ಮನೆಯಲ್ಲಿ ನೆಲದ ಮೇಲೆ ಹಲ್ಲಿ ಓಡಾಡುವುದು ಮತ್ತು ಶರೀರದ ವಿಶೇಷ ಅಂಗದ ಮೇಲೆ ಬೀಳುವುದು ಯಾವ ವಿಷಯದ ಸಂಕೇತ ಆಗಿದೆ? ರಹಸ್ಯ

0

ನಾವು ಈ ಲೇಖನದಲ್ಲಿ ಮನೆಯಲ್ಲಿ ನೆಲದ ಮೇಲೆ ಹಲ್ಲಿ ಓಡಾಡುವುದು ಮತ್ತು ಶರೀರದ ವಿಶೇಷ ಅಂಗದ ಮೇಲೆ ಬೀಳುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳೋಣ.
ಇಲ್ಲಿ ಹಣಕಾಸು ಬರುವ ಮತ್ತು ಹೋಗುವುದರ ಪ್ರತೀಕ ಜೊತೆಗೆ ನಮ್ಮ ಜೀವನದಲ್ಲಿ ಕೆಲವೊಂದು ಬದಲಾವಣೆಗಳು ಇರುತ್ತವೆ. ಹಲ್ಲಿಯ ಈ ಸಂಕೇತಗಳು ಎಲ್ಲಾ ವಿಷಯಗಳನ್ನು ತಿಳಿಸಿ ಕೊಡುತ್ತವೆ. ಹಲ್ಲಿ ಕಂಡರೆ ಅದರ ಮೇಲೆ ಈ ವಸ್ತುಗಳನ್ನು ಸಿಂಪಡಿಸಿದರೆ, ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವಂತಹ ಅದ್ಭುತವಾದ ಉಪಾಯವನ್ನು ತಿಳಿಸುತ್ತೇವೆ .

ಸಾಮಾನ್ಯವಾಗಿ ಜನರು ಮನೆಯಲ್ಲಿ ಹಲ್ಲಿಯನ್ನು ಕಂಡಾಗ ಇದು ಸಾಧಾರಣವಾದ ಘಟನೆ ಎಂದು ತಿಳಿಯುತ್ತಾರೆ . ಇಲ್ಲಿಯತನಕ ನಮಗೆಲ್ಲಾ ತಿಳಿದಿರುವ ಹಾಗೆ ಹಲ್ಲಿಯೂ ಒಂದು ಜೀವ ಜಂತು ಆಗಿದೆ . ಆದರೆ ಜೀವ ಜಂತು ಮತ್ತು ಮನುಷ್ಯರ ಮಧ್ಯೆ ಪ್ರಕೃತಿಯು ತನ್ನ ಒಂದು ಭಿನ್ನವಾದ ಸಂಬಂಧವನ್ನು ಇಡುತ್ತದೆ . ಶಾಸ್ತ್ರಗಳಲ್ಲಿ ಹಲ್ಲಿಯನ್ನು ಒಂದು ಅದ್ಭುತ ಜೀವಿ ಎಂದು ತಿಳಿಸಿದ್ದಾರೆ . ಶಾಸ್ತ್ರಗಳಲ್ಲಿ ಹಲ್ಲಿ ಕಾಣುವುದಾಗಲಿ , ಅದಕ್ಕೆ ಸಂಬಂಧಪಟ್ಟ ಕೆಲವು ವಿಷಯಗಳ ಬಗ್ಗೆ ವಿಸ್ತಾರವಾಗಿ ಶಾಸ್ತ್ರಗಳಲ್ಲಿ ತಿಳಿಸಿದ್ದಾರೆ . ಈ ಮಾಹಿತಿ ನಿಮಗೆ ತಿಳಿದರೆ ಜೀವನದಲ್ಲಿ ಎಲ್ಲಾ ರೀತಿಯ ಸಾಧನೆಗಳನ್ನು ಮಾಡಬಹುದು .

