ಕುಂಭ ರಾಶಿ ಜನವರಿ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಕುಂಭ ರಾಶಿಯ ಜನವರಿ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂಬುದನ್ನು ನೋಡೋಣ. ಜನವರಿ ತಿಂಗಳನ್ನು ಒಂದು ವಿಚಿತ್ರವಾದ ತಿಂಗಳು ಎಂದು ಹೇಳಬಹುದು .ಪ್ರಾರಂಭ ಅನ್ನುವುದು ಅದ್ಭುತವಾಗಿರುತ್ತದೆ. ಭರವಸೆಯು ಕೂಡ ಇರುತ್ತದೆ. ಧನಾತ್ಮಕ ಅಭಿವೃದ್ಧಿ ಇರಬಹುದು , ಅಥವಾ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆ ಕಾಣಬಹುದು. ಅಥವಾ ಕೆಲಸ ಕಾರ್ಯಗಳಲ್ಲಿ ಚೇತರಿಕೆಯನ್ನು ಕಾಣುವುದು . ಯಾವುದೇ ಕೆಲಸದಲ್ಲಿ ಒಂದು ದೊಡ್ಡ ಅವಕಾಶಗಳು ಸಿಗಬಹುದು .

ನಿಮ್ಮ ಹೂಡಿಕೆಯಲ್ಲಿ ಒಳ್ಳೆಯ ಲಾಭ ಸಿಗುವುದು . ವರ್ಷದ ಆರಂಭ ತುಂಬಾ ಚೆನ್ನಾಗಿರುತ್ತದೆ .ಸ್ವಲ್ಪ ಮಟ್ಟಿನ ಖುಷಿ ಹಾಗು ಚೇತರಿಕೆಯನ್ನು ತಂದುಕೊಡುತ್ತದೆ . ದೊಡ್ಡ ಯಶಸ್ಸು ಎಂದು ಹೇಳುವುದಿಲ್ಲ .ಒಂದು ಸಣ್ಣ ಮಟ್ಟದಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ. ಆದರೂ ಕೂಡ ಸಮಾಧಾನಕರ ಬೆಳವಣಿಗೆ ಎಂದು ಹೇಳಬಹುದು . ಅದು ನಿಮಗೆ ಬೇಕು ಅಂತ ಅನ್ನಿಸುತ್ತದೆ. ನಿಮಗೆ ನಡೆಯುತ್ತಿರುವುದು ಸಾಡೇಸಾತಿ ಕಾಲ . ಬಹಳಷ್ಟು ಜನರು ಇಳಿಕೆಯ ಹಾದಿಯಲ್ಲಿ ಹೋಗಿರುವ ಸಾಧ್ಯತೆಗಳು ಇರುತ್ತವೆ .

ಇದರಲ್ಲಿ ಯಾವುದೇ ಕೆಲಸ ಕೂಡ ಆಗಿರಬಹುದು . ನಕಾರಾತ್ಮಕವಾಗಿ ಹೋಗುವ ಸಾಧ್ಯತೆಗಳು ಇರುತ್ತದೆ . ನಿಮಗೆ ನಕಾರಾತ್ಮಕತೆ ಇರುವುದು ಅನುಭವಕ್ಕೆ ಬರುತ್ತದೆ . ಭವಿಷ್ಯಕ್ಕಾಗಿ ಕೆಲವೊಂದು ಕಡೆ ಹಣವನ್ನು ಹೂಡಿಕೆ ಮಾಡಲಾಗಿರುತ್ತದೆ .ಇವರು ಜೀವನದಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ . ವಿಶ್ರಾಂತಿ ತೆಗೆದುಕೊಳ್ಳುವ ಸಮಯ ಆಗಿರುತ್ತದೆ . ಈ ಸಂದರ್ಭದಲ್ಲಿ ಬೇರೆಯವರಿಗೆ ಹೋಗುವ ಸಾಧ್ಯತೆಗಳು ಇರುತ್ತದೆ. ಇಂತಹ ಅಪೇಕ್ಷೆಗಳು ಇರುತ್ತವೆ .

