ನಾವು ಈ ಲೇಖನದಲ್ಲಿ ಕುಂಭ ರಾಶಿಗೆ ಪ್ರತಿ ಕ್ಷಣ ಕೂಡ ಹೇಗೆ ಮಹತ್ವದ್ದು ಆಗಿರುತ್ತದೆ. ಎಂಬುದರ ಬಗ್ಗೆ ತಿಳಿಯೋಣ . ಕುಂಭ ರಾಶಿಯವರಿಗೆ ಫೆಬ್ರವರಿ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ಇಲ್ಲಿ ತಿಳಿಯಲಾಗಿದೆ. ದಿನಕ್ಕಿಂತ ದಿನ ಸುಧಾರಿಸುತ್ತಾ ಹೋದರೆ, ಪ್ರಗತಿಯನ್ನು ಕಾಣಬಹುದು. ಒಟ್ಟಾರೆಯಾಗಿ ಬೆಳವಣಿಗೆಯನ್ನು ಕಾಣುತ್ತಾ ಹೋಗುವುದು . ಸಾಮಾನ್ಯವಾಗಿ ನಾವು ಗ್ರಹಿಸುವಂತ ಸಕಾರಾತ್ಮಕ ಕಲ್ಪನೆಯನ್ನು ಮಾಡಿಕೊಳ್ಳುವುದು . ಅಥವಾ ಕನಸು ಕಾಣುವುದು .
ಇದು ಕೆಲವರ ಜೀವನದಲ್ಲಿ ನಡೆಯುತ್ತದೆ . ಕೆಲವರಿಗೆ ಇದು ಸಾಧ್ಯವಾಗುವುದಿಲ್ಲ . ಸಮಯ ಚೆನ್ನಾಗಿಲ್ಲ ಅಂದರೆ , ಈ ತರಹದ ವಿಚಾರಗಳು ನಡೆಯುತ್ತಿರುತ್ತವೆ . ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುವ ಪರಿಸ್ಥಿತಿ ಕೆಲವರಿಗೆ ಬರುತ್ತದೆ . ಇವರಿಗೆ ಸಾಡೇಸಾತಿ ನಡೆಯುತ್ತಿದೆ . ಫೆಬ್ರವರಿ ತಿಂಗಳಲ್ಲಿ ಬದಲಾವಣೆಗಳು ಆಗುತ್ತದೆಯೇ ಎಂದು ತಿಳಿಯೋಣ . ಜೀವನದಲ್ಲಿ ಏನೇ ಕಷ್ಟಗಳು ಬಂದರೂ, ಅಥವಾ ಏರುಪೇರುಗಳು ಆದರೂ , ನಾವು ಕೈ ಬಿಡದೇ ಮುಂದೆ ಸಾಗುತ್ತಿರಬೇಕು. ಆಶಾ ಜೀವಿಗಳಾಗಿ ಇರಬೇಕು.
ಕೆಲವು ಘಟನೆಗಳು ನೀವು ಅಂದುಕೊಂಡ ರೀತಿ ನಡೆಯದೆ ಇರಬಹುದು. ನೀವು ಸಾಧನೆ ಮಾಡಲು ಸಾಧ್ಯವಾಗದೇ ಇರಬಹುದು . ಹೀಗಿದ್ದರೂ ಕೂಡ ನಾವು ಮುಂದುವರಿಯುತ್ತಾ ಹೋಗುತ್ತಿರಬೇಕು. ಒಳ್ಳೆಯ ವಿಚಾರವನ್ನು ಕಲ್ಪಿಸಿಕೊಳ್ಳುವುದು ಅಥವಾ ಹುಡುಕುವುದು . ನಾವು ಒಳ್ಳೆಯದನ್ನು ಹುಡುಕುವುದಕ್ಕೆ ಬಹಳ ಒಳ್ಳೆಯ ಬೆಳವಣಿಗೆ ಅಂತ ಹೇಳಬಹುದು . ಈ ಒಂದು ತಿಂಗಳಲ್ಲಿ ಅದು ಸಿಗುತ್ತದೆ ಎಂದು ಹೇಳಬಹುದು . ಒಂದು ಮಟ್ಟಕ್ಕೆ ಅನುಗ್ರಹ ಎಂದು ಹೇಳಬಹುದು .
