ನಿಮ್ಮ ಹೆಬ್ಬೆಟ್ಟಿನ ಆಕಾರದಿಂದ ನಿಮ್ಮ ಸ್ವಭಾವ ತಿಳಿಯಿರಿ

0

ನಾವು ಈ ಲೇಖನದಲ್ಲಿ ನಿಮ್ಮ ಹೆಬ್ಬೆಟ್ಟಿನ ಆಕಾರದಿಂದ ನಿಮ್ಮ ಸ್ವಭಾವ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ. ನಮ್ಮ ಹಿಂದೂ ಸಂಪ್ರದಾಯದಲ್ಲಿ ನಮ್ಮ ಹಸ್ತ ರೇಖೆಯ ಪ್ರಕಾರ , ಒಬ್ಬ ಮನುಷ್ಯನ ಸಾಕಷ್ಟು ವಿಚಾರವನ್ನು ಮತ್ತು ಇಡೀ ಜನ್ಮದ ಜಾತಕವನ್ನು ಕಂಡುಹಿಡಿಯಬಹುದು ಎಂದು ಹೇಳಲಾಗಿದೆ. ಹೆಬ್ಬೆಟ್ಟಿನ ಆಕಾರದ ಪ್ರಕಾರ ನಿಮ್ಮ ಒಂದು ಸ್ವಭಾವ ಹೇಗಿರುತ್ತದೆ. ಎಂಬುವುದನ್ನು ಇಲ್ಲಿ ತಿಳಿಸಲಾಗಿದೆ .
ಮೊದಲನೆಯದಾಗಿ ನಿಮ್ಮ ಕೈ ಮುಷ್ಟಿ ಮಾಡಿಕೊಂಡು , ಹೆಬ್ಬೆರಳನ್ನು ನೇರವಾಗಿ ನಿಲ್ಲಿಸಬೇಕು . ಹೆಬ್ಬೆಟ್ಟಿನ ಸಹಾಯದಿಂದ ಎಷ್ಟು ಸಾಧ್ಯವಾಗುತ್ತದೆ ಅಷ್ಟು ಹಿಂದೆ ತಳ್ಳುವ ಹಾಗೆ ಮಾಡಬೇಕು. ಇಲ್ಲಿ ಮೂರು ಆಕಾರದ ಹೆಬ್ಬೆರಳನ್ನು ತೋರಿಸಲಾಗಿದೆ. ಒಂದು ನೇರ , ಇನ್ನೊಂದು ಸ್ವಲ್ಪ ಹಿಂದೆ ಹೋಗಿರುವ ಹಾಗೆ, ಮತ್ತೊಂದು ಪೂರ್ತಿ ಹಿಂದೆ ಹೋದ ಹಾಗೆ, ಹೀಗೆ ಮೂರು ರೀತಿಯ ಆಕಾರಗಳನ್ನು ನೀಡಲಾಗಿದೆ.

ಮೊದಲನೆಯದಾಗಿ ಹೆಬ್ಬೆರಳು ನೇರವಾಗಿ ಇದ್ದರೆ , ನೀವು ಹಠಮಾರಿಗಳಾಗಿ ಇರುತ್ತೀರಿ . ಯಾವುದಾದರೂ ಒಂದು ಕೆಲಸ ಹಿಡಿದುಕೊಂಡರೆ , ಅದನ್ನು ಮಾಡಿ ಮುಗಿಸುವವರೆಗೂ ಬಿಡುವುದಿಲ್ಲ . ಅಂತಹ ವ್ಯಕ್ತಿತ್ವ ನಿಮ್ಮದಾಗಿರುತ್ತದೆ .ಇವರು ತಮ್ಮ ಸ್ವಂತ ಪರಿಶ್ರಮದಿಂದ ಏನಾದರೂ ಸಾಧನೆ ಮಾಡಲು ಮುಂದಾಗುತ್ತಾರೆ . ಬೇರೆಯವರ ಕೈ ಕೆಳಗಡೆ ಕೆಲಸ ಮಾಡಲು ಇವರು ಇಷ್ಟಪಡುವುದಿಲ್ಲ . ಇವರ ಹಠದ ಸ್ವಭಾವ ಇವರಿಗೆ ಜೀವನದಲ್ಲಿ ಕಷ್ಟಗಳನ್ನು ಕೊಡುತ್ತದೆ . ಇವರು ಕೆಲಸದಲ್ಲಿ. ಯಶಸ್ಸನ್ನು ಸಾಧಿಸಿದ ನಂತರ, ಇವರನ್ನು ಯಾರೂ ಹಿಡಿಯಲು ಸಾಧ್ಯವಿಲ್ಲ . ಈ ತರಹದ ವ್ಯಕ್ತಿತ್ವ ಇವರಲ್ಲಿ ಇರುತ್ತದೆ ಎಂದು ಹೇಳಬಹುದು .

