ಮನೆಯ ಉತ್ತರ ಅಥವಾ ಪೂರ್ವಾಭಿಮುಖವಾಗಿ ಅಕ್ವೇರಿಯಂ ಇಡಬೇಕು. ಮನಿಪ್ಲಾಂಟ್ ಸಂಮೃದ್ಧಿಯ ಸಂಕೇತ. ಆದುದರಿಂದ ಇದನ್ನು ಮೇಲಕ್ಕೆ ಏರುವಂತೆ ಬೆಳೆಸಲಾಗುತ್ತದೆ. ನೆಲದ ಮೇಲೆ ಬೆಳೆದ ಮನಿಪ್ಲಾಂಟ್ ವಾಸ್ತು ದೋಷ ಹೆಚ್ಚಿಸುತ್ತದೆ.
ಸ್ಫಟಿಕ ಕುಬೇರನ ಕೈಯಲ್ಲಿ ಮುತ್ತಿದ್ದು, ಅದನ್ನು ಮನೆ ಅಥವಾ ಕೋಣೆ ಮಧ್ಯೆ ಇಟ್ಟರೆ ಕುಟುಂಬದ ಎಲ್ಲರ ಜ್ಞಾನ ಹೆಚ್ಚುತ್ತದೆ. ರಾತ್ರಿ ವೇಳೆ ಪೊರಕೆಯನ್ನು ಮನೆಯ ಹೊರಗೆ ಅಥವಾ ಮುಖ್ಯದ್ವಾರದ ಬಳಿಯಿಡುವುದು ಶುಭಕಾರಕ ಎಂಬ ನಂಬಿಕೆಯಿದೆ. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವುದಿಲ್ಲವಂತೆ.
ವಾಸ್ತುಶಾಸ್ತ್ರದ ಪ್ರಕಾರ ಹಗಲು ಹೊತ್ತಿನಲ್ಲಿ ಪೊರಕೆಯನ್ನು ಮನೆಯಲ್ಲಿ ಯಾರ ಕಣ್ಣಿಗೂ ಬೀಳದ ಸ್ಥಳದಲ್ಲಿಡಬೇಕಂತೆ ಅಂದರೆ ಯಾವುದಾದರೊಂದು ಮೂಲೆ ಅಥವಾ ಸಂಧಿಯಂತಹ ಜಾಗದಲ್ಲಿ ಇಡಬೇಕು. ಶುಕ್ಲಪಕ್ಷದಲ್ಲಿ ಪೊರಕೆ ಕೊಳ್ಳುವುದು ಶುಭಕಾರಕವಲ್ಲ. ಈ ಸಮಯದಲ್ಲಿ ಪೊರಕೆ ಕೊಳ್ಳುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಪ್ರವೇಶಿಸುತ್ತವೆ.
ಕೃಷ್ಣಪಕ್ಷ ಪೊರಕೆ ಕೊಳ್ಳಲು ಅತ್ಯಂತ ಶುಭವಾದ ದಿನ. ಈ ದಿನ ಪೊರಕೆ ಕೊಳ್ಳುವುದರಿಂದ ಲಕ್ಷ್ಮಿ ದೇವತೆ ನಿಮ್ಮ ಮನೆಗೆ ಆಗಮಿಸುತ್ತಾಳೆ. ಒಳ್ಳೆಯ ಗುಣಮಟ್ಟದ ಮರದ ಬಾಗಿಲು ಮನೆಗೆ ಮಂಗಳಕರ. ಬಾಗಿಲು ಮಣ್ಣು ಬಣ್ಣ, ತಿಳಿ ಹಳದಿ ಬಣ್ಣದಲ್ಲಿದ್ದರೆ ಒಳಿತು. ಮುಂಬಾಗಿಲಿಗೆ ಕಪ್ಪು ಬಣ್ಣ ಬಳಿಯದಿರಿ.
