭ ರಾಶಿಯ ಐದು ವರ್ಷದ ಗುರುಫಲ. ಆತ್ಮೀಯ ಕುಂಭ ರಾಶಿಯ ವೀಕ್ಷಕರೆ, ಇಷ್ಟು ದಿನ ನಿಮ್ಮ ಲೈಫ್ ನಲ್ಲಿ ಏನೇನು ನಡೀತು ಅಂತ ಒಂದು ಸಲ ರಿವೈಂಡ್ ಮಾಡಿ. ಎಲ್ಲರ ಲೈಫ್ ಸೇಮ್ ಇರೋದಿಲ್ಲ. ಕೆಲವೊಮ್ಮೆ ಎಷ್ಟೇ ಖುಷಿಯಾಗಿದ್ದರು ಅದಕ್ಕೆ ಸಮನಾದ ದುಃಖವನ್ನು ಅನುಭವಿಸಿರಬಹುದು. ಕೆಲವರು ಕೈಯಲ್ಲಿ ಸಾಕಷ್ಟು ಹಣ ಇಲ್ಲದೆ ಹೋದ್ರು ನೆಮ್ಮದಿ ಸಂತೋಷದ ಜೀವನ ನಡೆಸಿದರು.

ಹಣ ಇದ್ದವರಲ್ಲಿ ಹೆಚ್ಚಿನವರು ಇನ್ವೆಸ್ಟ್ಮೆಂಟ್, ಖರೀದಿ, ಓಡಾಟ ಅನ್ನೋ ಬ್ಯುಸಿ ಲೈಫ್. ಜನರಲ್ ಆಗಿ ಹೇಳೋದಾದ್ರೆ ಕೆಲಸದಲ್ಲಿ ಅಭಿವೃದ್ಧಿ, ಪ್ರಮೋಷನ್, ಸ್ವಲ್ಪ ಸುಧಾರಣೆ. ಜಾಬ್ ಬಿಸಿನೆಸ್ ಎಲ್ಲದರಲ್ಲೂ ಪ್ರಾಫಿಟ್. ಒಳ್ಳೆಯದಾಗುತ್ತೆ ಅನ್ನೋ ಹೋಪ್ ಇಟ್ಕೊಂಡು ಇಲ್ಲಿಯವರೆಗೂ ಬಂದ್ರಿ. ನಿಮಗೆ ತೃಪ್ತಿ ತಂದು ಕೊಡುವ ವಾತಾವರಣ ನಿಮ್ಮ ಲೈಫ್ ನಲ್ಲಿ ಇನ್ನು ಮುಂದೆಯೂ ಇರುತ್ತಾ? ಮುಂದಿನ ಐದು ವರ್ಷ ಗುರು ಯಾವಾಗ ಲಾಟರಿ ಹೊಡೆಯೋ ಅವಕಾಶವನ್ನು ಕೊಡುತ್ತಾನೆ?

ಯಾವಾಗ ಶಾಕ್ ಟ್ರೀಟ್ಮೆಂಟ್ ಕೊಟ್ಟು ಬುದ್ಧಿ ಹೇಳುತ್ತಾನೆ? ಅಂತ ಒಂದೊಂದಾಗಿ ನೋಡೋಣ. ನೋಡಿ ವೀಕ್ಷಕರೇ ಏಪ್ರಿಲ್ 13, 2022ಕ್ಕೆ ಗುರು ಮೀನ ರಾಶಿಗೆ ಬಂದಿದ್ದಾನೆ. ಇದರಿಂದ ನಿಮಗೆ ಪ್ರಾಫಿಟಾ? ಲಾಸಾ? ಅಂತ ಮೊದಲಿಗೆ ನೋಡೋಣ. ಕುಂಭ ರಾಶಿ ಅವ್ರೆ ಮುಂದಿನ ವರ್ಷ 2022ರವರೆಗೆ ಸಿಕ್ಕಾಪಟ್ಟೆ ಧನ ಲಾಭ, ಹಣದ ಮಳೆನೇ ಸುರಿಯೋ ಅವಕಾಶ ಇದೆ. ಯಾಕೆ ಅಂದ್ರೆ ಗುರು ಇರೋದು ಕುಂಭದಿಂದ ಎರಡನೇ ಮನೇಲಿ. ಗುರು ದೇವತೆಗಳಿಗಷ್ಟೇ ಅಲ್ಲ, ಮನುಷ್ಯರಿಗೂ ಕೂಡ ಹಣಕಾಸಿನ ಮಂತ್ರಿ.