ಇವರ ಸ್ವಭಾವ ವಿಭಿನ್ನವಾಗಿರುತ್ತದೆ ಎಂದು ಹೇಳಬಹುದು . ಇವರು ಅವಮಾನವನ್ನು ಸಹಿಸುವುದಿಲ್ಲ . ತಮ್ಮ ವೃತ್ತಿಯ ಬಗ್ಗೆ ಹೆಚ್ಚಾಗಿ ಯೋಚನೆ ಮಾಡುತ್ತಾರೆ. ತಮ್ಮ ಪ್ರೀತಿ ಪಾತ್ರರೊಂದಿಗೆ ಇವರು ಒಳ್ಳೆಯ ಸಂಬಂಧವನ್ನು ಹೊಂದಿರುತ್ತಾರೆ .ಪ್ರೀತಿ ಪಾತ್ರರೊಂದಿಗೆ ಭಾವೋದ್ರಿಕ್ತವಾಗಿ ಇರುತ್ತಾರೆ. ಇವರ ಮನಸ್ಸಿನಲ್ಲಿ ನಾನು , ನನ್ನದು ಎಂಬ ಭಾವನೆ ಇದ್ದೇ ಇರುತ್ತದೆ . ಇದನ್ನು ತಡೆಯಲು ಸಾಧ್ಯವಿಲ್ಲ ಏಕೆಂದರೆ ಇದು ನೈಸರ್ಗಿಕವಾದ ಸ್ವಭಾವ ಎಂದು ಹೇಳಬಹುದು . ಒಂದು ಸಭೆಯಲ್ಲಿ ಒಬ್ಬರಾಗಿರಬೇಕು ಎಂಬ ಆಸೆ ಇವರಲ್ಲಿ ಇರುವುದಿಲ್ಲ.

ಎರಡನೇಯದಾಗಿ ಹೆಬ್ಬೆರಳು ಸ್ವಲ್ಪ ಬಾಗಿರುತ್ತದೆ. ಈ ರೀತಿಯ ಬೆರಳು ಇರುವವರು ತುಂಬಾ ಮೃದು ಸ್ವಭಾವದವರು ಆಗಿರುತ್ತಾರೆ. ಇವರು ತುಂಬಾ ಖುಷಿ ಖುಷಿಯಿಂದ ಇರುವ ವ್ಯಕ್ತಿಗಳಾಗಿ ಇರುತ್ತಾರೆ . ಇವರಿಗೆ ಬೇರೆಯವರನ್ನು ನಗಿಸುವ ಗುಣ ಕೂಡ ಇರುತ್ತದೆ . ಇವರಿಗೆ ಬಾಲ್ಯದಿಂದಲೂ ಜೀವನದಲ್ಲಿ ಜವಾಬ್ದಾರಿಗಳು ಹೆಚ್ಚಾಗಿರುತ್ತದೆ . ಇಂತಹ ಜವಾಬ್ದಾರಿಯಿಂದ ಸಹಾಯವಾಗುತ್ತದೆ .