ಮುಖ್ಯದ್ವಾರದ ಬಳಿ ಬೆಳಕಿರಲಿ. ಬಾಗಿಲಿಗೆ ಸುಂದರವಾದ ನಾಮಫಲಕ ಇರುವಂತೆ ಗಮನಿಸಿ. ಇದು ಸಂಮೃದ್ಧಿ, ಸುಖ ಮತ್ತು ಸಂತೋಷವನ್ನು ತರುತ್ತದೆ. ಮನೆಯ ಪ್ರವೇಶದ ಬಳಿ ಹಸಿರು ಗಿಡಗಳನ್ನು ಇಟ್ಟು ಅಲಂಕರಿಸಿದರೆ ನಿಮ್ಮ ಮನೆಯಲ್ಲಿ ಸದಾ ಪಾಸಿಟಿವ್ ಎನರ್ಜಿ ನೆಲೆಸುವುದು ಖಂಡಿತ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಚಪ್ಪಲಿ ಸ್ಟ್ಯಾಂಡ್ ಇಡಬಾರದು. ಈ ದಿಕ್ಕಿನಲ್ಲಿ ಸೂರ್ಯನ ಮೊದಲ ಕಿರಣಗಳು ಬೀಳಲಿದ್ದು, ಮನೆಗೆ ಧನಾತ್ಮಕ ಶಕ್ತಿ ಪ್ರವೇಶವಾಗುವ ಸ್ಥಳದಲ್ಲಿ ಚಪ್ಪಲಿಯಿಡಬಾರದು. ಅಮೂಲ್ಯವಾದ ವಸ್ತುಗಳನ್ನು ಅಂದರೆ ಹಣ, ಚಿನ್ನ ಮೊದಲಾದ ವಸ್ತುಗಳನ್ನು ನೈಋತ್ಯ ದಿಕ್ಕಿನಲ್ಲಿ ಇಡಿ. ಬಾಗಿಲು ಉತ್ತರ ದಿಕ್ಕಿಗೆ ತೆರೆದುಕೊಳ್ಳುವಂತಿರಬೇಕು.
ಮನೆಯ ಮುಂಭಾಗಿಲಿನ ಬಳಿ ಚಿನ್ನದ ನಾಣ್ಯಗಳನ್ನು ಹೊತ್ತ ಲಾಫಿಂಗ್ ಬುದ್ಧನ ಮೂರ್ತಿಯನ್ನು ಇರಿಸಿ. ಹೀಗೆ ಮಾಡಿದರೇ ನಿಮ್ಮ ಮನೆಯಲ್ಲಿ ಭಾಗ್ಯ ನೆಲೆಸುವುದು.ಮನೆಯ ವಾಯುವ್ಯ ದಿಕ್ಕಿನಲ್ಲಿ ಮೆಟಲ್ ವಸ್ತು ಅಥವಾ ಕ್ರಿಸ್ಟಲ್ ಬಾಲ್ ಇಡಬೇಕು. ಇದರಿಂದ ದುಷ್ಟ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ.
ವಾಸ್ತುವಿನ ಅನುಸಾರ ಮನೆಯಲ್ಲಿ ಮುಳ್ಳಿನ ಗಿಡಗಳು ಇರಬಾರದು. ಇದಲ್ಲದೆ ಯಾವ ಗಿಡದಲ್ಲಿ ಎಲೆಗಳಿಂದ ಹಾಲು ಬರುತ್ತದೆಯೋ ಅಂಥ ಗಿಡಗಳನ್ನು ನೆಡಬೇಡಿ. ಇದರಿಂದ ನಕಾರಾತ್ಮಕ ಶಕ್ತಿ ತುಂಬುತ್ತದೆ. ಜೊತೆಗೆ ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ.
ಪೂಜಾ ಸ್ಥಳದಲ್ಲಿ ಒಂದೇ ದೇವರ ಎರಡು ಮೂರ್ತಿಗಳನ್ನು ಇಡಬಾರದು. ಒಂದೇ ಮೂರ್ತಿಗಳು ಜೊತೆಯಾಗಿ ಅಥವಾ ಎದುರು ಬದುರು ಇರಬಾರದು. ಇಂತಹ ಮೂರ್ತಿಗಳ ದರ್ಶಿಸುವುದರಿಂದ ಜಗಳ ಹೆಚ್ಚುತ್ತದೆ. ಯುದ್ಧ ಮಾಡುತ್ತಿರುವ ದೇವರ ಫೋಟೋ ಅಥವಾ ಸಂಹಾರ ಮಾಡುತ್ತಿರುವ ಫೋಟೋವನ್ನು ಪೂಜಿಸಬೇಡಿ. ಇದರಿಂದ ದುಃಖ ಹೆಚ್ಚುತ್ತದೆ.