ಸೋ, ಈ ದುಡ್ಡು ಬರುವುದಕ್ಕೆ ಮುಖ್ಯ ಕಾರಣ ಗುರುಕೃಪೆ, ಗುರುಬಲ. ಮನೆ ಕಟ್ಟೋಕೆ ಶುರು ಮಾಡಿದ್ದೇನೆ, ಐಟಂ ಪರ್ಚೇಸ್ ಮಾಡೋದಕ್ಕೆ ಹೋಗಬೇಕು, ಕೈಯಲ್ಲಿ ದುಡ್ಡು ನಿಲ್ಲುತ್ತಾ ಇಲ್ಲ ಅನ್ನೋರಿಗೆ ದುಡ್ಡು ನಿಮ್ಮನ್ನ ಹುಡುಕ್ಕೊಂಡು ಬರೋ ತರ ಆಗಬಹುದು. ಸೈಟ್ ಖರೀದಿ ಮಾಡೋಕ್ಕೆ ಎಲ್ಲ ಡಾಕ್ಯುಮೆಂಟ್ಸ್ ರೆಡಿ ಆಯ್ತು, ಇನ್ನೇನು ತಗೋಬೇಕು ಅಂತ ಪ್ಲಾನ್ ಮಾಡಿದ್ರಿ, ಆದ್ರೆ ಮತ್ತೇನೋ ಕಾರಣಕ್ಕೆ ಅದು ನಿಂತು ಹೋಗಿತ್ತು. ಹೀಗೆ ಅರ್ಧಕ್ಕೆ ನಿಂತು ಹೋದ ಯಾವುದೇ ಕೆಲಸಗಳಿದ್ರೂ ಅವು ಮುಂದುವರೆಯುವ ಸೂಚನೆ ಒಂದೊಂದಾಗಿ

ಕಾಣೋ ಟೈಮ್ ಇದು. ಎಷ್ಟು ಜನ ಸೆಲ್ಫ್ ಎಂಪ್ಲಾಯಿಡ್ ಇದ್ದೀರಾ, ಕ್ಲೈಂಟ್ ಗಳು ಕೆಲಸವನ್ನು ಮಾಡಿಸಿಕೊಂಡಿರುತ್ತಾರೆ. ಸರಿಯಾದ ಟೈಮ್ ಗೆ ಪೇಮೆಂಟ್ ಮಾಡಿರಲ್ಲ. ಎಷ್ಟೇ ರಿಮೈಂಡರ್ ಮಾಡಿದ್ರು ಕೆಲವೊಮ್ಮೆ ನೋ ರೆಸ್ಪಾನ್ಸ್. ಹಾಗಿದ್ದಾಗ ಸ್ಟಾಪ್ ಆಗಿದ್ದ ಪೇಮೆಂಟ್ಗಳು ಬರುವುದರಲ್ಲಿ ಗುರುವಿನ ಪಾತ್ರ ಇಂಪಾರ್ಟೆಂಟ್. ಜಾಬ್ ಮಾಡ್ತಾ ಇರೋರಿಗೆ