ಇವರು ಯಾವುದೇ ವಿಚಾರವನ್ನು ಮುಚ್ಚಿ ಇಡುವುದಿಲ್ಲ . ಅಂದರೆ ವಿಚಾರಗಳನ್ನು ನೇರವಾಗಿ ಹೇಳುತ್ತಾರೆ .ಏನೇ ಇದ್ದರೂ ಹೇಳುವ ವ್ಯಕ್ತಿತ್ವ ಇವರದು ಆಗಿರುತ್ತದೆ . ಇವರ ವೃತ್ತಿ ಜೀವನ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಬಹುದು . ಜನರು ಕೂಡ ಇವರಿಗೆ ತುಂಬಾ ಆಕರ್ಷಿತವಾಗುತ್ತಾರೆ . ನಗುಮುಖ ಇರುವುದರಿಂದ , ಇವರು ಸ್ನೇಹ ಜೀವಿಗಳು ಆಗಿರುತ್ತಾರೆ . ತುಂಬಾ ಜನರು ಇವರನ್ನು ಇಷ್ಟಪಡುತ್ತಾರೆ . ಇವರು ಜೀವನದಲ್ಲಿ ಅಪಾಯವನ್ನು ತಂದುಕೊಳ್ಳದ ಕಾರಣ ಇವರಿಗೆ ನಷ್ಟ ಆಗುವ ಸಾಧ್ಯತೆ ಇರುವುದಿಲ್ಲ .

ಮೂರನೆಯದಾಗಿ ಹೆಬ್ಬೆರಳು ತುಂಬಾ ಹಿಂದೆ ಬೆಂಡಾಗಿದ್ದರೆ , ಇಂತಹ ಜನರು ಕಲಾವಿದರು ಆಗಿರುತ್ತಾರೆ . ಇವರಿಗೆ ಕಲೆಯಲ್ಲಿ ಆಸಕ್ತಿ ಇಲ್ಲ ಅಂದರೂ ಕಲಾ ರಂಗದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ . ಇವರು ಕೂಡ ಮೃದು ಮನಸ್ಸಿನವರು ಆಗಿರುತ್ತಾರೆ. ಇವರು ಹಿಂದೆ ಮುಂದೆ ಒಂದೇ ಮಾತುಗಳನ್ನು ಆಡುತ್ತಾರೆ . ಈ ರೀತಿಯ ವ್ಯಕ್ತಿತ್ವ ಇವರದಾಗಿರುತ್ತದೆ . ಇವರು ಏನನ್ನು ಕೂಡ ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ . ನೇರವಾಗಿ ಹೇಳುತ್ತಾರೆ. ಈ ಕಾರಣದಿಂದ ಇವರಿಗೆ ವೈರಿಗಳು ತುಂಬಾ ಜನ ಇರುತ್ತಾರೆ . ಯಾರಾದರೂ ಕಷ್ಟದಲ್ಲಿದ್ದಾರೆ ಎಂದರೆ , ಇವರು ತುಂಬಾ ಭಾವನಾತ್ಮಕವಾಗಿ ವರ್ತಿಸುತ್ತಾರೆ .

ಬೇರೆಯವರಿಗೆ ಸಹಾಯ ಮಾಡಲು ಇವರು ಅಪಾಯ ತಂದುಕೊಳ್ಳಲು ತಯಾರಿರುತ್ತಾರೆ . ಇವರು ಭಾವನಾತ್ಮಕವಾಗಿ ವರ್ತಿಸುವುದರಿಂದ , ಜನರು ಇವರಿಗೆ ಮೋಸ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ . ಇವರು ತಮ್ಮ ಜೀವನ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳುವ ವ್ಯಕ್ತಿ ಆಗಿರುತ್ತಾರೆ . ಇವರು ಯಾವುದೇ ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕು ಅಂದರೆ , ತುಂಬಾ ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಾರೆ . ಒಂದು ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಗುಣ ಇರುವುದರಿಂದ , ಇವರು ತುಂಬಾ ಯಶಸ್ಸನ್ನು ಪಡೆಯುತ್ತಾರೆ . ಇವರಿಗೆ ಕೋಪ ಬರುವುದು ಬಹಳ ಕಡಿಮೆ . ಕೋಪ ಏನಾದರೂ ಬಂದರೆ , ಸಂಬಂಧಗಳು ಹಾಳಾಗುವ ರೀತಿಯಲ್ಲಿ ಕೋಪ ಬರುತ್ತದೆ . ಈ ಕೋಪದ ಕಾರಣದಿಂದ ಇವರು ಸಂಬಂಧವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ .

Leave A Reply

Your email address will not be published.