ಕುಂಭ ರಾಶಿ ಡಿಸೆಂಬರ್ ಮಾಸ ಭವಿಷ್ಯ

0

ನಾವು ಈ ಲೇಖನದಲ್ಲಿ ಕುಂಭ ರಾಶಿ ಡಿಸೆಂಬರ್ ಮಾಸ ಭವಿಷ್ಯದ ಬಗ್ಗೆ ನೋಡೋಣ. ಕೆಲವರಿಗೆ ಏಳುವರೆ ವರ್ಷ ನಡೆಯುತ್ತಿರುತ್ತದೆ . ಆದರೆ ಬಹಳಷ್ಟು ಒಳ್ಳೆಯ ವಿಚಾರಗಳು ಕೂಡ ನಡೆಯುವ ಸಾಧ್ಯತೆ ಯಾವಾಗಲೂ ಇರುತ್ತದೆ . ಪ್ರತಿ ತಿಂಗಳು ಕೂಡ ಆ ಸಾಧ್ಯತೆ ಇರುತ್ತದೆ. ಶನಿ ಒಂದು ಗ್ರಹ ಮಾತ್ರ. ಸಾಡೇಸಾತಿ ಅನ್ನೋವಂತಹುದನ್ನು ತರುವುದು ಶನಿ ಮಾತ್ರ . ರಾಹು ಕೂಡ ಹತ್ತಿರ ಬರುತ್ತಾನೆ. ಅಂದರೆ ಕುಂಭ ರಾಶಿಗೆ ರಾಹು ಕೂಡ ಹತ್ತಿರವಾಗುತ್ತಾನೆ. ಅಷ್ಟಮದಲ್ಲಿ ಕೇತು ಗ್ರಹವಿರುತ್ತದೆ.

ಆದರೂ ಒಳ್ಳೆಯ ಘಟನೆಗಳು ನಿಮ್ಮ ಜೀವನದಲ್ಲಿ ನಡೆಯಬಹುದಾ, ರಾಹು ಕೇತು ನಕಾರಾತ್ಮಕ ಶಕ್ತಿ ಮತ್ತು ಶನಿ ನಕರಾತ್ಮಕ ಶಕ್ತಿ. ಗುರು ಕೂಡ ಸ್ವಲ್ಪ ವಿಕ್ರಮ ಸ್ಥಾನದಲ್ಲಿ ಇರುತ್ತದೆ.ಅಂದರೆ ಗುರು ಸ್ವಲ್ಪ ಧೈರ್ಯ ಕೊಡಬಹುದು .ಆದರೆ ಅದರಿಂದ ಉಪಕಾರ ಆಗುವುದಿಲ್ಲ. ಈಗಿದ್ದಾಗಲೂ ಕೂಡ ಅದ್ಭುತ ಘಟನೆಗಳು ಅಂದರೆ ಬಹಳ ಪರಿವರ್ತನೆ ನಡೆಯಲು ನಿಮ್ಮ ಜೀವನದಲ್ಲಿ ಆಗುತ್ತದೆಯೇ,

ಅಂತಹ ಪರಿವರ್ತನೆಗಳು ಬರುವುದಿದ್ದರೆ, ಅವುಗಳನ್ನು ತರುವಂತಹ ಗ್ರಹಗಳು ಯಾವುವು ಎಂಬುದನ್ನು ನಾವು ಒಂದೊಂದಾಗಿ ಹೇಳುತ್ತೇವೆ. .ಶನಿ ಗ್ರಹ ಸಂಚಾರ ಕುಂಭ ರಾಶಿಯಿಂದ ಮೀನ ರಾಶಿಯ ಕಡೆಗೆ ಇರುತ್ತದೆ.ಹಾಗೆ ಕುಂಭದಿಂದ ಶನಿ ಹೊರಗಡೆ ಹೋಗುತ್ತಾನೆ. ರಾಹು ಗ್ರಹ ಮೀನ ರಾಶಿಯಲ್ಲಿದೆ . ಕುಂಭ ರಾಶಿಗೆ ಹತ್ತಿರ ಬರುತ್ತಾನೆ. ನಿಮ್ಮ ಮುಂದಿರುವ ಎರಡು ದೊಡ್ಡ ಸವಾಲು ಏನೆಂದರೆ,

ಒಂದು ನಕಾರಾತ್ಮಕ ಸವಾಲು ಮತ್ತೊಂದು ಧನಾತ್ಮಕ ವೇನಲ್ಲ, ನಕಾರಾತ್ಮಕ ಆಲೋಚನೆಗಳು, ಬ್ರಾಂತಿಗಳು ಅಂದರೆ ಇನ್ನು ಮುಂದೆ ಏನು ಆಗುತ್ತದೆ ಎಂಬ ಆಲೋಚನೆ ,ಭವಿಷ್ಯದ ಬಗ್ಗೆ ಅತಿಯಾದ ಆಲೋಚನೆ, ಅದಕ್ಕೆ ಪೂರ್ವಕವಾದ ಘಟನೆಗಳು ಸಹ ನಿಮ್ಮ ಜೀವನದಲ್ಲಿ ನಡೆಯಬಹುದು. ಇನ್ನೊಂದು ಕಡೆ ಅಷ್ಟಮದಲ್ಲಿರುವ ಕೇತು ಚಿಕ್ಕ ಪುಟ್ಟ ತೊಂದರೆಗಳನ್ನು ನೀಡುತ್ತಿರುತ್ತಾನೆ.

