ಬೆಕ್ಕು ರಸ್ತೆಯಲ್ಲಿ ಅಡ್ಡ ದಾಟುವುದು ಒಳ್ಳೆಯದಾ ಇಲ್ಲಾ ಕೆಟ್ಟದ್ದಾ?

ನಾವು ಈ ಲೇಖನದಲ್ಲಿ ಬೆಕ್ಕು ರಸ್ತೆಯಲ್ಲಿ ಅಡ್ಡ ದಾಟುವುದು ಒಳ್ಳೆಯದಾ ಅಥವಾ ಕೆಟ್ಟದ್ದಾ ಎಂಬುದರ ಬಗ್ಗೆ ಇಲ್ಲಿ ನೋಡೋಣ . ಬೆಕ್ಕುಗಳು ರಸ್ತೆಯಲ್ಲಿ ದಾಟುವುದು ಅಶುಭ ಎಂದು ಏಕೆ ಹೇಳುತ್ತಾರೆ . ಇದು ಸತ್ಯನಾ ಎಂದು ಇಲ್ಲಿ ನೋಡೋಣ , ಸಾಮಾನ್ಯವಾಗಿ ಬೆಕ್ಕುಗಳು ರಸ್ತೆಯಲ್ಲಿ ಮದ್ಯ ದಾಟುವುದು ಅಪಶಕುನ ಎಂದು ಹೇಳುತ್ತಾರೆ . ಈ ಕಾರಣದಿಂದ ಕೆಲವು ಜನರು ರಸ್ತೆಯಲ್ಲಿ ಕೆಲವು ನಿಮಿಷಗಳು ನಿಂತು ನಂತರ ಹೋಗುತ್ತಾರೆ .ಯಾಕೆಂದರೆ ಯಾರಾದರೂ ಮುಂದೆ ಸಾಗಿ ಹೋಗಲಿ , ಎಂದು ಮತ್ತೆ ಅಪಶಕುನ ಕಳೆದು ಹೋಗಲಿ ,

ಎಂದು ನಿಂತು ಹೋಗುತ್ತಾರೆ . ಸತ್ಯ ಏನಿದೆ ಎಂದರೆ , ಪ್ರತಿಯೊಂದು ಸಮಯದಲ್ಲಿ ಬೆಕ್ಕು ಅಡ್ಡ ಬರುವುದು ಅಶುಭ ಅಲ್ಲ .ಹಾಗಾದರೆ ಬೆಕ್ಕು ಯಾವಾಗ , ಯಾವ ರೀತಿಯಲ್ಲಿ ಅಡ್ಡ ಬಂದರೆ , ಅಶುಭ ಎಂದು ತಿಳಿಯೋಣ . ಬೆಕ್ಕನ್ನು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಎಂದು ಹೇಳಲಾಗಿದೆ . ಚೆಕ್ಕು ದಾಟಿ ಹೋಗುವುದನ್ನು ಯಾವಾಗ ಅಶುಭ ಎಂದು ತಿಳಿಯಲಾಗುತ್ತದೆ . ಅಂದರೆ ಅದು ಬಲ ಭಾಗದಿಂದ ಎಡಭಾಗಕ್ಕೆ ರಸ್ತೆಯಲ್ಲಿ ಹಾದು ಹೋದಾಗ , ಬೇರೆ ಸ್ಥಿತಿಗಳಲ್ಲಿ ಬೆಕ್ಕು ದಾಟಿ ಹೋಗುವುದು ಅಶುಭ ಎಂದು ತಿಳಿಯಲಾಗಿಲ್ಲ .

ಮಾಹಿತಿಯ ಪ್ರಕಾರ ನಾಯಿಗಳ ರೀತಿ ಪ್ರಾಣಿಯ ಇಂದ್ರೀಯಗಳು ತುಂಬಾ ವಿಕಾಸ ಗೊಂಡಿರುತ್ತದೆ. ಈ ಕಾರಣದಿಂದ ಭವಿಷ್ಯದಲ್ಲಿ ನಡೆಯುವ ಘಟನೆಗಳನ್ನು ಮೊದಲೇ ತಿಳಿದು ಕೊಂಡಿರುತ್ತದೆ . ಆ ಕಾರಣದಿಂದ ನಿಮಗೆ ಸೂಚನೆಗಳನ್ನು ನೀಡುತ್ತವೆ. ಯಾವಾಗ ಚಿಕ್ಕುಗಳು ನಮ್ಮ ದಾರಿಗೆ ಅಡ್ಡ ಬಂದು ಮುಂದೆ ದಾಟುವುದು , ಆಗ ಏನಾದರೂ ಒಂದು ಸಮಸ್ಯೆಗಳು ಖಂಡಿತ ನಡೆದೇ ಇರುತ್ತದೆ. ಈ ಮಾತು ಪೂರ್ತಿಯಾಗಿ ಸತ್ಯವೇ ಆಗಿದೆ .ಇದನ್ನು ಮೂಢನಂಬಿಕೆ ಎಂದು ತಿಳಿಯಲು ಆಗುವುದಿಲ್ಲ .