ಸ್ವಸ್ತಿಕ ಸಂಪತ್ತು ಮತ್ತು ಸಂಮೃದ್ಧಿಯ ಸಂಕೇತ. ಈ ಚಿಹ್ನೆಯ ಎಡ ಬದಿ ಗಣೇಶ ಇರುವನೆಂದು ಸೂಚಿಸುತ್ತದೆ. ಸ್ವಸ್ತಿಕ ಮನೆಯಲ್ಲಿದ್ದರೆ ಸಂಪತ್ತು ಮತ್ತು ಸಂಮೃದ್ಧಿ ಮನೆಯಲ್ಲಿ ಸದಾ ತುಂಬಿರುತ್ತದೆ ಎಂದರ್ಥ.ಬೆಡ್ ರೂಂನಲ್ಲಿ ತಾಜ್ ಮಹಲ್ ಫೋಟೋ ಮೂರ್ತಿ ಇಡಬೇಡಿ. ಇದರಿಂದ ನೆಗೆಟಿವ್ ಎನರ್ಜಿ ಬೀರುತ್ತದೆ.
ಬೆಡ್ ರೂಂನಲ್ಲಿ ಕಾಡು ಪ್ರಾಣಿ ಮುಖ್ಯವಾಗಿ ಸಿಂಹ ಹುಲಿಯ ವ್ಯಾಘ್ರವಾದ ಫೋಟೋ ಇಡಬೇಡಿ. ಇದರಿಂದ ಇಬ್ಬರ ನಡುವೆ ಕಲಹ ಹೆಚ್ಚುತ್ತದೆ.ದೊಡ್ಡದಾದ ಮನೆ ಅಥವಾ ಕಚೇರಿಯಲ್ಲಿ ದೇವರ ಕೋಣೆ ನಿರ್ಮಿಸುವಾಗ ಅದು ಮಧ್ಯದಲ್ಲಿರಲಿ ಇದರಿಂದ ಪೂರ್ತಿ ಮನೆಗೆ ಪಾಸಿಟಿವ್ ಎನರ್ಜಿ ಹರಡುತ್ತದೆ.
ಸುಗಂಧಿತ ಅಗರಬತ್ತಿಯನ್ನು ಹಚ್ಚಿಡುವುದರಿಂದ ಮನೆ ವಾತಾವರಣ ಆಹ್ಲಾದಕರವಾಗಿರುತ್ತದೆ. ಜೊತೆಗೆ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ನೀರಿಗೆ ಚಿಟಿಕೆ ಉಪ್ಪು ಸೇರಿಸಿ ಕೈ ಕಾಲು ತೊಳೆದು ಮಲಗುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ.
ದೇವರ ಮನೆಯಲ್ಲಿ ಭಗ್ನಗೊಂಡ, ಮುಕ್ಕಾದ, ಸವೆದು ಹೋದ ವಿಗ್ರಹಗಳನ್ನು ಇಡಬಾರದು. ವಿಗ್ರಹಗಳನ್ನು ಗೋಡೆಗೆ ತಾಗಿಸಿ ಇಡಬಾರದು.ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಬಾರದು. ಇದು ದುಃಖ, ಅನಾರೋಗ್ಯ ಮತ್ತು ಅಸಂತೋಷವನ್ನು ಉಂಟು ಮಾಡುತ್ತದೆ.
ತುಳಸಿಯಂತಹ ಆರೋಗ್ಯ ಮತ್ತು ಆಧ್ಯಾತ್ಮ ಶಕ್ತಿ ಹೊಂದಿರುವ ಗಿಡಗಳನ್ನು ಬೆಳೆಸಿ, ಕನಿಷ್ಠ ಒಂದು ತುಳಸಿ ಗಿಡವಾದರೂ ಈಶಾನ್ಯ ಭಾಗದಲ್ಲಿರಲಿ.