ಸವಾಲುಗಳು ಬರುತ್ತಿರುತ್ತವೆ. ಆರೋಗ್ಯದಲ್ಲೂ ಕೂಡ ಸಮಸ್ಯೆ ಆಗಿರುತ್ತದೆ . ಆದರೆ ಅದರಿಂದ ತೊಂದರೆಯಾಗುವುದಿಲ್ಲ. ಏಳುವರೆ ವರ್ಷ ಅವರ ಜೀವನದಲ್ಲಿ ನಡೆಯುವುದರಿಂದ ಸಮಸ್ಯೆಗಳು ಬರುತ್ತಲೆ ಇರುತ್ತವೆ. ಕೆಲಸದಲ್ಲೂ ಕೂಡ ಅಡ್ಡಿ ಆತಂಕಗಳು ಬರುತ್ತವೆ. ಜೀವನದಲ್ಲಿ ಸವಾಲುಗಳು ತೀವ್ರತೆಯನ್ನು ಪಡೆದುಕೊಳ್ಳುತ್ತವೆ.

ಮೊದಲೇ ಹೇಳಿದಂತೆ ಇದೆಲ್ಲದಕ್ಕೂ ಪರಿಹಾರ ಇದೆ. ಈ ಮೂರು ಗ್ರಹಗಳನ್ನು ಬಿಟ್ಟು, ಬೇರೆ ಗ್ರಹಗಳು ತರುವ ಒಳ್ಳೆಯ ಘಟನೆಗಳು ಆ ಗ್ರಹಗಳು ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಿದಾಗ, ಧನಾತ್ಮಕ ಶಕ್ತಿಯನ್ನು ತಂದಾಗ , ಗೋಚರದಲ್ಲಿ ಆ ಗ್ರಹಗಳಿಗೆ ಅವುಗಳದೇ ಆದ ಫಲಗಳು ಇರುತ್ತವೆ. ಅವುಗಳ ಸ್ಥಾನವನ್ನು ಆಧರಿಸಿ ಯಾವ ಯಾವ ರಾಶಿಯಲ್ಲಿದೆ ಎಂದಾಗ ಒಂದು ಸಮತೋಲನ ಅನ್ನೋದು ಉಂಟಾಗುತ್ತದೆ. ಆಗ ನಕಾರಾತ್ಮಕತೆ ಅನ್ನೋದು ನಮ್ಮ ಜೀವನದಲ್ಲಿ ಬರುವುದಿಲ್ಲ.

ಒಂದೊಂದಾಗಿ ನಡೆಯುವ ಧನಾತ್ಮಕ ಶಕ್ತಿಗಳು ನಿಮಗೆ ಸುಖ ಸಂತೋಷವನ್ನು ತಂದುಕೊಡುತ್ತವೆ .ಈ ಡಿಸೆಂಬರ್ ಮಾಸದಲ್ಲಿ .ಈ ನಿಟ್ಟಿನಲ್ಲಿ ಡಿಸೆಂಬರ್ ತಿಂಗಳು ಕುಂಭ ರಾಶಿಯವರಿಗೆ ಶುಭವನ್ನು ಕೊಡುತ್ತವೆ ಎಂದು ಹೇಳಲಾಗಿದೆ. ತೃತೀಯದಲ್ಲಿರುವ ಗುರು ಧೈರ್ಯವನ್ನು ನೀಡುವುದರಿಂದ ನಿಮಗೆ ಕೆಲಸದಲ್ಲಿ ಮತ್ತಷ್ಟು ಆಸಕ್ತಿ ಹೆಚ್ಚಾಗುತ್ತದೆ. ಮತ್ತೆ ಗುರು ಸಾತ್ವಿಕವಾದ ಒಳ್ಳೆಯ ಧೈರ್ಯವನ್ನು ನೀಡುತ್ತಾನೆ. ಒಳ್ಳೆಯ ವಿಚಾರದ ಕಡೆಗೆ ಹೋಗಲು ಪ್ರೇರಣೆಯನ್ನು ನೀಡುತ್ತದೆ.