ಇವರಿಗೆ ವಿಶ್ರಾಂತಿ ಮಾಡಲು ಅವಕಾಶಗಳು ಸಿಗದೇ ಹೋಗಬಹುದು . ಇವರ ಜೀವನದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಆದರೆ ಯಾವಾಗಲೂ , ದುಡಿಯುವ ಸಮಸ್ಯೆಗಳು ಎದುರಾಗಬಹುದು . ವಿಶೇಷವಾಗಿ ಈ ಸಾಡೇಸಾತಿ ಇರುವುದರಿಂದ ವ್ಯತಿರಿಕ್ತವಾದ ಪರಿವರ್ತನೆಗಳು ಆಗಬಹುದು . ಇದಕ್ಕೆ ದಶ ಭುಕ್ತಿ ಕಾರಣಗಳು ಇರಬಹುದು . ವಿದ್ಯಾರ್ಥಿಗಳಿಗೂ ಕೂಡ ಸವಾಲುಗಳು ಎದುರಾಗುತ್ತವೆ . ಇಂತಹ ಸವಾಲುಗಳು ಈ ತಿಂಗಳಲ್ಲಿ ಸ್ವಲ್ಪ ನಿವಾರಣೆ ಆಗುತ್ತದೆ .

ಅಭಿವೃದ್ಧಿ ಇದೆ ಎಂದು ಹೇಳಬಹುದು . ಹಿಂದಿನ ತಿಂಗಳಿಗೆ ಹೋಲಿಸಿ ನೋಡಿದಾಗ ಸ್ವಲ್ಪ ಸುಧಾರಣೆ ಆಗುವ ಸಾಧ್ಯತೆ ಇದೆ . ಈ ರೀತಿಯ ಸುಧಾರಣೆ ನಿಮ್ಮ ಅನುಭವಕ್ಕೂ ಕೂಡ ಬರುತ್ತದೆ . ಸದ್ಯದ ಪರಿಸ್ಥಿತಿಯಲ್ಲಿ ಇದು ಹಳೆಯ ಬೆಳವಣಿಗೆ ಎಂದು ಹೇಳಲಾಗುತ್ತದೆ . ಇನ್ನೊಂದು ಸಮಸ್ಯೆ ಏನೆಂದರೆ ನಿಮಗೆ ತೃಪ್ತಿ ಅನ್ನೋದು ಇರುವುದಿಲ್ಲ . ಲಾಭ ಬರುವುದರಲ್ಲಿ ನಿಮಗೆ ಸ್ವಲ್ಪ ಮಟ್ಟಿನ ಅಸಮಾಧಾನ ಇರುತ್ತದೆ . ಮಾನಸಿಕವಾಗಿ ಸಮಾಧಾನ ಅಥವಾ ಸಮತೋಲನ ನಿಮಗೆ ಬರುವುದಿಲ್ಲ .

ನಿಮ್ಮ ಲಾಭದ ರಾಶಿಯಲ್ಲಿ ಮೂರು ಗ್ರಹಗಳು ಹೋಗಿ ಕೂತಿರುತ್ತದೆ . ತುಲನಾತ್ಮಕ ಪದವಿ ಈ ಜನವರಿ ತಿಂಗಳಲ್ಲಿ ಸಿಕ್ಕರೂ ಕೂಡ , ಮಾನಸಿಕವಾಗಿ ಸದೃಢವಾಗಿ ಇರಲು ನಿಮಗೆ ಸಾಧ್ಯವಾಗುವುದಿಲ್ಲ . ಇದಕ್ಕೆ ಪ್ರಮುಖವಾದ ಕಾರಣ ಏನೆಂದರೆ ನಿಮ್ಮ ರಾಶಿಯಲ್ಲಿ ಮೂರು ಗ್ರಹಗಳು ಲಾಭ ಸ್ಥಾನದಲ್ಲಿ ಇರುತ್ತದೆ . ಲಾಭವನ್ನು ಕೂಡ ತಂದು ಕೊಡುತ್ತವೆ . ಮತ್ತು ಯಶಸ್ಸು ಕೂಡ ನಿನ್ಮುದಾಗುತ್ತದೆ . ಇದರ ಬಗ್ಗೆ ನಿಮ್ಮ ಗಮನ ಮತ್ತು ನಿರೀಕ್ಷೆ ಜಾಸ್ತಿಯಾಗಿ ಇರುತ್ತದೆ. ನಿಮ್ಮ ಆಸೆ ಆಕಾಂಕ್ಷೆಗಳು ಕೂಡ ತುಂಬಾ ಜಾಸ್ತಿ ಇರುತ್ತದೆ .

