12ನೇ ರಾಶಿಗಳಲ್ಲಿ 3ನೇ ರಾಶಿಯಾದ ಮಿಥುನ ರಾಶಿಯು ಬುಧಗ್ರಹದಿಂದ ಆಳಲ್ಪಡುತ್ತದೆ. ಇವರದ್ದು ಎರಡು ಮನಸ್ಸು. ಕೆಲವೊಮ್ಮೆ ಗೊಂದಲಕ್ಕೆ ಒಳಗಾಗುವ ಮಿಥುನರಾಶಿಯವರು ಎಲ್ಲವನ್ನೂ ಸಂಸ್ಕರಣೆಯ ವಿಧಾನವೆಂದು ಪರಿಗಣಿಸುತ್ತಾರೆ. ಇದು ಅನಿಯಮಿತ ಉತ್ಸಾಹವನ್ನು ನೀಡುತ್ತದೆ. ಇವರು ಹೊಸ ಹೊಸ ಕಲಿಯಲು ಉತ್ಸುಕರಾಗಿರುತ್ತಾರೆ. ಮಿಥುನರಾಶಿಯ ಅಂಶ ವಾಯು. ಆಳುವ ಗ್ರavara ಹ ಬುಧ. ಬಣ್ಣ ತಿಳಿ ಹಸಿರು, ಹಳದಿ, ನೀಲಿ. ಗುಣ ರೂಪಾಂತರಿಕ, ದಿನ ಬುಧವಾರ.
ಅತ್ಯುತ್ತಮವಾಗಿ ಹೊಂದಾಣಿಕೆ ಮಾಡಿಕೊಳ್ಳುವ ರಾಶಿ ಚಕ್ರಗಳು ವೃಶ್ಚಿಕ ಮತ್ತು ಕರ್ಕ. ಅದೃಷ್ಟ ಸಂಖ್ಯೆ 5,7,14 ಮತ್ತು 23. ಅವಳಿಗಳ ಮಿಥುನರಾಶಿಯ ಚಿಹ್ನೆಯಾಗಿದೆ. ಮಿಥುನ ರಾಶಿಯವರು ಹೆಚ್ಚು ಬೌದ್ಧಿಕ ಮನೋಭಾವವನ್ನು ಹೊಂದಿರುತ್ತಾರೆ. ತಮ್ಮ ಪರಿಸರದ ಬಗ್ಗೆ ಸಾಕಷ್ಟು ತಿಳಿದುಕೊಂಡಿರುತ್ತಾರೆ. ಮಿಥುನರಾಶಿಯವರು ಸಮಾಜಿಕ ಸನ್ನಿವೇಶಗಳನ್ನು ಇಷ್ಟಪಡುವ ವ್ಯಕ್ತಿಗಳನ್ನು ಆಕರ್ಷಣೆ ಮಾಡುತ್ತಾರೆ. ಇವರು ಇತರರನ್ನು ಸೆಳೆಯುವ ಆಕರ್ಷಣೆಯ ಸ್ವಭಾವವನ್ನು ಹೊಂದಿರುತ್ತಾರೆ.
ಮಿಥುನರಾಶಿಯವರು ಉತ್ತಮ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಮತ್ತು ಇತರರನ್ನು ನಗಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರ ಬುದ್ಧಿವಂತಿಕೆಯು ಹೆಚ್ಚು ಸೃಜನಶೀಲರಾಗುವಂತೆ ಮಾಡುತ್ತದೆ. ಇವರು ಅವಕಾಶಗಳನ್ನು ತೆಗೆದುಕೊಳ್ಳಲು ಹಿಂಜೆರಿಯುವುದಿಲ್ಲ. ಇದು ಆಗಾಗ ಸುಂದರ ಅನುಭವವನ್ನು ನೀಡಬಹುದು. ತಾವಾಗಿಯೇ ಬಂದು ಸಂವಹನ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಭಾವನೆ ಮತ್ತು ನೋಟವನ್ನು ಸ್ಪಷ್ಟವಾಗಿ ಗಮನಿಸುತ್ತಾರೆ. ಇವರು ಅನಿರೀಕ್ಷಿತವಾಗಿ ಬದಲಾಗುವ ಗುಣದವರು.
ಮಿಥುನ ರಾಶಿಯವರು ಯಾವಾಗಲೂ ತಮ್ಮ ಮನಸ್ಸನ್ನು ಬದಲಾಯಿಸುವ ಆಯ್ಕೆಯನ್ನು ಹೊಂದುತ್ತಾರೆ. ಇವರು ಒಂದು ಕ್ಷಣ ತಾರ್ಕಿಕವಾಗಿರಬಹುದು ನಂತರ ಅದೇ ಅನಿರೀಕ್ಷಿತವಾಗಿ ಬದಲಾಗಬಹುದು. ಈ ಕಾರಣದಿಂದ ಮಿಥುನ ರಾಶಿಯವರನ್ನು ಎರಡು ಸ್ವಭಾವದವರು, ವಿಶ್ವಾಸಾರ್ಹ ಅಲ್ಲವೆಂದು ಕೊಳ್ಳುತ್ತಾರೆ. ಇವರ ಮನಸ್ಸು ಒಂದು ಕ್ಷಣವಿದ್ದಂತೆ ಇನ್ನೊಂದು ಕ್ಷಣ ಇರುವುದಿಲ್ಲ. ಇವರು ಬೇರೆಯವರ ಜೀವನದ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ.
