ಈ ದಿನಾಂಕದಲ್ಲಿ ಹುಟ್ಟಿದ್ರೆ ಲವ್ ಮ್ಯಾರೇಜ್ ಗ್ಯಾರಂಟಿ

ಸ್ನೇಹಿತರೇ ನಿಮ್ಮ ಜನ್ಮ ದಿನಾಂಕದ ಮೇಲೆ ತಿಳಿಯುತ್ತದೆ ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಎಂದು ತಿಳಿಯುತ್ತದೆ. ಜನ್ಮ ದಿನಾಂಕ ಗೊತ್ತಿದ್ದರೇ ಸಾಕು ಅದರ ಮೇಲೆ ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಆಗುತ್ತದಾ ಎಂದು ತಿಳಿದುಕೊಳ್ಳಬಹುದು. ಇಬ್ಬರು ವ್ಯಕ್ತಿಗಳನ್ನ ಜೀವನ ಪೂರ್ತಿ ಬಂಧನಕ್ಕೆ ಒಳಪಡಿಸುವ ವಿವಾಹವು ಅತ್ಯಂತ ಪವಿತ್ರ ಬಂಧನವಾಗಿದೆ.

ಗಂಡು ಮತ್ತು ಹೆಣ್ಣು ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಜೀವನಪೂರ್ತಿ ಸುಖವಾಗಿ ಬಾಳುತ್ತಾರ ಎಂದು ತಿಳಿಯುವುದಕ್ಕೆ ಜಾತಕ ನೋಡಿ ಹೊಂದಾಣಿಕೆಯಾದರೇ ಮದುವೆ ಮಾಡುವುದು ನಮ್ಮ ಸಂಪ್ರದಾಯ. ಜನ್ಮ ದಿನಾಂಕ ಮದುವೆ ನಿರ್ಧಾರ ಮಾಡುವ ಸಂದರ್ಭದಲ್ಲಿ ತುಂಬಾ ಮಹತ್ತ್ವವಾದ ಪಾತ್ರವನ್ನು ನಿರ್ವಹಿಸುತ್ತದೆ. ಇವತ್ತಿನ ಲೇಖನದಲ್ಲಿ ಯಾವ ದಿನ ಹುಟ್ಟಿದರೇ ಲವ್ ಮ್ಯಾರೇಜ್ ಪಕ್ಕಾ? ಎಂಬುದನ್ನು ತಿಳಿಸಿಕೊಡುತ್ತೇವೆ.

ನಿಮ್ಮ ಹುಟ್ಟಿದ ದಿನಾಂಕ 1,15,24 ಇದ್ದರೇ ನಿಮ್ಮ ಸಂಖ್ಯೆ 6 ಆಗುತ್ತದೆ. ನಿಮ್ಮ ಜನ್ಮ ದಿನಾಂಕ 1,11,20,29 ಆಗಿದ್ದರೇ ನಿಮ್ಮ ಸಂಖ್ಯೆ 2 ಆಗುತ್ತದೆ. ನಿಮ್ಮ ಹುಟ್ಟಿದ ದಿನಾಂಕದಿಂದ ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಎಂದು ತಿಳಿಸುತ್ತೇವೆ. 1ನೇ ಸಂಖ್ಯೆ ಸೂರ್ಯನನ್ನು ಪ್ರತಿನಿಧಿಸುತ್ತದೆ. ಇವರಲ್ಲಿ ನಾಯಕತ್ತ್ವದ ಗುಣವಿರುತ್ತದೆ.

ಇವರು ಬೇರೆಯವರ ಜೊತೆ ಯಾವುದೇ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಎಲ್ಲಾ ವಿಷಯಗಳು ಹೀಗೆ ಆಗಬೇಕು, ಇದೇ ರೀತಿ ನಡೆಯಬೇಕೆಂದು ಬಯಸುತ್ತಾರೆ. ಹಾಗಾಗಿ ಪ್ರೀತಿಯನ್ನ ವ್ಯಕ್ತಪಡಿಸುವುದು ತುಸು ಕಷ್ಟವಾಗುತ್ತದೆ. ಇವರು ನಾಚಿಕೆ ಸ್ವಭಾವದವರು ಆಗಿರುತ್ತಾರೆ. ಇವರು ಪ್ರೀತಿಯನ್ನು ವ್ಯಕ್ತಪಡಿಸಲು ತುಂಬಾ ಹಿಂಜರಿಯುತ್ತಾರೆ.