ಈ ಟೈಮ್ ನಲ್ಲಿ ಪ್ರಮೋಷನ್, ಸ್ಯಾಲರಿ ಹೈಕ್ಸ್, ಮೊಳೆ ಹೊಡೆದು ಕೂರಿಸಿದ ಹಾಗೆ ನಿಮ್ಮ ಸ್ಥಾನ ಭದ್ರವಾಗುವ ಲಕ್ಷಣಗಳು ಇದೆ. ದುಡ್ಡಿನ ಮೂಲ ಹೆಚ್ಚಾಗ್ತಾ ಹೋಗಬಹುದು. ಬಾಕಿ ಉಳಿಸಿಕೊಂಡಿರುವ ಸಾಲ ಇದ್ರೆ ಅದು ಕೂಡ ಕ್ಲಿಯರ್ ಆಗ್ತಾ ಹೋಗುತ್ತೆ. ಈಗ ಸಮುದ್ರವನ್ನೇ ನೋಡಿ. ಯಾರು ಎಷ್ಟೇ ಕಸ ಹಾಕಲಿ, ಎಷ್ಟೇ ನೆಗೆಟಿವಿಟಿಯನ್ನು ಅದರಲ್ಲಿ ತುಂಬಿಸಲಿಕ್ಕೆ ನೋಡಲಿ ಒಂದು ಸಲ ಒಳಗೆ ಹೋದ ಹಾಗೆ ಕಾಣಿಸುತ್ತೆ. ಆದರೆ ಅದು ತನ್ನ ಗರ್ಭದಲ್ಲಿ ಏನನ್ನು ಇಟ್ಟುಕೊಳ್ಳಲ್ಲ.

ಎಲ್ಲ ವಾಪಸ್ ಕೊಟ್ಟೆ ಕೊಡುತ್ತೆ. ನಿಮ್ಮ ವಿಚಾರದಲ್ಲೂ ಹೀಗೆ ಆಗಬಹುದು. ಹೆಚ್ಚಿನವರು ಕಷ್ಟ ಕಾಲದಲ್ಲಿ ಸುಮ್ ಸುಮ್ನೆ ಯಾರ್ ಯಾರದೋ ಬೈಗುಳವನ್ನ ಕೇಳಿರ್ತೀರ. ಅದಕ್ಕೆ ತಕ್ಕ ಉತ್ತರವನ್ನು ಕೊಡಲಿಕ್ಕೆ ಸರಿಯಾದ ಟೈಮ್ ಇದು ಅಂತ ಹೇಳಬಹುದು. ನಿಮ್ ತಪ್ಪೇನು ಇಲ್ಲ ಅಂತ ಗುರು ಕ್ಲೀನ್ ಚಿಟ್ ನೀಡುವಂತಹ ಸಾಧ್ಯತೆ ಇದೆ. ಆಸ್ತಿ ವಿವಾದಗಳೆಲ್ಲ ಒಂದು ನಿರ್ಣಯಕ್ಕೆ ಬರುತ್ತೆ. ನೆಮ್ಮದಿ, ತೃಪ್ತಿಯ ಜೀವನ. ಗುರುವನ್ನ ಪುತ್ರಕಾರಕ ಅಂತ ಹೇಳ್ತಾರೆ. ಮನೆಯಲ್ಲಿ ಮಗುವಿನ ಅಳು, ಲಾಲಿಹಾಡು ಕೇಳೋದಕ್ಕೆ ಗುರುಬಲಾನೂ ಮುಖ್ಯ.

ಮಕ್ಕಳ ಭಾಗ್ಯವನ್ನು ಕೊಡುವವನು ಈತನೇ. ಜನರ ಮಧ್ಯೆ ಒಳ್ಳೆಯ ಗೌರವ, ಜನಪ್ರಿಯತೆ, ಬೆಂಬಲ ಜಾಸ್ತಿ ಆಗ್ತಾ ಹೋಗಬಹುದು. ಗೌರವಯುತ ವ್ಯಕ್ತಿಗಳ ಜೊತೆಗೆ ಒಳ್ಳೆಯ ರಿಲೇಶನ್ ಮೆಂಟೇನ್ ಮಾಡ್ತೀರಾ. ನೀವು ಎಲ್ಲಿ ಇರ್ತೀರಾ ಅಲ್ಲಿ ಒಂದು ಪಾಸಿಟಿವ್ ವಾತಾವರಣ ನಿಮ್ಮಿಂದ ಡೆವಲಪ್ ಆಗುತ್ತೆ. ಮನೆಯಲ್ಲಿ, ನೆಂಟರ ಮನೆಯಲ್ಲಿ, ಆಫೀಸ್, ಕ್ಲೈಂಟ್ ಪ್ಲೇಸ್ ಹೀಗೆ ಮಾತಿಂದನೆ ಒಂದು ರೀತಿ ಹವಾ ಮೈಂಟೆನ್ ಮಾಡೋರು ನೀವು. ಸಂತೋಷ, ಉತ್ಸಾಹ, ಎನರ್ಜಿ ಹಂಚೋ ಗುಣ ನಿಮ್ಮದು.