ತಂತ್ರಜ್ಞಾನದಲ್ಲಿ ಬೆಕ್ಕಿಗೆ ತುಂಬಾ ಮಹತ್ವವನ್ನು ನೀಡಲಾಗುತ್ತದೆ. ಒಂದು ವೇಳೆ ಬೆಕ್ಕುಗಳು ಮನೆಯಲ್ಲಿ ಬಂದು ಅಳುವುದಕ್ಕೆ ಶುರು ಮಾಡಿದರೆ , ಏನೋ ಒಂದು ಕೆಟ್ಟ ಘಟನೆ ನಡೆಯುತ್ತದೆ ಎಂದು ಅರ್ಥವಾಗುತ್ತದೆ. ಬೆಕ್ಕುಗಳು ಜಗಳ ಆಡುವುದರಿಂದ ಧನ ಹಾನಿ ಮತ್ತು ಯಾರೊಂದಿಗೆ ಜಗಳ ಆಡುವ ಸಂಕೇತ ತೋರುತ್ತದೆ. ಇಲ್ಲವಾದರೆ ಇನ್ನೊಬ್ಬರು ಸತ್ತು ಹೋಗಿರುವ ಸೂಚನೆಯನ್ನು ಇವು ನೀಡುತ್ತದೆ. ಬೆಕ್ಕಿನಿಂದ ಧನ ಸಂಪತ್ತಿನ ಆಗಮನ ಆಗುವ ವಿಷಯವನ್ನು ತಿಳಿಯಬಹುದು.

ಲೋಕ ಮಾತೆಯ ಪ್ರಕಾರ ದೀಪಾವಳಿ ಹಬ್ಬದಂದು ರಾತ್ರಿ ಬೆಕ್ಕು ಮನೆಗೆ ಬರುವುದು ಶುಭ ಸಂಕೇತವಾಗಿ ಇರುತ್ತದೆ . ಎಂದು ಶಾಸ್ತ್ರಗಳಲ್ಲೂ ಸಹ ಇದರ ಬಗ್ಗೆ ತಿಳಿಸಿದ್ದಾರೆ. ತಾಯಿ ಲಕ್ಷ್ಮಿ ದೇವಿ ಮನೆಗೆ ಬರುತ್ತಾರೆ .ಮತ್ತು ವರ್ಷವಿಡೀ ನಿಮಗೆ ಸುಖ – ಶಾಂತಿ ಸಮೃದ್ಧಿ ನೆಲೆಸಿರುತ್ತದೆ. ಒಂದು ವೇಳೆ ಯಾವುದಾದರೂ ಒಂದು ಬೆಕ್ಕು ಬಂದು ನಿಮ್ಮ ಮನೆಯಲ್ಲಿ ಮರಿ ಹಾಕಿದರೆ , ಇದು ತುಂಬಾ ಒಳ್ಳೆಯದು ಎಂದು ತಿಳಿಯಲಾಗಿದೆ . ಸಾಮಾನ್ಯವಾಗಿ ಬೆಕ್ಕು ಮನೆಗೆ ಬಂದು ಹಾಲು ಕುಡಿಯುತ್ತದೆ .

ಕೆಲವರು ಇದನ್ನು ಅಪಶಕುನ ಎಂದು ಹೇಳುತ್ತಾರೆ .ಆದರೆ ಇದು ನಿಮಗಾಗಿ ಧನ ಸಂಪತ್ತಿನ ಆಗಮನದ ಶುಭ ಸಂಕೇತವಾಗಿ ಇರುತ್ತದೆ. ಶಾಸ್ತಗಳ ಅನುಸಾರವಾಗಿ ಪದೇ ಪದೇ ಚಿಕ್ಕು ಮನೆಗೆ ಬರುತ್ತಿದ್ದರೆ , ಇದು ಅಪಶಕುನ ಎಂದು ತಿಳಿಯಲಾಗುತ್ತದೆ . ಇಂತಹ ಸ್ಥಿತಿಯಲ್ಲಿ ನೀವು ಸತ್ಯನಾರಾಯಣರ ಕಥೆಯನ್ನು ಓದಬೇಕು . ಇದರಿಂದ ನಿಮಗೆ ಬರುವ ಎಲ್ಲಾ ಕೊರತೆಗಳು ಮತ್ತು ತೊಂದರೆಗಳು ದೂರವಾಗುತ್ತವೆ . ಗ್ರಹದ ದೋಷಗಳಿಂದ ಸಹ ಬೆಕ್ಕುಗಳು ನಿಮ್ಮನ್ನ ಉಳಿಸುತ್ತದೆ .