ಸಂಖ್ಯೆ 2 ಅನ್ನು ಚಂದ್ರ ಎಂದು ಹೇಳಲಾಗುತ್ತದೆ. ಇವರು ಮಹತ್ತ್ವಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ತಲೆಯಿಂದ ಯೋಚನೆ ಮಾಡುವುದಕ್ಕಿಂತ ಹೆಚ್ಚಿಗೆ ಮನಸ್ಸಿನಿಂದ ಯೋಚಿಸುತ್ತಾರೆ. ಇವರು ತುಂಬಾ ಭಾವನಾತ್ಮಕ ಜೀವಿಗಳು. ಇವರಿಗೆ ಪ್ರೀತಿ ನಿಧಾನವಾಗಿ ಉಂಟಾಗುತ್ತದೆ. ಇವರು ತಮ್ಮ ಪ್ರೀತಿಯನ್ನು ಗಂಭೀರವಾಗಿ ತೆಗೆದುಕೊಂಡರೇ ಲವ್ ಮ್ಯಾರೇಜ್ ಖಂಡಿತವಾಗಿ ಆಗುತ್ತದೆ.

ನಿಮ್ಮ ಹುಟ್ಟಿದ ದಿನಾಂಕ 3,12,21,30 ಇದ್ದರೇ ನಿಮ್ಮ ಸಂಖ್ಯೆ 3 ಆಗುತ್ತದೆ. ಗುರು ಈ ಸಂಖ್ಯೆಯ ಅಧಿಪತಿ. ಈ ಸಂಖ್ಯೆಯವರು ತುಂಬಾ ಪ್ರಾಕ್ಟಿಕಲ್ ಆಗಿರುತ್ತಾರೆ. ಇವರು ಲವ್ ಮ್ಯಾರೇಜ್ ನಲ್ಲಿ ಹೆಚ್ಚು ಸಫಲರಾಗುತ್ತಾರೆ. ಇವರು ಪ್ರೀತಿಯಲ್ಲಿ ಬಿದ್ದರೇ ಸ್ವಲ್ಪ ಸಹಾಯದ ಅವಶ್ಯಕತೆ ಇರುತ್ತದೆ. ಇವರು ತಮ್ಮ ಪ್ರೀತಿಯನ್ನು ಮದುವೆವರೆಗೂ ತೆಗೆದುಕೊಂಡು ಹೋಗುತ್ತಾರೆ.

ಇವರ ಮ್ಯಾರೇಜ್ ಲೈಫ್ ಕೂಡ ಯಶಸ್ವಿಯಾಗಿರುತ್ತದೆ.ಹುಟ್ಟಿದ ದಿನಾಂಕ 1,13,22,31 ಆಗಿದ್ದರೆ ಇವರ ಸಂಖ್ಯೆ 4 ಆಗಿರುತ್ತದೆ. ಸಂಖ್ಯೆ 4ರ ಅಧಿಪತಿ ರಾಹು. ಇವರು ಒಬ್ಬರಿಗಿಂತ ಹೆಚ್ಚು ಜನರನ್ನು ಪ್ರೀತಿ ಮಾಡುತ್ತಾರೆ. ಇವರು ಪ್ರೇಮವಿವಾಹದ ಬಗ್ಗೆ ಗಂಭೀರವಾಗಿ ಯೋಚನೆ ಮಾಡುವುದಿಲ್ಲ. ಇವರು ತಮ್ಮ ಸ್ವಭಾವದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಉತ್ತಮ ಪ್ರೇಮಿಯಾಗಬಹುದು.

ಹುಟ್ಟಿದ ದಿನಾಂಕ 5,14,23 ಆಗಿದ್ದರೇ ಇವರ ಸಂಖ್ಯೆ 5 ಆಗಿರುತ್ತದೆ. ಸಂಖ್ಯೆ 5ರ ಅಧಿಪತಿ ಬುಧ. ಇವರಿಗೆ ಪ್ರೇಮವಿವಾಹಕ್ಕಿಂತ ಅರೇಂಜ್ ಮ್ಯಾರೇಜ್ ಹೆಚ್ಚು ಇಷ್ಟವಾಗಿರುತ್ತದೆ. ಹಾಗಾಗಿ ಮನೆಯಲ್ಲಿ ಹಿರಿಯರು ನಿಶ್ಚಯಿಸಿದವರನ್ನೇ ಮದುವೆಯಾಗುತ್ತಾರೆ. ಒಂದು ವೇಳೆ ಪ್ರೇಮವಿವಾಹವಾಗುವ ಪ್ರಸಂಗ ಬಂದರೂ ಇವರು ಮನೆಯವರ ಒಪ್ಪಿಗೆಯನ್ನು ಪಡೆದೇ ಮದುವೆಯಾಗುತ್ತಾರೆ.

