ಮಕರ ರಾಶಿಯವರ ಯುಗಾದಿಯ ವರ್ಷ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ

0

ನಾವು ಈ ಲೇಖನದಲ್ಲಿ ಮಕರ ರಾಶಿಯವರ ಯುಗಾದಿಯ ವರ್ಷ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ. ಮತ್ತು ಯಾವ ಮೂರು ವಿಷಯಗಳಲ್ಲಿ ಮಕರ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಸಹ ತಿಳಿದುಕೊಳ್ಳೋಣ. ಮಕರ ರಾಶಿಯವರಿಗೆ , ಈ ತಿಂಗಳಿನಲ್ಲಿ ಗುರುವಿನಿಂದ ತುಂಬಾ ಉತ್ತಮವಾದ ಫಲಗಳು ಸಿಗುತ್ತದೆ. ಗುರುವಿನ ಪ್ರಭಾವ ಗುರುವಿನ ಅನುಗ್ರಹ ನಿಮಗೆ ಲಭಿಸುತ್ತದೆ. ಪಂಚಮ ಗುರುವಾದ್ದರಿಂದ ನಿಮಗೆ ಉತ್ತಮ ಫಲಗಳು ದೊರೆಯಲಿದೆ.

ಗುರು ಬಲಾಢ್ಯನಾಗಿರುವುದರಿಂದ ನಿಮ್ಮ ಮನೆಯಲ್ಲಿ ಬಹಳಷ್ಟು ನೆಮ್ಮದಿಯ ವಾತಾವರಣ ಮಾನಸಿಕ ಶಾಂತಿ ನೆಮ್ಮದಿ ದೊರೆಯುತ್ತದೆ .ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ. ಎಂತಹ ಸಮಸ್ಯೆಗಳಿದ್ದರೂ ದೈಹಿಕವಾಗಿ ಸಾಮರ್ಥ್ಯವನ್ನು ಹೊಂದಿರುತ್ತೀರಾ . ಜೊತೆಗೆ ನಿಮ್ಮಲ್ಲಿ ಚೈತನ್ಯವಿರುತ್ತದೆ . ಏನಾದರೂ ಸಾಧಿಸಬೇಕು ಎಂಬ ಛಲವಿರುತ್ತದೆ. ಆತ್ಮವಿಶ್ವಾಸ ಹೆಚ್ಚಿರುತ್ತದೆ .ಒಳ್ಳೆಯ ಜನರೊಡನೆ ಪ್ರೀತಿ ವಿಶ್ವಾಸದಿಂದ ಮತ್ತು ಹೊಸ ವ್ಯಕ್ತಿಗಳ ಪರಿಚಯದಿಂದ ಸಂತೋಷವನ್ನು ತಂದುಕೊಡುತ್ತದೆ.

ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ಪೂಜ್ಯರ ಹಾಗೂ ಸಾಧು-ಸಂತರ ಪುಣ್ಯಕ್ಷೇತ್ರ ದರ್ಶನವಾಗುತ್ತದೆ. ನೂತನ ವಾಹನಗಳನ್ನು ಖರೀದಿಸುವಿರಿ. ಬೆಲೆಬಾಳುವಂತಹ ಆಭರಣಗಳನ್ನು ಖರೀದಿಸುವ ಸಾಧ್ಯತೆಯೂ ಹೆಚ್ಚಿದೆ. ಪರೋಪಕಾರಗಳಲ್ಲಿ ಮನಸ್ಸಿರುತ್ತದೆ .ಸಾರ್ವಜನಿಕ ವಲಯಗಳಲ್ಲಿಯೂ ಸಹ ಬೇರೆ ಜನಗಳ ಪ್ರಭಾವದಿಂದ ನಿಮಗೆ ಅನುಕೂಲತೆಗಳು ದೊರೆಯುತ್ತದೆ. ಸಮಾಜದಲ್ಲಿ ಒಳ್ಳೆಯ ಗೌರವ ಪದವಿಗಳು , ನಿಮಗೆ ಸಿಗುತ್ತದೆ. ಭೂಮಿಯಿಂದ ಉತ್ತಮವಾಗಿರುವಂತಹ ಧನಪ್ರಾಪ್ತಿ ಇದೆ .