ಸಮಾಧಾನ ನೆಮ್ಮದಿ ತರುವ ಬೆಳವಣಿಗೆ ಆಗುತ್ತದೆ . ಇದು ಯಾವ ತರಹ ಪ್ರಭಾವ ಬೀರುತ್ತದೆ ಯಾವ ರೀತಿಯ ಲಕ್ಷಣ ಇರುತ್ತದೆ. ಎಂದು ಹೇಳಬಹುದು. ಸಾಡೇಸಾತಿ ಮತ್ತು ಜೀವನದ ಘಟ್ಟ ಇವೆರಡೂ ಒಂದೇ ಸಲ ಬಂದು ನಿಲ್ಲುತ್ತದೆ . ಈಗಿನ ಪ್ರಸ್ತುತ ಪರಿಸ್ಥಿತಿಗೆ ಅನುಕೂಲವಾಗುವ ಸಲಹೆ ಯಾವುದು ಎಂದರೆ,
ಮೊದಲನೆಯದು ಆಶಾವಾದ ತರುವ ಒಂದು ಬೆಳವಣಿಗೆ . ಮತ್ತೊಂದು ಸಲಹೆ ಇವತ್ತಿನ ಅಥವಾ ಮುಂದಿನ ಜೀವನಕ್ಕೆ ರಾಶಿಯಲ್ಲಿ ಶನಿ ಇದ್ದರೆ, ಅದನ್ನು ಜನ್ಮ ಶನಿ ಎಂದು ಕರೆಯಲಾಗುತ್ತದೆ. ದ್ವಿತೀಯ ದಲ್ಲಿ ರಾಹು ಇದ್ದಾನೆ. ಇವೆರಡೂ ಗ್ರಹಗಳು ಒಂದು ಮಟ್ಟಿಗೆ ನಕಾರಾತ್ಮಕ ಶಕ್ತಿ ಅಂತಾನೇ ಹೇಳಬಹುದು .
ಆದರೆ ಈ ಒಂದು ಹಂತವನ್ನು ದಾಟಿ ಹೋಗಲೇ ಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿಕೊಂಡಿರುತ್ತಾರೆ. ಇವೆರಡೂ ಗ್ರಹಗಳ ಪ್ರಭಾವ ನಿಮ್ಮ ಮೇಲೆ ಬಹಳಷ್ಟು ಉಂಟಾಗುವ ಸಾಧ್ಯತೆ ಇರುತ್ತದೆ . ಹಣದ ಕೊರತೆ, ಹಣಕಾಸಿನ ಪರಿಸ್ಥಿತಿಯಲ್ಲಿ ಗೊಂದಲಗಳು ಉಂಟಾಗಬಹುದು. ನಿಮ್ಮ ಖಜಾನೆ ಮೇಲೆ ನೇರವಾಗಿ ದಾಳಿ ಮಾಡುವ ಘಟನೆ ನಡೆಯಬಹುದು . ಅನಾರೋಗ್ಯ , ಮೋಸಕ್ಕೆ ಒಳಗಾಗುವುದು , ನಿಮಗೆ ಸಂಬಂಧಪಟ್ಟ ವ್ಯಕ್ತಿ ಆಸ್ತಿಯಲ್ಲಿ ಪಾಲು ಕೊಡಲು ನಿರಾಕರಿಸಬಹುದು.
ನ್ಯಾಯಕ್ಕೆ ಅರ್ಹತೆ ಇದೆ. ಆದರೆ ನ್ಯಾಯ ಸಿಗುವುದಿಲ್ಲ. ಈ ತರಹದ ಹಲವಾರು ಸಾಧ್ಯತೆಗಳು ಸಾಡೇಸಾತಿ ಸಮಯದಲ್ಲಿ ಇರುತ್ತವೆ. ಹಣದ ಮುಗ್ಗಟ್ಟು, ಆರೋಗ್ಯದ ತೊಂದರೆ , ಏನೂ ಇಲ್ಲ ಅಂದರೂ ಉದ್ವೇಗ ಮಾಡಿಕೊಳ್ಳಲು ಸಾವಿರ ಕಾರಣಗಳು ಇರುತ್ತವೆ. ನಿಮ್ಮ ಸುತ್ತ ಮುತ್ತಲಿನವರು ಅದೇ ತರಹ ವರ್ತನೆ ಮಾಡುತ್ತಾರೆ. ಇವೆಲ್ಲವೂ ಸಾಮಾನ್ಯವಾಗಿ ಆಗುವಂತವುಗಳು . ಇದನ್ನೆಲ್ಲಾ ದಾಟಿ ಈಜ ಬೇಕು. ಇದ್ದು ಜಯಿಸಬೇಕು ಎನ್ನುವ
ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಬಹಳ ಅನಿವಾರ್ಯ .