ಹಿರಿಯರಿಂದ ಮಾರ್ಗದರ್ಶನ ನಿಮ್ಮ ಜೀವನಕ್ಕೆ ಸಿಗುತ್ತದೆ. ನಮ್ಮ ಜೀವನದಲ್ಲಿ ಪ್ರೋತ್ಸಾಹ ತುಂಬುವ ವ್ಯಕ್ತಿ ಸಿಗುತ್ತಾರೆ. ಎರಡು ಮೂರು ಗ್ರಹಗಳು ದಶಮ ಸ್ಥಾನದಲ್ಲಿ ಪ್ರಭಾವ ಬೀರುವುದರಿಂದ ನಿಮಗೆ ಕೆಲಸದಲ್ಲಿ ತುಂಬಾ ಆಸಕ್ತಿ ಹೆಚ್ಚಾಗುತ್ತದೆ. ನೀವು ಪಟ್ಟಿರುವ ಕಷ್ಟಕ್ಕೆ ನಿಮಗೆ ನ್ಯಾಯಯುತ ಈ ತಿಂಗಳಲ್ಲಿ ಸಿಗುತ್ತದೆ.ಮತ್ತೆ ಕೆಲಸದಲ್ಲಿ ಭರವಸೆಯೂ ಸಹ ಸಿಗುತ್ತದೆ. 16ನೇ ತಾರೀಖಿನ ನಂತರ ಧನುರ್ ರಾಶಿಗೆ ಸೂರ್ಯ ಪ್ರಯಾಣ ಮಾಡಿದಾಗ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ.

ಹಾಗೆಯೇ ಅದೇ 27ನೇ ತಾರೀಕು ಧನುರ್ ರಾಶಿಗೆ ಕುಜ ಗ್ರಹ ಕೂಡ ಬಂದು ಸೇರುತ್ತದೆ.ಆಗ ರಿಯಲ್ ಎಸ್ಟೇಟ್ ಪ್ರಾಪರ್ಟಿ ಇಂತಹ ಕೆಲಸಗಳಲ್ಲಿ ಯಶಸ್ಸು ದೊರೆಯುತ್ತದೆ .ಕುಜಗ್ರಹ ಮತ್ತು ರವಿ ಎರಡು ಸೇರುವುದರಿಂದ , ಅಂದರೆ ಈ ಎರಡು ಗ್ರಹಗಳ ಸಮ್ಮಿಲನದಿಂದ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ನಿಮಗೆ ಒಳ್ಳೆಯ ಖ್ಯಾತಿಯನ್ನು ತಂದುಕೊಡುತ್ತದೆ.

ನಿಮಗೆ ಒಂದು ಮನ್ನಣೆಯನ್ನು ತಂದುಕೊಡುತ್ತದೆ.ಯಾವುದೇ ಕೆಲಸದಲ್ಲಿದ್ದರೂ ನಿಮಗೆ ಯಶಸ್ಸು ಕಂಡಿತ ತಂದುಕೊಡುತ್ತದೆ.ಈ ಚಿಂತೆ ಅನ್ನುವುದರಿಂದ ನಾವು ಬೇಗ ಹೊರಗಡೆ ಬರಲು ಸಾಧ್ಯವಾಗುವುದಿಲ್ಲ. ಅಂಥವರಿಗೆ ಕುಜ ಮತ್ತು ರವಿ ತುಂಬಾ ಒಳ್ಳೆಯದನ್ನು ಮಾಡುತ್ತಾರೆ.ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ. .ಬಹಳಷ್ಟು ಶಕ್ತಿಗಳು ನಿಮ್ಮ ಪರವಾಗಿ ಕೆಲಸ ಮಾಡುತ್ತವೆ.

ಶುಕ್ರ ಗ್ರಹಗಳು ಕೂಡ ಧನಾತ್ಮಕವಾಗಿಯೇ ಇರುತ್ತದೆ. ದಶಮಾ ಭಾಗಕ್ಕೆ ಶುಕ್ರ ಗ್ರಹ ಬರುವುದರಿಂದ,ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಪ್ರಗತಿ ದೊರೆಯುತ್ತದೆ. 11 ರಲ್ಲಿ ವಕ್ರ ಬುಧ ಇರುವುದರಿಂದ ಈ ತಿಂಗಳಿನ ಬಹು ಭಾಗ ಕೆಲಸಕಾರ್ಯಗಳಲ್ಲಿ ಪ್ರಗತಿ ದೊರೆಯುತ್ತದೆ .ವಿದ್ಯೆ ಅಧ್ಯಯನ ಉದ್ಯೋಗ ಯಾವುದೇ ಇರಲಿ ಈ ಡಿಸೆಂಬರ್ ತಿಂಗಳಲ್ಲಿ ಒಂದು ಸಮತೋಲನವನ್ನು ಕಾಣಬಹುದು.ದೊಡ್ಡ ಸಮಸ್ಯೆಗಳು ಇರುವ ವ್ಯಕ್ತಿಗಳಿಗೂ ಸಹ ಉಪಶಮನ ವಾಗುವಂತೆ, ಒಂದು ಕ್ಷಮಾ ಯೋಚನೆ ದೊರೆಯುತ್ತದೆ.ಮತ್ತು ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.ಜೀವನದಲ್ಲಿ ಖುಷಿ ಹೆಚ್ಚಾಗುತ್ತದೆ. ಈ ಡಿಸೆಂಬರ್ ಮಾಸದಲ್ಲಿ ಎಂದು ಹೇಳಬಹುದು.

Leave A Reply

Your email address will not be published.