ಹೊಲ ಮನೆ ಜಮೀನು, ದುರಸ್ತಿ ಕಾರ್ಯಗಳು ನಡೆಯುವಂತಹ ಸಾಧ್ಯತೆ ಇದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ತಮವಾದ ಧನಪ್ರಾಪ್ತಿ ಲಭಿಸುತ್ತದೆ. ಮತ್ತು ಶನಿದೇವರು ನಿಮಗೆ ವರ್ಷ ಆರಂಭದಿಂದ, ವರ್ಷದ ಅಂತ್ಯದವರೆಗೆ ಎರಡನೆಯವರಾಗಿರುತ್ತಾರೆ. ಸಾಧಾರಣ ಫಲವನ್ನು ನೀಡುತ್ತಾರೆ. ಶನಿಪ್ರಭಾವದಿಂದ ಕೆಲವೊಂದು ಎಚ್ಚರಿಕೆಗಳನ್ನು ನೀವು ಅನುಸರಿಸಬೇಕಾಗುತ್ತದೆ. ಕೆಲಸ ಕಾರ್ಯಗಳಲ್ಲಿ ನೀವೊಂದು ಕೊಂಡಂತಹ ಕೆಲಸಗಳಲ್ಲಿ ಜಯ ನಿಮ್ಮದಾಗುತ್ತದೆ .ಆದರೆ ಯಾವ ಕೆಲಸವನ್ನು ನಾವು ಮಾಡುತಿದ್ದೇವೆ, ನಮ್ಮ ಹಣಕಾಸಿನ ಪರಿಸ್ಥಿತಿ ಏನು ಎಂಬುದನ್ನು ವಿಚಾರದಲ್ಲಿ ಇಟ್ಟುಕೊಂಡು ನೀವು ಮುಂದುವರಿಯಬೇಕಾಗುತ್ತದೆ.

ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ .ಕೋರ್ಟು ಕಚೇರಿ ಅಂತಹ ವಿಷಯಗಳಲ್ಲಿ ಬಹಳ ಎಚ್ಚರಿಕೆ ಇರಬೇಕು. ಎಣ್ಣೆಕಾಳುಗಳ ವ್ಯಾಪಾರ ಮಾಡುವವರು ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಉದ್ಯೋಗ ವ್ಯವಹಾರಗಳಲ್ಲಿ ಬೇರೆಯವರನ್ನು ನಂಬಿಕೊಂಡು ನೀವು ಬಂಡವಾಳವನ್ನು ಹೂಡಬೇಡಿ. ಸಾಲ ಕೊಡುವುದನ್ನು, ಮತ್ತು ಸಾಲ ತೆಗೆದುಕೊಳ್ಳುವಾಗ , ಗಮನದಲ್ಲಿಟ್ಟುಕೊಂಡು ವ್ಯವಹರಿಸಿ. ಕೆಲಸದ ಸಾಧನೆಗಳಿಗಾಗಿ ನೀವು ಬೇರೆಯವರ ಮನೆಯ ಬಾಗಿಲಿಗೆ ತಿರುಗಾಡಬೇಕಾಗುತ್ತದೆ.

ಮೇಲಧಿಕಾರಿಗಳ ಭೇಟಿಗಾಗಿ ನೀವು ಪ್ರಯಾಣ ಮಾಡಬೇಕಾಗುತ್ತದೆ. ಮನಸ್ಸನ್ನು ಚಂಚಲವಾಗಲು ಬಿಡಬೇಡಿ .ನಿಮ್ಮ ನಿರ್ಧಾರಗಳಿಗೆ ಬದ್ಧರಾಗಿರಿ. ವಿರುದ್ಧ ಲಿಂಗದವರ ಜೊತೆ ಎಚ್ಚರಿಕೆಯನ್ನು ವಹಿಸಿ. ಅಂದರೆ ಸ್ತ್ರೀಯರಾಗಿದ್ದರೆ, ಪುರುಷರ ಜೊತೆ ಪುರುಷರಾಗಿದ್ದರೆ ,ಸ್ತ್ರೀಯರ ಜೊತೆ ಎಚ್ಚರವಾಗಿರಬೇಕು .ಮನಸ್ಸಿನಲ್ಲಿ ಏನೇ ಆಲೋಚನೆಗಳು ಆಕಾಂಕ್ಷೆಗಳು ಇದ್ದರೂ, ಹತೋಟಿಯಲ್ಲಿಡುವ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಕೋರ್ಟು ಕಚೇರಿಯ ವ್ಯಾಜ್ಯಗಳಲ್ಲಿ ಬುದ್ಧಿವಂತಿಕೆಯನ್ನು ವಹಿಸಬೇಕಾಗುತ್ತದೆ.

ದುಂದು ವೆಚ್ಚಕ್ಕೆ ಕಡಿವಾಣವನ್ನು ಹಾಕಿ. ಹಣಕಾಸಿನ ಬಗ್ಗೆ ಹಿಡಿತವನ್ನು ಸಾಧಿಸಿ. ಶನಿ ಮಹಾತ್ಮನ ಪ್ರಭಾವದಿಂದ ಹಿತೈಷಿಗಳಿಂದ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಬೇರೆಯವರನ್ನು ಸುಲಭವಾಗಿ ನಂಬಬೇಡಿ. ನಿಮ್ಮ ಸಕಲ ಕಾರ್ಯಗಳಲ್ಲಿಯೂ ಎಚ್ಚರಿಕೆ ವಹಿಸಿ. ವಿಶೇಷವಾಗಿ ನೌಕರಿದಾರರಿಗೆ ತುಂಬಾ ಪ್ರಗತಿಯ ಯೋಗವು ಕಂಡುಬರುತ್ತದೆ. ಗುರು ಬಲಾಡ್ಯನಾಗಿರುವುದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ವೇಗವನ್ನು ಪಡೆದುಕೊಳ್ಳುತ್ತೀರಾ.