ಜೀವನದಲ್ಲಿ ಪ್ರಾಯೋಗಿಕವಾಗಿರಲು ಇಷ್ಟಪಡುತ್ತಾರೆ. ಇವರ ಕೆಲಸದ ಪ್ರಯತ್ನಗಳು ಹೆಚ್ಚು ಬಾರಿ ವ್ಯರ್ಥವಾಗುತ್ತವೆ. ಏಕೆಂದರೆ ಇವರು ಹಲವಾರು ಸಂದರ್ಭಗಳಲ್ಲಿ ರಾಜೀಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಇವರಿಗೆ ಸಹನೆ ತುಂಬಾ ಕಡಿಮೆ, ಹಾಗಾಗಿ ಇವರಿಗೆ ಕಿರಿಕಿರಿ, ಒತ್ತಡಕ್ಕೆ ಒಳಗಾಗುತ್ತಾರೆ. ಮಿಥುನ ರಾಶಿಯವರು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ನಡುವೆ ಸಮತೋಲನ ಮಾಡಿಕೊಳ್ಳುವಂತಹ ಮಾರ್ಗಗಳನ್ನು ಕಲಿಯಬೇಕು.
ಇವರ ಸಾಮರ್ಥ್ಯದ ಬಗ್ಗೆ ನೋಡುವುದಾದರೇ ಆಡಳಿತ ಗ್ರಹ ಬುಧನಿಂದಾಗಿ
ಈ ರಾಶಿಯವರು ಜ್ಞಾನವುಳ್ಳವರು ಮತ್ತು ಎಲ್ಲದ್ದಕ್ಕೂ ಹೊಂದಿಕೊಳ್ಳುವಂತಹವರು ಆಗಿರುತ್ತಾರೆ. ಜೊತೆಗೆ ಇವರು ಬಹುಮುಖ ಪ್ರತಿಭೆಯುಳ್ಳವರು. ಮಾತಿನಿಂದ ಇವರನ್ನು ಮೀರಿಸುವವರು ಯಾರು ಇಲ್ಲ. ಇವರು ಅತ್ಯುತ್ತಮ ಸಂವಹನಕಾರಕವಾಗಿರುತ್ತಾರೆ. ಕೆಲವೊಂದು ವಿಷಯಗಳನ್ನು ಮುಖ್ಯವಾಗಿ ಯೋಚಿಸುತ್ತಾರೆ ಮತ್ತು ಗಮನಿಸುತ್ತಾರೆ. ಎಲ್ಲರೂ ಇವರಿಗೆ ಹೊಂದಿಕೊಳ್ಳುತ್ತಾರೆ ಇವರು ಸದಾ ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುತ್ತಾರೆ.
ಮಿಥುನರಾಶಿಯವರ ದೌರ್ಬಲ್ಯಗಳೇನು ಎಂದರೆ ಕೆಲವು ಬಾರಿ ಅತೀಯಾಗಿ ಆಡುತ್ತಾರೆ. ಉತ್ಪ್ರೇಕ್ಷೆ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಮಾತಿನ ಮೂಲಕ ಇತರರನ್ನು ತಪ್ಪುದಾರಿಗೆ ಎಳೆಯುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಮೋಸವನ್ನು ಮಾಡಬಹುದು ಮತ್ತು ವಿರೋಧಾತ್ಮಕವಾಗಿ ವರ್ತಿಸುತ್ತಾರೆ. ಮಿಥುನರಾಶಿಯ ಚಿಹ್ನೆ ಅವಳಿ ಚಿಹ್ನೆಯಾಗಿರುವುದರಿಂದ ಕೆಲವೊಮ್ಮೆ ಗೊಂದಲಮಯವಾಗಿ ವರ್ತಿಸುತ್ತಾರೆ. ಬೌತಿಕ ವಸ್ತು ಮತ್ತು ಸುಖಗಳ ಬಗ್ಗೆ ಚಂಚಲವಾಗುವ ಇವರ ಮನಸ್ಸನ್ನು ನಿಯಂತ್ರಿಸುವುದು ಕಷ್ಟ.