ಪಶ್ಚಿಮದತ್ತ ಮುಖ ಮಾಡಿ ಅಭ್ಯಾಸ ಮಾಡಿದರೇ ಮಕ್ಕಳು ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಸ್ಟಡಿರೂಂ ಬಣ್ಣ ಪಿಂಕ್ ಇದ್ದರೆ ಉತ್ತಮ. ವಾಸ್ತುಶಾಸ್ತ್ರದ ಪ್ರಕಾರ ನಸು ಬಣ್ಣ ವಿದ್ಯಾರ್ಥಿಗಳ ಗ್ರಹಣ ಶಕ್ತಿಯನ್ನು ಹೆಚ್ಚಿಸುತ್ತದೆ.
ಆಮೆ ಹಾಗೂ ಗರುಡವನ್ನು ಬೆಳ್ಳಿಯಿಂದ ಮಾಡಿಸಿ ಮನೆಯ ಪೂಜಾಸ್ಥಳದಲ್ಲಿ ಇಟ್ಟರೆ ಒಳ್ಳೆಯದು ಲಕ್ಷ್ಮಿಯ ಅನುಗ್ರಹದಿಂದ ಧನಪ್ರಾಪ್ತಿಯಾಗುತ್ತದೆ.ತಿಂಗಳ ಮೊದಲ ಸೋಮವಾರ ಬಿಳಿ ಬಟ್ಟೆಯಲ್ಲಿ ಅಕ್ಕಿಯನ್ನು ಕಟ್ಟಿ ಕಾಳಿದೇವಿಗೆ ಅರ್ಪಿಸಿ. ಇದರಿಂದ ನೌಕರಿ ಸಮಸ್ಯೆ ನಿವಾರಣೆಯಾಗುತ್ತದೆ.
ಹಸುವಿನ ಚಿತ್ರ ಪಟ ಅಥವಾ ಗೋಮಾತೆಯನ್ನು ಬೆಳ್ಳಿಯಿಂದ ಮಾಡಿಸಿ ಪೂಜಾಸ್ಥಳದಲ್ಲಿ ಸ್ಥಾಪನೆ ಮಾಡಿ ಪೂಜಿಸಿದರೆ ತುಂಬಾ ಒಳ್ಳೆಯದು ಯಾಕೆಂದರೆ ಗೋವಿನಲ್ಲಿ ಎಲ್ಲಾ ದೇವರುಗಳು ನೆಲೆಸಿದ್ದಾರೆ. ಗೋಮಾತೆ ನಮ್ಮ ಮನೆಯಲ್ಲಿ ಎಲ್ಲಾ ಕಷ್ಟಗಳನ್ನು ನಾಶ ಮಾಡಿ ಸುಖಶಾಂತಿ ನೆಮ್ಮದಿಯನ್ನು ಮನೆಲ್ಲಿ ನೆಲೆಸುವಂತೆ ಮಾಡುತ್ತದೆ.
ಇಷ್ಟಪಟ್ಟ ಕೆಲಸ ಸಿಗಲು ಅಥವಾ ಪ್ರಮೋಷನ್ ಸಿಗಲು ಶನಿವಾರ ಶನಿ ದೇವರ ದರ್ಶನ ಮಾಡಿ ಮತ್ತು ಓಂ ಶನೈಶ್ಚರಾಯ ನಮಃ ಎಂದು 108 ಬಾರಿ ಪಠಿಸಿ. ಅಡುಗೆ ಮಾಡುವಾಗ ಯಾವಾಗಲೂ ಪೂರ್ವಕ್ಕೆ ಮುಖ ಮಾಡಿಕೊಂಡಿರಬೇಕು. ಇದರಿಂದ ಮನೆಯ ಸದಸ್ಯರಿಗೆ ಆರೋಗ್ಯ ಭಾಗ್ಯ ಸಿಗುತ್ತದೆ.
ಮುಖ್ಯದ್ವಾರದ ಬಳಿ ಕಸದ ತೊಟ್ಟಿಯನ್ನು ಎಂದೂ ಇಡಬೇಡಿ. ಮನೆಯ ಉತ್ತರ ಬಾಗದಲ್ಲಿ ನೀರಿನಿಂದ ತುಂಬಿದ ಮಣ್ಣಿನ ಮಡಿಕೆ ಇಡಿ.