ಹಿಂದೆ ಉಳಿದಿರುವ ಕೆಲಸ ಕಾರ್ಯಗಳು ಸಫಲತೆಯನ್ನು ಕಾಣುತ್ತವೆ. ನಿಮ್ಮ ವೃತ್ತಿಯಲ್ಲಿ ಭಡ್ತಿ ಸಿಗುವ ಸಾಧ್ಯತೆಯೂ ಇದೆ. ಮೇಲಧಿಕಾರಿಗಳಿಂದ ಪ್ರಶಂಸೆಗಳಿಗೆ ಪಾತ್ರರಾಗುತ್ತೀರಾ. ಪ್ರೀತಿ ವಿಶ್ವಾಸಗಳಿಗೆ ಅರ್ಹರಾಗುತ್ತೀರಾ .ಈ ವರ್ಷದ ಮಧ್ಯದಲ್ಲಿ ನಿಮಗೆ ಉತ್ತಮ ಫಲಗಳು ಲಭಿಸಲಿದೆ .ವಿಶೇಷವಾಗಿ ವ್ಯಾಪಾರಸ್ಥರಿಗೆ ಕೆಲಸಗಳು ಬರದಿಂದ ಸಾಗುವ ಸಾಧ್ಯತೆ ಇದೆ. ಗುರುವಿನ ಪ್ರಭಾವದಿಂದ ಧನ ಲಾಭವಾಗಲಿದೆ . ಕೆಲಸಗಳನ್ನು ಶುರು ಮಾಡಲು ನಿಮಗೆ ಒಳ್ಳೆಯ ಅವಕಾಶವಿದೆ .ಅನುಭವಸ್ಥರ ಸಹಾಯವು ನಿಮಗೆ ದೊರಕಲಿದೆ.

ಬಂದು ಮಿತ್ರರಿಂದ ನಿಮಗೆ ಪ್ರೀತಿ ಸಿಗುತ್ತದೆ. ಗುರುವಿನ ಪ್ರಭಾವವು ಅಧಿಕವಾಗಿರುವುದರಿಂದ, ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತೀರಾ . ಒಂದನೇ ತರಗತಿಯಿಂದ ಪದವಿಯವರೆಗೂ, ಅಥವಾ ಉನ್ನತವಾಗಿರುವಂತಹ ಹುದ್ದೆಯನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ .ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲ ದೊರೆಕಲಿದೆ. ನೀವು ಹೆಚ್ಚಿಗೆ ಪರಿಶ್ರಮವನ್ನು ಹಾಕಿದರೆ ನೀವು ಅಂದುಕೊಂಡಕ್ಕಿಂತ ಹೆಚ್ಚಿನ ಫಲವನ್ನು ಪಡೆಯುತ್ತೀರಾ. ವೈಶಾಖ ಮಾಸ ನಾಲ್ಕು ,

ಒಂಬತ್ತು, ಹದಿನಾಲ್ಕನೇ, ತಿಥಿಗಳು, ಮಂಗಳವಾರ , ರೋಹಿಣಿ ನಕ್ಷತ್ರ, ಇವು ಫಾತವಾಗಿರುತ್ತದೆ. ಈ ಸಂದರ್ಭಗಳನ್ನು ತಪ್ಪಿಸಿಕೊಂಡು ಶುಭ ಕಾರ್ಯಗಳನ್ನು, ಮಾಡಿದರೆ ನಿಮಗೆ ಉತ್ತಮ ಫಲಗಳು ದೊರೆಯುತ್ತದೆ. ಮಕರ ರಾಶಿಯವರು ಯಾವ ಪರಿಹಾರ ಮಾಡಿಕೊಳ್ಳಬೇಕು ಎಂದರೆ , ಕುಲ ದೇವತಾ ಆರಾಧನೆಯನ್ನು ಮಾಡಬೇಕು .ಅಂದರೆ ಮನೆಯ ದೇವರ ದರ್ಶನವನ್ನು ಪಡೆಯಬೇಕು. ಶಿವನಿಗೆ ಕ್ಷೀರಭಿಷೇಕವನ್ನು ಮಾಡಿಸಿ. ಸಾಧುಸಂತರ ಸೇವೆಯನ್ನ ಮಾಡಿ. ಕಷ್ಟದಲ್ಲಿರುವವರಿಗೆ ,ದೀನರಿಗೆ, ಬಹಳಷ್ಟು ವಿಷಮ ಪರಿಸ್ಥಿತಿಯಲ್ಲಿರುವವರಿಗೆ ,ನಿಮ್ಮ ಸಹಾಯ ಹಸ್ತವನ್ನು ನೀಡಿ. ಪಶುಪಕ್ಷಿಗಳಿಗೆ ಆಹಾರವನ್ನು ನೀಡಿ .ಖಂಡಿತವಾಗಿಯೂ ,ನಿಮಗೆ ಅದ್ಭುತವಾದ ಫಲಗಳು ದೊರಕಲಿದೆ.

Leave A Reply

Your email address will not be published.