ಹುಟ್ಟಿದ ದಿನಾಂಕ 6,15,25 ಆಗಿದ್ದರೇ ಇವರ ಸಂಖ್ಯೆ 6 ಆಗಿರುತ್ತದೆ. ಸಂಖ್ಯೆ 6 ರ ಅಧಿಪತಿ ಶುಕ್ರ. ಇವರು ಪ್ರೇಮವಿವಾಹವಾಗುತ್ತಾರೆ. ಇವರು ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಹಲವು ಪ್ರೇಮಿಗಳನ್ನು ಹೊಂದಿರುವಂತಹವರು, ಇದರಿಂದ ಸೂಕ್ತ ಸಂಗಾತಿಯನ್ನು ಕಳೆದುಕೊಳ್ಳುವ ಸಂದರ್ಭ ಬರುತ್ತದೆ. ಈ ಸಂಖ್ಯೆಯಲ್ಲಿ ಜನಿಸಿದವರಲ್ಲಿ ಶೇ 80ರಷ್ಟು ಜನರು ಪ್ರೇಮವಿವಾಹವಾಗುತ್ತಾರೆ.

ಹುಟ್ಟಿದ ದಿನಾಂಕ 7,15,25 ಆಗಿದ್ದರೇ ಇವರ ಸಂಖ್ಯೆ 7 ಆಗುತ್ತದೆ. ಸಂಖ್ಯೆ 7 ರ ಅಧಿಪತಿ ಕೇತು ಎಂದು ಹೇಳಲಾಗುತ್ತದೆ. ಇವರದು ಸಂಕೋಚದ ಸ್ವಭಾವವಾಗಿರುತ್ತದೆ. ಇವರು ಹಗಲುಗನಸು ಕಾಣುವುದು ಹೆಚ್ಚು. ಇವರು ತಮ್ಮ ಸಂಗಾತಿಗಳಿಗೆ ತುಂಬಾ ನಂಬಿಕಸ್ಥರಾಗಿರುತ್ತಾರೆ. ಇವರು ತಮ್ಮ ಹಂತಸ್ತಿಗೆ ತಕ್ಕನಾಗಿ ಪ್ರೇಮವಿವಾಹವಾಗಲು ಬಯಸುತ್ತಾರೆ. ಹುಟ್ಟಿದ ದಿನಾಂಕ 8,17,26 ಆಗಿದ್ದರೇ ಇವರ ಸಂಖ್ಯೆ 8 ಆಗುತ್ತದೆ.

ಸಂಖ್ಯೆ 8ರ ಅಧಿಪತಿ ಶನಿದೇವ. ಈ ಸಂಖ್ಯೆಯಲ್ಲಿ ಜನಿಸಿದವರು ಪ್ರೇಮವಿವಾಹವಾಗುವುದು ಕಡಿಮೆಯಾಗಿರುತ್ತದೆ. ಏಕೆಂದರೆ ಇವರು ತುಂಬಾ ಭಾವನಾತ್ಮಕ ಜೀವಿಗಳು. ಪ್ರೀತಿಯಲ್ಲಿ ಬೀಳಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ. ಆದರೇ ಒಂದು ವೇಳೆ ಪ್ರೀತಿ ಮಾಡಿದರೇ ಕೊನೆಯವರೆವಿಗೂ ತಮ್ಮ ಪ್ರೀತಿಯನ್ನು ಕಾಪಾಡಿಕೊಳ್ಳುತ್ತಾರೆ.

ಹುಟ್ಟಿದ ದಿನಾಂಕ 9,18,27 ಆಗಿದ್ದರೇ ಇವರ ಸಂಖ್ಯೆ 9 ಆಗುತ್ತದೆ. ಸಂಖ್ಯೆ 9ರ ಅಧಿಪತಿ ಮಂಗಳ. ಈ ಸಂಖ್ಯೆಯಲ್ಲಿ ಜನಿಸಿದವರು ತನ್ನ ಹೆತ್ತವರು ಮತ್ತು ಕುಟುಂಬಕ್ಕೆ ಹೆಚ್ಚು ಅಟ್ಯಾಚ್ ಆಗಿರುತ್ತಾರೆ. ಇವರು ಯಾವುದೇ ರೀತಿಯ ವಿವಾದಕ್ಕೆ ಬೀಳುವುದಿಲ್ಲ. ಲವ್ ಬಗ್ಗೆ ಸ್ವಲ್ಪ ಉದಾಸೀನತೆಯನ್ನು ತೋರಿಸುತ್ತಾರೆ. ಮನಸ್ಸಿನಲ್ಲಿ ಆಸೆ ಇದ್ದರೂ ಭಯಪಡುತ್ತಾರೆ. ಹಾಗಾಗಿ ಲವ್ ಮ್ಯಾರೇಜ್ ಬಗ್ಗೆ ಈ ಸಂಖ್ಯೆಯಲ್ಲಿ ಜನಿಸಿದವರು ದೂರವಿರುತ್ತಾರೆ.

Leave a Comment