ಇದರಿಂದ ಜನರ ಮೇಲೆ ಪ್ರಭಾವ ಬೀರುತ್ತೀರ. ಹೆಚ್ಚಾಗಿ ನಿಮ್ಮ ಹತ್ತಿರ ಸಲಹೆ ಕೇಳುವುದಕ್ಕೆ, ಅಭಿಪ್ರಾಯ ತಿಳಿದುಕೊಳ್ಳುವುದಕ್ಕೆ ಜನ ಬರಬಹುದು. ಯಾರೋ ಕೆಲಸ ಕೇಳಿಕೊಂಡು ನಿಮ್ಮ ಹತ್ತಿರ ಬಂದಿರುತ್ತಾರೆ. ಆಗಲ್ಲ ಅನ್ನೋದಕ್ಕೆ ಮನಸು ಬರೋದಿಲ್ಲ. ನಿಮ್ಮ ಹತ್ತಿರದವರಲ್ಲೊ ಅಥವಾ ಫ್ರೆಂಡ್ಸ್ ಹತ್ರನೋ ಇನ್ಫ್ಲುಯೆನ್ಸ್ ಮಾಡಿ ಕೆಲಸ ಸಾಧಿಸುವುದು ಹೆಚ್ಚು. ವಿಶೇಷವಾಗಿ ಮಹಿಳೆಯರ ಬಗ್ಗೆ ಹೇಳೋದಾದರೆ ಒಳ್ಳೆಯ ಹೆಸರಿರುವ ಮನೆಗೆ ಹಾಗೆಯೇ ವ್ಯಕ್ತಿಯ ಜೊತೆಗೆ ಮಾಂಗಲ್ಯ ಬಂಧನ ಯೋಗ.

ನೆಮ್ಮದಿಯ ವೈವಾಹಿಕ ಜೀವನದ ಲಾಭ ಗುರುವಿನಿಂದ ಇದೆ. ಹೆಚ್ಚಿನವರಿಗೆ ಆರೋಗ್ಯದ ಸಮಸ್ಯೆಗಳು ಕೂಡ ಕಾಡುವುದಿಲ್ಲ. ಮಕ್ಕಳು ಕೂಡ ಹೇಳಿದ ಮಾತು ಕೇಳೋ ಹಾಗೆ ಆಗುತ್ತೆ. ಇದು ಒಂದೇ ಸಲ ಪಾಸಿಟಿವ್ ಆಕ್ಟಿವಿಟೀಸ್ ನಡೆಯಲ್ಲ. ಇನ್ನೊಂದು ಪೀರಿಯಡ್ ಕೂಡ ಇದೆ. ಅಲ್ಲಿಯೂ ಕೂಡ ನಿಮ್ಮ ಜೀವನದಲ್ಲಿ ಅದ್ಭುತವಾದ ಘಟನೆಗಳು ನಡೆಯುವುದು ಇದೆ. ಅದು ಯಾವಾಗ, ಏನು, ಎತ್ತ ಅಂತ ತಿಳಿಯೋದಾದ್ರೆ ಇದನ್ನ ಕೊನೆಯವರೆಗೂ ಓದಲೇಬೇಕು. ಐದು ವರ್ಷಗಳ ಶನಿ ಫಲವನ್ನೇ ಆಗಲಿ ಗುರು ಫಲವನ್ನೇ ಆಗಲಿ ಚೆನ್ನಾಗಿ ಅರ್ಥ ಮಾಡಿಕೊಂಡು ವಿಶ್ಲೇಷಣೆ ಮಾಡಿ ಹೇಳಿರುತ್ತೇವೆ. ಎಲ್ಲಾ ಒಳ್ಳೇದೆ ಆಗುತ್ತೆ,

