ಮಗ-ಸೊಸೆ

ಮಗ ಸೊಸೆ ಇಬ್ಬರು ಅವರ ಬೆಡ್ರೂಮ್ ನಲ್ಲಿ ಕುತ್ಕೊಂಡು ಮಾತಾಡ್ತಾ ಇದ್ರು ಅವರ ಬೆಡ್ರೂಮ್ ಬಾಗಿಲು ತೆಗೆದು ಬೆಡ್ರೂಮ್ ಬಾಗಿಲು ತೆಗೆದು ಇರುವ ಕಾರಣಕ್ಕೆ, ಅವರ ಶಬ್ಧ ಹೊರಗಡೆ ರೂಮಲ್ಲಿ ಕೂತಿದ್ದ ಅಮ್ಮನಿಗೆ ಕೇಳುತ್ತದೆ. ತನ್ನ ಮಗನ ಕೆಲಸದ ಕಾರಣಕ್ಕೆ ನನ್ನ ಅಮ್ಮನ ನೋಡಿಕೊಳ್ಳುವುದಕ್ಕೆ ಕಷ್ಟ ಆಗುತ್ತೆ ಅಂತ ಹೆಂಡತಿ ಹತ್ತಿರ ಹೇಳುತ್ತಾನೆ. ಅದರಿಂದ ಅವರನ್ನು ವೃದ್ಧಾಶ್ರಮಕ್ಕೆ ಕರ್ಕೋಂಡು ಹೋಗಿ ಬಿಡೋಣ ಎಂದು ಹೇಳುವನು. ಆ ಮಾತನ್ನು ಕೇಳಿಸಿಕೊಂಡ ತಾಯಿಯ ಕಣ್ಣಲ್ಲಿ ನೀರು ಬರುತ್ತದೆ.

ಆವಾಗ ಹೆಂಡತಿ ಗಂಡನ ಹತ್ತಿರ ಹೇಳುತ್ತಾಳೆ. ದುಡಿದು ದುಡ್ಡು ಮಾಡೋದು ಜೀವನಪೂರ್ತಿ ಇದ್ದೇ ಇದೆ ಆದರೇ ತಾಯಿ ಆಶೀರ್ವಾದ ಎಷ್ಟು ಸಿಕ್ಕರೂ ಅದು ಕಡಿಮೆನೇ ಅತ್ತೆಗೆ ಮಗ ಸೊಸೆಯೊಟ್ಟಿಗೆ ಇರಬೇಕು ಅಂತ ಆಸೆ ಇರುತ್ತದೆ. ವೃದ್ದಾಶ್ರಮದಲ್ಲಿ ಇರೋದಕ್ಕೆ ಖಂಡಿತ ಇಷ್ಟಪಡಲ್ಲ ನಮ್ಮ ಪ್ರೀತಿ ಮತ್ತು ಬೆಂಬಲ ಮಾತ್ರ ಅತ್ತೆ ಯಾವಾಗಲೂ ಬಯಸುತ್ತಾರೆ.

ನೀವು ಅವರನ್ನು ನೋಡುತ್ತಿರೋ ಬಿಡುತ್ತಿರೋ ನನಗೆ ಗೊತ್ತಿಲ್ಲ ಆದರೇ ನಾನು ಮಕ್ಕಳಿಗೆ ಟ್ಯೂಷನ್ ಆದ್ರೂ ಹೇಳಿಕೊಟ್ಟು ಅದರಿಂದ ಬರುವ ದುಡ್ಡಿನಿಂದ ನನ್ನ ಅತ್ತೆಯನ್ನು ಸಾಕುತ್ತೇನೆ ನಿಮಗೆ ಈ ರೀತಿ ಮಾತಾಡೋದಕ್ಕೆ ಹೇಗೆ ಮನಸ್ಸು ಬರುತ್ತದೆ. ಚಿಕ್ಕವರಿದ್ದಾಗ ನಿಮ್ಮನ್ನ ಎಷ್ಟು ಕಷ್ಟಪಟ್ಟು ಸಾಕಿದ್ದಾರೆ ಅಂತ ಬೇರೆಯವರ ಮನೆ ಮುಸರೆ ತೊಳೆದು ಕಷ್ಟಪಟ್ಟು ತಂದೆ ಇಲ್ಲದೆ ಓದಿಸಿ ಬೆಳೆಸಿದ್ದಾರೆ.

ನಿಮಗೆ ಆ ರೀತಿ ಆಲೋಚನೆ ಮಾಡೋದಕ್ಕೆ ಸಾಧ್ಯನಾ ಸ್ವಲ್ಪನಾದ್ರೂ ನಾಚಿಕೆ ಆಗುತ್ತಾ ಇಲ್ವಾ ಈ ರೀತಿ ಮಾತಾಡೋದಕ್ಕೆ ನೀವ್ ಏನು ಮಾಡ್ತಿರೋ ನನಗೆ ಗೊತ್ತಿಲ್ಲ ಆದ್ರೆ ನನ್ನ ಅತ್ತೆ ಜೀವನ ಪೂರ್ತಿ ನಾನು ನೋಡಿಕೊಳ್ಳುತ್ತೇನೆ ಖಂಡಿತ ವೃದ್ಧಾಶ್ರಮಕ್ಕೆ ಬಿಡುವುದಕ್ಕೆ ಸಾಧ್ಯವೇ ಇಲ್ಲ. ನೀವು ಏನು ಬೇಕಾದರೂ ಮಾಡಿಕೊಳ್ಳಿ. ಸೊಸೆಯ ಮಾತನ್ನು ಕೇಳಿ ಅತ್ತೆಯ ಕಣ್ಣಲ್ಲಿ ನೀರು ಸುರಿತ್ತಾ ಇರುತ್ತದೆ.

ತಾಯಿ ಅಳುತ್ತಾ ಅಳುತ್ತಾ ದೇವರ ಕೋಣೆಗೆ ಹೋಗಿ ದೇವರ ಹತ್ತಿರ ಕೈ ಮುಗಿದು ಹೇಳುತ್ತಾಳೆ. ದೇವರೇ ನನಗೆ ನೀನು ಮಗಳನ್ನು ಕೊಡಲಿಲ್ಲ ಆದರೇ ನನ್ನ ಸೊಸೆ ರೂಪದಲ್ಲಿ ಮಗಳನ್ನು ಕೊಟ್ಟಿದ್ದೀಯಾ ಅಂತ ಈಗ ಗೊತ್ತಾಯಿತು. ನಾನು ನಿನ್ನ ಹತ್ತಿರ ಎಷ್ಟು ಸಲ ಬೇಡಿಕೊಂಡಿದ್ದೆ ಒಂದು ಮಗಳ ಕೊಡು ಅಂತ ನೀನು ಆವಾಗ ಕೊಡದೆ ಇರುವ ಕಾರಣ ಈಗ ಗೊತ್ತಾಯ್ತು ದೇವರೇ ಚಿನ್ನದಂತ ಗುಣ ಇರುವ ಮಗಳನ್ನು ಕೊಟ್ಟದ್ದಕ್ಕೆ ಕೋಟಿ ಕೋಟಿ ನಮನ.

Leave a Comment