ಆದ್ದರಿಂದ ಬಂದಿರುವ ಲಾಭವನ್ನು ನಿಮಗೆ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ .ಅದನ್ನ ನೀವು ಕಂಡುಕೊಳ್ಳಬೇಕು . ಗುರುತಿಸಿಕೊಂಡು ನಿಮ್ಮ ಮೇಲೆ ನೀವೇ ಪ್ರಶಂಸೆ ವ್ಯಕ್ತಪಡಿಸುವುದು ಒಳ್ಳೆಯದು . ಈ ತರಹದ ಒಂದು ತೃಪ್ತಿ ಭಾವನೆಯನ್ನು ನಿಮ್ಮ ಮನಸ್ಸಿನಲ್ಲಿ ತಂದುಕೊಳ್ಳಬೇಕು .ಅಥವಾ ರೂಡಿಸಿಕೊಳ್ಳಬೇಕು . ನೀವು ಇರುವ ಪರಿಸ್ಥಿತಿಯಲ್ಲಿ ಒಂದು ಸಣ್ಣ ಬದಲಾವಣೆಯನ್ನು ಕೂಡ ನೀವು ಒಪ್ಪಿಕೊಂಡು ಅದನ್ನು ರೂಡಿಸಿಕೊಳ್ಳಬೇಕು .

ನಿಮ್ಮ ಜೀವನದಲ್ಲಿ ಸಾಕಷ್ಟು ಏರುಪೇರುಗಳು ಉಂಟಾಗಿರುತ್ತದೆ . ಈಗ ಇರುವ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವ ಮಾರ್ಗವನ್ನು ತಿಳಿದುಕೊಳ್ಳುವುದು ಒಳ್ಳೆಯದು . ಈ ತೃಪ್ತಿಯ ಭಾವನೆ ನಿಮ್ಮನ್ನು ಯಶಸ್ಸಿನ ಕಡೆ ಕರೆದುಕೊಂಡು ಹೋಗುತ್ತದೆ . ನಿಮಗೆ ಜೀವನದಲ್ಲಿ ತೃಪ್ತಿ ಇಲ್ಲದೇ ಏನೋ ಬೇಕು ಬೇಕು ಅಂತ ಅನಿಸುತ್ತದೆ . ಬೇರೆಯವರು ನಮ್ಮ ಕಷ್ಟಗಳಿಗೆ ಸ್ಪಂದಿಸಬೇಕು ಅನ್ನೋ ಭಾವನೆ ಕೂಡ ನಿಮ್ಮದು ಆಗಿರುತ್ತದೆ , ನೀವು ಬೇರೆಯವರಿಂದ ನಿರೀಕ್ಷೆ ಮಾಡುವಾಗ ಅದರಿಂದ ನೋವು ಆಗುವ ಸಾಧ್ಯತೆಗಳು ಹೆಚ್ಚು ಇರುತ್ತದೆ.

ನಿಮ್ಮ ನಿರೀಕ್ಷೆಗೆ ಅವರು ಬೆಲೆ ಕೊಡುವುದಿಲ್ಲ . ಇದು ಸರ್ವೇ ಸಾಮಾನ್ಯವಾಗಿರುತ್ತದೆ .ಮೊದಲು ನೀವು ನಿಮ್ಮ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ .ಅತಿಯಾದ ನಿರೀಕ್ಷೆಗಳನ್ನು ಬಿಡುವುದರಿಂದ ನಿಮಗೆ ಆಗುವ ಬೇಜಾರು ತಪ್ಪಿಸಬಹುದು . ಇದರಲ್ಲಿ ಒಂದು ಸಣ್ಣ ಮಟ್ಟಿನ ಹಿಂಸೆ ಇರುತ್ತದೆ . ಅಂದರೆ ಇದನ್ನು ನಮಗೆ ನಾವೇ ಮಾಡಿಕೊಳ್ಳುವಂತದ್ದು. ಅಂದರೆ ವಸ್ತು ಸ್ಥಿತಿಯನ್ನು ಅರ್ಥ ಮಾಡಿಕೊಂಡು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು .

ನಮ್ಮಿಂದ ಎಷ್ಟು ಸಾಧ್ಯವಾಗುತ್ತದೆ ಅಷ್ಟು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು .ಅವರು ಭಾವನಾತ್ಮಕವಾಗಿ ನಮಗೆ ಎಷ್ಟು ಸ್ಪಂದಿಸಲು ಸಾಧ್ಯವಾಗುತ್ತದೆ ಅದರ ಮೇಲೆ ನಿರ್ಧಾರವನ್ನು ತೆಗೆದುಕೊಳ್ಳಿ .
ಇಂತಹ ಒತ್ತಡಗಳು ಸಾಧ್ಯವಾಗದೆ ಇದ್ದಾಗ ಇದಕ್ಕೆಲ್ಲಾ ಧೈರ್ಯ ಕೊಡುವುದಕ್ಕೆ ಗುರು ದೇವರ ಸಹಕಾರ ಮತ್ತು ಸಹಾಯ ನಮಗೆ ದೊರೆಯುತ್ತದೆ. ಗುರುಬಲ ಇರುತ್ತದೆ. ತೃತೀಯದಲ್ಲಿ ಇರುವುದರಿಂದ ಬಹಳಷ್ಟು ಸಾಕಷ್ಟು ಸಂಪತ್ತು ಕೊಡದೆ ಇದ್ದರೂ ,