ಭವಿಷ್ಯದ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳಬೇಡಿ. ಪ್ರಾಮುಖ್ಯತೆಯನ್ನು ಇವತ್ತಿನ ಜೀವನಕ್ಕೆ ನೀಡಿ . ಪ್ರಸ್ತುತ ಗೆಲ್ಲುವುದಕ್ಕೆ ಉಪಾಯ ಮಾಡಿ. ನಿಮಗೆ ಯಶಸ್ಸನ್ನು ತಂದು ಕೊಡುವ ಮೂರು ಗ್ರಹಗಳು ರವಿ , ಕುಜ , ಮತ್ತು ಬುಧ . ಮೊದಲು ವ್ಯಯ ಭಾವದಲ್ಲಿ ಇರುತ್ತದೆ. ಆಮೇಲೆ ನಿಮ್ಮ ರಾಶಿಗೆ ನೇರವಾಗಿ ಪ್ರವೇಶ ಮಾಡುತ್ತದೆ. ಅದರಲ್ಲಿ ಒಳ್ಳೆಯ ಸಂಗತಿ ಎಂದರೆ , ನಿಮ್ಮ ರಾಶಿಯಲ್ಲೇ ಉಂಟಾಗುವ ಬುಧಾಧಿತ್ಯ ಯೋಗ . ಈ ಗ್ರಹಗಳಿಂದ ತೊಂದರೆ ಉಂಟಾದರೂ, ಕೂಡಾ ಒಂದು ಮಟ್ಟಕ್ಕೆ ಧೈರ್ಯ, ಆತ್ಮ ವಿಶ್ವಾಸವನ್ನು ಈ ಯೋಗ ತಂದು ಕೊಡುತ್ತದೆ. ಈ ತಿಂಗಳಲ್ಲಿ ಖರ್ಚುಗಳು ಜಾಸ್ತಿ ಆಗುತ್ತವೆ.
ಸಮತೋಲನ ಮಾಡುವುದಕ್ಕೆ ಸ್ವಲ್ಪ ಕಷ್ಟ ಆಗುತ್ತದೆ. ತೃತೀಯದಲ್ಲಿ ಗುರು ಗ್ರಹ ಇದೆ. ಧೈರ್ಯ ಮತ್ತು ಪ್ರವೃತ್ತಿಗೆ ಯಾವುದರಲ್ಲೂ ಕಡಿಮೆ ಇರುವುದಿಲ್ಲ . ಕೆಲವು ವ್ಯಕ್ತಿಗಳು ಹೊಸ ಪ್ರಯತ್ನ ಮಾಡಬಹುದು. ಎಲ್ಲಾ ವಿಚಾರದಲ್ಲೂ ಯಾವುದು ಮೊದಲು ಅನ್ನುವಂತ ಒಂದು ಗೊಂದಲ ಉಂಟಾಗುತ್ತದೆ. ಕುಂಭ ರಾಶಿಯ ಜನರಿಗೆ ಈ ಸಮಯದಲ್ಲಿ ಇಂತಹ ಅನುಭವಗಳು ಬಹಳಷ್ಟು ಸಿಗುತ್ತದೆ. ಸಮಾಜ ನಿಮ್ಮ ಹತ್ತಿರ ನಿರೀಕ್ಷೆ ಮಾಡುತ್ತದೆ. ನೀವು ಯಾವುದೋ ಒಂದು ರೂಪದಲ್ಲಿ ಸಮಾಜಕ್ಕೆ ಕೊಡುಗೆ ಕೊಡುವುದಕ್ಕೆ ಪ್ರಯತ್ನ ಮಾಡಬೇಕು.