ಶಾಸ್ತಗಳಲ್ಲಿ ವಿಶೇಷವಾದ ಶಕುನ ಶಾಸ್ತ್ರದ ಅನುಸಾರವಾಗಿ ಯಾವುದಾದರೂ ವಿಶೇಷವಾದ ಸಮಯದಲ್ಲಿ ಹಲ್ಲಿ ಕಂಡರೆ , ನೆಲದ ಮೇಲೆ ಓಡಾಡುತ್ತಿದ್ದರೆ , ಶರೀರದ ಮೇಲೆ ಬಿದ್ದರೆ, ಭವಿಷ್ಯದಲ್ಲಿ ನಡೆಯುವ ಶುಭ ಮತ್ತು ಅಶುಭ ಘಟನೆಗಳ ಬಗ್ಗೆ ತೋರಿಸಿ ಕೊಡುತ್ತವೆ. ಶರೀರರದ ವಿಶೇಷ ಅಂಗದ ಮೇಲೆ ಹಲ್ಲಿ ಬಿದ್ದರೆ , ಭವಿಷ್ಯದಲ್ಲಿ ನಡೆಯುವಂತಹ ಶುಭ ಮತ್ತು ಅಶುಭ ಘಟನೆಯ ಬಗ್ಗೆ ತಿಳಿಸುತ್ತದೆ. ದೀಪಾವಳಿ ಹಬ್ಬದ ದಿನ ಒಂದು ವೇಳೆ ಹಲ್ಲಿ ಕಂಡರೆ, ಅದನ್ನು ತಾಯಿ ಲಕ್ಷ್ಮಿ ದೇವಿಯ ಪ್ರತೀಕ ಎಂದು ತಿಳಿಯಲಾಗಿದೆ. ಒಂದು ವೇಳೆ ಈ ದಿನ ನಿಮ್ಮ ಮೇಲೆ ಹಲ್ಲಿ ಬಿದ್ದರೆ ,

ಮನೆಯಲ್ಲಿ ವರ್ಷದ ತನಕ ಸುಖ , ಶಾಂತಿ, ಸಮೃದ್ಧಿ ಬರುತ್ತದೆ. ಆದರೆ ಹಲ್ಲಿಯ ಪ್ರಯೋಗದಿಂದ ಸಾಕಷ್ಟು ರೀತಿಯ ಲಾಭಗಳನ್ನು ಪಡೆಯಬಹುದು. ಇದಕ್ಕೆ ಸಂಬಂಧಪಟ್ಟ ಹಾಗೆ ಒಂದು ಪ್ರಭಾವಶಾಲಿಯಾದ ಉಪಯೋಗವನ್ನು ತಿಳಿಸಲಾಗಿದೆ. ಒಂದು ಸರಳ ಪ್ರಯೋಗದಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ ಎಂದು ತಿಳಿಯೋಣ . ಒಂದು ವೇಳೆ ನಿಮಗೆ ಹಲ್ಲಿ ಕಂಡರೆ, ನೀವು ಸರಳವಾದ ಉಪಾಯವನ್ನು ಮಾಡಿ, ಹಲ್ಲಿ ಕಂಡ ತಕ್ಷಣ ದೇವರ ಮುಂದೆ ಇರುವ ಸಿಂಧೂರವನ್ನು ಮತ್ತು ಅಕ್ಷತೆಯನ್ನು ತೆಗೆದುಕೊಂಡು ದೂರದಿಂದ ಅವುಗಳನ್ನು ಹಲ್ಲಿಯ ಮೇಲೆ ಸಿಂಪಡಿಸುತ್ತಾ ,

ನಿಮ್ಮ ಇಚ್ಚೆಯನ್ನು ಮನಸ್ಸಿನಲ್ಲಿ ಬೇಡಿಕೊಳ್ಳಿ . ಶಾಸ್ತ್ರದಲ್ಲಿ ಹಲ್ಲಿಯನ್ನು ಪೂಜನೀಯ ಪ್ರಾಣಿ ಎಂದು ತಿಳಿಸಿದ್ದಾರೆ. ಇದರ ಪೂಜೆ ಅರ್ಚನೆಯಿಂದ ಧನ ಸಂಪತ್ತಿಗೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತವೆ. ನಿಮ್ಮ ಜೀವನದಲ್ಲಿ ಯಾವತ್ತಿಗೂ ಯಾವುದೇ ರೀತಿಯ ಕಷ್ಟಗಳು ಎದುರಾಗುವುದಿಲ್ಲ . ಆದರೆ ಹಲ್ಲಿಯು ನಿಮ್ಮ ಜೀವನದಲ್ಲಿ ಯಾವಾಗ ಬೇಕಾದರೂ ಬರಬಹುದು. ಇಲ್ಲಿ ಗೋಡೆಯ ಮೇಲೆ ಹಲ್ಲಿ ಕಂಡಾಗ ತಕ್ಷಣ ಈ ಪ್ರಯೋಗವನ್ನು ಮಾಡಬಾರದು. ಸಾಯಂಕಾಲದ ಸಮಯದಲ್ಲಿ ಈ ಉಪಾಯವನ್ನು ಮಾಡಬೇಕು.