ಮಾಡಿದ ಕೆಲಸ ಎಲ್ಲವೂ ಕೂಡ ಹಂಡ್ರೆಡ್ ಪರ್ಸೆಂಟ್ ಸಕ್ಸಸ್ ಅಂದರೆ ತಪ್ಪು ಸೂಚನೆ ಕೊಟ್ಟ ಹಾಗೆ ಆಗುತ್ತೆ. ನೀವು ಹೇಳಿದ ಹಾಗೆ ಆಗಲೇ ಇಲ್ಲ ಅಂತಾನು ಕೆಲವರು ಹೇಳಬಹುದು. ಎಲ್ಲರಿಗೂ ಅಪ್ಲೈ ಆಗಲೇಬೇಕು ಅಂತಾನೂ ಇಲ್ಲ. ರಾಶಿಗಿಂತ ಲಗ್ನ ಮುಖ್ಯ, ಲಗ್ನಕ್ಕಿಂತ ಜಾತಕ ಮುಖ್ಯ, ಅದೆಲ್ಲಕ್ಕಿಂತ ನಿಮ್ಮ ಎಚ್ಚರಿಕೆ ಅನ್ನೋದು ಬಹಳ ಮುಖ್ಯ. ಸೋ ನಾವು ಹೇಳುವ ವಿಷಯಗಳನ್ನ ಸೂಚನೆಯ ಹಾಗೆ ಬಳಸ್ತಾ ಬನ್ನಿ. ತನ್ನನ್ನು ತಾನೇ ದಹಿಸುತ್ತಾ ಬೇರೆಯವರಿಗೆ ಬೆಳಕು ಕೊಡುವ ಗುಣ ದೀಪದ್ದು.

ಆದರೂ ದೀಪದ ಬುಡದಲ್ಲಿ ಕತ್ತಲೆ ಇರುವುದು ಸಹಜ. ಎಷ್ಟೇ ಒಳ್ಳೆಯ ಗುಣಗಳಿದ್ರೂ, ಎಷ್ಟೇ ಪಾಸಿಟಿವ್ ಆಗಿ ಇರುತ್ತೇವೆ ಅಂದ್ರು ಕೆಲವೊಮ್ಮೆ ಗ್ರಹಗತಿಗಳು ಅದಕ್ಕೆ ಅವಕಾಶವನ್ನು ಕೊಡದೆ ಇರಬಹುದು. ಅದಕ್ಕೆ ಸಾಕ್ಷಿ ಅನ್ನೋ ಹಾಗೆ ಏಪ್ರಿಲ್ 22 2023 ಕ್ಕೆ ಗುರು ಪರಿವರ್ತನೆ ಮೇಷ ರಾಶಿಗೆ ಆಗ್ತಾ ಇದೆ. ಅದು ಗುರುಬಲ ಪಾತಾಳಕ್ಕೆ ಹೋಗುವ ಸಮಯ ಅಂತ ಹೇಳಬಹುದು. ಮಾಡಿರೋ ಕೆಲಸ ಕೈಹಿಡಿಯದೇ ಇರೋದು, ಬಾಸ್ ಹತ್ರ ಸಹಸ್ರನಾಮಾರ್ಚನೆ, ನೀವಿರೋ ಪೊಸಿಷನ್ ಇಂದ ಕೆಳಗಿನ ಪೊಸಿಷನ್ ಗೆ ಡಿಮೋಷನ್ ಆಗೋದು ಇಂತದ್ದಲ್ಲ ನಡೆಯೋ ಅವಕಾಶ ಇದೆ.