ನಿಮ್ಮ ಅರ್ಹತೆಗೆ ಬಿಟ್ಟಿದ್ದು, ನೀವು ಕೊಡುವುದನ್ನು ಕಲಿಯಬೇಕಾಗುತ್ತದೆ. ಆಗ ಸಮಾಜ ಅದನ್ನು ಸ್ವೀಕರಿಸುತ್ತದೆ. ಆಗ ಪ್ರಗತಿ ಶುರುವಾಗುತ್ತದೆ. ನಾವು ಮೊದಲು ಕೆಲಸ ಮಾಡಲು ಶುರು ಮಾಡಿದಾಗ, ಯಾವುದೇ ವ್ಯಕ್ತಿ , ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಾರದು. ಕೆಲಸಕ್ಕೆ ನಮ್ಮ ಕೈಯಿಂದ ಕೊಡಲು ಎಷ್ಟು ಸಾಧ್ಯ ಅಷ್ಟು ಕೊಡಬೇಕಾಗುತ್ತದೆ. ನಿಮಗೆ ಅನುಭವ ಆಗುತ್ತಿದ್ದಂತೆ , ಈ ಅನುಭವ ನಿಮ್ಮ ಪ್ರಗತಿಗೆ ಪೂರಕವಾಗುತ್ತದೆ. ನಿಮ್ಮ ಪ್ರಗತಿಗೆ ಭದ್ರವಾದ ಅಡಿಪಾಯ ಹಾಕಿ ಕೊಡುತ್ತದೆ. ನಮಗೆ ಅಗತ್ಯ ಜಾಸ್ತಿ ಇದ್ದಾಗ ,
.ನಾವೇ ಪ್ರಯತ್ನ ಮಾಡಬೇಕಾಗುತ್ತದೆ. ಎಲ್ಲಾ ವ್ಯಕ್ತಿಗಳ ಯಶಸ್ಸಿನ ರಹಸ್ಯ ಇದೇ ಆಗಿರುತ್ತದೆ. ಕೊಡುವುದಕ್ಕೆ ನಾವು ಪೂರ್ತಿಯಾಗಿ ತಯಾರು ಇರಬೇಕು .ಮತ್ತು ಕೇಳಿದ ತಕ್ಷಣ, ಸರಿಯಾದ ಸಮಯದಲ್ಲಿ ಕೊಡುವುದಕ್ಕೆ ತಯಾರು ಇರಬೇಕು. ಆ ಒಂದು ಮಟ್ಟಕ್ಕೆ ನಿಮ್ಮ ಆತ್ಮ ವಿಶ್ವಾಸವನ್ನು ಬೆಳಸಿಕೊಳ್ಳಬೇಕು . ಆಗ ಸಮಾಜ ಕೂಡ ಅದಕ್ಕೆ ತಕ್ಕ ಬೆಲೆ ಕೊಡುವುದಕ್ಕೆ ರೆಡಿ ಇರುತ್ತದೆ. ಆದರೆ ನಿಮ್ಮ ಬಗ್ಗೆ ವಿಶ್ವಾಸ ಬರುವುದಕ್ಕೆ ಸಮಯ ಬೇಕು. ಅಲ್ಲಿಯ ತನಕ ನೀವು ತಾಳ್ಮೆ ತೆಗೆದುಕೊಳ್ಳಬೇಕು .
ನಿಮಗೆ ಪ್ರೇರಣೆ ಅಥವಾ ಸ್ಫೂರ್ತಿಯನ್ನು ತುಂಬಲು ಒಂದು ಗ್ರಹ ಇದೆ. ಅದು ಶುಕ್ರ ಗ್ರಹ . ಈ ತಿಂಗಳಲ್ಲಿ ಈ ಗ್ರಹ ನಿಮಗೆ ತುಂಬಾ ರಕ್ಷಣೆ ಕೊಟ್ಟು ನಿಮ್ಮನ್ನು ಕಾಪಾಡುತ್ತದೆ. ಸ್ವಲ್ಪ ಮಟ್ಟಿಗೆ ಖುಷಿ ಮತ್ತು ಸಂತೋಷ ಕೂಡ ಉಂಟಾಗುತ್ತದೆ. ಆರೋಗ್ಯದ ಕಿರಿಕಿರಿ, ಹಣಕಾಸಿನ ಭಾದೆ , ಇದೆಲ್ಲಾ ಬಂದರೂ ಕೂಡ , ಅದನ್ನು ಎದುರಿಸುವ ಶಕ್ತಿ ನಿಮಗೆ ಸಿಗುತ್ತದೆ. ಮೊದಲನೆಯದಾಗಿ ರಕ್ಷಣೆ ಸಿಗುವಂತದ್ದು, ಒಂದು ಭರವಸೆ ಕೆಲವು ವ್ಯಕ್ತಿಗಳಿಂದ ಬರಬಹುದು. ಅಥವಾ ನಿಮ್ಮ ಮನಸ್ಸಿನಲ್ಲೇ ಒಂದು ನಂಬಿಕೆ ಮೂಡಬಹುದು. ಅಥವಾ ಯಾವುದೋ ಒಂದು ಮೂಲದಿಂದ ಹಣ ಸಂಪಾದನೆ ಆಗುವುದು, ಇದೆಲ್ಲಾ ಸೇರಿ ಒಂದು ಭದ್ರವಾದ ಅಡಿಪಾಯ ನಿಮ್ಮ ಮಟ್ಟಿಗೆ ಇದೆ. ವಿಶೇಷವಾಗಿ 11ನೇ ತಾರೀಖಿನ ನಂತರ ಧನಾಗಮನ ಮತ್ತು ಆಶಾವಾದ ಮೂಡುವ ಸಾಧ್ಯತೆ ಇರುತ್ತದೆ .