ಇದರ ಪೂಜೆಯನ್ನು ಮಾಡುವುದರಿಂದ ಶುಭ ಸಂಕೇತಗಳು ಸಿಗುತ್ತವೆ. ಮನೆಯನ್ನು ಸ್ವಚ್ಛ ಮಾಡುವ ಸಂದರ್ಭದಲ್ಲಿ ಸತ್ತಿರುವ ಹಲ್ಲಿಯನ್ನು ಕಂಡರೆ ಅಶುಭ ಸಂಕೇತ ಎಂದು ತಿಳಿಯಲಾಗಿದೆ. ನಿಮಗೆ ತಿಳಿಯದೆ ನಿಮ್ಮ ಕೈಯಿಂದ ಹಲ್ಲಿ ಸತ್ತರೆ, ಅದರ ಸಂಸ್ಕಾರವನ್ನು ಮಾಡಬೇಕು. ಇದರಿಂದ ಬರುವ ಪಾಪದಿಂದ ಮುಕ್ತಿ ಪಡೆಯಬಹುದು. ಇಲ್ಲವಾದರೆ ನಿಮ್ಮ ಜೀವನದಲ್ಲಿ ಯಾವ ರೀತಿಯ ಕಷ್ಟಗಳು ಎದುರಾಗುತ್ತವೆ ಎಂದರೆ, ಇದರ ಬಗ್ಗೆ ಕಲ್ಪನೆ ಮಾಡಲು ಸಾಧ್ಯವಿಲ್ಲ. ಇವುಗಳ ಮೂಲಕ ಭವಿಷ್ಯದ ಬಗ್ಗೆ ಕೆಲವು ವಿಷಯಗಳನ್ನು ತಿಳಿಯಬಹುದು. ಊಟ ಮಾಡುವ ಸಂದರ್ಭದಲ್ಲಿ ಹಲ್ಲಿಯ ಸದ್ದು ಕೇಳಿ ಬಂದರೆ,

ಇದನ್ನು ಅತ್ಯಂತ ಶುಭ ಎಂದು ತಿಳಿಯಲಾಗಿದೆ. ಇದು ಜೀವನದಲ್ಲಿ ಧನ ಪ್ರಾಪ್ತಿಯ ಸಂಕೇತ ಆಗಿದೆ. ಮತ್ತು ಯಾವುದಾದರೂ ಶುಭ ಸುದ್ದಿ ಕೇಳಲು ಸಿಗುತ್ತದೆ. ಹಲ್ಲಿಯ ಜೋಡಿಗಳು ಸೇರಿರುವುದು ಕಂಡು ಬಂದರೆ, ನಿಮ್ಮ ಹಳೆಯ ಸ್ನೇಹಿತರು ಭೇಟಿಯಾಗಲು ಬರಬಹುದು . ಒಂದು ವೇಳೆ ಕನಸಿನಲ್ಲಿ ಸತ್ತು ಹೋದ ಹಲ್ಲಿ ಕಂಡರೆ, ನಿಮಗೆ ಯಾವುದೋ ದೊಡ್ಡ ಕಷ್ಟ ಬರಲಿದೆ ಎಂದರ್ಥ . ಅಥವಾ ಕೆಟ್ಟ ಸುದ್ದಿ ಕೇಳಬಹುದು. ನಡೆದುಕೊಂಡು ಹೋಗುವಾಗ ತಲೆಯ ಮೇಲೆ ಅಥವಾ ಕೈ ಮೇಲೆ ಬಿದ್ದರೆ , ಹತ್ತಿರದ ಭವಿಷ್ಯದಲ್ಲಿ ಗೌರವ ಘನತೆ ಸಿಗುವ ಸಂಕೇತ ಆಗಿರುತ್ತದೆ. ಮೊಣಕಾಲಿನ ಮೇಲೆ ಹಲ್ಲಿ ಬಿದ್ದರೆ, ಇದನ್ನು ಅತ್ಯಂತ ಶುಭ ಎಂದು ಕರೆಯಲಾಗಿದೆ.