ಈ ಸಮಯದಲ್ಲಿ ತುಂಬಾ ಧೈರ್ಯವನ್ನು ಕೊಡುತ್ತದೆ . ಚೈತನ್ಯ ಕೂಡ ಇರುತ್ತದೆ . ಮಾನಸಿಕ ಮಟ್ಟದಲ್ಲಿ ಒಂದು ಸಮತೋಲನ ಇರುತ್ತದೆ . ಒಂದು ಸಲ ಬೇಜಾರಾದರೂ ಬೇಗ ಸುಧಾರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ . ನಿಮ್ಮನ್ನು ನೀವು ಧೈರ್ಯ ತೆಗೆದುಕೊಂಡು ಪ್ರೇರೆಪಿಸಿಕೊಳ್ಳಬಹುದು . ಧೈರ್ಯ ಕಡಿಮೆ ಆಯ್ತು ಎಂದರೆ ಗುರುಗಳ ಸ್ಮರಣೆ ಮಾಡಿದರೆ ಖಂಡಿತ ಆ ದೈರ್ಯ ನೆಮ್ಮದಿ ನಿಮಗೆ ಬಂದೇ ಬರುತ್ತದೆ. ಕೇತು ಗ್ರಹ ಅಷ್ಟಮದಲ್ಲಿ ಇರುವುದರಿಂದ ಸ್ವಲ್ಪ ಅಶುಭ .

ಅಷ್ಟಮದಲ್ಲಿ ಇರುವುದರಿಂದ ಸ್ವಲ್ಪ ಆರೋಗ್ಯದ ಸಮಸ್ಯೆ , ತೀರಾ ಅನಾರೋಗ್ಯ ಉಂಟಾಗುವ ವ್ಯಕ್ತಿಗಳಿಗೆ ಮೃತ್ಯು ಭಯ ಕೂಡ ಕಾಡಬಹುದು . ಇದು ನಿಗೂಢವಾಗಿರುತ್ತದೆ . ಹೊರಗಡೆ ಹೇಳಿಕೊಳ್ಳಲು ಆಗದೆ ನಿಮ್ಮಷ್ಟಕ್ಕೆ ನೀವೇ ಕಲ್ಪನೆ ಮಾಡಿಕೊಳ್ಳಬಹುದು . ಇಂತಹ ಕೆಟ್ಟ ಅಭ್ಯಾಸವನ್ನು ಬಿಡಿ . ರವಿ ಗ್ರಹ ಮಕರ ಸಂಕ್ರಾಂತಿಯ ನಂತರ ಮಕರ ರಾಶಿಗೆ ಬರುತ್ತಿದೆ . ನಿಮ್ಮ ಆರೋಗ್ಯದಲ್ಲಿ ವಿಶೇಷವಾಗಿ ಏರುಪೇರು ಆಗಬಹುದು .

ನೀವು ನಿಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಶರೀರಕ್ಕೆ ನೀರಿನ ಅವಶ್ಯಕತೆ ಹೆಚ್ಚಾಗಿರುತ್ತದೆ . ನಿಮ್ಮ ಜೀವನವನ್ನು ಸಮತೋಲನವಾಗಿ ತೆಗೆದುಕೊಂಡು ಹೋಗಿ . ಜನವರಿ 15ರ ನಂತರ ನಿಮಗೆ ಹೆಚ್ಚಿನ ಯಶಸ್ಸು ದೊರೆಯಲಿದೆ . ಈ ಯಶಸ್ಸನ್ನು ಒಪ್ಪಿಕೊಳ್ಳುವ ಮನಸ್ಸು ಮಾಡಬೇಕು . ನಿಮ್ಮ ಮನಸ್ಸಿನಲ್ಲಿ ಧನಾತ್ಮಕ ಭಾವನೆಗಳನ್ನು ತಂದುಕೊಳ್ಳುವುದರಿಂದ ನಿಮಗೆ ಒಳ್ಳೆಯದಾಗುತ್ತದೆ ಎಂದು ಹೇಳಬಹುದು .

Leave a Comment