ಸ್ವಂತ ಬಿಸಿನೆಸ್ ಮಾಡ್ತಾ ಇರೋ ಹಲವರಿಗೆ ಸವಾಲಿನ ಸಮಯ ಎದುರಾಗಬಹುದು. ಕಾಗದ ಪತ್ರಗಳಲ್ಲಿ ದೋಷ ಇದ್ದು ನೋಡದೆ ಸಹಿ ಮಾಡಿರ್ತೀರಾ, ಅದು ಗೊತ್ತಾಗಿ ಮೂರನೇ ವ್ಯಕ್ತಿ ದುರುಪಯೋಗ ಮಾಡಿಕೊಳ್ಳಬಹುದು. ವಿರೋಧಿಗಳಿದ್ರೆ ನಿಮ್ಮ ಕಂಪನಿಯ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸಿ ಕಂಪನಿಯ ಬ್ರಾಂಡ್ ವ್ಯಾಲ್ಯೂ, ಶೇರ್ ವ್ಯಾಲ್ಯೂ ಕುಸಿಯು ಹಾಗೆ ಮಾಡುವ ಸಾಧ್ಯತೆ ಕಾಣ್ತಾ ಇದೆ. ಕಾಗದ ಪತ್ರದ ವ್ಯವಹಾರದಲ್ಲಿ ಯಾರನ್ನಾದರೂ ನಂಬಿ ಕೀ, ಎವ್ರಿಡೆನ್ಸ್, ಡಾಕ್ಯುಮೆಂಟ್ಸ್ ಗಳನ್ನು ಕೊಡುವ ಮುನ್ನ ಎಚ್ಚರಿಕೆಯಿಂದ ಇರಿ.

ನಿಮ್ಮ ಕಂಪನಿಯಲ್ಲಿ ತಯಾರಾಗುವ ಪ್ರಾಡಕ್ಟ್ ಕಂಟೆಂಟ್ ಎಲ್ಲಾ ಸರಿಯಾಗಿ ಇದೆಯಾ ಅಂತ ಒಂದು ಸಲ ಚೆಕ್ ಮಾಡಿ. ಕಡಿಮೆ ಬೆಲೆಗೆ ಸಿಕ್ತು ಅಂತ ಚೀಪ್ ಕ್ವಾಲಿಟಿದು ತಂದು ಆಮೇಲೆ ತಲೆ ಮೇಲೆ ಕೈ ಹೊತ್ತಿಕೊಳ್ಳುವ ಹಾಗೆ ಆಗಬಾರದು. ಮಟೀರಿಯಲ್ಸ್ ಗಳನ್ನೆಲ್ಲ ಒಮ್ಮೆ ಸರಿಯಾಗಿ ನೋಡಿ ಆರ್ಡರ್ ಮಾಡುವುದು ಬೆಸ್ಟ್. ಹೆಚ್ಚಿನವರು ಫ್ಯಾಮಿಲಿಗಿಂತ ಫ್ರೆಂಡ್ಸ್ ಅಂದ್ರೆ ಬಹಳ ಇಷ್ಟಪಡುವವರು. ಯಾವಾಗ ಕೇಳಿದ್ರೂ ಫ್ರೆಂಡ್ ಜೊತೆಗೆ ಇದ್ದೀನಿ ಅನ್ನೋ ಉತ್ತರ. ಆದರೆ ಈ ಟೈಮಲ್ಲಿ ಯಾರೋ ನಿಮ್ಮ ಫ್ರೆಂಡ್ಸ್ ಬಗ್ಗೆ ಏನೋ ಹೇಳಿದ್ರು ಅಂತಾನೋ ಅಥವಾ ಅವರ ಮೇಲೆ ಆಪಾದನೆ ಬಂದಿದೆ ಅಂತಾನೋ ಏಕಾಏಕಿ ವಿಚಾರ ಮಾಡದೆ ಮಾತಾಡಬೇಡಿ.

