ಮನೆಗೆ ಹೊರಗಿನಿಂದ ಬರುವಾಗ ಈ ವಿಚಾರಗಳ ಬಗ್ಗೆ ಇರಲಿ ಎಚ್ಚರ ಹೊರಗಿನಿಂದ ಮನೆಗೆ ಬರುವಾಗ ಕೆಲವರು ಕೆಲ ತಪ್ಪುಗಳನ್ನು ಮಾಡುತ್ತಾರೆ. ಹಾಗೆ ಮಾಡಿದರೆ ಅದು ಖಂಡಿತವಾಗಿಯೂ ಒಳ್ಳೆಯದಲ್ಲ ಹಾಗಾದರೆ ಅವು ಯಾವ ತಪ್ಪುಗಳು ಮನೆಗೆ ಬರುವಾಗ ಯಾವ ತಪ್ಪುಗಳನ್ನು ಮಾಡಬಾರದು ಎಂಬುವುದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಮೊದಲನೆಯದಾಗಿ, ಹೊರಗೆ ಹೋದವರು ಮನೆಗೆ ಹಿಂದಿರುಗುವಾಗ ಕೈ ಕಾಲು ಮತ್ತು ಮುಖವನ್ನು ಚೆನ್ನಾಗಿ ತೊಳೆಯಿರಿ ಕೈ, ಕಾಲು, ಮುಖ ತೊಳೆಯುವ ಅಭ್ಯಾಸವಿರಲಿ ಇದು ನಿಮ್ಮೊಂದಿಗೆ ಹೊರಗಿನಿಂದ ಬರುವ ನಕಾರಾತ್ಮಕ ಶಕ್ತಿಯನ್ನು ಅಂದರೆ negative Energy ತೆಗೆದು ಹಾಕುತ್ತದೆ.
ಎರಡನೆಯದಾಗಿ ಆಫೀಸ್ ಒತ್ತಡ ಕೆಲಸದ ಚಿಂತೆ ಅಥವಾ ಹೊರಗೆ ನಡೆದಿರುವ ಯಾವುದೇ ಜಗಳದ ಕುರಿತು ಮನೆಯವರೊಂದಿಗೆ ಕಿಟಿ ಕಿಟಿ ಮಾಡಬೇಡಿ ಇದು ಅವರ ನೆಮ್ಮದಿ ಕೂಡ ಹಾಳುಮಾಡುತ್ತದೆ. ತಾಳ್ಮೆಯಿಂದ ನಿಮ್ಮ ಸಮಸ್ಯೆ ಬಗೆಹರಿಸಿ. ಮೂರನೆಯದಾಗಿ ಹೇಳಬೇಕೆಂದರೆ ಸಾಮಾನ್ಯವಾಗಿ
ಕೆಲ ಗಂಡಸರು Smoke ಅಥವಾ drinks ಮಾಡಿ ಮನೆಗೆ ಬರುತ್ತಾರೆ ಇದು ಕೂಡ ಒಳ್ಳೆಯದಲ್ಲ ಈ ಕೆಟ್ಟ ಅಭ್ಯಾಸ ಯಾರಿಗೂ ಕೂಡ ಇರಲೇ ಬಾರದು ಇದರಿಂದ ನಿಮ್ಮ ಮನೆಯವರಿಗೆ ಅಥವಾ ನಿಮ್ಮ ಹೆಂಡತಿ ಮಕ್ಕಳಿಗೆ ದುಃಖವಾಗಬಹುದು. ಮನೆಗೆ ಬರುವಾಗ ನಿಮ್ಮನ್ನು ನೋಡಿ ಮನೆಯವರು ಖುಷಿ ಪಡಬೇಕು.
ನಾಲ್ಕನೆಯದಾಗಿ ಕೆಲವರಿಗೆ shoe – ಚಪ್ಪಲಿಯನ್ನು ಮನೆಯೊಳಗೆ ತರುವ ಅಭ್ಯಾಸವಿರುತ್ತದೆ ಆದರೆ ಇದು ತಪ್ಪು ಯಾವತ್ತೂ shoe-ಚಪ್ಪಲಿಗಳನ್ನು ಮನೆಯ ಹೊರಗೇ ಬಿಡಬೇಕು. ಇವು ಮನೆಯ ಒಳಗೆ ಪ್ರವೇಶಿಸಿ ಮನೆಯ ನೆಮ್ಮದಿ ಸಂತೋಷ ಹಾಳುಮಾಡುತ್ತದೆಯಂತೆ
ಹಾಗಾಗಿ shoe-ಚಪ್ಪಲಿಗಳು ಮನೆ ಒಳಗೆ ಬೇಡ ಐದನೆಯದಾಗಿ ಖಾಲಿ ಕೈಯಲ್ಲಿ ಮನೆಯ ಒಳಗೆ ಪ್ರವೇಶಿಸುವುದು ಕೂಡ ಅಶುಭ ಎನ್ನಲಾಗುತ್ತದೆ. ಬರಿಗೈಯಲ್ಲಿ ಮನೆಗೆ ಬರಬಾರದು ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತದೆ. ಹೊರಗಿನಿಂದ ಮನೆಗೆ ಬರುವಾಗ ಖಂಡಿತವಾಗಿಯೂ ಏನನ್ನಾದರೂ ಜೊತೆಯಲ್ಲಿ ತನ್ನಿ.