ಊಟ ಮಾಡುವಾಗ ಹಲ್ಲಿ ನಿಮ್ಮ ಕಾಲುಗಳ ಹತ್ತಿರ ಬಂದರೆ, ಯಾವುದಾದರೂ ಅನಾರೋಗ್ಯದ ಸಮಸ್ಯೆ ನಿಮ್ಮ ಜೀವನದಲ್ಲಿ ಬರಬಹುದು. ನೀವು ಮಾತನಾಡುವಾಗ ಹಲ್ಲಿ ಸದ್ದು ಮಾಡಿದರೆ ಆ ಮಾತು ನಿಜ ಆಗುತ್ತದೆ. ಹಣೆಯ ಮೇಲೆ ಹಲ್ಲಿ ಬಿದ್ದರೆ ನಿಮಗೆ ಬೇಗ ಧನ ಪ್ರಾಪ್ತಿ ಆಗುತ್ತದೆ. ಹಲ್ಲಿ ಒಂದು ವೇಳೆ ಕೀಟಗಳನ್ನು ತನ್ನ ಬಾಯಲ್ಲಿ ಇಟ್ಟು ಕೊಂಡಿರುವುದನ್ನು ನೀವು ನೋಡಿದರೆ, ಧನ ಸಂಪತ್ತಿನ ಆಗಮನದ ಜೊತೆಗೆ ಧನ ಸಂಪತ್ತಿನ ನಷ್ಟ ಕೂಡ ಆಗುತ್ತದೆ. ನೀವು ಹೊರಗಡೆ ಹೋಗುವ ಸಂದರ್ಭದಲ್ಲಿ ಎರಡು ಹಲ್ಲಿಗಳು ಜಗಳ ಆಡುವುದು ಕಂಡು ಬಂದರೆ, ನಿಮಗೆ ತುಂಬಾ ಕಷ್ಟ ಪಟ್ಟ ನಂತರ ಯಶಸ್ಸು ದೊರೆಯುತ್ತದೆ.

ಬಲ ಕಣ್ಣಿನ ಮೇಲೆ ಹಲ್ಲಿ ಬಿದ್ದರೆ, ಆಭರಣ ದೊರೆಯುತ್ತದೆ. ಎಡ ಕಣ್ಣಿನ ಮೇಲೆ ಹಲ್ಲಿ ಬಿದ್ದರೆ , ಆಯಸ್ಸು ವೃದ್ಧಿಯಾಗುತ್ತದೆ. ಒಂದು ವೇಳೆ ಮಹಿಳೆಯರ ಕೂದಲಿನ ಮೇಲೆ ಬಿದ್ದು, ಹಲ್ಲಿ ಸಿಲುಕಿಕೊಂಡರೆ , ಎಚ್ಚರವಹಿಸಬೇಕು. ಕೆಟ್ಟ ಸುದ್ದಿಗಳನ್ನು ಕೂಡ ಕೇಳಬಹುದು. ನೀವು ದೇವರ ಕೋಣೆಯಲ್ಲಿ ಹಲ್ಲಿ ಕಂಡರೆ, ಅಲ್ಲಿಗೆ ಗಂಗಾಜಲ ಸಿಂಪಡಿಸಬೇಕು. ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಮುಂದೆ ಒಂದು ದೀಪವನ್ನು ಹಚ್ಚಿ ನಿಮ್ಮ ಮನಸ್ಸಿನ ಇಚ್ಚೆಗಳನ್ನು ಬೇಡಿಕೊಳ್ಳಿ . ದೇವರ ಕೋಣೆಯಲ್ಲಿ ಈ ಘಟನೆ ನಡೆದಾಗ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ನಡೆಯುತ್ತವೆ. ನಿಮಗೆ ಪದೇ ಪದೇ ಕನಸ್ಸಿನಲ್ಲಿ ಹಲ್ಲಿಗಳು ಜಗಳ ಆಡುವುದು ಕಂಡು ಬಂದರೆ, ನೀವು ವಿವಾದಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ.

Leave A Reply

Your email address will not be published.