ಸಣ್ಣಪುಟ್ಟ ವಿಚಾರಗಳಿಗೆ ಫ್ರೆಂಡ್ಶಿಪ್ ಬೇಡ ಅನ್ನೋ ಲೆವೆಲ್ಲಿಗೆ ಮಾತಾಡೋದಲ್ಲ. ತಾಳ್ಮೆ ಇರಲಿ. ಇಲ್ಲದಿದ್ದರೆ ಸಪರೇಟ್ ಆಗೋ ಚಾನ್ಸಸ್ ಕೂಡ ಇದೆ. ಆರೋಗ್ಯದ ವಿಚಾರಕ್ಕೆ ಬಂದ್ರೆ ಈ ಟೈಮಲ್ಲಿ ಜಾಗರೂಕರಾಗಿರಿ. ಹೊರಗಡೆ ತಿಂಡಿ, ಊಟ ಆದಷ್ಟು ಕಮ್ಮಿ ಮಾಡಿ. ಹವಮಾನ ಬದಲಾವಣೆ ಅಥವಾ ಇನ್ನೇನೋ ಆಗಿ ಆರೋಗ್ಯ ಸಮಸ್ಯೆಗಳು ಕಾಡಬಹುದು. ನಿಮ್ಮಲ್ಲಿ ಹೆಚ್ಚಿನವರು ಶ್ರಮಜೀವಿಗಳು. ಕೆಲಸದ ಮೇಲೆ ಫೋಕಸ್ ಮಾಡಿ ಆರೋಗ್ಯವನ್ನು ನೆಗ್ಲೆಕ್ಟ್ ಮಾಡುವುದು ಜಾಸ್ತಿ. ಸಂಧಿವಾತ, ಬಿಪಿ,

ಹಲ್ಲು ನೋವು, ಕಾಲುಗಳ ಊತ, ಕಿವಿಗೆ ಸಂಬಂಧಪಟ್ಟ ತೊಂದರೆ, ಜೀರ್ಣ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು, ನಿದ್ರಾ ಹೀನತೆ ಅಥವಾ ಮಲಬದ್ಧತೆ ಕಾಡಬಹುದು. ಆರೋಗ್ಯವೇ ಭಾಗ್ಯ ಅನ್ನೋದನ್ನ ನೆನಪಿಡಿ. ಈ ರೀತಿಯ ತೊಂದರೆಗಳು ಜೂನ್ 2, 2026 ರಿಂದ ಜನವರಿ 25 2027 ರ ಅವಧಿಯಲ್ಲಿ ಕಾಣಬಹುದು. ಯಾಕಂದ್ರೆ ಆ ಟೈಮಲ್ಲಿ ಗುರು ಆರನೇ ಮನೆಯಾದ ಕಟಕದಲ್ಲಿ ಇರುತ್ತಾನೆ. ಅದು ಅಷ್ಟೊಂದು ಶುಭಕರ ಅಲ್ಲ. ಗುರುವಿನ ಅನುಗ್ರಹ ಪಡೆಯೋಕೆ ಈಗ ನಾನು ಹೇಳೋ ಮಂತ್ರವನ್ನು ಸಮಯ ಸಿಕ್ಕಾಗೆಲ್ಲ ಪಠಣೆ ಮಾಡ್ತಾ ಇರಿ. ” ಅಭಿಷ್ಟ ಫಲದಂ ವಂದೇ ಸರ್ವಜ್ಞಂ ಸುರಪೂಜಿತಂ ಅಕ್ಷಮಾಲಾಧರಂ ಶಾಂತಂ ಪ್ರಣಮಾಮಿ ಬೃಹಸ್ಪತಿಂ

” ಈ ಐದು ವರ್ಷಗಳಲ್ಲಿ ಫಿಫ್ಟಿ ಫಿಫ್ಟಿ ಅನಿಸೋ ಹಲವಾರು ಘಟನೆಗಳು ಕೂಡ ನಡೆಯೋದಿದೆ. ಏನೋ ಒಂದು ಪಾಸಿಟಿವ್ ಘಟನೆ ನಡಿತಿದೆ ಅಂದ್ರೆ ಬೆನ್ನ ಹಿಂದೆ ಕಿರಿಕಿರಿ, ಸಣ್ಣಪುಟ್ಟ ಖರ್ಚುಗಳು ಕೂಡ ಅಂಟಿಕೊಂಡೇ ಬರಬಹುದು. ನೆಂಟರಿಷ್ಟರ ಮಧ್ಯೆ ಮುಜುಗರ, ಅವರೇನೋ ಹೇಳುವುದು ನೀವೇನು ಅಂದ್ಕೊಂಡು ಗೊಂದಲ, ಸಣ್ಣಪುಟ್ಟ ವಿಷಯಕ್ಕೆ ಕನ್ಫ್ಯೂಷನ್, ಕಿರಿಕಿರಿ, ಆಲಸ್ಯ, ಚಂಚಲ ಮನಸ್ಥಿತಿ ಇವೆಲ್ಲ ಕಾಡೋ ಚಾನ್ಸ್ ಹೆಚ್ಚು. ಹಣಕಾಸಿನ ವಿಚಾರಕ್ಕೆ ಬಂದ್ರೆ ಅಷ್ಟೇನೂ ಸಮಸ್ಯೆ ಕಾಣ್ತಾ ಇಲ್ಲ.