ಮಿಥುನರಾಶಿಯವರೊಂದಿಗೆ ಹೊಂದಿಕೊಳ್ಳುವ ಗ್ರಹಗಳು ಯಾವುವು ಎಂದರೆ ಮೇಷರಾಶಿ. ಈ ಎರಡು ರಾಶಿಗಳು ವಿನೋಧ ಮತ್ತು ಪ್ರೀತಿಯನ್ನ ಪ್ರತಿನಿಧಿಸುತ್ತದೆ. ಇವರು ಸಾಮಾಜಿಕವಾಗಿ ಸಾಹಸಗಳನ್ನು ಪ್ರೀತಿಸುತ್ತಾರೆ. ದೈಹಿಕ ಮತ್ತು ಬೌದ್ಧಿಕ ಮಟ್ಟದಲ್ಲಿ ಸಂಪರ್ಕ ಹೊಂದುತ್ತಾರೆ. ಮಿಥುನರಾಶಿಯವರ ಜೊತೆ ಕುಂಭರಾಶಿಯವರ ಜೋಡಿಯು ಸೃಜನಶೀಲವಾಗಿರುತ್ತದೆ. ಕುಂಭ ಮತ್ತು ಮಿಥುನರಾಶಿಯವರ ಆಲೋಚನೆಗಳು ಹೊಂದಾಣಿಕೆಯಾಗುತ್ತದೆ.
ತುಲಾರಾಶಿಯು ಬೌದ್ಧಿಕ ಸಮಾನತೆ ಮಾತ್ರವಲ್ಲದೇ ಮಿಥುನ ಮತ್ತು ತುಲಾರಾಶಿಗಳು ಕಲೆ, ಸಂಸ್ಕೃತಿ ಮತ್ತು ವಿನೋಧದ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ. ಮಿಥುನ ಮತ್ತು ಸಿಂಹರಾಶಿಗಳು ಎರಡು ರಾಶಿಗಳ ವ್ಯಾವಹಾರಿಕ ಮನಸ್ಥಿತಿ ಒಂದೇ ರೀತಿಯದ್ದು, ಇವರು ಒಂದು ಸಂಸ್ಥೆಯನ್ನು ರಚನೆ ಮಾಡಲು ಇಷ್ಟಪಡುತ್ತಾರೆ.
ಮಿಥುನರಾಶಿಯವರ ಜೊತೆ ಹೊಂದಾಣಿಕೆಯಾಗದೇ ಇರುವ ರಾಶಿಗಳು ಮೀನರಾಶಿಯವರು ಅತ್ಯಂತ ಸೂಕ್ಷ್ಮ. ಮಿಥುನ ರಾಶಿಯವರು ಸ್ವಲ್ಪ ಅಜಾಗರೂಕತೆ, ಕೆಲವೊಮ್ಮೆ ಚಂಚಲ ಸ್ವಭಾವದವರಾಗಿರುವುದರಿಂದ ಹೊಂದಾಣಿಕೆ ಮಾಡಿಕೊಳ್ಳಲು ಒಲವು ತೋರುವುದಿಲ್ಲ.
ಮಿಥುನರಾಶಿಯವರು ಕನ್ಯಾರಾಶಿಯ ನಿಖರವಾದ ಮತ್ತು ವಿಮರ್ಶಾತ್ಮಕ ಸ್ವಭಾವದಿಂದ ಬೇಸರವಾಗಿ ಮತ್ತು ನೀರಸವಾಗಿ ನೋಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಗೌಪ್ಯತೆಗೆ ಹೆಸರುವಾಸಿ ವೃಶ್ಚಿಕರಾಶಿ, ಮಿಥುನರಾಶಿ ಸಾಮಾಜಿಕ ಶಕ್ತಿಯುತವಾಗಿರಬೇಕು ಎಂದು ಬಯಸುತ್ತದೆ. ಹಾಗಾಗಿ ಇವರಿಬ್ಬರ ಜೋಡಿ ಹೊಂದಾಣಿಕೆಯಾಗುವುದಿಲ್ಲ.
ಮಿಥುನರಾಶಿಯವರ ಬಗ್ಗೆ ಇನ್ನಿತರೆ ವಿಷಯಗಳು ಏನೆಂದರೆ ಪಶ್ಚಿಮ ಉಷ್ಣವಲಯದ ರಾಶಿಚಕ್ರದಲ್ಲಿ ಮಿಥುನ ಋತುಮಾಸವು ಮೇ 22 ರಂದು ಪ್ರಾರಂಭವಾಗುತ್ತದೆ. ಇದು ಉತ್ತರ ಗೋಳಾರ್ಧದಲ್ಲಿ ವಸಂತಕೊನೆಯಲ್ಲಿ ಪ್ರಾರಂಭವಾಗುತ್ತದೆ. ವಾಯು ಅಂಶದ ಮಿಥುನರಾಶಿಯು ಪ್ರಾಚೀನ ಜ್ಯೋತಿಷ್ಯದಲ್ಲಿ ಮಿಥುನರಾಶಿಯು ನಿರಾಕಾರ ಮತ್ತು ವಿಸರ್ಜನೆಯನ್ನು ಪ್ರತಿನಿಧಿಸುತ್ತದೆ.