ಜ್ಯೋತಿಷ್ಯ ಶಾಸ್ತ್ರದಲ್ಲಿ ಬೆಕ್ಕನ್ನು ರಾಹುವಿನ ಸವಾರಿ ಎಂದು ಹೇಳಲಾಗಿದೆ .ಯಾರ ಕುಂಡಲಿಯಲ್ಲಿ ರಾಹು ಶುಭ ಇರುವುದಿಲ್ಲವೋ , ರಾಹುವಿನ ಅಶುಭ ಪ್ರಭಾವದಿಂದ ಪಾರಾಗಲು ಬೆಕ್ಕಿಗೆ ಹಾಲು ಮತ್ತು ಬೋಜನ ನೀಡಬೇಕು. ಈ ರೀತಿ ಮಾಡುವುದರಿಂದ ರಾಹು ದೋಷ ನಿವಾರಣೆ ಆಗುತ್ತದೆ . ಎಲ್ಲಾ ಕೆಲಸಗಳು ಆಶ್ಚರ್ಯ ರೀತಿಯಲ್ಲಿ ಆಗುತ್ತದೆ .ಒಂದು ವೇಳೆ ಮಲಗಿರುವವರ ತಲೆಯನ್ನು ಬೆಕ್ಕು ಸವರುತ್ತಿದ್ದರೆ , ಇಂತಹ ವ್ಯಕ್ತಿಗಳು ಸರ್ಕಾರಿ ಕೆಲಸದ ಒತ್ತಡದಲ್ಲಿ ಸಿಲುಕಿ ಕೊಳ್ಳುತ್ತಾರೆ.

ಒಂದು ವೇಳೆ ನೀವು ಎಲ್ಲಾದರೂ ಹೋಗುತ್ತಿದ್ದರೆ , ಬೆಕ್ಕು ನಿಮ್ಮ ಮುಂದೆ ತಿನ್ನುವ ವಸ್ತು ತೆಗೆದುಕೊಂಡು ಬಂದರೆ , ಮತ್ತು ಮಿಯಾವ್ ಅಂದರೆ , ಅದು ಅಶುಭವಾಗಿ ಇರುತ್ತದೆ . ನೀವು ಮನೆಗೆ ಹೋಗುವ ಸಮಯದಲ್ಲಿ ಬೆಕ್ಕಿನ ಮಿಯಾವ್ ಶಬ್ದ ಕೇಳಿದರೆ , ಅದು ಶುಭ ಎಂದು ತಿಳಿಯಲಾಗಿದೆ. ಒಂದು ವೇಳೆ ಯಾವುದಾದರು ಒಂದು ಬೆಕ್ಕು ಸಿಟ್ಟಿನಿಂದ ಮಲಗಿ ಕೊಂಡಿರುವುದನ್ನು ನೀವು ನೋಡಿದರೆ , ಆ ವ್ಯಕ್ತಿಗೆ ರೋಗ ಬರುವ ಸಾಧ್ಯತೆ ಇರುತ್ತದೆ . ಒಂದು ವೇಳೆ ಯಾವುದಾದರೂ ವ್ಯಕ್ತಿಗೆ ಬೆಕ್ಕು ತನ್ನ ಮರಿಗಳೊಡನೆ ಇರುವುದು ಕಂಡು ಬಂದರೆ , ಇದು ಆ ವ್ಯಕ್ತಿಗೆ ಶುಭ ಸಂಕೇತವಾಗಿ ಇರುತ್ತದೆ . ಮತ್ತು ಅವರ ಸ್ನೇಹಿತರನ್ನು ಭೇಟಿ ಮಾಡುತ್ತಾರೆ . ಧನ ಲಾಭವಾಗುತ್ತದೆ . ಒಂದು ವೇಳೆ ಬೆಕ್ಕು ಮಲಗಿ ಕೊಂಡಿರುವವರ ಕಾಲನ್ನು ನೆಕ್ಕಲು ಬಂದರೆ , ಆ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಾರೆ .ಹೀಗೆ ಬೆಕ್ಕುಗಳಿಂದ ಶುಭ ಮತ್ತು ಅಶುಭ ಎರಡೂ ಕೂಡ ಆಗುತ್ತದೆ ಎಂದು ಹೇಳಬಹುದು .

Leave a Comment