ಸಾಮಾನ್ಯ ಜೀವನ. ದೊಡ್ಡ ಕೆಲಸಕ್ಕೆ ಕೈ ಹಾಕೋಕೆ ಸರಿಯಾದ ಸಮಯ ಅಲ್ಲ. ಇನ್ನು ಮಿಶ್ರಫಲಗಳು ಆಗುವ ಸಮಯ ಅಂದ್ರೆ ಮೇ 1, 2024 ರಿಂದ ಮೇ 14, 2025. ನೀವೆಲ್ಲ ಕಾಯ್ತಾ ಇದ್ದ ಸಮಯ ಬಂತು ನಿಮ್ಮ ಜೀವನದಲ್ಲಿ ಅದ್ಭುತವಾದ ಘಟನೆಗಳು ನಡೆಯೋದಿದೆ ಹೇಳ್ತೀನಿ. ಮತ್ತೊಂದು ಅವಧಿ ಅಂದ್ರೆ ಮೇ 14, 2025 ರಿಂದ ಜೂನ್ 2, 2026 ರ ದೀರ್ಘಾವಧಿ ಟೈಂನಲ್ಲಿ ಒಂದು ಅದ್ಭುತ ಬೆಳವಣಿಗೆ ಆಗೋದಿದೆ. ನಾನು ಸ್ಟಾರ್ಟಿಂಗ್ ನಲ್ಲಿ ಹೇಳಿದ ಘಟನೆಗಳು ಈ ಅವಧಿಗೂ ಸಹ ಹೆಚ್ಚಾಗಿ ಅಪ್ಲೈ ಆಗುತ್ತೆ.

ನಿಮ್ಮ ಉದ್ಯೋಗ ರಂಗದಲ್ಲಿ, ವೃತ್ತಿ ಜೀವನದಲ್ಲಿ ಹೆಚ್ಚಾಗಿ ಮಿಂಚೋ ಸಾಧ್ಯತೆ ಹೆಚ್ಚು. ಅದೃಷ್ಟ ಖುಲಾಯಿಸೋ ಘಟನೆಗಳ ಜೊತೆಗೆ ಹಣಕಾಸಿನ ಅಭಿವೃದ್ಧಿ ಸಹ ಆಗೋದಿದೆ. ಇನ್ಫ್ಲುಯೆನ್ಸ್ ಇರೋ ಜನರ ಜೊತೆಗೆ ಕಾಂಟಾಕ್ಟ್ ಬೆಳೆಸಿಕೊಳ್ಳುವುದಕ್ಕೆ ಒಳ್ಳೆಯ ಅವಕಾಶ ಸಹ ಕೂಡಿ ಬರಬಹುದು. ಒಳ್ಳೊಳ್ಳೆ ಕಾಂಟ್ರಾಕ್ಟ್ ಗಳು, ಪ್ರಾಜೆಕ್ಟ್ ಗಳು ನಿಮ್ಮ ಕೈ ಸೇರೋ ಸಾಧ್ಯತೆ ಇದೆ. ಮಕ್ಕಳ ಭಾಗ್ಯ ಕರುಣಿಸುವುದರ ಜೊತೆಗೆ 2023 ರಲ್ಲಿ ಗುರು ಡಿಮ್ ಆಗಿದ್ದಾಗ ಸ್ಟಾಪ್ ಆಗಿದ್ದ ವರ್ಕ್ ಗಳೆಲ್ಲಾ ಮತ್ತೆ ಕಂಟಿನ್ಯೂ ಆಗುವ ಸೂಚನೆ ಬರಬಹುದು.

Leave A Reply

Your email address will not be published.